Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಮಟನ್ ಲಿವರ್ ಕರಿ ಸವಿದರೆ ಪ್ರತಿ ದಿನ ಮಾಡಿ ಅದನ್ನೇ ಸವಿಯುತ್ತೀರಿ! ಮಾಡೋದು ಹೇಗೆ?
ಭಾನುವಾರ ಬಂತೆಂದರೆ ಹಲವರು ನಾನ್ ವೆಜ್ ಊಟದ ಮೊರೆ ಹೋಗ್ತಾರೆ. ಕೆಲವರು ಮನೆಯಲ್ಲೇ ಮಾಂಸಹಾರ ಟ್ರೈ ಮಾಡಿದ್ರೆ ಮತ್ತೆ ಕೆಲವರು ಹೋಟೆಲ್, ರೆಸ್ಟೋರೆಂಟ್ನಂತಹ ಆಯ್ಕೆಗಳ ಮಾಡುತ್ತಾರೆ. ನಾನ್ ವೆಜ್ ಪ್ರಿಯರಿಗೆ ಹತ್ತು ಹಲವು ರೆಸಿಪಿಗಳು ಭಾನುವಾರದ ರಜೆಯ ಮಜಾ ಹೆಚ್ಚಿಸುತ್ತೆ. ಇನ್ನು ಈ ರಜೆಯಲ್ಲಿ ಮಟನ್ ರೆಸಿಪಿಗಳ ಸವಿಯಲು ಇಷ್ಟಪಡುವವರು ಹೆಚ್ಚು.
ಆಗಾಗ ಮಾಂಸಹಾರ ಸೇವನೆಯು ನಿಮ್ಮ ದೇಹಕ್ಕೂ ಉತ್ತಮವಾಗಿರುತ್ತದೆ. ಮಟನ್ನಿಂದ ಮಾಡುವಂತಹ ವಿವಿಧ ರೀತಿಯ ಖಾದ್ಯಗಳು ಎಲ್ಲರ ಮನೆ ಗೆಲ್ಲುವ ಜೊತೆಗೆ ಬಾಯಲ್ಲಿ ನೀರು ತರಿಸುತ್ತವೆ. ಅದಲ್ಲೂ ಮಟನ್ ಚಾಪ್ಸ್, ಮಟನ್ ಗ್ರೇವಿ, ಮಟನ್ ಬಿರಿಯಾನಿಗಳು ಎಲ್ಲರ ಪ್ರಿಯವಾದ ಖಾದ್ಯಗಳಲ್ಲಿ ಒಂದಾಗಿವೆ. ಹಾಗೆ ಎಲ್ಲರಿಗೂ ಈ ಖಾದ್ಯ ಸವಿಯುವುದು ಅಂದರೆ ಇಷ್ಟವಾಗುತ್ತೆ.

ನಾವಿಂದು ಮಟನ್ ಲಿವರ್ ಕರಿ ಕುರಿತಾಗಿ ತಿಳಿದುಕೊಳ್ಳೋಣ. ಈ ಮಟನ್ ಲಿವರ್ ಕರಿ ಎಲ್ಲಾ ಊಟದೊಂದಿಗೆ ಸವಿಯಲು ಅದ್ಭುತ ರುಚಿ ನೀಡಲಿದೆ. ಹಾಗೆ ಈ ಮಟನ್ ಲಿವರ್ ಕರಿ ಎಲ್ಲಾ ಊಟದೊಂದಿಗೆ ಅದ್ಭುತ ಹೀಗಾಗಿ ನಾವಿಂದು ಈ ರುಚಿ ರುಚಿಯ ಮಟನ್ ಲಿವರ್ ಕರಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.
ಮಟನ್ ಲಿವರ್ ಕರಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಟನ್ ಲಿವರ್ ಕರಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಮಟನ್ ಲಿವರ್
- ಹಸಿ ಶುಂಠಿ
- ಬೆಳ್ಳುಳ್ಳಿ
- ಈರುಳ್ಳಿ
- ತೆಂಗಿನಕಾಯಿ
- ಹುರಿಗಡಲೆ
- ಕೊತ್ತಂಬರಿ ಸೊಪ್ಪು
- ಗಸೆಗಸೆ
- ಚಕ್ಕೆ
- ಲವಂಗ
- ಹಸಿ ಮೆಣಸು
- ಕರಿಬೇವು
- ಅರಶಿಣ
- ಖಾರದ ಪುಡಿ
- ದನಿಯಾ ಪುಡಿ
- ಎಣ್ಣೆ
- ಉಪ್ಪು
ಮಟನ್ ಲಿವರ್ ಕರಿ ಮಾಡುವ ವಿಧಾನವೇನು?
ಮೊದಲು ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಹಸಿ ಶುಂಠಿ, ಬೆಳ್ಳುಳ್ಳಿ, 1 ಈರುಳ್ಳಿ, 1 ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿಕೊಂಡು ಹಾಕಿಕೊಳ್ಳಿ. ಹಾಗೆ ಸಣ್ಣದಾಗಿ ಹೆಚ್ಚಿರುವ ತೆಂಗಿನಕಾಯಿ, ಪುದಿನ, ಹುರಿಗಡಲೆ, ಕೊತ್ತಂಬರಿ ಸೊಪ್ಪು, ಗಸೆಗಸೆ, ಚಕ್ಕೆ, ಲವಂಗ ಹಾಗೆ ಸ್ವಲ್ಪ ನೀರು ಹಾಕಿಕೊಂಡು ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ಈ ಮಸಾಲೆಯನ್ನು ತೆಗೆದು ಬೌಲ್ಗೆ ಹಾಕಿಟ್ಟುಕೊಳ್ಳಿ.
ಈಗ ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಇದಕ್ಕೆ ಒಂದು ಈರುಳ್ಳಿ, ಹಸಿ ಮೆಣಸು, ಕರಿಬೇವು ಹಾಕಿ ಫ್ರೈ ಮಾಡಿಕೊಳ್ಳಿ. 1 ನಿಮಿಷ ಬಿಟ್ಟು ಇದಕ್ಕೆ ಬೌಲ್ನಲ್ಲಿರುವ ಮಸಾಲೆ ಪೇಸ್ಟ್ ಅನ್ನು ಹಾಕಿಕೊಂಡು 2 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ಈಗ ತೊಳೆದಿಟ್ಟಿರುವ ಮಟನ್ ಲಿವರ್ ಅನ್ನು ಇದಕ್ಕೆ ಹಾಕಿಕೊಳ್ಳಿ.
ಹಾಗೆ ಮಟನ್ ಲವರ್ ಜೊತೆಗೆ ಅರಶಿಣ, ರುಚಿಗೆ ತಕ್ಕಷ್ಟು ಉಪ್ಪು ಕೂಡ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ 15 ನಿಮಿಷ ಮುಚ್ಚಳ ಮುಚ್ಚಿ ಹಾಗೆಯೇ ಬಿಡಿ. ನಂತರ ಇದಕ್ಕೆ ದನಿಯಾ ಪುಡಿ, ಖಾರದ ಪುಡಿ ಸಹ ಹಾಕಿಕೊಳ್ಳಿ. ನಂತರ ಮಿಕ್ಸ್ ಮಾಡಿ ಸ್ವಲ್ಪವೇ ನೀರು ಹಾಕಿಕೊಂಡು ಮಿಕ್ಸ್ ಮಾಡಿಕೊಂಡು ಕುದಿಯಲು ಬಿಡಿ. ನಿಮಗೆ ಗಟ್ಟಿ ಬೇಕಿದ್ದರೆ ನೀರು ಕಡಿಮೆ ಹಾಕಿಕೊಳ್ಳಿ. ನಂತರ ಮುಚ್ಚಳ ಮುಚ್ಚಿ 5 ನಿಮಿಷ ಕುದಿಸಿಕೊಳ್ಳಿ.
ಕೊನೆಯದಾಗಿ ಸಣ್ಣದಾಗಿ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ಮಟನ್ ಲಿವರ್ ಕರಿ ರೆಡಿಯಾಗುತ್ತದೆ, ನೀವು ಕೂಡ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ. ಅದರಲ್ಲೂ ಭಾನುವಾರದ ಬಾಡೂಟಕ್ಕೆ ಇದು ಉತ್ತಮ ರುಚಿ ನೀಡಲಿದೆ.



Click it and Unblock the Notifications
