Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಸ್ನ್ಯಾಕ್ಸ್, ಬ್ರೇಕ್ಫಾಸ್ಟ್ ಎರಡಕ್ಕೂ ಈ ಬೋಂಡಾ ಸೂಪರ್: ಬೋಂಡಾ ಜೊತೆ ಚಟ್ನಿ ರೆಸಿಪಿ ಇಲ್ಲಿದೆ..!!
ಸಂಜೆ ಸಮಯದಲ್ಲಿ ನೀವು ಸ್ನ್ಯಾಕ್ಸ್ ಸವಿಯುವ ಅಭ್ಯಾಸ ಇಟ್ಟುಕೊಂಡಿರಬಹುದು. ಸಂಜೆ ಟೀ-ಕಾಫಿಯ ಜೊತೆಗೆ ವಡೆ, ಬೋಂಡಾ, ಬಜ್ಜಿ, ದೋಸೆ, ಚಿಪ್ಸ್ ಹೀಗೆ ಹತ್ತಾರು ರೀತಿಯ ಸ್ನ್ಯಾಕ್ಸ್ ಸವಿಯುವ ಅಭ್ಯಾಸ ಇಟ್ಟುಕೊಂಡಿರುತ್ತೀರಿ. ಹಾಗೆ ಬೇಕರಿ ತಿಂಡಿಗಳಿಗಿಂತ ಮನೆಯಲ್ಲೇ ಮಾಡಿ ಸವಿದರೆ ಉತ್ತಮ ರುಚಿಯ ಜೊತೆಗೆ ಒಂದಿಷ್ಟು ದಿನ ಇಟ್ಟು ಕೂಡ ಸವಿಯಬಹುದು.
ಆದರೆ ನಾವಿಂದು ಮನೆಯಲ್ಲೇ ಮಾಡಿ ಸವಿಯಬಹುದಾದ ಅದ್ಭುತ ರುಚಿಯ ಮೈಸೂರು ಬೋಂಡಾ ಹಾಗೂ ಕಾಯಿ ಚಟ್ನಿ ಮಾಡುವ ಕುರಿತು ತಿಳಿದುಕೊಳ್ಳೋಣ. ಮೈಸೂರು ಬೋಂಡಾ ಸಂಜೆ ಮಾತ್ರವಲ್ಲ ಬೆಳಗ್ಗೆ ತಿಂಡಿಗೂ ಕೂಡ ಅದ್ಭುತ ರುಚಿ ನೀಡಲಿದೆ. ಹೋಟೆಲ್ಗಳಲ್ಲಿ ಸಿಗುವಂತಹ ಮೈಸೂರು ಬೋಂಡಾ ನೀವು ಕೂಡ ಸವಿದಿರುತ್ತೀರಿ.

ನಾವಿಂದು ಮೈಸೂರು ಬೋಂಡಾದ ಜೊತೆಗೆ ಸವಿಯಲು ರುಚಿ ರುಚಿಯ ಚಟ್ನಿ ಮಾಡುವುದನ್ನು ಇಲ್ಲಿ ತಿಳಿದುಕೊಳ್ಳೋಣ. ಹಾಗಾದ್ರೆ ಮೈಸೂರು ಬೋಂಡಾ ಮಾಡುವುದು ಹೇಗೆ? ಮೈಸೂರು ಬೋಂಡಾ ಮಾಡಲು ಯಾವೆಲ್ಲಾ ಪದಾರ್ಥಬೇಕು? ಇದಕ್ಕೆ ಚಟ್ನಿ ಯಾವ ರೀತಿ ಮಾಡಬೇಕು ಯಾವೆಲ್ಲಾ ವಸ್ತುಗಳು ಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೈಸೂರು ಬೋಂಡಾ ಮಾಡಲು ಬೇಕಾಗುವ ಪದಾರ್ಥಗಳು
- ಮೈದಾ ಹಿಟ್ಟು- 200 ಗ್ರಾಮ್
- ಮೊಸರು
- ಸೋಡಾ ಪುಡಿ
- ಹಸಿ ಮೆಣಸು
- ಶುಂಠಿ
- ಕೊತ್ತಂಬರಿ ಸೊಪ್ಪು
- ಜೀರಿಗೆ
- ತೆಂಗಿನಕಾಯಿ
- ಹುರಿಗಡಲೆ
- ಉಪ್ಪು
- ಎಣ್ಣೆ
ಮೈಸೂರು ಬೋಂಡಾ ಮಾಡುವ ವಿಧಾನ
ಮೊದಲು ಒಂದು ಬೌಲ್ಗೆ ಮೈದಾ ಹಿಟ್ಟು ಹಾಕಿಕೊಂಡು ಅದಕ್ಕೆ ಕೊತ್ತಂಬರಿ ಸೊಪ್ಪು, ಶುಂಠಿ, ಹಸಿ ಮೆಣಸು, ಸೋಡಾ, ಉಪ್ಪು ಹಾಕಿ ಡ್ರೈ ಮಿಕ್ಸ್ ಮಾಡಿ. ಅನಂತರ ಇದಕ್ಕೆ ಸ್ವಲ್ಪ ಸ್ವಲ್ಪ ಮೊಸರು ಹಾಕಿಕೊಳ್ಳಿ. ಮೊಸರು ಇಲ್ಲದೆ ಬರೀ ನೀರು ಬಳಸಿಯೂ ಇದನ್ನು ಮಾಡಬಹುದು. ನೀರು ಹಾಕುತ್ತಾ ಮಿಕ್ಸ್ ಮಾಡಿಕೊಳ್ಳಿ. ಬೋಂಡಾ ಹಿಟ್ಟಿನಂತೆ ಹದ ಬರುವಂತೆ ಕಲಸಿಕೊಳ್ಳಿ.
ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ತೆಂಗಿನಕಾಯಿ ಹಾಕಿ ನಂತರ ಹುರಿಗಡಲೆ ಹಾಕಿಕೊಳ್ಳಿ. ಹಾಗೆ ಕೊತ್ತಂಬರಿ ಸೊಪ್ಪು, ಶುಂಠಿ, ಹಸಿಮೆಣಸು, ಉಪ್ಪು ಕೂಡ ಹಾಕಿಕೊಂಡು ನೀರು ಹಾಕಿ ರುಬ್ಬಿಕೊಳ್ಳಬೇಕು. ಇಷ್ಟಾದರೆ ಚಟ್ನಿ ರೆಡಿಯಾಗುತ್ತದೆ.
ಈಗ ರೆಡಿ ಮಾಡಿಕೊಂಡ ಹಿಟ್ಟು 10 ನಿಮಿಷದಕ್ಕೆ ಹದವಾಗುತ್ತದೆ. ಈಗ ಬಾಣಲೆಯಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಕಾಯಲು ಬಿಡಿ. ಎಣ್ಣೆ ಚೆನ್ನಾಗಿ ಕಾದ ಬಳಿಕ ನಿಮಗೆ ಯಾವ ಹಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಹಿಟ್ಟನ್ನು ತೆಗೆದುಕೊಂಡು ಎಣ್ಣೆಯಲ್ಲಿ ಬಿಡಬೇಕು. ಆದಷ್ಟು ಟೊಮೆಟೋ ಹಣ್ಣಿನ ಗಾತ್ರದಲ್ಲಿ ಮಾಡಿಕೊಳ್ಳಿ. ನಿಧಾನ ಉರಿಯಲ್ಲಿ ಕಾಯಲು ಬಿಡಬೇಕು.
ಬೋಂಡಾದ ಬಣ್ಣ ಬ್ರೌನ್ಗೆ ತಿರುಗುವವರೆಗೂ ಇದನ್ನು ಕರಿದುಕೊಳ್ಳಿ. 4 ನಿಮಿಷದಲ್ಲಿ ಇದನ್ನು ಕರಿಬಹುದು. 200 ಗ್ರಾಮ್ ಹಿಟ್ಟಿನಲ್ಲಿ 20ರಿಂದ 25 ಮೈಸೂರು ಬೋಂಡಾ ರೆಡಿಯಾಗುತ್ತದೆ. ಕೇವಲ 10 ನಿಮಿಷದ ಒಳಗೆ ಈ ಸ್ನ್ಯಾಕ್ಸ್ ಹಾಗೂ ಬ್ರೇಕ್ಫಾಸ್ಟ್ ತಿಂಡಿ ರೆಡಿ ಮಾಡಬಹುದು. ನೀವು ಕೂಡ ಮನೆಯಲ್ಲಿ ಇದನ್ನೊಮ್ಮೆ ಟ್ರೈ ಮಾಡಿ ನೋಡಿಬಹುದು.



Click it and Unblock the Notifications
