Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಬಾಯಲ್ಲಿ ನೀರೂರಿಸುವ ಮಟನ್ ಸುಕ್ಕಾ ಮಾಡುವುದು ಬಲು ಸುಲಭ
ನೀವು ಮಟನ್ ಪ್ರಿಯರೇ? ಈ ಮಟನ್ ಸುಕ್ಕಾ ತುಂಬಾನೇ ಇಷ್ಟವಾಗುವುದು, ಇಲ್ಲಿ ಒಬ್ಬರು ಸವಿಯಬಹುದಾದಷ್ಟು 1/4ಕೆಜಿ ಮಟನ್ನಿಂದ ಮಟನ್ ಸುಕ್ಕಾ ಮಾಡುವ ರೆಸಿಪಿ ಈಡಿದ್ದೇವೆ, ಇದನ್ನು ಮಾಡುವುದು ತುಂಬಾ ಸುಲಭ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ಕಾಲು ಕೆಜಿ ಮಟನ್ (ಬೋನ್ ಸಹಿತ)
1 ಚಿಕ್ಕ ಈರುಳ್ಳಿ
ಸ್ವಲ್ಪ ಕರಿಬೇವು
2 ಚಮಚ ಶುಂಠಿ- ಬೆಳ್ಳುಳ್ಳಿ ಪೇಸ್ಟ್
2 ಹಸಿ ಮೆಣಸು
3/4 ಚಮಚ ಉಪ್ಪು
1 ಚಮಚ ಅಚ್ಚ ಖಾರದ ಪುಡಿ
1 ಚಮಚ ಕಾಳು ಮೆಣಸಿನ ಪುಡಿ
1/2 ಚಮಚ ಅರಿಶಿಣ ಪುಡಿ
1 ಚಮಚ ಕೊತ್ತಂಬರಿ ಪುಡಿ
ಮಾಡುವ ವಿಧಾನ
- ನೀವು ಕುಕ್ಕರ್ಗೆ ಎಲ್ಲಾ ಸಾಮಗ್ರಿ ಹಾಕಿ, ನೀರು ಸೇರಿಸಿ 8-10 ವಿಶಲ್ ಬರುವವರೆಗೆ ಬೇಯಿಸಿ , ಅದಕ್ಕಿಂತ ಹೆಚ್ಚು ವಿಶಲ್ ಬರಿಸಿದರೆ ಇನ್ನೂ ಒಳ್ಳೆಯದು.
- ಈಗ ಪ್ಯಾನ್ ಬಿಸಿ ಮಾಡಿ ಎಣ್ಣೆ ಹಾಕಿ, ನಂತರ ಶುಂಠಿ- ಬೆಳ್ಳುಳ್ಳಿ ಪೇಸ್ಟ್ ಹಾಕಿ, ಈರುಳ್ಳಿ ಹಾಕಿ, ಕರಿ ಬೇವು ಹಾಕಿ, ಬೇಯಿಸಿದ ಮಟನ್ ರಸ ಸಹಿತ ಹಾಕಿ, ಮುಚ್ಚಳ ತೆಗೆದು ಬೇಯಿಸಿ
- ಮಟನ್ ಡ್ರೈಯಾಗಬೇಕು, ಅಷ್ಟು ಸಮಯ ಬೇಯಿಸಿ.
- ರಸ ಸಂಪೂರ್ಣ ಬತ್ತಿದ ಮೇಲೆ ಕರಿಬೇವಿನಿಂದ ಅಲಂಕರಿಸಿದರೆ ಮಟನ್ ಸುಕ್ಕಾ ರೆಡಿ.
ಇತರ ಸಲಹೆ
ನೀವು ಮಟನ್ ಬೇಯಿಸುವಾಗ ತುಂಬಾ ನೀರು ಸೇರಿಸಬೇಡಿ. ನೀರು ತುಂಬಾ ಆದರೆ ರಸ
ಬತ್ತಲು ಸ್ವಲ್ಪ ಸಮಯ ಹಿಡಿಯುತ್ತೆ, ಹಾಗಾಗಿ ಕಡಿಮೆ ನೀರು ಹಾಕಿ, ಆದರೆ ಮಟನ್ ತಳ
ಹಿಡಿಯಬಾರದು, ಬೇಯಲು ತಕ್ಕ ನೀರು ಹಾಕಿ, ಮಟನ್ ಮುಳುಗುವಷ್ಟು ಹಾಕಿದರೆ
ಸಾಕಾಗುತ್ತೆ.
ನೀವು ಎಣ್ಣೆಗೆ ಒಣ ಮೆನಸು ಬೇಕಾದರೆ ಮುರಿದು ಹಾಕಬಹುದು, ಇನ್ನು ಸುಕ್ಕಾ ಮಾಡುವಾಗ
ಇನ್ನೂ ಸ್ವಲ್ಪ ಮಸಾಲೆ ಬೇಕಿದ್ದರೆ ಸೇರಿಸಬಹುದು.
ನೀವು ಬೇಕಿದ್ದರೆ ಮಟನ್ ಬೇಯಿಸುವಾಗ ಒಂದು ಆಲೂಗಡ್ಡೆ ಕೂಡ ದೊಡ್ಡ ಪೀಸ್ ಆಗಿ
ಕತ್ತರಿಸಿ ಬೇಯಿಸಿದರೆ ಸುಕ್ಕಾ ಇನ್ನೂ ಟೆಸ್ಟ್ ಅನಿಸುವುದು.
ಮಸಾಲೆಗೆ 1 ಚಮಚ ಮಟನ್ ಮಸಾಲೆ ಸೇರಿಸಬಹುದು.
ಇನ್ನೊಂದು ರೀತಿಯಲ್ಲಿಯೂ ಮಟನ್ ಸುಕ್ಕಾ ಮಾಡಬಹುದು
- ಮೇಲೆ ಹೇಳಿದಂತೆಯೇ ಎಲ್ಲಾ ಮಸಾಲೆ ಸಾಮಗ್ರಿ ಹಾಕಿ ಮಟನ್ ಚೆನ್ನಾಗಿ ಬೇಯಿಸಿ
- ಈಗ ಪಾತ್ರೆಗೆ ಎಣ್ಣೆ ಹಾಕಿ
- ನಂತರ 2 ಲವಂಗ, ಚಿಕ್ಕ ತುಂಡು ಚಕ್ಕೆ, 1 ಪಲಾವ್ ಎಲೆ, ಸ್ವಲ್ಪ ಕರಿಬೇವು ಸೇರಿಸಿ.
- ಈರುಳ್ಳಿ ಸೇರಿಸಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ
- ನಂತರ 1 ಟೊಮೆಟೊ ಸೇರಿಸಿ
- ಟೊಮೆಟೊ ಮೆತ್ತಗಾಗುವಾಗ 1 ಚಮಚ ಮಟನ್ ಮಸಾಲೆ ಪುಡಿ ಸೇರಿಸಿ
- ಈಗ ಬೇಯಿಸಿದ ಮಟನ್ ಹಾಕಿ ಡ್ರೈಯಾಗುವವರೆಗೆ ಬೇಯಿಸಿ, ನಿಂಬೆರಸ ಹಿಂಡಿದರೆ ಮಟನ್ ಸುಕ್ಕಾ ರೆಡಿ.



Click it and Unblock the Notifications
