Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಬ್ರೇಕ್ ಫಾಸ್ಟ್ಗೆ ಮಾಡಿ ಗೋಧಿ ಹಿಟ್ಟಿನ ಹೊಸ ತಿಂಡಿ!
ಬೆಳಗ್ಗೆ ತಿಂಡಿಗೆ ಏನು ಮಾಡಬೇಕು ಅನ್ನೋದು ಎಲ್ಲರ ಮನೆಯ ಗೃಹಿಣಿಯರ, ಯುವತಿಯರ ಪ್ರಶ್ನೆಯಾಗಿರುತ್ತೆ. ಹಾಗೆ ಬೆಳಗ್ಗೆ ಗಡಿ ಬಿಡಿಯ ಸಮಯದಲ್ಲಿ ಗಂಟೆಗಳ ಕಾಲ ಅಡುಗೆ ಮನೆಯಲ್ಲಿ ಕಳೆಯಲು ಸಾದ್ಯವಾಗದಿಲ್ಲ. ಹೀಗಾಗಿ ಸುಲಭವಾಗಿ ಯಾವ ತಿಂಡಿ ಮಾಡಬಹುದು ಎಂಬುದನ್ನೇ ಎಲ್ಲರು ಯೋಚಿಸುತ್ತಾರೆ. ಆದ್ರೆ ನಿತ್ಯ ಒಂದೇ ರೀತಿಯ ತಿಂಡಿ ಸವಿಯೋದು ಅಂದರು ಬೇಸರ ತರಿಸುತ್ತೆ. ಹಾಗಾದ್ರೆ ನಾವಿಂದು ವಿಶೇಷ ರೀತಿಯ ತಿಂಡಿಯನ್ನು ಮಾಡುವ ಕುರಿತು ತಿಳಿದುಕೊಳ್ಳೋಣ.
ಅದ್ರಲ್ಲೂ ಬೆಳಗ್ಗೆ ಗಡಿಬಿಡಿಯ ಸಮಯದಲ್ಲಿ ಸುಲಭವಾಗಿ ಜೋಳದಿಂದ ಮಾಡುವ ಈ ದೋಸೆ ಅಥವಾ ರೊಟ್ಟಿಯಂತಹ ಹೊಸ ಬಗೆಯ ತಿಂಡಿಯನ್ನು ಮಾಡುವ ಕುರಿತು ತಿಳಿಯೋಣ. ನೀವು ಕೂಡ ಮನೆಯಲ್ಲಿ ಜೋಳದ ಹಿಟ್ಟಿನಿಂದ ಮಾಡುವ ರೊಟ್ಟಿ ಅಥವಾ ದೋಸೆಯನ್ನು ಮಾಡಿ ಸವಿದಿರುತ್ತೀರಿ. ಅದರ ರುಚಿ ಅಂದ್ರೆ ನಿಮಗೂ ಇಷ್ಟವಾಗಿರುತ್ತೆ.

ಹಾಗೆ ಜೋಳ ನಿಮ್ಮ ಆರೋಗ್ಯಕ್ಕೂ ಕೂಡ ಬಹಳ ಉತ್ತಮ ಆಯ್ಕೆಯಾಗಿರಲಿದೆ. ಹಾಗಾದ್ರೆ ನಾವಿಂದು ವಿಶೇಷವಾಗಿ ಹಲವು ವಸ್ತುಗಳ ಬಳಸಿ ಕಡಿಮೆ ಸಮಯದಲ್ಲಿ ಈ ಜೋದ ತಿಂಡಿಯನ್ನು ಬ್ರೇಕ್ಫಾಸ್ಟ್ಗೆ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ಈ ಜೋಳದ ತಿಂಡಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ಜೋಳದ ಹಿಟ್ಟಿನಿಂದ ತಿಂಡಿ ಮಾಡಲು ಬೇಕಾಗುವ ವಸ್ತುಗಳು
- ಜೋಳದ ಹಿಟ್ಟು
- ಕಡಲೆ ಹಿಟ್ಟು
- ಸೌತೆಕಾಯಿ
- ಕ್ಯಾರೆಟ್
- ಕೊತ್ತಂಬರಿ ಸೊಪ್ಪು
- ಖಾರದ ಪುಡಿ
- ಅರಶಿಣ
- ಉಪ್ಪು
- ಬಿಳಿ ಎಳ್ಳು
- ಜೀರಿಗೆ
- ಈರುಳ್ಳಿ
- ಎಣ್ಣೆ
ಜೋಳದ ಹಿಟ್ಟಿನಿಂದ ತಿಂಡಿ ಮಾಡುವ ವಿಧಾನವೇನು?
ಮೊದಲು ಒಂದು ಬೌಲ್ಗೆ ಜೋಳದ ಹಿಟ್ಟು ಹಾಕಿಕೊಳ್ಳಿ. ನಿಮಗೆ ಎಷ್ಟು ಪ್ರಮಾಣದಲ್ಲಿ ಬೇಕೋ ಅಷ್ಟು ಹಾಕಿಕೊಳ್ಳಿ. ಇನ್ನೋಂದು ಬೌಲ್ನಲ್ಲಿ 1 ಮುಳ್ಳು ಸೌತೆಕಾಯಿಯನ್ನು ತುರಿದುಕೊಂಡು ಹಾಕಿಕೊಳ್ಳಿ. ಅದಕ್ಕೆ ತುರಿದ ಹಸಿ ಶುಂಠಿ, ಕೊತ್ತಂಬರಿ ಸೊಪ್ಪು, ತುರಿದ ಕ್ಯಾರೆಟ್, ಈರುಳ್ಳಿ ಸಹ ಇದಕ್ಕೆ ಹಾಕಿಕೊಂಡು ಬಳಿಕ ಜೀರಿಗೆ, ಬಿಳಿ ಎಳ್ಳು, ಅರಶಿಣ, ಖಾರದ ಪುಡಿ, ಉಪ್ಪು ಹಾಕಿಕೊಳ್ಳಿ. ಈಗ ಜರಡಿ ಹಿಡಿದ 2 ಕಪ್ ಜೋಳದ ಹಿಟ್ಟನ್ನು ಇದರೊಂದಿಗೆ ಹಾಕಿ ಬೆರೆಸಿಕೊಳ್ಳಿ.
ಹಾಗೆ ಇದಕ್ಕೆ ಕಡಲೆ ಹಿಟ್ಟು ಕೂಡ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಮೊದಲು ನೀರು ಹಾಕದೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಹಿಟ್ಟು ಹದ ಮಾಡಿಕೊಳ್ಳಿ. ಚಪಾತಿ ಹಿಟ್ಟಿಗಿಂತಲು ಸ್ವಲ್ಪ ಗಟ್ಟಿಯಾಗಿ ಬರುವಂತೆ ಹಿಟ್ಟು ಹದ ಮಾಡಿಕೊಳ್ಳಿ. ಈಗ ಒಂದು ಪ್ಲಾಸ್ಟಿಕ್ ಅನ್ನು ನೀರಿನಲ್ಲಿ ಅದನ್ನು ಚಪಾತಿ ಮಣೆ ಮೇಲೆ ಹಾಕಿ ಬಳಿಕ ಹಿಟ್ಟನ್ನು ತೆಗೆದುಕೊಂಡು ಚಪಾತಿಯಂತೆ ಲಟ್ಟಿಸಿಕೊಳ್ಳಿ.
ಈಗ ಒಲೆ ಮೇಲೆ ಕಾವಲಿ ಇಟ್ಟು ಅದಕ್ಕೆ ಎಣ್ಣೆ ಹಚ್ಚಿಕೊಂಡು ಈ ಜೋಳದ ರೊಟ್ಟಿಯನ್ನು ಅದಕ್ಕೆ ಹಾಕಿ ಕಾಯಿಸಿಕೊಳ್ಳಿ. ಎರಡೂ ಕಡೆಯೂ ಚೆನ್ನಾಗಿ ಕರಿದುಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಜೋಳದ ತಿಂಡಿ ರೆಡಿಯಾಗುತ್ತದೆ. ನೀವು ಕೂಡ ಇದನ್ನು ಸವಿದು ನೋಡಿ. ಬ್ರೇಕ್ ಫಾಸ್ಟ್ಗೆ ಯಾವ ತಿಂಡಿ ಮಾಡಬೇಕು ಎಂಬ ಗೊಂದಲದಲ್ಲಿ ಇದ್ದಾಗ ಇದನ್ನು ಮಾಡಬಹುದು. ಕೆಲವೇ ನಿಮಿಷದಲ್ಲಿ ಥಟ್ ಎಂದು ಮಾಡಿ ಮುಗಿಸಬಹುದು. ನೀವು ಕೂಡ ಒಮ್ಮೆ ಇದನ್ನು ಟ್ರೈ ಮಾಡಿ ನೋಡಿ. ಇದರ ರುಚಿಗೆ ನೀವು ಪದೇ ಪದೇ ಮಾಡಿ ಸವಿಯಲು ಮುಂದಾಗುತ್ತೀರಿ.



Click it and Unblock the Notifications
