Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ಮೊಟ್ಟೆ ತುರಿದು ಎಂದಾದ್ರು ಹೀಗೆ ಕರಿ ಮಾಡಿದ್ರಾ? ಟ್ರೈ ಮಾಡಿ ನೋಡಿ!
ನೀವು ಮೊಟ್ಟೆಯಿಂದ ಮಾಡುವಂತಹ ಹಲವು ರೀತಿಯ ಖಾದ್ಯಗಳ ಸವಿದು ನೋಡಿರಬಹುದು. ಹಾಗೆ ಮೊಟ್ಟೆ ಕೂಡ ಆರೋಗ್ಯಕ್ಕೆ ಬಹಳ ಉತ್ತಮ ಎಂಬುದನ್ನು ನೀವು ತಿಳಿದಿದ್ದೀರಿ. ಹಾಗೆ ಮೊಟ್ಟೆಯಿಂದ ಮಾಡಿ ಸವಿಯುವ ಎಲ್ಲಾ ಖಾದ್ಯಗಳು ಬಹಳ ರುಚಿಯಾಗಿರಲಿವೆ. ಹೀಗಾಗಿ ಎಲ್ಲರಿಗೂ ಮೊಟ್ಟೆಯ ಖಾದ್ಯಗಳು ಬಹಳ ಇಷ್ಟವಾಗುತ್ತವೆ.
ಇನ್ನು ಮೊಟ್ಟೆಯಿಂದ ಮಾಡುವ ಕರಿ, ಸಾಂಬಾರ್, ಗ್ರೇವಿ, ಮಸಾಲ ಫ್ರೈ, ಆಮ್ಲೆಟ್, ಫ್ರೈಡ್ ರೈಸ್, ಬಿರಿಯಾನಿ ಸೇರಿದಂತೆ ಹಲವು ಬಗೆಯ ಖಾದ್ಯಗಳೆಂದರೆ ಎಲ್ಲರಿಗೂ ಇಷ್ಟವಾಗುತ್ತೆ. ಇದನ್ನು ಮಾಡಿ ಸವಿಯುವ ಬಗೆಯೂ ಕೂಡ ಹಲವು ರೀತಿಯಲ್ಲಿವೆ. ನೀವು ಹೋಟೆಲ್ ರೆಸ್ಟೋರೆಂಟ್ನಲ್ಲಿ ನೀಡುವಂತಹ ಹಲವು ರುಚಿಯ ಖಾದ್ಯಗಳೆಂದರೆ ನಿಮ್ಮ ಬಾಯಲ್ಲೂ ನೀರು ಬರಬಹುದು.

ಸದ್ಯ ನಾವಿಂದು ಈ ಮೊಟ್ಟೆಯನ್ನು ಬೇಯಿಸಿ ಅದನ್ನು ತುರಿದು ಮಾಡುವಂತಹ ವಿಭಿನ್ನ ಶೈಲಿಯ ಒಂದು ಕರಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಅದ್ರಲ್ಲೂ ಊಟದೊಂದಿಗೆ, ಚಪಾತಿ, ದೋಸೆ, ಇಡ್ಲಿಯೊಂದಿಗೆ ಸವಿಯಲು ಈ ಮೊಟ್ಟೆ ಕರಿ ಬಹಳ ರುಚಿ ನೀಡಲಿದೆ. ನೀವು ಕೂಡ ಇದನ್ನು ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳಿ.
ಈ ಮೊಟ್ಟೆ ತುರಿದು ಕರಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಮೊಟ್ಟೆ ತುರಿದು ಕರಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಮೊಟ್ಟೆ
- ಚಕ್ಕೆ
- ಲವಂಗ
- ಏಲಕ್ಕಿ
- ಪಲಾವ್ ಎಲೆ
- ಜೀರಿಗೆ
- ಹಸಿ ಮೆಣಸು
- ಈರುಳ್ಳಿ
- ಟೊಮೆಟೋ
- ಖಾರದ ಪುಡಿ
- ಅರಶಿಣ
- ಗರಂ ಮಸಾಲ
- ಉಪ್ಪು
- ಎಣ್ಣೆ
- ಕೊತ್ತಂಬರಿ ಸೊಪ್ಪು
ಮೊಟ್ಟೆ ತುರಿದು ಕರಿ ಮಾಡುವ ವಿಧಾನವೇನು?
ಮೊದಲು 6 ಮೊಟ್ಟೆಗಳನ್ನು ಬೇಯಿಸಿಕೊಂಡು ಸಿಪ್ಪೆ ತೆಗೆದು ನಂತರ ಕ್ಯಾರೆಟ್ನಂತೆ ತುರಿದು ಇಟ್ಟುಕೊಳ್ಳಬೇಕು. ಹಳದಿ ಕೂಡ ತುರಿದುಕೊಂಡಿರಬೇಕು. ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ ಹಾಕಿ ಬಳಿಕ ಜೀರಿಗೆ, ಹಸಿ ಮೆಣಸು, ಈರುಳ್ಳಿ ಸಹ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
ಹಾಗೆ ಇದಕ್ಕೆ ಕರಿಬೇವು ಹಾಕಿ ಮಿಕ್ಸ್ ಮಾಡುತ್ತಾ ಇದಕ್ಕೆ ಕತ್ತರಿಸಿಕೊಂಡ 2 ಟೊಮೆಟೋ ಸಹ ಹಾಕಿಕೊಂಡು ಫ್ರೈ ಆಗಲು ಬಿಡಿ. 2 ನಿಮಿಷ ಫ್ರೈ ಮಾಡಿಕೊಂಡ ಬಳಿಕ ಅರಶಿಣ, ಗರಂ ಮಸಾಲ, ಖಾರದ ಪುಡಿ, ಉಪ್ಪು ಹಾಕಿ ಮತ್ತೆ 1 ನಿಮಿಷ ಫ್ರೈ ಮಾಡಿ. ಅನಂತರ ಇದಕ್ಕೆ ತಳ ಹಿಡಿಯದಂತೆ ಮಾಡಲು ಸ್ವಲ್ಪ ನೀರು ಸಹ ಹಾಕಿಕೊಂಡು ಫ್ರೈ ಮಾಡಿ.
ಇದು ಗೊಜ್ಜಿನ ಹದಕ್ಕೆ ಬಂದಾಗ ತುರಿದುಕೊಂಡಿದ್ದ ಮೊಟ್ಟೆಯನ್ನು ಇದಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಅನಂತರ ಕೈಯಲ್ಲಿ ಉಜ್ಜಿಕೊಂಡ ಕಸೂರಿ ಮೇತಿಯನ್ನು ಹಾಕಿಕೊಳ್ಳಿ. ಹಾಗೆ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 10 ನಿಮಿಷ ಬಿಡಿ. ಅನಂತರ ಮುಚ್ಚಳ ತೆಗೆದು ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ ಮಾಡಿದರೆ ನಿಮ್ಮ ಮುಂದೆ ಎಗ್ ಕರಿ ಅಥವಾ ಎಗ್ ಕೈಮಾ ಗ್ರೇವಿ ಸಿದ್ದವಾಗುತ್ತೆ. ನೀವು ಕೂಡ ಮನೆಯಲ್ಲಿ ಇದನ್ನೊಮ್ಮೆ ಟ್ರೈ ಮಾಡಿ ನೋಡಿ. ಊಟ, ತಿಂಡಿ ಎಲ್ಲದಕ್ಕೂ ಇದು ಫಸ್ಟ್ ಕ್ಲಾಸ್ ರುಚಿ ನೀಡಲಿದೆ.



Click it and Unblock the Notifications
