Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಮಕ್ಕಳಿಗಾಗಿ ತಿಂಡಿಗೆ ಮಾಡಿ ರಸಂ ರೈಸ್..! ಹೊಸ ಬಗೆಯ ತಿಂಡಿ ಸವಿದು ನೋಡಿ!
ಮನೆಯಲ್ಲಿ ನೀವು ಯಾವುದೇ ಅಡುಗೆ ಅಥವಾ ತಿಂಡಿ, ಖಾದ್ಯಗಳ ಮಾಡುವಾಗ ಇದು ಎಲ್ಲರಿಗೂ ಇಷ್ಟವಾಗಬೇಕು ಎನ್ನುವ ಉದ್ದೇಶದಿಂದ ಹಾಗೆ ಬಯಕೆಯಿಂದ ಮಾಡುತ್ತೀರಿ. ಆದ್ರೆ ನಿತ್ಯವು ಒಂದೇ ರೀತಿಯ ಅಡುಗೆ ಮಾಡಿದ್ರೆ ಯಾರಿಗೂ ಅದರ ರುಚಿ ಹಿಡಿಸೋದಿಲ್ಲ. ಆದ್ರೆ ಆಗಾಗ ಸ್ಪೆಷಲ್ ಆಗಿ ಬೇರೆ ಬೇರೆ ಬಗೆಯ ಖಾದ್ಯಗಳ ಮಾಡಿ ಸವಿಯೋದು ಮನೆ ಮಂದಿಗೆಲ್ಲಾ ಇಷ್ಟವಾಗುವಂತಹ ಖಾದ್ಯ ಮಾಡುವುದು ಊಟ, ತಿಂಡಿಯ ರುಚಿ ಹೆಚ್ಚಿಸಲಿದೆ.
ಹಾಗೆ ಮನೆಯಲ್ಲಿ ಮಕ್ಕಳಿದ್ದರಂತು ಅವರಿಗೆ ರುಚಿ ರುಚಿಯಾಗಿ ಮಾಡಿ ಏನಾದರು ಮಾಡಿ ನೀಡಿದ್ರೆ ಖುಷಿ ಖುಷಿಯಿಂದ ಸವಿಯುತ್ತಾರೆ. ಹೀಗಾಗಿ ನಾವಿಂದು ಸುಲಭವಾಗಿ ಮಾಡುವಂತಹ ಹಾಗೆ ವಿಭಿನ್ನ ರುಚಿಯ ರಸಂ ರೈಸ್ ಮಾಡುವ ಕುರಿತು ತಿಳಿದುಕೊಳ್ಳೋಣ. ನೀವು ರೈಸ್ ಸವಿಯಲು ರಸಂ ಮಾಡುವುದು ಸಹಜ ಆದ್ರೆ ಬೆಳಗ್ಗೆ ತಿಂಡಿಗೆ ನಾವು ರಸಂ ರೈಸ್ ಮಾಡುವ ಕುರಿತು ತಿಳಿದುಕೊಳ್ಳೋಣ.

ರಸಂ ರೈಸ್ ಅನ್ನು ಮಾಡಿದ್ರೆ ಮನೆ ಮಂದಿಗೆಲ್ಲಾ ಇಷ್ಟವಾಗುತ್ತೆ. ಅದ್ರಲ್ಲೂ ಮಕ್ಕಳಿಗಂತು ಇದು ಇಷ್ಟದ ಖಾದ್ಯ ಆಗಲಿದೆ. ಹೀಗಾಗಿ ನಾವಿಂದು ಈ ರೈಸ್ ರಸಂ ಮಾಡಿ ಸವಿಯುವ ಕುರಿತು ತಿಳಿದುಕೊಳ್ಳೋಣ. ರಸಂ ರೈಸ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ರಸಂ ರೈಸ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಅಕ್ಕಿ
- ಹುಣಸೆ ಹುಳಿ
- ಜೀರಿಗೆ
- ಕಾಳು ಮೆಣಸು
- ಬೆಳ್ಳುಳ್ಳಿ
- ಸಾಸಿವೆ
- ಒಣ ಮೆಣಸು
- ಈರುಳ್ಳಿ
- ಟೊಮೆಟೊ
- ಇಂಗು
- ಅರಿಶಿನ ಪುಡಿ
- ಕರಿಬೇವು
- ಕೊತ್ತಂಬರಿ ಸೊಪ್ಪು
- ತುಪ್ಪ
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ರಸಂ ರೈಸ್ ಮಾಡುವ ವಿಧಾನವೇನು?
ಒಂದು ಕಪ್ ಅಕ್ಕಿ ಕಾಲು ಕಪ್ ತೊಗರಿ ಬೇಳೆಯನ್ನು ಒಂದು ಬೌಲ್ಗೆ ಹಾಕಿ 2 ಬಾರಿ ತೊಳೆದು ಇಟ್ಟುಕೊಳ್ಳಿ. ಹಾಗೆ ಒಂದು ಮಿಕ್ಸಿ ಜಾರ್ಗೆ ಜೀರಿಗೆ, ಕಾಳು ಮೆಣಸು, ಬೆಳ್ಳುಳ್ಳಿ ಹಾಕಿ ತರಿ ತರಿಯಾಗಿ ಪುಡಿ ಮಾಡಿಟ್ಟುಕೊಳ್ಳಿ. ನಂತರ ಹುಣಸೆ ಹುಳಿಯನ್ನು ನೆನೆಸಿ ಇಟ್ಟುಕೊಳ್ಳಿ.
ಈಗ ಒಲೆ ಮೇಲೆ ಒಂದಿ ಕುಕ್ಕರ್ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಸಾಸಿವೆ, ಒಣ ಮೆಣಸು, ಕತ್ತರಿಸಿದ ಒಂದು ಈರುಳ್ಳಿ, 2 ಟೊಮೆಟೋ, ಇಂಗು, ಅರಶಿಣ ಪುಡಿ ಹಾಕಿ 1 ನಿಮಿಷ ಫ್ರೈ ಮಾಡಿಕೊಳ್ಳಿ. ಈಗ ಕರಿಬೇವು ಹಾಗೆ ಮಿಕ್ಸಿಯಲ್ಲಿ ರುಬ್ಬಿಕೊಂಡ ಮಸಾಲೆಗಳನ್ನು ಇದಕ್ಕೆ ಹಾಕಿಕೊಂಡು ಉಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ.
1 ನಿಮಿಷದ ಬಳಿಕ ಈಗ ತೊಳೆದು ಕೊಂಡಿದ್ದ ಅಕ್ಕಿ ತೊಗರಿ ಬೇಳೆಯನ್ನು ಸಹ ಇದಕ್ಕೆ ಹಾಕಿಕೊಂಡು 1 ನಿಮಿಷ ಮಿಕ್ಸ್ ಮಾಡಿಕೊಳ್ಳಿ. ಮತ್ತೆ ಒಮ್ಮೆ ಉಪ್ಪು ಹಾಕಿಕೊಳ್ಳಿ. ಹಾಗೆ ಹುಣಸೆ ಹುಳಿಯನ್ನು ಸಹ ಇದಕ್ಕೆ ಹಾಕಿ ಮಿಕ್ಸ್ ಮಾಡಿ. ಈಗ 4ರಿಂದ 5 ಕಪ್ ನೀರನ್ನು ಹಾಕಿಕೊಳ್ಳಿ. ಇದು ಅಳತೆ ಪ್ರಮಾಣದಲ್ಲಿ ಹಾಕಬೇಕು ಎಂಬುದಿಲ್ಲ.
ನೀರು ಹಾಕಿದ ಬಳಿಕ ಮುಚ್ಚಳ ಮುಚ್ಚಿ 5 ಸೀಟಿ ಹೊಡೆಯಲು ಬಿಡಿ. ಇದರಿಂದ ಅನ್ನ ಪೂರ್ಣ ಬೆಂದು ಮೆತ್ತಗಾಗಿರಲಿದೆ. ಹಾಗೆ ನೀರು ಇರಲಿದೆ. ಇದು ಪೊಂಗಲ್ನಂತೆ ಕಂಡರು ಅದರ ರುಚಿ ಒಮ್ಮೆ ಸವಿದರೆ ಎಲ್ಲರು ಮತ್ತೆ ಮತ್ತೆ ಬೇಕು ಅನ್ನೋದು ಖಚಿತ. ನೀವು ಕೂಡ ಬೆಳಗ್ಗೆ ತಿಂಡಿಗೆ ಇದನ್ನು ಮಾಡಿ ನೋಡಿ.



Click it and Unblock the Notifications