Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಬಾಯಲ್ಲಿ ನೀರು ತರಿಸುವ ಮಟನ್ ಬೋಟಿ ಗೊಜ್ಜು..! ಬಾಡೂಟ ಸವಿದಂತೆ ರುಚಿ..!
ನೀವು ನಾನ್ ವೆಜ್ ಪ್ರಿಯರಾಗಿದ್ದರೆ ಮಾಂಸಹಾರದಲ್ಲಿ ಹತ್ತು ಹಲವು ಬಗೆಯ ಮಾಡಿ ಸವಿದಿರುತ್ತೀರಿ. ಅದರಲ್ಲೂ ನಾನ್ವೆಜ್ ಹೋಟೆಲ್ನಲ್ಲಿ ನೀವು ಊಹಿದಷ್ಟು ಬಗೆಯ ಐಟಂಗಳಿರುತ್ತವೆ. ಅದರಲ್ಲೂ ನೀವು ಮಟನ್ ಪ್ರಿಯರಾದರಂತು ಅದರ ಬಗೆ ವಿವರಿಸೋದು ಕಷ್ಟವಾಗುತ್ತೆ. ಹಾಗೆ ಮಟನ್ನಲ್ಲಿ ಹತ್ತು ಹಲವು ಖಾದ್ಯ ಮಾಡಿ ಸವಿಯುವುದು ಸಹ ನೋಡಬಹುದು.
ಮಟನ್ನಲ್ಲಿ ಮಾಡುವ ಅದ್ಭುತ ಖಾದ್ಯಗಳ ಪೈಕಿ ಮಟನ್ ಬೋಟಿ ಗೊಜ್ಜು ಅಥವಾ ಬೋಟಿ ಕರಿ ಕೂಡ ಒಂದಾಗಿದೆ. ಊಟ ಹಾಗೂ ತಿಂಡಿಯ ಜೊತೆಗೂ ಈ ಬೋಟಿ ಕರಿ ಅಥವಾ ಬೋಟಿ ಗೊಜ್ಜು ಸವಿಯಲು ಬಹಳ ರುಚಿ ನೀಡಲಿದೆ. ಅದರಲ್ಲೂ ಮಟನ್ ಪ್ರಿಯರಿಗೆ ಬೋಟಿ ಹೆಸರು ಕೇಳಿದ್ರೆ ಬಾಯಲ್ಲಿ ನೀರು ಬರಬಹುದು.

ಇಷ್ಟೊಂದು ರುಚಿಕರ ಹಾಗೆ ಮಟನ್ ಪ್ರಿಯರ ಈ ಬೋಟಿ ಗೊಜ್ಜು ಮಾಡುವುದು ಹೇಗೆ ಅನ್ನೋದು ನಿಮಗೆ ಗೊತ್ತಾ. ಈ ಮಟನ್ ಗೊಜ್ಜಿನ ರುಚಿ ಒಮ್ಮೆ ನೀವು ಸವಿದರೆ ಮತ್ತೆ ಮತ್ತೆ ಮನೆಯಲ್ಲಿ ಮಾಡಿ ಸವಿಯಬಹುದು. ಇಲ್ಲವೆ ಹೋಟೆಲ್ನಲ್ಲಿ ಇಲ್ಲವೆ ರೆಸ್ಟೋರೆಂಟ್ನಲ್ಲಿ ಈ ರುಚಿ ಸವಿಯಲು ಮುಂದಾಗಬಹುದು. ಹಾಗಾದ್ರೆ ನಾವಿಂದು ಈ ಮಟನ್ ಗೊಜ್ಜು ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.
ಹಾಗಾದ್ರೆ ಈ ಮಟನ್ ಬೋಟಿ ಗೊಜ್ಜು ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಟನ್ ಬೋಟಿ ಗೊಜ್ಜು ಮಾಡಲು ಬೇಕಾಗುವ ಪದಾರ್ಥಗಳು
- ಮಟನ್ ಬೋಟಿ
- ಕಲ್ಲು ಹೂವು
- ಈರುಳ್ಳಿ
- ಟೊಮೆಟೋ
- ಕರಿಬೇವು
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಅರಿಶಿನ ಪುಡಿ
- ಕೊತ್ತಂಬರಿ ಪುಡಿ
- ಗರಂ ಮಸಾಲ ಪುಡಿ
- ಕೆಂಪು ಮೆಣಸಿನ ಪುಡಿ
- ಮಟನ್ ಮಸಾಲ ಪುಡಿ
- ಪುದೀನ ಎಲೆ
- ಕೊತ್ತಂಬರಿ ಸೊಪ್ಪು
- ಬಿಳಿ ಎಳ್ಳು
- ಗೋಡಂಬಿ
- ಗಸಗಸೆ
- ತೆಂಗಿನಕಾಯಿ
- ಅಡುಗೆ ಎಣ್ಣೆ
- ರುಚಿಗೆ ಉಪ್ಪು
ಮಟನ್ ಬೋಟಿ ಗೊಜ್ಜು ಮಾಡುವ ವಿಧಾನವೇನು?
ಮೊದಲು ಬೋಟಿಯನ್ನು ಚೆನ್ನಾಗಿ ತೊಳೆದು ಬಳಿಕ ಕುಕ್ಕರ್ಗೆ ಹಾಕಿ ನೀರು ಹಾಕಿ 4 ಸೀಟಿ ಹೊಡೆಸಿಕೊಳ್ಳಿ. ನಂತರ ತಣ್ಣಗಾಗಲು ಬಿಟ್ಟು ತೆಗೆದಿಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಳ್ಳಿ. ನಂತರ ಸೋಂಪು ಕಾಳು, ಕಲ್ಲು ಹೂವು, ಸಣ್ಣದಾಗಿ ಕತ್ತರಿಸಿದ ಈರುಳ್ಳಿ, ಕರಿಬೇವು, 2 ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
1 ನಿಮಿಷದ ಬಳಿಕ ಟೊಮೆಟೋ ಹಾಕಿಕೊಂಡು ಉಪ್ಪು ಸಹ ಹಾಕಿ ಮಿಕ್ಸ್ ಮಾಡಿ, ಒಟ್ಟು 3 ನಿಮಿಷ ಬೇಯಿಸಿ ನಂತರ ಅರಶಿಣ ಪುಡಿ, ಧನಿಯಾ ಪುಡಿ, ಖಾರದ ಪುಡಿ, ಗರಂ ಮಸಾಲೆ ಹಾಕಿಕೊಳ್ಳಿ. ಈಗ ಬೋಟಿ ಬೇಯಿಸಿರುವ ನೀರನ್ನು ಇದಕ್ಕೆ ಹಾಕಿ 1 ನಿಮಿಷ ಹಾಗೆಯೇ ಬಿಡಿ. ಈಗ ಬೇಯಿಸಿಕೊಂಡಿರುವ ಬೋಟಿ ಹಾಕಿಕೊಳ್ಳಿ.
ಈಗ ಮಿಕ್ಸ್ ಮಾಡಿಕೊಳ್ಳುತ್ತಾ ಮಸಾಲೆ ಚೆನ್ನಾಗಿ ಹಿಡಿಯುವಂತೆ ಮಾಡಿಕೊಳ್ಳಿ. ಹಾಗೆ ಬೇಯಲು ಬಿಡಿ. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಪುದಿನ, ಕೊತ್ತಂಬರಿ ಸೊಪ್ಪು, ನೀರಿನಲ್ಲಿ 10 ನಿಮಿಷ ನೆನೆಸಿದ ಎಳ್ಳು, ಗೋಡಂಬಿ, ಗಸೆಗಸೆ ಇದಕ್ಕೆ ಹಾಕಿಕೊಳ್ಳಿ. ಹಾಗೆ ಹುರಿಗಡಲೆ, ತೆಂಗಿನಕಾಯಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
ಈಗ ರುಬ್ಬಿರುವ ಈ ಮಸಾಲೆಯನ್ನು ಬಾಣಲೆಗೆ ಹಾಕಿ ಮಿಕ್ಸ್ ಮಾಡಿಕೊಂಡು ಮತ್ತೆ ಕುದಿಯಲು ಬಿಡಿ. ಹೆಚ್ಚು ನೀರು ಮಾಡಿಕೊಳ್ಳಬೇಡಿ. ಈಗ ಮತ್ತೆ 4 ನಿಮಿಷ ಕುದಿಯಲು ಬಿಡಿ. ಕೊನೆಯದಲ್ಲಿ ಮಟನ್ ಮಸಾಲೆ ಹಾಕಿ ಮಿಕ್ಸ್ ಮಾಡಿ 1 ನಿಮಿಷ ಕುದಿಬರಲು ಬಿಟ್ಟು ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಮಟನ್ ಬೋಟಿ ಗೊಜ್ಜು ರೆಡಿಯಾಗುತ್ತದೆ. ನೀವು ಕೂಡ ಮನೆಯಲ್ಲಿ ಈ ಬೋಟಿ ಗೊಜ್ಜು ಮಾಡಿ ನೋಡಿ.



Click it and Unblock the Notifications