Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಗೋಧಿ ಹಿಟ್ಟಿನ ಹೊಸ ತಿಂಡಿ ಮಾಡಿ ನೋಡಿ..! ರುಚಿ ನೋಡಿದ್ರೆ ಮತ್ತೆ ಮತ್ತೆ ಸವಿಯುತ್ತಿರಿ.!
ಮನೆಯಲ್ಲಿ ನಿತ್ಯ ಒಂದೇ ರೀತಿಯ ತಿಂಡಿ ಮಾಡಿ ನಿಮಗೂ ನಿಮ್ಮ ಮನೆಯ ಸದಸ್ಯರಿಗೂ ಬೇಜಾರಾಗಿದ್ದರೆ ಹೊಸ ರೀತಿಯ ತಿಂಡಿಯನ್ನ ನೀವು ಪ್ರಯತ್ನಿಸುತ್ತೀರಿ. ಅದ್ರಲ್ಲೂ ವಿಶೇಷವಾಗಿ ನಾಲಗೆಗೆ ರುಚಿ ನೀಡುವ ಹೊಸದಾಗಿ ಪ್ರಯೋಗ ಮಾಡಿ ಮಾಡುವ ತಿಂಡಿಗಳ ಮೊರೆ ಹೋಗುತ್ತೀರಿ. ಆದರೆ ಯಾವ ತಿಂಡಿ ಮಾಡಬೇಕು ಎಂಬ ನಿಮ್ಮ ಆಲೋಚನೆಗೆ ಉತ್ತರ ಹುಡುಕುವ ಪ್ರಯತ್ನ ನಾವು ಮಾಡಿದ್ದೇವೆ.
ಸುಲಭವಾಗಿ ಗೋಧಿ ಹಿಟ್ಟಿನಿಂದ ಅದ್ಭುತವಾದ ರುಚಿ ರುಚಿಯ ತಿಂಡಿಯೊಂದನ್ನ ಮಾಡಬಹುದು. ಗೋಧಿ ಹಿಟ್ಟು ಬಳಸಿ ರುಚಿಕರ ತಿಂಡಿ ಮಾಡಬಹುದು. ಅದ್ರಲ್ಲೂ ಕೆಲವೇ ನಿಮಿಷದಲ್ಲಿ ಕಡಿಮೆ ಪದಾರ್ಥದಲ್ಲಿ ಈ ತಿಂಡಿ ಸವಿಯಬಹುದು ಹಾಗಾದ್ರೆ ಇದು ಯಾವ ತಿಂಡಿ? ಮಾಡೋದು ಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಗೋಧಿ ಹಿಟ್ಟಿನ ತಿಂಡಿ ಮಾಡಲು ಬೇಕಾಗುವ ಪದಾರ್ಥಗಳು
- ಗೋಧಿ ಹಿಟ್ಟು - 2 ಕಪ್
- ಜೀರಿಗೆ
- ಹಸಿ ಮೆಣಸು
- ಹಸಿ ಬಟಾಣಿ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಗರಂ ಮಸಾಲ
- ಅರಶಿಣ
- ಖಾರದ ಪುಡಿ
- ಈರುಳ್ಳಿ - 2
- ಎಣ್ಣೆ
- ಉಪ್ಪು
ಗೋಧಿ ಹಿಟ್ಟಿನ ತಿಂಡಿ ಮಾಡುವುದು ಹೇಗೆ?
ಮೊದಲು ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ಒಂದು ಸ್ಪೂನ್ ಎಣ್ಣೆ ಹಾಕಿ, ಬಳಿಕ ಇದಕ್ಕೆ ಜೀರಿಗೆ, ಹಸಿ ಮೆಣಸು, ಈರುಳ್ಳಿ, ಉಪ್ಪು ಹಾಕಿಕೊಂಡು ಫ್ರೈ ಮಾಡಿಕೊಳ್ಳಬೇಕು. ಈರುಳ್ಳಿ ಬೇಯುವವರೆಗೆ ಫ್ರೈ ಮಾಡಿ. 2 ನಿಮಿಷ ಫ್ರೈ ಮಾಡಿದರೆ ಸಾಕಾಗುತ್ತದೆ. ಇದಾದ ಬಳಿಕ ಬಟಾಣಿ ಸಹ ಹಾಕಿಕೊಂಡು ಮಿಕ್ಸ್ ಮಾಡುಕೊಳ್ಳಿ.
ನಂತರ ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ಅರಶಿಣ, ಗರಂ ಮಸಾಲ ಪುಡಿ ಹಾಕಿ ಫ್ರೈ ಮಾಡಿಕೊಳ್ಳಿ. ಈ ಮಸಾಲೆಗಳು ಚೆನ್ನಾಗಿ ಹಿಡಿಯುವವರೆಗೂ ಫ್ರೈ ಮಾಡಿಕೊಳ್ಳಿ. ಈ ವೇಳೆ ನೀರು ಹಾಕದೆ ಹಾಗೆ ಫ್ರೈ ಮಾಡಿಕೊಳ್ಳಿ. ಈಗ ಮಸಾಲೆ ತಳ ಹಿಡಿಯುತ್ತಿದ್ದರೆ ಒಂದೆರಡು ಸ್ಪೂನ್ ನೀರು ಹಾಕಿಕೊಂಡರೆ ಸಾಕಾಗುತ್ತದೆ.
ಈಗ ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಗೋಧಿ ಹಿಟ್ಟು ಹಾಕಿಕೊಳ್ಳಿ. ಇದಕ್ಕೆ ಉಪ್ಪು ಹಾಕಿಕೊಂಡು ಚಪಾತಿಗೆ ಕಲಸಿಕೊಳ್ಳುವಂತೆಯೇ ಹಿಟ್ಟು ರೆಡಿಮಾಡಿಕೊಳ್ಳಿ. ಈ ಹಿಟ್ಟನ್ನು ಸಣ್ಣ ಸಣ್ಣ ಉಂಡೆಯಾಗಿ ಮಾಡಿಟ್ಟುಕೊಳ್ಳಿ. ದೊಡ್ಡ ಗೋಲಿ ಆಕಾರದ ಉಂಡೆ ಮಾಡಿಕೊಳ್ಳಿ. ಬಳಿಕ ಒಂದು ಉಂಡೆ ತೆಗೆದುಕೊಂಡು ವೃತ್ತಾಕಾರವಾಗಿ ಉಜ್ಜಿಟ್ಟುಕೊಳ್ಳಿ. ಎಲ್ಲಾ ಉಂಟೆಯನ್ನು ವಡೆಯಂತೆ ದಪ್ಪವಾಗಿ ಮಾಡಿಕೊಳ್ಳಿ, ನಂತರ ಲಟ್ಟಣಿಗೆಯಲ್ಲಿ ಸ್ವಲ್ಪ ಲಟ್ಟಿಸಿಕೊಳ್ಳಿ.
ಈಗ ಇದರ ಮಧ್ಯಕ್ಕೆ ಸ್ವಲ್ಪ ಮಸಾಲೆ ಹಾಕಿ ಸಂಪೂರ್ಣವಾಗಿ ಮುಚ್ಚಿಬಿಡಿ. ಹೂರ್ಣದ ರೀತಿ ಮುಚ್ಚಿ ಬಳಿಕ ಕಡಬಿನಂತೆ ವೃತ್ತವಾಗಿ ತಿರುಗಿಸಿಕೊಳ್ಳಿ. ನಂತರ ಮತ್ತೆ ಇಡ್ಲಿ ಆಕಾರಕ್ಕಿಂತ ಸ್ವಲ್ಪ ಚಿಕ್ಕದಾಗಿ ತಟ್ಟಿಕೊಳ್ಳಿ. ಇದು ಸ್ವಲ್ಪ ದಪ್ಪವಾಗಿ ಇರಲಿ. ಹೀಗೆ ಎಲ್ಲಾ ಉಂಡೆಯನ್ನು ಸಹ ಇದೇ ರೀತಿ ಮಾಡಿಕೊಳ್ಳಿ. ಈಗ ಇದನ್ನು ಬೇಯಿಸಬೇಕು, ಇಡ್ಲಿ ಅಥವಾ ಕಡಬಿನ ಸ್ಟೀಮ್ನಲ್ಲಿ ಬೇಯಿಸಬಹುದು.
ಎಲ್ಲಾ ಉಂಡೆಗಳನ್ನು ಅದರೊಳಗೆ ಇಟ್ಟು ನಂತರ ಬೇಯಲು ಬಿಡಿ. 10 ಬೇಯಿಸಿದರೆ ಸಾಕಾಗುತ್ತದೆ. ಇದು ಬೇಯಿಸಿದಾಗ ಸ್ವಲ್ಪ ಉಬ್ಬಿಕೊಂಡಿರುತ್ತದೆ. ನಂತರ ಒಲೆ ಮೇಲೆ ಕಾವಲಿ ಅಥವಾ ತವಾ ಇಟ್ಟು ಸ್ವಲ್ಪ ಎಣ್ಣೆ ಹಾಕಿ ಬಳಿಕ ಅದರ ಮೇಲೆ ಒಂದೊಂದೆ ಉಂಡೆಯನ್ನು ಇಟ್ಟುಕೊಳ್ಳಿ. ಎಡು ಬದಿಯನ್ನು ಫ್ರೈ ಮಾಡಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ಗೋಧಿ ಹಿಟ್ಟಿನ ಹೊಸ ತಿಂಡಿ ರೆಡಿಯಾಗುತ್ತದೆ. ಇದರ ಒಳಗೆ ಬಟಾಣಿ ಮಸಾಲೆ ಬೆಂದು ಗಮಗಮ ಎನ್ನುವ ಸುವಾಸನೆ ಬರುತ್ತದೆ. ಇದನ್ನು ಬೆಳಗಿನ ತಿಂಡಿಗೆ ಮಾಡಿ ಸವಿದರೆ ಅದರ ರುಚಿಯೇ ಬೇರೆ. ನೀವು ಸಹ ಒಮ್ಮೆ ಇದನ್ನು ಮನೆಯಲ್ಲಿ ಟ್ರೈ ಮಾಡಿ ನೋಡಿ.



Click it and Unblock the Notifications
