Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಸಖತ್ ರುಚಿ ನೀಡುವ ನೆಲ್ಲಿಕಾಯಿ ಚಿತ್ರಾನ್ನ ಮಾಡಿದ್ದೀರಾ? ಈ ರುಚಿ ತಿಂಡಿ ಮಾಡಿ ನೋಡಿ
ಬೆಳಗ್ಗೆ ತಿಂಡಿಗೆ ಸುಲಭವಾಗಿ, ಕಡಿಮೆ ಸಮಯದಲ್ಲಿ ಮಾಡುವ ತಿಂಡಿಯನ್ನೇ ಹುಡುಕುತ್ತೇವೆ. ಏಕೆಂದರೆ ಬೆಳಗ್ಗೆ ಎಷ್ಟು ಬೇಗ ನಾವು ಕೆಲಸ ಮುಗಿಸಲು ನೋಡುತ್ತಿರುತ್ತೇವೆ. ಹೀಗಾಗಿ ಹಲವರು ಗಡಿಬಿಡಿ ಅಥವಾ ಸಮಯ ಕಡಿಮೆ ಇದೆ ಎಂದ ತಕ್ಷಣ ಚಿತ್ರಾನ್ನ ಮಾಡಲು ಮುಂದಾಗುತ್ತಾರೆ. ಚಿತ್ರಾನ್ನ ಹಲವು ಬಗೆಯಲ್ಲಿ ಮಾಡಬಹುದು ಎಂಬುದು ನಿಮಗೆಲ್ಲಾ ತಿಳಿದೇ ಇದೆ.
ನಾವು ಚಿತ್ರಾನ್ನದಲ್ಲಿ ಹಲವು ಬಗೆ ನೋಡಿದ್ದೇವೆ. ಮಸಾಲೆ ಚಿತ್ರಾನ್ನ, ಮಾವಿನಕಾಯಿ ಚಿತ್ರಾನ್ನ, ಬೇಳೆ ಹಾಕಿ ಮಾಡುವ ಚಿತ್ರಾನ್ನ, ಟೊಮೆಟೋ ಚಿತ್ರಾನ್ನ ಹೀಗೆ ಹಲವು ದೇಶದ ಚಿತ್ರಾನ್ನ ನಾವು ಮಾಡಬಹುದು. ಹೀಗೆ ನಾವಿಂದು ನೆಲ್ಲಿಕಾಯಿ ಹಾಕಿ ಮಾಡುವಂತಹ ಅದ್ಭುತ ರುಚಿಯ ಚಿತ್ರಾನ್ನವನ್ನು ಮಾಡಿ ನೋಡೋಣ.
ನೆಲ್ಲಿಕಾಯಿ ಹಾಕಿ ಅದ್ಭುತ ರುಚಿಯಲ್ಲಿ ಚಿತ್ರಾನ್ನ ಮಾಡಬಹುದು. ಸಾಮಾನ್ಯವಾಗಿ ಇದು ಕೂಡ ಮಾವಿನ ಕಾಯಿ ಚಿತ್ರಾನ್ನದಂತೆಯೇ ರುಚಿ ನೀಡುತ್ತದೆ, ಆದ್ರೆ ನೆಲ್ಲಿಕಾಯಿ ಹಾಕುವುದರಿಂದ ವಿಭಿನ್ನ ರುಚಿಯನ್ನು ನೀಡುತ್ತದೆ. ಹೀಗಾಗಿ ಈ ಚಿತ್ರಾನ್ನ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ನೆಲ್ಲಿಕಾಯಿ ಚಿತ್ರಾನ್ನ ಮಾಡುವುದು ಹೇಗೆ?, ನೆಲ್ಲಿಕಾಯಿ ಚಿತ್ರಾನ್ನ ಮಾಡಲು ಬೇಕಾಗುವ ಪದಾರ್ಥಗಳು ಏನು?, ನೆಲ್ಲಿಕಾಯಿ ಚಿತ್ರಾನ್ನ ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ನೆಲ್ಲಿಕಾಯಿ ಚಿತ್ರಾನ್ನ ಮಾಡಲು ಬೇಕಾಗುವ ವಸ್ತುಗಳು?
- ನೆಲ್ಲಿಕಾಯಿ - 5
- ಅನ್ನ
- ಗೋಡಂಬಿ
- ಕಡಲೆ ಕಾಯಿ ಬೀಜ
- ಉದ್ದಿನ ಬೇಳೆ
- ಕಡಲೆ ಬೇಳೆ
- ತುಪ್ಪ
- ಜೀರಿಗೆ
- ಸಾಸಿವೆ
- ಕೊತ್ತಂಬರಿ ಸೊಪ್ಪು
- ಕರಿಬೇವಿನ ಸೊಪ್ಪು
- ಅರಶಿಣ
- ಹಸಿ ಮೆಣಸು
- ನಿಂಬೆ ರಸ
- ಎಣ್ಣೆ
- ಉಪ್ಪು
ನೆಲ್ಲಿಕಾಯಿ ಚಿತ್ರಾನ್ನ ಮಾಡುವುದು ಹೇಗೆ?
ಮೊದಲು ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಸಾಸಿವೆ, ಜೀರಿಗೆ, ಹಸಿ ಮೆಣಸು ಹಾಕಿ ಫ್ರೈ ಮಾಡಿ, ಬಳಿಕ ಇದಕ್ಕೆ ಕಡಲೆ ಕಾಳು ಬೀಜ ಹಾಕಿ ಬಿಸಿ ಮಾಡಿಕೊಳ್ಳಿ. ನಂತರ ಇದಕ್ಕೆ ಕಡಲೆ ಬೇಳೆ, ಉದ್ದಿನ ಬೇಳೆ ಹಾಕಿ ಮತ್ತೆ ಫ್ರೈ ಮಾಡಿ.
ಈಗ ಕರಿಬೇವಿನ ಸೊಪ್ಪು, ಅರಶಿಣ ಹಾಕಿ 40 ಸೆಕೆಂಡ್ ಫ್ರೈ ಮಾಡಿಕೊಳ್ಳಿ. ಈಗ ಇದಕ್ಕೆ ನೆಲ್ಲಿಕಾಯಿ ಹಾಕಿಕೊಳ್ಳಬೇಕು. ನೆಲ್ಲಿಕಾಯಿಯನ್ನು ಕ್ಯಾರೆಟ್ ತುರಿಯುವ ಮಣೆಯಿಂದ ಸಣ್ಣಗೆ ತುರಿದು ತೆಂಗಿನ ಕಾಯಿಯಂತೆ ತುರಿದುಕೊಂಡಿರಬೇಕು. ಈ ನೆಲ್ಲಿಕಾಯಿ ತುರಿಯನ್ನು ಇದಕ್ಕೆ ಹಾಕಿ 1 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ.
ಈಗ ಒಲೆ ಆಫ್ ಮಾಡಿಕೊಂಡು ಹುಡಿ ಹುಡಿಯ ಅನ್ನವನ್ನು ಇದಕ್ಕೆ ಹಾಕಿಕೊಂಡು ಮೇಲೆ ನಿಂಬೆ ಹಣ್ಣಿನ ರಸ ಹಾಗೂ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಚೆನ್ನಾಗಿ ಒಂದು ಸುತ್ತು ಮಿಕ್ಸ್ ಮಾಡಿ. ನಿಮಗೆ ಬೇಕಾದರೆ ತುಪ್ಪದಲ್ಲಿ ಗೋಡಂಬಿ ಹುರಿದುಕೊಂಡು ಇದಕ್ಕೆ ಹಾಕಿಕೊಳ್ಳಿ, ಗೋಡಂಬಿ ಹಾಕದಿದ್ದರೂ ರುಚಿ ಚೆನ್ನಾಗಿಯೇ ಇರಲಿದೆ.
ಈಗ ಚಿತ್ರಾನ್ನವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ, ಎಲ್ಲಾ ಮಸಾಲೆಯು ಚೆನ್ನಾಗಿ ಬೆರೆಯುವಂತೆ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನೀವು ಸವಿಯಲು ನೆಲ್ಲಿಕಾಯ ಚಿತ್ರಾನ್ನ ರೆಡಿಯಾಗುತ್ತದೆ. ಮನೆಯಲ್ಲಿ ನೀವು ಕೂಡ ಒಮ್ಮೆ ಇದನ್ನು ಟ್ರೈ ಮಾಡಿ ನೋಡಿ. ಅದರ ರುಚಿಗೆ ನೀವು ಕೂಡ ಫಿದಾ ಆಗುತ್ತೀರಿ.



Click it and Unblock the Notifications
