Latest Updates
-
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ!
ಮನೆಯಲ್ಲೇ ನಿಂಬೆಕಾಯಿ ಉಪ್ಪಿನಕಾಯಿ ಹಾಕಿ ನೋಡಿ..! ಬಹಳ ಸುಲಭ..ಅದ್ಭುತ ರುಚಿ
ಊಟಕ್ಕೆ ಉಪ್ಪಿನಕಾಯಿ ಇದ್ದರೇನೆ ಆ ಊಟಕ್ಕೆ ಬೆಲೆ ಅನ್ನೋದು ಬರೋದು. ಒಂದು ಬಗೆ ಬಗೆಯ ಖಾದ್ಯದ ಊಟ ಸಹ ಪರಿಪೂರ್ಣವಾಗಬೇಕಾದರೆ ಉಪ್ಪಿನಕಾಯಿ ಇರಲೇಬೇಕು. ಎಂತಹ ದೊಡ್ಡ ದೊಡ್ಡ ಸಮಾರಂಭಗಳು, ನೂರಾರು ಖಾದ್ಯಳಿದ್ದರೂ ಅಲ್ಲಿ ಉಪ್ಪಿನಕಾಯಿ ಇಲ್ಲದಿದ್ದರೆ ಸಮಾಧಾನ ಇರುವುದೇ ಇಲ್ಲ.
ಮತ್ತೆ ಕೆಲಸವರು ಉಪ್ಪಿನಕಾಯಿ ಇಲ್ಲದೆ ಊಟ ಮಾಡುವುದಿಲ್ಲ. ಊಟದ ಜೊತೆಗೆ ನಾಲಗೆ ರುಚಿಗೆ ಉಪ್ಪಿನಕಾಯಿ ಇರಲೇಬೇಕು. ನಾವೀಗ ಹಲವು ರೀತಿಯ ಉಪ್ಪಿನಕಾಯಿಯನ್ನು ಸವಿಯುವುದನ್ನು ನೋಡಿರುತ್ತೇವೆ. ಮಾವಿನಕಾಯಿ, ನಿಂಬೆಕಾಯಿ, ನೆಲ್ಲಿಕಾಯಿ ಸೇರಿ ಈಗ ಎಲ್ಲಾ ರೀತಿಯ ತರಕಾರಿಯ ಉಪ್ಪಿನಾಕಾಯಿ ಸಹ ಮಾರುಕಟ್ಟೆಯಲ್ಲಿ ಸಿಗುತ್ತವೆ.

ಇನ್ನು ನೀವು ಹಳ್ಳಿ ಕಡೆಗೆ ಹೋದರೆ ಮನೆ ಮನೆಯಲ್ಲೂ ಇಂದಿಗು ಉಪ್ಪಿನಕಾಯಿ ಮಾಡುತ್ತಾರೆ. ಮನೆಗೆ ಬೇಕಾಗುವಷ್ಟು ಉಪ್ಪಿನಕಾಯಿಯನ್ನು ಅವರೇ ಮಾಡಿಕೊಳ್ಳುತ್ತಾರೆ. ಮಾವಿನಕಾಯಿ, ನಿಂಬೆಕಾಯಿಯ ಉಪ್ಪಿನಕಾಯಿಯಂತು ಮನೆ ಮಂದಿ ಎಲ್ಲ ಕುಳಿತು ಸವಿಯುವ ಖಾದ್ಯವಾಗಿರುತ್ತೆ. ಮನೆಯಲ್ಲಿ ಮಾಡಿದ ಉಪ್ಪಿನಕಾಯಿಯ ರುಚಿ ಬೇರೆ ಎಲ್ಲಿಯೂ ಸಿಗುವುದಿಲ್ಲ.
ಹಾಗಾದ್ರೆ ನಾವಿಂದು ಮನೆಯಲ್ಲಿ ನಿಂಬೆಕಾಯಿಯ ಉಪ್ಪಿನಕಾಯಿ ಮಾಡುವು ಕುರಿತು ತಿಳಿದುಕೊಳ್ಳೋಣ. ನಿಂಬೆಕಾಯಿ ಉಪ್ಪಿನಕಾಯಿ ಮಾಡುವುದು ಹೇಗೆ? ನಿಂಬೆ ಉಪ್ಪಿನಕಾಯಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ಸರಿಯಾದ ವಿಧಾನವೇನು? ಹೇಗೆ ಶೇಖರಿಸಿ ಇಡಬೇಕು ಎಂಬ ಕುರಿತು ತಿಳಿದುಕೊಳ್ಳೋಣ.
ನಿಂಬೆಕಾಯಿ ಉಪ್ಪಿನಕಾಯಿ ಮಾಡಲು ಬೇಕಾಗುವ ಪದಾರ್ಥಗಳು
- ನಿಂಬೆಕಾಯಿ - 20
- ಮೆಂತ್ಯ - 1 ಕಪ್
- ಸಾಸಿವೆ - 1 ಕಪ್
- ಉಪ್ಪು - 1 ಕಪ್
- ಅರಶಿನ
- ಇಂಗು
- ಖಾರದ ಪುಡಿ
- ಬೆಳ್ಳುಳ್ಳಿ
- ಎಣ್ಣೆ
ನಿಂಬೆಕಾಯಿ ಉಪ್ಪಿನಕಾಯಿ ಮಾಡುವ ವಿಧಾನವೇನು?
ಮೊದಲು 20 ನಿಂಬೆಕಾಯಿಗಳ ತೆಗೆದುಕೊಂಡು ಚೆನ್ನಾಗಿ ತೊಳೆದುಕೊಳ್ಳಿ. ನಂತರ ನೀರಿನಲ್ಲಿ ಕೆಲಹೊತ್ತು ಅದನ್ನು ನೆನೆಯಲು ಬಿಡಬೇಕು. ನಂತರ ನೀರಿನಿಂದ ತೆಗೆದು ಚೆನ್ನಾಗಿ ಶುದ್ಧ ಬಟ್ಟೆಯಲ್ಲಿ ಅದನ್ನು ಒರೆಸಿಕೊಳ್ಳಬೇಕು. ನಂತರ ಸಣ್ಣ ಸಣ್ಣದಾಗಿ ಕತ್ತರಿಸಿಕೊಳ್ಳಿ. ಎಲ್ಲಾ ನಿಂಬೆಕಾಯಿಯನ್ನು ಕತ್ತರಿಸಿಕೊಂಡ ಬಳಿಕ ಅದನ್ನು ಒಂದು ಬೌಲ್‌ಗೆ ಹಾಕಿಕೊಳ್ಳಿ.
ಈ ಬೌಲ್‌ಗೆ ಒಂದು ಗ್ಲಾಸ್ ಉಪ್ಪು ಹಾಕಬೇಕು. ಉಪ್ಪು ಹೆಚ್ಚಾಗಿ ಹಾಕಿಕೊಳ್ಳಿ. ನಂತರ ಒಂದು ಸ್ಪೂನ್ ಅರಶಿನ, ಒಂದು ಸ್ಪೂನ್ ಇಂಗು ಹಾಕಿ ಕೈ ಹಾಕದೆ ಕಲಿಸಿಕೊಳ್ಳಬೇಕು. ನಂತರ ಈ ಬೌಲ್ ಅನ್ನು ಮುಚ್ಚಳದಿಂದ ಮುಚ್ಚಿ ಒಂದು ದಿನ ಬಿಡಬೇಕು. ಮಾರನೆ ದಿನ ಮುಚ್ಚಳ ತೆಗೆದು ನೋಡಿದಾಗ ಇದು ನೀರು ಬಿಟ್ಟಿರಬೇಕು. ಹೀಗೆ ಸುಮಾರು 8 ದಿನಗಳ ಕಾಲ ಬಿಡಬೇಕು.
ಮೊದಲು ಒಂದು ಪಾತ್ರೆಯಲ್ಲಿ ಮೆಂತ್ಯ ಹಾಕಿಕೊಂಡು ಹುರಿದುಕೊಳ್ಳಿ. 2 ನಿಮಿಷ ಹುರಿದುಕೊಂಡ ಬಳಿಕ ಇದಕ್ಕೆ 1 ಬೌಲ್‌ನಲ್ಲಿ ಸಾಸಿವೆ ಹಾಕಿಕೊಳ್ಳಿ. ಈಗ ಒಲೆ ಆಫ್ ಮಾಡಿಕೊಳ್ಳಿ. ಇದನ್ನು ತಣ್ಣಗಾಗಲು ಬಿಡಿ.
ಇನ್ನೊಂದು ಕಡೆ ನಿಂಬೆಕಾಯಿ ಇರುವ ಬೌಲ್‌ಗೆ ಖಾರದ ಪುಡಿ, ಜಜ್ಜಿದ ಬೆಳ್ಳುಳ್ಳಿ ಹಾಕಿ ಕಲಸಿಕೊಳ್ಳಿ. ಈಗ ತಣ್ಣಗಾಗಲು ಬಿಟ್ಟಿದ್ದ ಮೆಂತ್ಯ ಹಾಗೂ ಸಾಸಿವೆಯನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ರುಬ್ಬಿಕೊಂಡು ಈ ಬೌಲ್‌ಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಕೈನಲ್ಲೇ ಚೆನ್ನಾಗಿ ಬೆರೆಸಿಕೊಳ್ಳಿ.
ಇದಾದ ಬಳಿಕ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಸಾಸಿವೆ ಹಾಕಿ ಸ್ವಲ್ಪ ಹೊತ್ತು ಬಿಟ್ಟು ಒಲೆ ಆಫ್ ಮಾಡಿ. ನಂತರ ಇದನ್ನು ತಣ್ಣಗಾಗಲು ಬಿಡಿ. ತಣ್ಣಗಾದ ಬಳಿಕ ಕಲಸಿಕೊಂಡಿರುವ ಉಪ್ಪಿನಕಾಯಿಗೆ ಮಿಕ್ಸ್ ಮಾಡುತ್ತಾ ಚೆನ್ನಾಗಿ ಕಲಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ನಿಂಬೆಕಾಯಿ ಉಪ್ಪಿನಕಾಯಿ ರೆಡಿಯಾಗುತ್ತದೆ.
ಇದನ್ನು ಪಿಂಗಾಣಿ ಪಾತ್ರೆ ಅಥವಾ ಸ್ಟೀಲ್ ಪಾತ್ರೆಯಲ್ಲಿ ಇಟ್ಟರೆ ಒಂದು ವರ್ಷಕ್ಕೂ ಹೆಚ್ಚು ಕಾಲ ಇಡಬಹುದು.



Click it and Unblock the Notifications
