Latest Updates
-
ಯುಗಾದಿ ಹಬ್ಬದ ಸಿಹಿಗೆ ಮಾಡಿ ರವೆ ಉಂಡೆ: ಇಲ್ಲಿದೆ ಸುಲಭದ ವಿಧಾನ -
ಕುಂಭ ರಾಶಿಯಲ್ಲಿ ಅಪರೂಪದ ಮಹಾಲಕ್ಷ್ಮಿ ಯೋಗ: ಈ ರಾಶಿಯವರ ಹಣ, ಸಂಪತ್ತು ವೃದ್ಧಿಗೆ ಶುಭ ಸಮಯ! -
ಬ್ರೇಕ್ಫಾಸ್ಟ್ಗೆ ಮಸಾಲೆ ವಾಂಗೀಬಾತ್ ಮಾಡಿ: ಇಲ್ಲಿದೆ ಸುಲಭದ ವಿಧಾನ -
ಗ್ಯಾಸ್ ಹೆಚ್ಚು ದಿನ ಬಾಳಿಕೆ ಬರಬೇಕಾ? ಈ ಟಿಪ್ಸ್ ಫಾಲೋ ಮಾಡಿ, ಗ್ಯಾಸ್ ಲೀಕ್ ಪತ್ತೆ ಮಾಡೋದು ಸಹ ಸುಲಭ! -
ಎರಡು ಹೊತ್ತು ಸವಿಯಬಹುದಾದ ಕಾಬೂಲ್ ಕಡ್ಲೆ ಕುಷ್ಕ! ಥಟ್ ಅಂತ ರೆಡಿ ಮಾಡಬಹುದು -
ಮಂಗಳ-ಗುರು ಸಂಯೋಗದಿಂದ ಕಾದಿಗೆ ಅಪರೂಪದ ಯೋಗ: ಈ ಮೂರು ರಾಶಿಯವರ ಜೀವನದಲ್ಲಿ ಶುಭಯೋಗ! -
March 15 Horoscope: ಹಣಕಾಸು ಕುರಿತಾದ ವಿಚಾರವಾಗಿ ನಿಮ್ಮಲ್ಲಿ ಚಿಂತೆ ಇದೆ -
ಲವ್ನಲ್ಲಿ ಇರುವವರಿಗೆ ಶುಭ ಸುದ್ದಿ ಸಿಗುತ್ತೆ! ದೀರ್ಘಕಾಲದ ಸಮಸ್ಯೆ ಬಗೆಹರಿಯುತ್ತೆ -
ಸಖತ್ ರುಚಿ ನೀಡುವ ಸುಲಭದ ಧನಿಯಾ ರಸಂ: ಸೂಪ್ನಂತೆ ಕುಡಿಯಬಹುದು! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ!
4 ನಿಮಿಷದಲ್ಲಿ ಈ ಉತ್ತರ ಕರ್ನಾಟಕ ಸ್ಪೆಷಲ್ ತಿಂಡಿ ರೆಡಿಯಾಗುತ್ತೆ..! ನೀವು ಸಹ ಮಾಡಿ ನೋಡಿ!
ಬೆಳಗ್ಗೆ ತಿಂಡಿಗೆ ನೀವು ಸುಲಭವಾಗಿ ಅದ್ರಲ್ಲೂ ಕಡಿಮೆ ಸಮಯದಲ್ಲಿ ಯಾವುದಾದರು ತಿಂಡಿ ಮಾಡಲು ಮುಂದಾಗಬಹುದು. ಏಕೆಂದರೆ ಬೆಳಗ್ಗೆ ಎದ್ದಾಗ ಗಡಿ ಬಿಡಿಯಲ್ಲಿ ನೀವು ಯಾವುದಾದರು ತಿಂಡಿ ಮಾಡಿ ಮುಗಿಸಿದರೆ ಉಳಿದ ಸಮಯವನ್ನು ಬೇರೆ ಕೆಲಸಗಳಿಗೆ ಮೀಡಲಿಡಬಹುದು. ಹಾಗೆ ತಿಂಡಿ ಮಾಡುವಾಗ ಕಡಿಮೆ ವಸ್ತುಗಳ ಬಳಸಿ ಮಾಡುವುದು, ಹಾಗೆ ಹೆಚ್ಚು ಸಮಯ ಹಿಡಿಯದಂತಹ ಖಾದ್ಯವನ್ನೇ ಆಯ್ಕೆ ಮಾಡುವುದು ಹೆಚ್ಚು.
ಇಂತಹ ಸಮಯದಲ್ಲಿ ನೀವು ಯಾವುದಾದರು ತಿಂಡಿ ಮಾಡುವ ಆಲೋಚನೆಯಲ್ಲಿದ್ದರೆ ಈ ರೀತಿ ಅವಲಕ್ಕಿಯಿಂದ ಹಲವು ಬಗೆಯ ಖಾದ್ಯ ಸವಿಯುವುದು ನೋಡಬಹುದು. ಅದರಲ್ಲೂ ಅವಲಕ್ಕಿಯಿಂದ ಸುಲಭವಾಗಿ ಮಾಡುವ ಅವಲಕ್ಕಿ ಒಗ್ಗರಣೆ, ಮಸಾಲೆ ಅವಲಕ್ಕಿ, ಅವಲಕ್ಕಿ ಗೊಜ್ಜು, ಅವಲಕ್ಕಿ ತೆಂಗಿನಕಾಯಿ ತುರಿ ಹಾಕಿ ಮಾಡುವ ತಿಂಡಿ ಕೂಡ ಬೆಳಗ್ಗಿನ ತಿಂಡಿಗೆ ಹೇಳಿ ಮಾಡಿಸಿರುವ ಖಾದ್ಯ ಆಗಿರುತ್ತೆ.

ಹಾಗೆ ನಾವಿಂದು ಈ ಅವಲಕ್ಕಿಯಿಂದ ಮಾಡುವ ಹಾಗೆ ಕಡಿಮೆ ವಸ್ತು ಬಳಸಿ ನಿಮಿದಷದಲ್ಲಿ ರೆಡಿ ಮಾಡಬಹುದಾದ ಉತ್ತರ ಕರ್ನಾಟಕ ಶೈಲಿಯ ಈ ಒಗ್ಗರಣೆ ಅವಲಕ್ಕಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಇದನ್ನು ನೀವು ಬೆಳಗ್ಗೆ ಗಡಿಬಿಡಿಯಲ್ಲಿದ್ದಾಗ ಸುಲಭವಾಗಿ ಅದರಲ್ಲೂ ನಿಮಿಷದಲ್ಲಿ ಮಾಡಿ ಮುಗಿಸಬಹುದು. ಹಾಗಾದ್ರೆ ಈ ಅವಲಕ್ಕಿ ಒಗ್ಗರಣೆ ಮಾಡುವ ಕುರಿತು ತಿಳಿಯೋಣ.
ಉತ್ತರ ಕರ್ನಾಟಕ ಶೈಲಿಯ ಈ ಒಗ್ಗರಣೆ ಅವಲಕ್ಕಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಅವಲಕ್ಕಿ ಒಗ್ಗರಣೆ ಮಾಡಲು ಬೇಕಾಗುವ ವಸ್ತುಗಳು
- ಅವಲಕ್ಕಿ- ಕಾಲು ಕೆ.ಜಿ
- ಹಸಿ ಮೆಣಸಿನಕಾಯಿ
- ಕೊತ್ತಂಬರಿ ಸೊಪ್ಪು
- ಕರಿಬೇವು
- ಈರುಳ್ಳಿ
- ನಿಂಬೆ
- ಎಣ್ಣೆ
- ಕಡಲೆಕಾಯಿ
- ರುಚಿಗೆ ತಕ್ಕಷ್ಟು ಉಪ್ಪು
- ಸಾಸಿವೆ
- ಜೀರಿಗೆ
- ತೆಂಗಿನಕಾಯಿ ತುರಿ
ಅವಲಕ್ಕಿ ಒಗ್ಗರಣೆ ಮಾಡುವ ವಿಧಾನವೇನು?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಶೇಂಗಾ ಬೀಜಗಳ ಹಾಕಿಕೊಂಡು ಹುರಿದುಕೊಳ್ಳಬೇಕು. ಈಗ ಅದೇ ಎಣ್ಣೆಗೆ ಸಾಸಿವೆ, ಜೀರಿಗೆ ಹಾಕಿಕೊಳ್ಳಿ. ನಂತರ ಸಣ್ಣದಾಗಿ ಹೆಚ್ಚಿಕೊಂಡಿರುವ ಹಸಿ ಮೆಣಸು, ಕರಿಬೇವು, ಈರುಳ್ಳಿ ಕೂಡ ಇದಕ್ಕೆ ಹಾಕಿ ಎನ್ನಾಗಿ ಹುರಿದುಕೊಳ್ಳಿ. 2ರಿಂದ3 ನಿಮಿಷ ಹುರಿದ ಬಳಿಕ ಗ್ಯಾಸ್ ಆಫ್ ಮಾಡಿಕೊಳ್ಳಿ.
ನಂತರ ರುಚಿಗೆ ತಕ್ಕಷ್ಟು ಉಪ್ಪು, ಹಾಗೆ ಸ್ವಲ್ಪ ನಿಂಬೆ ರಸ ಹಾಕಿಕೊಂಡು ಮಿಕ್ಸ್ ಮಾಡಿ. ಈಗ ಇಂದು ತಟ್ಟೆಗೆ ಅವಲಕ್ಕಿ ತೆಗೆದುಕೊಂಡು ಅದಕ್ಕೆ ಈ ಒಗ್ಗರಣೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ಒಗ್ಗರಣೆ ಚೆನ್ನಾಗಿ ಈ ಅವಲಕ್ಕಿಗೆ ಹಿಡಿಯುವಂತೆ ಮಿಕ್ಸ್ ಮಾಡಿಕೊಳ್ಳಬೇಕು. ಕೈಯಿಂದಲೇ ಮಿಕ್ಸ್ ಮಾಡಿದರೆ ಉತ್ತಮ. ನಂತರ ಸಣ್ಣದಾಗಿ ಹೆಚ್ಚಿರುವ ಕೊತ್ತಂಬರಿ ಸೊಪ್ಪು ಹಾಗೆ ತೆಂಗಿನಕಾಯಿ ತುರಿಯನ್ನು ಸಹ ಮಿಕ್ಸ್ ಮಾಡಿಕೊಳ್ಳಬೇಕು. ಹಾಗೆ ಈ ಮೊದಲು ಫ್ರೈ ಮಾಡಿಕೊಂಡಿದ್ದ ಕಡಲೆ ಬೀಜ ಅಥವಾ ಶೇಂಗಾವನ್ನು ಸಹ ಇದಕ್ಕೆ ಹಾಕಿ. ಈಗ ನಿಮ್ಮ ಮುಂದೆ ರುಚಿ ರುಚಿಯಾದ ಅವಲಕ್ಕಿ ಒಗ್ಗರಣೆ ರೆಡಿಯಾಗುತ್ತದೆ. ಇದನ್ನು ತಯಾರಿಸಲು ಕೇವಲ 5ರಿಂದ 6 ನಿಮಿಷ ಸಾಕಾಗುತ್ತದೆ.
ಉತ್ತರ ಕರ್ನಾಟಕ ಭಾಗದಲ್ಲಿ ಇದು ಬಹಳ ಫೇಮಸ್ ತಿಂಡಿ ಎನ್ನಬಹುದು. ನೀವು ಸಹ ಮನೆಯಲ್ಲಿ ಇದನ್ನು ಮಾಡಿ ಸವಿದು ನೋಡಿ. ಇದು ಕಡಿಮೆ ಸಮಯದಲ್ಲಿ ಅತ್ಯಂತ ಸುಲಭವಾಗಿ ಮಾಡಿ ಮುಗಿಸಬಹುದು. ಹಾಗೆ ಎಲ್ಲರಿಗೂ ಇದರ ರುಚಿ ಇಷ್ಟವಾಗುತ್ತೆ. ಬೆಳಗ್ಗೆ ಗಡಿ ಬಿಡಿಯ ಸಮಯದಲ್ಲಿ ಇದನ್ನು ಮಾಡಿ ಸವಿಯಬಹುದು.



Click it and Unblock the Notifications