Latest Updates
-
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ!
ಬೆಳಗ್ಗೆ ತಿಂಡಿಗೆ ಹೊಸ ರೀತಿಯ ಮಸಾಲ ಇಡ್ಲಿ: ಮಾಡೋದು ಹೀಗೆ!
ನೀವು ಬೆಳಗ್ಗೆ ತಿಂಡಿಗೆ ಅದ್ಭುತ ರುಚಿಯ ಇಡ್ಲಿ ಮಾಡಿ ಸವಿಯುವುದು ಕಾಮನ್. ಅದ್ರಲ್ಲೂ ಇಡ್ಲಿ ಅಂದ್ರೆ ಎಲ್ಲರಿಗೂ ಇಷ್ಟವಾಗುವ ಖಾದ್ಯ. ಆರೋಗ್ಯದ ದೃಷ್ಟಿಯಿಂದಲೂ ಇಡ್ಲಿ ಬಹಳ ಉತ್ತಮ. ಕಡಿಮೆ ಎಣ್ಣೆ ಬಳಸಿ ಮಾಡುವ ಇಡ್ಲಿಯೂ ಕೂಡ ಆರೋಗ್ಯಕ್ಕೆ ಬಹಳ ಉತ್ತಮ. ಇಡ್ಲಿಯಲ್ಲಿ ಹಲವು ರೀತಿಯ ಬಗೆಗಳಿವೆ. ಅದ್ರಲ್ಲಿ ಹಲವು ಬಗೆಯನ್ನು ನೀವು ಕೂಡ ಮನೆಯಲ್ಲಿ ಮಾಡಿ ಸವಿದಿರುತ್ತೀರಿ.
ಇನ್ನು ಮನೆಯಲ್ಲಿ ಇಡ್ಲಿ ಮಾಡಿ ಸವಿಯುವಾಗ ಅದು ಬಹಳ ಮೃದುವಾಗಿ ಬರಲಿ ಎಂಬುದಷ್ಟೇ ಹಲವರ ಬೇಡಿಕೆ ಆಗಿರಲಿದೆ. ಆದ್ರೆ ಮತ್ತೆ ಕೆಲವರು ಹೊಸ ರೀತಿಯಲ್ಲಿ ಇಡ್ಲಿ ಮಾಡಿ ಸವಿಯಲು ಮುಂದಾಗುತ್ತಾರೆ. ಹಾಗೆ ನಾವಿಂದು ಇಡ್ಲಿಯಲ್ಲಿ ಅತ್ಯಂತ ರುಚಿಕರ ಹಾಗೆ ವಿಶೇಷ ಬಗೆಯ ಇಡ್ಲಿ ವಿಧಾನವನ್ನು ಮಾಡಿ ಸವಿಯುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.

ಅದ್ರಲ್ಲು ವಿಶೇಷವಾಗಿ ರವೆಯನ್ನು ಬಳಸಿ ಮಸಾಲ ಇಡ್ಲಿ ಮಾಡಿದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗಾದ್ರೆ ಹೊಸ ರೀತಿಯ ಸ್ಪೆಷಲ್ ಇಡ್ಲಿ ಮಾಡೋದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಎಷ್ಟು ಸಮಯ ಇದಕ್ಕೆ ಹಿಡಿಯಲಿದೆ? ಹಿಟ್ಟು ಹೇಗೆ ರೆಡಿ ಮಾಡಿಕೊಳ್ಳಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹೊಸ ರೀತಿಯ ಇಡ್ಲಿ ಮಾಡಲು ಬೇಕಾಗುವ ವಸ್ತುಗಳು
- ರವೆ
- ಗೊಡಂಬಿ
- ತುಪ್ಪ
- ಕರಿಬೇವು
- ಕೊತ್ತಂಬರಿ ಸೊಪ್ಪು
- ಅಡುಗೆ ಸೋಡಾ
- ಉಪ್ಪು
- ಉದ್ದಿನ ಬೇಳೆ
- ಕಡಲೆ ಬೇಳೆ
- ಸಾಸಿವೆ
- ಜೀರಿಗೆ
- ಶುಂಠಿ
- ಮೊಸರು
ಹೊಸ ರೀತಿಯ ಇಡ್ಲಿ ಮಾಡುವ ಸುಲಭದ ವಿಧಾನವಿದು
ಮೊದಲು ಒಂದು ಬಾಣಲೆಯನ್ನು ಒಲೆ ಮೇಲೆ ಇಟ್ಟು ಅದಕ್ಕೆ ತುಪ್ಪ ಹಾಕಿಕೊಂಡು ಬಳಿಕ ಗೋಡಂಬಿ ಹಾಕಿ ಫ್ರೈ ಮಾಡಿ ತೆಗೆದಿಟ್ಟುಕೊಳ್ಳಿ. ಈಗ ಇದಕ್ಕೆ ಸಾಸಿವೆ, ಜೀರಿಗೆ, ಇಂಗು ಹಾಕಿಕೊಂಡು ಬಳಿಕ ಕಡಲೆ ಬೇಳೆ, ಉದ್ದಿನ ಬೇಳೆ ಹಾಕಿಕೊಂಡು ಪ್ರೈ ಮಾಡಿ. ಅನಂತರ ಸಣ್ಣದಾಗಿ ಹೆಚ್ಚಿಕೊಂಡಿರುವ ಹಸಿ ಮೆಣಸು ಹಾಕಿ.
ಅನಂತರ ಕರಿಬೇವು ಹಾಕಿ ಬಳಿಕ 1 ಕಪ್ ಬಾಂಬೆ ರವೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಹುರಿದುಕೊಳ್ಳಿ. 3 ನಿಮಿಷ ಸಣ್ಣ ಉರಿಯಲ್ಲಿ ಹುರಿದುಕೊಳ್ಳಬೇಕು. ಈಗ ಈ ಎಲ್ಲಾ ವಸ್ತುಗಳನ್ನು ತೆಗೆದು ಒಂದು ಪಾತ್ರೆಗೆ ಹಾಕಿಕೊಳ್ಳಿ. ಈಗ ಒಂದು ಕಪ್ ಮೊಸರು ಹಾಗೆ ಸಣ್ಣದಾಗಿ ಹೆಚ್ಚಿಕೊಂಡಿರುವ ಶುಂಠಿಯನ್ನು ಸಹ ಹಾಕಿ.
ಸ್ವಲ್ಪ ನೀರು ಹಾಕಿಕೊಂಡು ಉಪ್ಪು, ಅಡುಗೆ ಸೋಡಾ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಇದು ದಪ್ಪ ಚಟ್ನಿಯಂತೆ ಕಾಣಿಸಬೇಕು. ಈ ಹಿಟ್ಟು ಸ್ವಲ್ಪ ದಪ್ಪವಾಗಿ ಹುಡಿ ಹುಡಿಯಾಗಿರಲಿ. ಈಗ ಸಣ್ಣದಾಗಿ ಕತ್ತರಿಸಿಕೊಂಡಿರುವ ಕೊತ್ತಂಬರಿ ಸೊಪ್ಪನ್ನು ಕೂಡ ಹಾಕಿಕೊಳ್ಳಿ. ನಂತರ 10 ನಿಮಿಷ ಹಾಗೆಯೆ ಹಿಟ್ಟನ್ನು ಬಿಡಿ.
10 ನಿಮಿಷ ಬಿಟ್ಟು ನೋಡಿದಾಗ ಹಿಟ್ಟು ಗಟ್ಟಿಯಾಗಿದ್ದರೆ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇಲ್ಲದಿದ್ದರೆ ಸಾಮಾನ್ಯ ಇಡ್ಲಿ ಮಾಡುವಂತೆಯೇ ಕ್ರಮ ಅಥವಾ ವಿಧಾನದ ಮೂಲಕ ಇಡ್ಲಿ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಹೊಸ ರುಚಿಯ ಮಸಾಲ ಇಡ್ಲಿ ರೆಡಿಯಾಗುತ್ತದೆ. ನೀವು ಕೂಡ ಈ ಇಡ್ಲಿ ಮಾಡಿ ಸವಿದು ನೋಡಿ. ಬೆಳಗ್ಗೆ ತಿಂಡಿಗೆ ಇದು ಅದ್ಭುತ ರುಚಿ ನೀಡಲಿದೆ. ಇಡ್ಲಿ ಹಿಟ್ಟು ಅಚ್ಚುಗಳಿಗೆ ಹಾಕಿಕೊಳ್ಳುವ ಮುನ್ನ ತುಪ್ಪದಲ್ಲಿ ಹುರಿದುಕೊಂಡಿದ್ದ ಗೋಡಂಬಿಯನ್ನು ಕೆಳಗೆ ಇಟ್ಟು ಅದರ ಮೇಲೆ ಹಿಟ್ಟು ಹಾಕಿಕೊಳ್ಳಿ. ಈ ಇಡ್ಲಿ ಮನೆ ಮಂದಿಗೆಲ್ಲಾ ಇಷ್ಟವಾಗುತ್ತೆ. ನೀವು ಕೂಡ ಒಮ್ಮೆ ಆದರೂ ಇದನ್ನು ಮನೆಯಲ್ಲಿ ಮಾಡಿ ನೋಡಿ.



Click it and Unblock the Notifications
