Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
ಮಟನ್ ಸೂಪ್ ಮಾಡುವುದು ಬಲು ಸುಲಭ, ಇದರ ಪ್ರಯೋಜನಗಳು ಅಂತೂ ಅದ್ಭುತ
ಮಟನ್ ಲೆಗ್ ಸೂಪ್ ಮಾಡುವುದು ದೊಡ್ಡ ವಿಷಯವೇ ಅಲ್ಲ, ಅಷ್ಟು ಸುಲಭದ ರೆಸಿಪಿಯದು, ಮಕ್ಕಳಿಂದ ಹಿಡಿದು ಎಲ್ಲರಿಗೂ ಈ ಸೂಪ್ ತುಂಬಾನೇ ಒಳ್ಳೆಯದು, ವಯಸ್ಸಾಗುತ್ತಿದ್ದಂತೆ ಕಾಡುವ ಬೆನ್ನು ನೋವು, ಸಂಧಿನೋವು ಈ ಬಗೆಯ ಸಮಸ್ಯೆ ಕೂಡ ತಡೆಗಟ್ಟಲು ಸಹಕಾರಿ, ಬನ್ನಿ ಮಟನ್ ಸೂಪ್ ತುಂಬಾ ಸರಳವಾಗಿ ಮಾಡುವುದು ಹೇಗೆ ಎಂದು ನೋಡೋಣ:
ಬೇಕಾಗುವ ಸಾಮಗ್ರಿ2 ಮಟನ್ ಲೆಗ್ಪೀಸ್
ನೀರು 2 ಕಪ್
ಶಂಠಿ ಚಿಕ್ಕದಾಗಿ ಕತ್ತರಿಸಿದ್ದು
6- 7 ಎಸಳು ಬೆಳ್ಳುಳ್ಳಿ ಚಿಕ್ಕದಾಗ ಕತ್ತರಿಸಿದ್ದು
1/4 ಚಮಚ ಅರಿಶಿಣ ಪುಡಿ
ಕಾಳು ಮೆಣಸಿನ ಪುಡಿ1/2 ಚಮಚ(ಕಾಳು ಮೆಣಸು ಪುಡಿ ತರಿ ತರಿ ಇರಲಿ, ಇಲ್ಲದಿದ್ದರೆ
ಕಾಳು ಮೆಣಸು ಕುಟ್ಟಿ ಪುಡಿ ಮಾಡಿ ಬಳಸಬಹುದು)
ಜೀರಿಗೆ 1/4 ಚಮಚ
1/4 ಚಮಚ ಗರಂ ಮಸಾಲ ಪುಡಿ
ಸ್ವಲ್ಪ ಕೊತ್ತಂಬರಿ ಸೊಪ್ಪು
ಅರ್ಧ ನಿಂಬೆ ರಸ
ಸ್ವಲ್ಪ ಕಲ್ಲುಪ್ಪು
ಮಾಡುವ ವಿಧಾನ
- ನೀವು ಲೆಗ್ ಪೀಸ್ ಕ್ಲೀನ್ ಮಾಡಿಸಿ ಕಟ್ ಮಾಡಿಸಿ ತನ್ನಿ, ಲೆಗ್ ಪೀಸ್ ಬೇಡ ಎನ್ನುವವರು 1/4 ಕೆಜಿ ಮಟನ್ ವಿಥ್ ಬೋನ್ ಬಳಸಬಹುದು
- ಈಗ ನೀವು ಮಟನ್ ಸ್ವಚ್ಛಗೊಳಿಸಿ ಕುಕ್ಕರ್ಗೆ ಹಾಕಿ, ಅದರಲ್ಲಿ ಕೊತ್ತಂಬರಿ ಸೊಪ್ಪು, ನಿಂಬೆರಸ ಬಿಟ್ಟು ಉಳಿದೆಲ್ಲಾ ಸಾಮಗ್ರಿ ಸೇರಿಸಿ.
- ನಂತರ 2 ಕಪ್ ಅಥವಾ 3 ಕಪ್ ನೀರು ಹಾಕಿ, ನಂತರ 8-9 ವಿಶಲ್ ಬರುವವರೆಗೆ ಚೆನ್ನಾಗಿ ಬೇಯಿಸಿ.
- ಈಗ ಮಟನ್ ಬೆಂದ ಮೇಲೆ ಉರಿಯಿಂದ ಇಳಿಸಿ 5-20 ನಿಮಿಷ ಬಿಟ್ಟು ಕುಕ್ಕರ್ ಮುಚ್ಚಳ ತೆಗೆದು ಸ್ವಲ್ಪ ನಿಂಬೆರಸ ಸೇರಿಸಿ
- ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಮಟನ್ ಸೂಪ್ ರೆಡಿ.
ಮಟನ್ ಸೂಪ್ ಪ್ರಯೋಜನಗಳು
- ಮಟನ್ ಸೂಪ್ ಮಕ್ಕಳಿಂದ ಹಿಡಿದು ದೊಡ್ಡವರವೆಗೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- ಅದರಲ್ಲಿಯೂ ಈಗ ಚಳಿಗಾಲ, ಚಳಗಾಲದಲ್ಲಿ ಸಂಧಿವಾತದ ಸಮಸ್ಯೆ, ಮೂಳೆ ನೋವು ಈ ಬಗೆಯ ಸಮಸ್ಯೆ ಉಂಟಾಗುವುದು, ಇದನ್ನು ತಡೆಗಟ್ಟಲು ತುಂಬಾನೇ ಒಳ್ಳೆಯದು.
- ಮಟನ್ ಸೂಪ್ ಕುಡಿದರೆ ಜೀರ್ಣಕ್ರಿಯೆ ತುಂಬಾ ಚೆನ್ನಾಗಿ ನಡೆಯುತ್ತದೆ
- ನಿದ್ದೆ ಚೆನ್ನಾಗಿ ಬರುತ್ತದೆ, ನಿದ್ರಾಜೀನತೆ ಸಮಸ್ಯೆ ಇರುವವರು ಮಟನ್ ಸೂಪ್ ಕುಡಿದರೆ ತುಂಬಾನೇ ಒಳ್ಳೆಯ ಪ್ರಯೋಜನ ಪಡೆಯಬಹುದು.
- ರೋಗ ನಿರೋಧಕಶಕ್ತಿ ಹೆಚ್ಚಿಸುತ್ತದೆ
- ಏನಾದರೂ ಶಸ್ತ್ರ ಚಿಕಿತ್ಸೆಯಾಗಿದ್ದರೆ ಅಥವಾ ಹೆರಿಗೆಯ ಬಳಿಕ ಚೇತರಿಸಿಕೊಳ್ಳಲು ತುಂಬಾನೇ ಸಹಕಾರಿ
- ಬೆನ್ನುನೋವಿನ ಸಮಸ್ಯೆ ಇದ್ದರೆ ಕಡಿಮೆಯಾಗುವುದು
ಮಟನ್ ಸೂಪ್ ವಾರದಲ್ಲಿ ಎಷ್ಟು ಬಾರಿ ಸೇವಿಸಬಹುದು?
ವಾರದಲ್ಲಿ ಏಳು ಬಾರಿ ಸೇವಿಸಿದರೂ ತೊಂದರೆಯಿಲ್ಲ, ಬೆಳಗ್ಗೆ ಅಥವಾ ರಾತ್ರಿ ಊಟ
ಮಾಡುವ ಅರ್ಧ ಗಂಟೆ ಮುನ್ನ ಮಟನ್ ಸೂಪ್ ಕುಡಿಯಿರಿ, ಸೂಪ್ ಕುಡಿದ ಮೇಲೆ ಅರ್ಧ
ಗಂಟೆಯವರೆಗೆ ಬೇರೆ ಯಾವುದೇ ಪಾನೀಯ ತೆಗೆದುಕೊಳ್ಳಬೇಡಿ, ಆಹಾರ ಸೇವಿಸಬೇಡಿ, ಆವಾಗ
ಮಟನ್ ಸೂಪ್ನ ಗುಣಗಳನ್ನು ಶರೀರ ಸಂಪೂರ್ಣ ಎಳೆದುಕೊಳ್ಳುತ್ತದೆ.



Click it and Unblock the Notifications
