Latest Updates
-
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು
ರವೆ ಬಳಸಿ ಮಾಡಿ ಹೊಸ ರುಚಿ ತಿಂಡಿ! ಎಷ್ಟು ಸುಲಭ ಗೊತ್ತಾ?
ಬ್ರೇಕ್ ಫಾಸ್ಟ್‌ಗೆ ಸವಿಯಲು ನೀವು ಬಹಳ ರುಚಿ ರುಚಿಯ ಹಾಗೆ ವಿವಿಧ ರೀತಿಯ ತಿಂಡಿಗಳ ಮಾಡಿ ಸವಿಯಲು ಯಾವಾಗಲು ಇಷ್ಟಪಡುತ್ತೀರಿ. ಅದ್ರಲ್ಲೂ ನಿತ್ಯ ಒಂದೇ ರೀತಿಯ ತಿಂಡಿ ಮಾಡುವುದಕ್ಕಿಂತ ಬೇರೆ ಬೇರೆ ರೀತಿಯಲ್ಲಿ ಹೊಸ ರುಚಿಯ ಅಡುಗೆ ಮಾಡುವುದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಯಾವಾಗಲು ಇಡ್ಲಿ, ದೋಸೆ, ರೊಟ್ಟಿ, ಚಪಾತಿ, ಪಲಾವ್, ರೈಸ್ ಬಾತ್, ಉಪ್ಪಿಟ್ಟು ಹೀಗೆ ಸಾಮಾನ್ಯ ತಿಂಡಿಗಳ ಸವಿಯುವುದಕ್ಕಿಂತಲೂ ವಿಶೇಷವಾಗಿ ಏನಾದರು ಮಾಡಿ ಸವಿಯಬೇಕು ಅನ್ನೋದು ಎಲ್ಲರ ಬಯಕೆ.
ಇಂತಹ ಬಯಕೆಗಳ ಈಡೇರಿಸಿಕೊಳ್ಳಲು ಜನರು ಯಾವ ತಿಂಡಿ ಸವಿಯಬೇಕು ಅನ್ನೋದನ್ನು ತಿಳಿದಿರೋದಿಲ್ಲ. ಆದ್ರೆ ನಾವಿಂದು ಹೊಸ ರೀತಿಯ ತಿಂಡಿಯೊಂದನ್ನು ನಿಮ್ಮ ಮುಂದಿಡುತ್ತಿದ್ದೇವೆ. ಅದ್ರಲ್ಲೂ ಈ ರವೆಯನ್ನು ಬಳಸಿಕೊಂಡು ಕ್ಷಣ ಮಾತ್ರದಲ್ಲಿ ಈ ಹೊಸ ತಿಂಡಿಯನ್ನು ಮಾಡಬಹುದು. ಹಾಗಾದ್ರೆ ರವೆಯ ಹೊಸ ರೀತಿ ತಿಂಡಿ ಮಾಡೋದು ಹೇಗೆ ತಿಳಿದುಕೊಳ್ಳಿ.

ನೀವು ಕೂಡ ರವೆಯನ್ನು ಬಳಸಿ ಹಲವು ರೀತಿಯ ಖಾದ್ಯಗಳ ಮಾಡಿರುತ್ತೀರಿ. ಅದ್ರಲ್ಲು ರವೆ ಬಳಸಿ ಉಪ್ಪಿಟ್ಟು, ಕೇಸರಿಬಾತ್, ರವೆ ಇಡ್ಲಿ, ರವೆ ದೋಸೆ ಹೀಗೆ ಹಲವು ರೀತಿಯ ಖಾದ್ಯಗಳ ಮಾಡಿ ಸವಿದಿರುತ್ತೀರಿ. ಆದ್ರೆ ಇಂದು ಹೊಸ ರೀತಿಯಲ್ಲಿ ರವೆಯಿಂದ ತಿಂಡಿ ಮಾಡಿ ಸವಿಯುವುದು ಹೇಗೆ ಅನ್ನೋದನ್ನು ನಾವಿಂದು ಹೇಳಲಿದ್ದೇವೆ.
ರವೆ ಬಳಸಿ ಹೊಸ ತಿಂಡಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ರವೆ ಬಳಸಿ ಹೊಸ ತಿಂಡಿ ಮಾಡಲು ಯಾವೆಲ್ಲಾ ವಸ್ತು ಬೇಕು?
- ರವೆ- 1 ಕಪ್ (ಉಪ್ಪಿಟ್ಟು ರವೆ)
- ಮೊಸರು
- ಸಕ್ಕರೆ
- ಎಣ್ಣೆ
- ಜೀರಿಗೆ
- ಅಡುಗೆ ಸೋಡಾ
- ಖಾರದ ಪುಡಿ
- ರುಚಿಗೆ ತಕ್ಕಷ್ಟು ಉಪ್ಪು
ರವೆ ಬಳಸಿ ಹೊಸ ತಿಂಡಿ ಮಾಡುವುದು ಹೇಗೆ?
ಮೊದಲು ಒಂದು ಕಪ್‌ನಲ್ಲಿ ಉಪ್ಪಿಟ್ಟು ರವೆ ತೆಗೆದುಕೊಂಡು ಅದನ್ನು ಮಿಕ್ಸಿ ಜಾರ್‌ಗೆ ಹಾಕಿಕೊಳ್ಳಿ. ನಂತರ ಅದಕ್ಕೆ 1 ಕಪ್ ನೀರು, ಮೂರು ಚಮಚ ಮೊಸರು, ರುಚಿಗೆ ತಕ್ಕಷ್ಟು ಉಪ್ಪು, 1 ಚಮಚ ಸಕ್ಕರೆ ಹಾಕಿಕೊಂಡು ರುಬ್ಬಿಕೊಳ್ಳಿ. ಇದು ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಈ ಹಿಟ್ಟನ್ನು 5 ನಿಮಿಷ ಹಾಗೆಯೇ ಬಿಡಿ.
ಈಗ ಈ ಹಿಟ್ಟಿಗೆ 2 ಸ್ಪೂನ್ ಎಣ್ಣೆ, ಅಡುಗೆ ಸೋಡಾ ಕೂಡ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ ಹಾಗೆ ಜೀರಿಗೆ ಸಹ ಹಾಕಿ ಮಿಕ್ಸ್ ಮಾಡಿ. ಈಗ ಒಂದು ಪ್ಲೇಟ್‌ಗೆ ಎಣ್ಣೆ ಸವರಿಕೊಂಡು ಬಳಿಕ ಈ ಹಿಟ್ಟನ್ನು ಪ್ಲೇಟ್‌ಗೆ ಹಾಕಿ. ನಂತರ ಹಿಟ್ಟಿನ ಮೇಲೆ ಖಾರದ ಪುಡಿ ಹಾಗೆ ಉಪ್ಪು ಉದುರಿಸಿಕೊಳ್ಳಿ. ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ನೀರು ಹಾಕಿ ಮಧ್ಯದಲ್ಲಿ ಒಂದು ಸ್ಟ್ಯಾಂಡ್ ಇಲ್ಲವೆ ಯಾವುದಾದರು ಪಾತ್ರೆ ಇಟ್ಟು ನೀರು ಕುದಿಬರುವಾಗ ಈ ಹಿಟ್ಟು ಹಾಕಿರುವ ಪ್ಲೇಟ್ ಅನ್ನು ಅದರೊಳಗೆ ಇಡಿ. ನಂತರ ಮುಚ್ಚಳ ಮುಚ್ಚಿ 10ರಿಂದ 13 ನಿಮಿಷ ಬೇಯಿಸಬೇಕು.
ಬಳಿಕ ಇದನ್ನು ತಣ್ಣಗಾಗಲು ಬಿಡಿ. ತಣ್ಣಗಾದ ಬಳಿಕ ಕತ್ತರಿಸಿಕೊಂಡು ತೆಗೆದುಕೊಳ್ಳಿ. ತಟ್ಟೆ ಇಡ್ಲಿಯಂತೆ ಇದು ಬರಲಿದೆ. ಬಹಳ ಮೃದುವಾಗಿ ಸವಿಯಲು ರುಚಿ ರುಚಿಯಾಗಿ ಇರಲಿದೆ. ನೀವು ಸಹ ಮನೆಯಲ್ಲಿ ಈ ಹೊಸ ರೆಸಿಪಿ ಮಾಡಿ ಸವಿದು ನೋಡಿ. ಇದರ ಜೊತೆಗೆ ಕಾಯಿ ಚಟ್ನಿ ಇದ್ದರೆ ಅರ ರುಚಿ ದುಪ್ಪಟ್ಟಾಗುತ್ತೆ. ಇದನ್ನು ನೀವು ಮತ್ತೆ ತವಾದಲ್ಲಿ ಎಣ್ಣೆ ಅಥವಾ ಬೆಣ್ಣೆ ಹಾಕಿ ಡೀಪ್ ಫ್ರೈ ಮಾಡಿ ಕೂಡ ಸವಿಯಬಹುದು.



Click it and Unblock the Notifications