Latest Updates
-
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ?
2 ಆಲೂಗಡ್ಡೆಯಿಂದ ರುಚಿ ರುಚಿ ತಿಂಡಿ ಮಾಡಿ! ಹೊಸ ಟೇಸ್ಟ್, ಸುಲಭದ ರೆಸಿಪಿ
ಬೆಳಗ್ಗೆ ತಿಂಡಿಯ ಸಮಯಕ್ಕೆ ಸುಲಭವಾಗಿ ಮಾಡುವಂತಹ ಖಾದ್ಯಗಳನ್ನು ಸವಿಯಲು ಇಷ್ಟಪಡುತ್ತೀರಿ. ಅದ್ರಲ್ಲೂ ನಿಮಗೆ ಸಮಯ ಇಲ್ಲದೆ ಇದ್ದರೆ 2 ನಿಮಿಷದಲ್ಲಿ ಸುಲಭವಾಗಿ ಮಾಡಿ ಮುಗಿಸುವಂತಹ ರುಚಿಯಾದ ತಿಂಡಿಗಳನ್ನು ಮಾಡಲು ಮುಂದಾಗುವುದು ನೋಡಬಹುದು.
ಸುಲಭವಾಗಿ ಮಾಡುವ ತಿಂಡಿಗಳು ಅಂದ ಕೂಡಲೇ ಚಿತ್ರಾನ್ನದಂತೆ ರೈಸ್ನಿಂದ ಮಾಡುವ ತಿಂಡಿಗಳು ನೆನಪಿಗೆ ಬರಬಹುದು. ಆದ್ರೆ ಆಲೂಗಡ್ಡೆಯಿಂದ ಮಾಡಬಹುದಾದ ಸುಲಭದ ತಿಂಡಿ ಕುರಿತಾಗಿ ನಾವಿಂದು ತಿಳಿದುಕೊಳ್ಳೋಣ. ಆಲೂಗಡ್ಡೆ ಬಳಸಿ ಮಾಡುವ ಹಲವು ಖಾದ್ಯಗಳು ಹೆಚ್ಚು ಸಮಯ ಹಿಡಿಯಬಹುದು, ಆದ್ರೆ ನಾವಿಂದು ಕಡಿಮೆ ಸಮಯದಲ್ಲಿ ಕೇವಲ 2 ಆಲೂಗಡ್ಡೆ ಬಳಸಿಕೊಂಡು ರುಚಿ ರುಚಿಯಾದ ಖಾದ್ಯ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.

ಕೇವಲ 2 ಆಲೂಗಡ್ಡೆ ಬಳಸಿಕೊಂಡು ಮಾಡುವ ಈ ತಿಂಡಿ ಬಹಳ ರುಚಿಯಾಗಿರಲಿದೆ. ನೀವು ಆಲೂಗಡ್ಡೆ ಬಳಿಸಿಕೊಂಡು ಹಲವು ರುಚಿಕರ ತಿಂಡಿಯನ್ನು ಮಾಡಿರುತ್ತೀರಿ. ಆದ್ರೆ ಈ ರೀತಿ ರುಚಿಕರವಾದ ಹಾಗೆ ಮನೆ ಮಂದಿಯಲ್ಲ ಕುಳಿತು ಸವಿಯುವಂತಹ ರುಚಿಯ ತಿಂಡಿಯನ್ನು ಸವಿದಿರುವುದಿಲ್ಲ. ಹಾಗಾದ್ರೆ 2 ಆಲೂಗಡ್ಡೆ ಬಳಸಿಕೊಂಡು ರುಚಿ ರುಚಿಯ ತಿಂಡಿ ಮಾಡೋದು ಹೇಗೆ ಅನ್ನೋದನ್ನು ತಿಳಿಯೋಣ.
ಆಲೂಗಡ್ಡೆಯ ತಿಂಡಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?, ಮಾಡಲು ಯಾವೆಲ್ಲಾ ತಯಾರಿ ಮಾಡಿಕೊಳ್ಳಬೇಕು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ಆಲೂಗಡ್ಡೆ ತಿಂಡಿ ಮಾಡಲು ಬೇಕಾಗುವ ವಸ್ತುಗಳು
- ಆಲೂಗಡ್ಡೆ-2
- ಅಕ್ಕಿ ಹಿಟ್ಟು
- ಮೈದಾ ಹಿಟ್ಟು
- ಈರುಳ್ಳಿ
- ಹಸಿ ಶುಂಠಿ
- ರುಚಿಗೆ ತಕ್ಕಷ್ಟು ಉಪ್ಪು
- ಕರಿಬೇವಿನ ಸೊಪ್ಪು
- ಹಸಿ ಮೆಣಸು
- ಕೊತಂಬರಿ ಸೊಪ್ಪು
- ಖಾರದ ಪುಡಿ
- ಕಾಳು ಮೆಣಸಿನ ಪುಡಿ
- ಎಣ್ಣೆ
ಆಲೂಗಡ್ಡೆ ತಿಂಡಿ ಮಾಡುವ ವಿಧಾನವೇನು?
ಮೊದಲಿಗೆ 2 ಆಲೂಗಡ್ಡೆಯ ಸಿಪ್ಪೆ ತೆಗೆದು ಬಳಿಕ ತುರಿದುಕೊಂಡು ಇಟ್ಟುಕೊಳ್ಳಿ. ತುರಿದ ಆಲೂಗಡ್ಡೆಯನ್ನು ನೀರಿಗೆ ಹಾಕಿಟ್ಟುಕೊಳ್ಳಿ. ನಂತರ ನೀರಿನಿಂದ ತೆಗೆದು ಹಿಂಡಿಕೊಂಡು ಒಂದು ಬೌಲ್ಗೆ ಹಾಕಿಟ್ಟುಕೊಳ್ಳಿ.
ಈಗ ಆಲೂ ತುರಿಗೆ ಸಣ್ಣದಾಗಿ ಕತ್ತರಿಸಿಕೊಂಡಿರುವ ಈರುಳ್ಳಿ, ಹಸಿ ಶುಂಠಿ, ಕರಿಬೇವು, ಹಸಿ ಮೆಣಸು, ಉಪ್ಪು ಹಾಕಿಕೊಳ್ಳಿ. ಈ ಎಲ್ಲಾ ಪದಾರ್ಥಗಳು ಸಣ್ಣದಾಗಿ ಹೆಚ್ಚಿಕೊಳ್ಳಿ. ಹಾಗೆ ಇದಕ್ಕೆ 2 ಸ್ಪೂನ್ ಅಕ್ಕಿ ಹಿಟ್ಟು ಸಹ ಹಾಕಿಕೊಳ್ಳಿ. ಅನಂತರ 2 ಚಮಚ ಮೈದಾ ಹಿಟ್ಟು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಈಗ ಸ್ವಲ್ಪ ಖಾರದ ಪುಡಿ, ಕಾಳು ಮೆಣಸಿನ ಪುಡಿ ಸಹ ಹಾಕಿ ಮಿಕ್ಸ್ ಮಾಡಿ. ಈಗ ಒಲೆ ಮೇಲೆ ಕಾವಲಿ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ಬಿಸಿಯಾದ ಬಳಿಕ ಇದಕ್ಕೆ ಈ ಹಿಟ್ಟನ್ನು ಯಾವ ಆಕಾರಕ್ಕೆ ಬೇಕೋ ಆ ಆಕಾರಕ್ಕೆ ಮಾಡಿ ಕಾವಲಿ ಮೇಲೆ ಹಾಕಿಕೊಳ್ಳಿ. ಬ್ರೆಡ್ ಆಮ್ಲೆಟ್ ರೀತಿಯ ಆಕಾರಕ್ಕೆ ಬೇಕಾದರು ಹಾಕಿಕೊಳ್ಳಬಹುದು. ನೀವು ಸಹ ಇದೇ ರೀತಿ ಕರಿದುಕೊಳ್ಳಿ. ಎರಡೂ ಕಡೆ ಕರಿದ ಬಳಿಕ ತೆಗೆದು ಒಂದು ತಟ್ಟೆಗೆ ಹಾಕಿಟ್ಟುಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯಾದ ಆಲೂ ಫ್ರೈ ಮಸಾಲ ತಿಂಡಿ ರೆಡಿಯಾಗುತ್ತೆ. 2 ಆಲೂಗಡ್ಡೆಯಿಂದ ಒಬ್ಬರು ಸವಿಯಲು ಮಾಡಬಹುದು. ಹೆಚ್ಚು ಪ್ರಮಾಣದಲ್ಲಿ ಬೇಕಾದರೆ ಹೆಚ್ಚಿನ ಸಾಮಗ್ರಿ ಬಳಸಿಕೊಳ್ಳಿ. ಇದನ್ನು ಮನೆಯಲ್ಲಿ ಮಕ್ಕಳಿದ್ದರೆ ಅವರಿಗೆ ನೀಡಬಹುದು. ಹಾಗೆ ಬಾಕ್ಸ್ಗೂ ಸಹ ಹಾಕಿ ಕಳುಹಿಸಬಹುದು.



Click it and Unblock the Notifications
