Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಕಾವಲಿಗೆ ಹಿಡಿಯದಂತೆ ನೀರ್ ದೋಸೆ ಮಾಡಿ.! ಇಲ್ಲಿದೆ ಸಿಂಪಲ್ ಟ್ರಿಕ್
ಕರಾವಳಿ, ಮಲೆನಾಡು ಭಾಗದಲ್ಲಿ ಬೆಳಗ್ಗೆ ತಿಂಡಿ ಸ್ಪೆಷಲ್ ಅಂದ್ರೆ ಅದು ನೀರ್ ದೋಸೆ. ಉದ್ದಿನ ದೋಸೆಗಿಂತ ಈ ನೀರ್ ದೋಸೆ ಸಿಕ್ಕಾಪಟ್ಟೆ ರುಚಿ ನೀಡುವ ತಿಂಡಿ. ಬೆಳಗ್ಗೆಯ ಬ್ರೇಕ್‌ಫಾಸ್ಟ್‌ಗೆ ಹೇಳಿ ಮಾಡಿಸಿದ ಅಡುಗೆ ಅಂದ್ರೆ ಅದು ನೀರ್ ದೋಸೆ.
ಅಕ್ಕಿ ಹಿಟ್ಟು ಕಾರ್ಬೋಹೈಡ್ರೇಟ್‌ನ ಉತ್ತಮ ಮೂಲವಾಗಿದ್ದು, ಫೈಬರ್ ಯುಕ್ತ ಅಕ್ಕಿ ಹಿಟ್ಟಿನಿಂದಾಗಿ ಆರೋಗ್ಯಕ್ಕೂ ಇದು ಉತ್ತಮ ತಿಂಡಿ. ಆದ್ರೆ ಹಲವರಿಗೆ ಅಕ್ಕಿ ಹಿಟ್ಟಿನ ಈ ನೀರ್ ದೋಸೆ ಮಾಡುವಾಗ ಎದುರಾಗೋ ಸಮಸ್ಯೆ ಅಂದ್ರೆ ಅದು ಹಿಟ್ಟು ಸರಿಯಾದ ರೀತಿ ಆಗದೇ ಇರೋದು.

ಮೊದಲು ಅಕ್ಕಿಯನ್ನು ನೆನೆಸಿಟ್ಟು ಬಳಿಕ ಅದನ್ನು ಹಿಟ್ಟುಕೊಳ್ಳುವುದು ಬಹಳ ಮುಖ್ಯ ಹಾಗಾದ್ರೆ ನಾವಿಂದು ಸಖತ್ ರುಚಿಯ ನೀರ್ ದೋಸೆ ಮಾಡುವುದು ಹೇಗೆ? ನೀರ್ ದೋಸೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಆ ಅಕ್ಕಿ ಮಾಡಿಕೊಳ್ಳುವ ವಿಧಾನವೇನು? ಮಾಡುವ ಪಾಕವಿಧಾನ ಕುರಿತ ಮಾಹಿತಿ ಇಲ್ಲಿದೆ.
ಮೊದಲು ಅಕ್ಕಿಯನ್ನು 4 ರಿಂದ 5 ಗಂಟೆಗಳ ನೆನೆಹಾಕಬೇಕು. ಬಳಿಕ ಸ್ವಲ್ಪ ಉಪ್ಪು ಹಾಗೂ ನೀರು ಹಾಕಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಬೇಕು. ಈ ರೀತಿ ರುಬ್ಬಿಕೊಳ್ಳುವಾಗ ನೀವು ಎಷ್ಟ ಪ್ರಮಾಣದಲ್ಲಿ ನೀರು ಹಾಕಬೇಕು ಅನ್ನೋದನ್ನು ಸರಿಯಾಗಿ ನೆನಪಿನಲ್ಲಿಡಿ.
ನೀರ್ ದೋಸೆ ಮಾಡಲು ಬೇಕಾಗುವ ಪದಾರ್ಥಗಳು
ಅಕ್ಕಿ - 1 ಗ್ಲಾಸ್
ಎಣ್ಣೆ
ಉಪ್ಪು
ನೀರ್ ದೋಸೆ ಮಾಡುವುದು ಹೇಗೆ?
ನೀರ್ ದೋಸೆಗೆ ಹಿಟ್ಟು ಮಾಡಿಕೊಳ್ಳುವಾಗ ಅದಕ್ಕೆ ತೆಂಗಿನ ಕಾಯಿ ಸಹ ಹಾಕಿಕೊಳ್ಳುತ್ತಾರೆ. 1 ಗ್ಲಾಸ್ ಅಕ್ಕಿಗೆ 1 ವರೆ ಲೋಟ ನೀರು ಹಾಕಿಕೊಳ್ಳಬೇಕು. ಹೀಗೆ ರುಬ್ಬಿಕೊಂಡಿದ್ದ ಹಿಟ್ಟನ್ನು ಒಂದು ದಿನ ಇಟ್ಟು ಸಹ ದೋಸೆ ಮಾಡಬಹುದು. ಅಂದ್ರೆ ನೀವು ಒಂದು ದಿನ ಮುನ್ನ ರಾತ್ರಿ ಹಿಟ್ಟು ರೆಡಿ ಮಾಡಿಟ್ಟುಕೊಳ್ಳಬಹುದು.
ಹೀಗೆ ಹಿಟ್ಟು ರೆಡಿಯಾದ ಬಳಿಕ ಒಲೆ ಮೇಲೆ ಕಾವಲಿ ಇಟ್ಟು ಎಣ್ಣೆ ಹಚ್ಚಿಕೊಳ್ಳಿ. ಬಳಿಕ ಹಿಟ್ಟನ್ನು ಒಂದು ಲೋಟದಲ್ಲಿ ತೆಗೆದುಕೊಂಡು ಅದರ ಮೇಲೆ ಹಾಕಿಕೊಳ್ಳಿ. ಆದರೆ ಕೆಲವು ಬಾರಿ ಹಿಟ್ಟು ಕಾವಲಿಗೆ ಅಂಟಿಕೊಳ್ಳುತ್ತದೆ. ಇದು ಹಿಟ್ಟು ತುಂಬಾನೆ ತೆಳುವಾಗಿದೆ ಎಂದರ್ಥ ಹೀಗಾಗಿ ದೋಸೆ ಸರಿಯಾಗಿ ಏಳದಿದ್ದರೆ ಹಿಟ್ಟಿಗೆ ಸ್ವಲ್ಪ ಅಕ್ಕಿ ಹಿಟ್ಟು ಹಾಕಿ ಮತ್ತೆ ಕಲಸಿಕೊಳ್ಳಿ.
ಜೊತೆಗೆ ದೋಸೆ ಮಾಡುವಾಗ ಉರಿಯನ್ನು ಸಣ್ಣದಾಗಿ ಇಟ್ಟುಕೊಳ್ಳಬೇಕು. ದೊಡ್ಡ ಉರಿಯಲ್ಲಿ ದೋಸೆ ಬೇಗ ಕರಕಲಾಗುತ್ತದೆ. ಜೊತೆಗೆ ಕಾವಲಿಗೆ ಅಂಟಿ ಕೊಳ್ಳತ್ತದೆ.
ನೀರು ದೋಸೆ ಇಷ್ಟಪಡವರು ಕಮ್ಮಿ, ಆದರೆ ಇದನ್ನು ಮಾಡುವುದು ಅಷ್ಟು ಸುಲಭವಲ್ಲ. ಪೇಪರ್‌ನಂತೆ ತೆಳುವಾಗಿ, ಮೃದುವಾಗಿ ಇರುವ ನೀರು ದೋಸೆ ಮಾಡುವುದು ಒಂದು ಟ್ರಿಕ್ಸ್. ಇನ್ನು ಈ ದೋಸೆ ಜೊತೆಗೆ ಕೋಳಿ, ಮೀನು ಸಾರು ಚಟ್ನಿ ಸಹ ರುಚಿ ಹೆಚ್ಚಿಸುತ್ತೆ.
ದೋಸೆ ಜೊತೆಗೆ ಹುರಿಗಡಲೆ ಚಟ್ನಿ ಇಲ್ಲವೆ ತೆಂಗಿನಕಾಯಿಯ ಮಸಾಲೆ ಚಟ್ನಿ ಇದ್ದರ ಬೆಳಗಿನ ಹೊತ್ತು ಬೊಂಬಾಟ್ ಆಗಿರುತ್ತೆ. ದೋಸೆ ಹಿಟ್ಟು ಉಳಿದರೆ ಒಂದು ಇಟ್ಟು ಸಹ ಮತ್ತೆ ಮಾರನೆ ದಿನವೂ ಮಾಡಬಹುದು.



Click it and Unblock the Notifications
