Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಸುಲಭದ ನೀರ್ ದೋಸೆ ನೀರ್ ಚಟ್ನಿ ಥಟ್ ಅಂತ ಮಾಡೋದು ಹೇಗೆ? ಇಲ್ಲಿದೆ ರೆಸಿಪಿ
ಬೆಳಗ್ಗೆ ತಿಂಡಿಗೆ ನೀವು ನೀರ್ ದೋಸೆ ಸವಿಯಲು ಬಹಳ ಇಷ್ಟಪಡುವ ಮಂದಿ ಆಗಿರಬಹುದು. ಉದ್ದಿನ ದೋಸೆಗಿಂತ ರುಚಿ ರುಚಿಯ ನೀರ್ ದೋಸೆ ಬಹಳ ಇಷ್ವವಾಗುತ್ತೆ. ಹಾಗೆ ಇದನ್ನು ಬಹಳ ಸುಲಭವಾಗಿ ಮಾಡಿ ಮುಗಿಸಬಹುದು. ಹಾಗೆ ಮಕ್ಕಳಿಗೂ ಸಹ ನೀರ್ ದೋಸೆ ಹೆಚ್ಚು ಇಷ್ಟವಾಗುತ್ತೆ. ಕರಾವಳಿ, ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಈ ರೀತಿ ನೀರ್ ದೋಸೆ ಬಹಳ ಫೇಮಸ್ ಆಗಿರುವುದು ನೋಡಬಹುದು.
ನೀರ್ ದೋಸೆ ಹಲವರ ಫೇವರಿಟ್ ತಿಂಡಿಯೂ ಹೌದು. ಈಗಂತು ಹೋಟೆಲ್ಗಳಲ್ಲಿ, ನಾನ್ ವೆಜ್ ಜೊತೆಗೆ, ಕ್ಯಾಂಟೀನ್ನಲ್ಲಿಯೂ ವಿಶೇಷ ರೀತಿಯ ನೀರ್ ದೋಸೆಗಳು ದೊರೆಯುತ್ತವೆ. ಹಾಗೆ ನೀರ್ ದೋಸೆಯೊಂದಿಗೆ ಕಾಯಿ ಚಟ್ನಿ, ಅದ್ರಲ್ಲೂ ನೀರ್ ಚಟ್ನಿ ಮಾಡಿ ಸವಿಯೋದರ ರುಚಿ ಅದ್ಭುತ ಆಗಿರಲಿದೆ. ಹೀಗಾಗಿ ನಾವಿಂದು ಸುಲಭವಾಗಿ ಈ ಎರಡೂ ರೆಸಿಪಿ ಮನೆಯಲ್ಲಿ ಮಾಡಿ ಸವಿಯುವ ಕುರಿತಾಗಿ ತಿಳಿದುಕೊಳ್ಳೋಣ.

ನೀರ್ ದೋಸೆಯೊಂದಿಗೆ ಈ ನೀರ್ ಚಟ್ನಿ ಇದ್ದರೆ ಅರ್ಧ ಡಜನ್ ದೋಸೆ ತಿನ್ನಬಹುದು. ಹಾಗೆ ಮಾಡುವ ವಿಧಾನದ ಕುರಿತಾಗಿ ನಾವಿಂದು ತಿಳಿದುಕೊಳ್ಳೋಣ.
ನೀರ್ ದೋಸೆ ನೀರ್ ಚಟ್ನಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ನೀರ್ ದೋಸೆ ನೀರ್ ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳು
- ಅಕ್ಕಿ
- ಉಪ್ಪು
- ತೆಂಗಿನಕಾಯಿ
- ಹುರಿಗಡಲೆ
- ಹುಣಸೆ ಹುಳಿ
- ಹಸಿ ಮೆಣಸು
- ಒಣ ಮೆಣಸು
- ಕರಿಬೇವು
- ಕೊತ್ತಂಬರಿ ಸೊಪ್ಪು
- ಶುಂಠಿ
- ಇಂಗು
- ಎಣ್ಣೆ
ನೀರ್ ದೋಸೆ ನೀರ್ ಚಟ್ನಿ ಮಾಡುವ ಸುಲಭದ ವಿಧಾನವೇನು?
ಹಿಂದಿನ ದಿನ ರಾತ್ರಿ 2 ಕಪ್ ರೇಷನ್ ಅಕ್ಕಿಯನ್ನು ಚೆನ್ನಾಗಿ ತೊಳೆದು ಅನಂತರ ನೆನೆಸಿಡಬೇಕು. 6 ಗಂಟೆ ಬಿಟ್ಟು ಅದನ್ನು ಮಿಕ್ಸಿ ಜಾರ್ಗೆ ಹಾಕಿಕೊಂಡು ಇದಕ್ಕೆ 1 ಕಪ್ ತೆಂಗಿನಕಾಯಿ ತುರಿ ಸಹ ಹಾಕಿಕೊಂಡು ರುಬ್ಬಿಕೊಳ್ಳಬೇಕು. ತೆಂಗಿನಕಾಯಿ ತುರಿ ಹಾಕಿದ್ರೆ ದೋಸೆ ಮೃದುವಾಗಿ ರುಚಿಯಾಗಿ ಬರಲಿದೆ. ಈ ರುಬ್ಬಿದ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿಟ್ಟುಕೊಳ್ಳಿ. ಈ ಹಿಟ್ಟು ತೆಳುವಾಗಿ ಬರಲು ನೀರು ಹೆಚ್ಚು ಹಾಕಿಕೊಳ್ಳಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸಹ ಹಾಕಿಕೊಂಡು ಮಿಶ್ರಣ ಮಾಡಿ ಇಟ್ಟುಕೊಳ್ಳಿ.
ಈಗ ಚಟ್ನಿ ಮಾಡಲು ಮಿಕ್ಸಿ ಜಾರ್ಗೆ ತೆಂಗಿನಕಾಯಿ ತುರಿ, ಅರ್ಧ ಕಪ್ ಹುರಿಗಡಲೆ, ಬೆಳ್ಳುಳ್ಳಿ, ಶುಂಠಿ, ಹುಣಸೆ ಹುಳಿ, ಪುದಿನ ಸೊಪ್ಪು, ಕೊತ್ತಂಬರಿ ಸೊಪ್ಪು, ಹಸಿ ಮೆಣಸು, ಉಪ್ಪು ಹಾಗೆ ನೀರು ಸಹ ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು. ಇದು ತೆಳುವಾಗಿ ಇರಬೇಕು. ಚಟ್ನಿಯನ್ನು ಪಾತ್ರೆಗೆ ಹಾಕಿ ನೀವು ನೀರು ಸೇರಿಸಿ ತೆಳು ಮಾಡಿಕೊಳ್ಳಿ.
ಅನಂತರ ಈ ಚಟ್ನಿಗೆ ಇಂದು ಒಗ್ಗರಣೆ ಹಾಕಿ. ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಸಾಸಿವೆ, ಒಣ ಮೆಣಸು, ಕರಿಬೇವು, ಉದ್ದಿನ ಬೇಳೆ, ಇಂಗು ಹಾಕಿ ಒಗ್ಗರಣೆ ಮಾಡಿ ಚಟ್ನಿಗೆ ಸೇರಿಸಿದರೆ ನೀರು ದೋಸೆ ಸಿದ್ದವಾಗುತ್ತೆ.
ಈಗ ದೋಸೆ ಹಿಟ್ಟನ್ನು 15 ನಿಮಿಷ ಹಾಗೆಯೇ ಬಿಡಿ. ಇದು ಗಟ್ಟಿಯಾಗಿದ್ದರೆ ನೀರು ಹಾಕಿಕೊಳ್ಳಿ. ನಂತರ ಒಲೆ ಮೇಲೆ ಕಾವಲಿ ಇಟ್ಟು ಕಾಯಲು ಬಿಡಿ. ಅನಂತರ ಎಣ್ಣೆ ಹಚ್ಚಿಕೊಂಡು, ಅಥವಾ ಎಣ್ಣೆ ಹಾಕದೆಯೂ ಹಿಟ್ಟನ್ನು ಹಾಕಿಕೊಂಡು ದೋಸೆ ಮಾಡಿಕೊಳ್ಳಿ. ನೀರ್ ದೋಸೆಯನ್ನು ಒಂದು ಕಡೆ ಮಾತ್ರ ಬೇಯಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯಾದ ನೀರ್ ದೋಸೆ ನೀರ್ ಚಟ್ನಿ ಸಿದ್ದವಾಗುತ್ತೆ.



Click it and Unblock the Notifications
