Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಕರ್ಬೂಜ ಮಿಲ್ಕ್ ಶೇಕ್ ಮನೆಯಲ್ಲೇ ಮಾಡಿ; ಬೇಸಿಗೆಗೆ ಇದು ಬೆಸ್ಟ್, ಇಮ್ಯುನಿಟಿ ಬೂಸ್ಟರ್!
ಬೇಸಿಗೆಯ ಈ ಸಮಯದಲ್ಲಿ ನೀವು ಮಧ್ಯಾಹ್ನದ ಸಮಯದಲ್ಲಿ ದೇಹವೂ ತಂಪಾಗಿಸುವ ಯಾವುದಾದರು ಜ್ಯೂಸ್ ಮಾಡಿ ಸವಿಯಲು ಇಷ್ಟಪಡಬಹುದು. ಮನೆಯಲ್ಲಿಯೇ ಮಾಡಿ ಸವಿಯುವುದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಕಡಿಮೆ ಹಣದಲ್ಲಿ ಮನೆ ಮಂದಿ ಎಲ್ಲ ಕುಡಿಯಬಹುದು. ಆದ್ರೆ ಅಂಗಡಿಯಿಂದ ನೀವು ಜ್ಯೂಸ್ ಖರದಿಸಿದರೆ ದುಬಾರಿಯಾಗಲಿದೆ. ಆದ್ರೆ ನೀವೆ ಮನೆಯಲ್ಲಿ ಮಾಡಿಕೊಂಡರೆ ಬಹಳ ಸುಲಭ ಹಾಗೆ ಕಡಿಮೆ ಖರ್ಚಿನಲ್ಲಿ ಮುಗಿಯಲಿದೆ.
ಇನ್ನು ಮನೆಯಲ್ಲಿ ಅದ್ರಲ್ಲೂ ಸುಲವಾಗಿ ಮಾಡಬಹುದಾದ ಜ್ಯೂಸ್ಗಳಲ್ಲಿ ಮಸ್ಕ್ ಮೆಲನ್ ಅಥವಾ ಕರ್ಬೂಜದಿಂದ ಮಾಡುವ ಜ್ಯೂಸ್ ಅಥವಾ ಮಿಲ್ಕ್ ಶೇಕ್ ಎಲ್ಲರಿಗೂ ಇಷ್ಟವಾಗುತ್ತೆ. ಕರ್ಬೂಜ ನಮ್ಮ ದೇಹಕ್ಕೆ ಬಹಳ ಉತ್ತಮ ಹಣ್ಣು. ಇದು ಹೆಚ್ಚಿನ ನೀರಿನಂಶ, ವಿಟಮಿನ್ A, C, ಮತ್ತು ಪೊಟ್ಯಾಶಿಯಂ ಹೊಂದಿದ್ದು, ದೇಹಕ್ಕೆ ತಂಪು ನೀಡುವುದರ ಜೊತೆಗೆ ಚರ್ಮದ ಆರೋಗ್ಯ, ರಕ್ತದೊತ್ತಡ ನಿಯಂತ್ರಣ ಮತ್ತು ನಿರ್ಜಲೀಕರಣ ತಡೆಯಲು ಸಹಕಾರಿಯಾಗಿದೆ.

ಈಗಂತು ಮಾರುಕಟ್ಟೆಯಲ್ಲಿ ದೊಡ್ಡ ದೊಡ್ಡ ಕರ್ಬೂಜದ ಹಣ್ಣುಗಳು ಕಡಿಮೆ ಬೆಲೆಗೆ ಸಿಗುವುದು ನೋಡಬಹುದು. ಇವುಗಳ್ನು ನೀವು ಮನೆಗೆ ತಂದು ಜ್ಯೂಸ್ ಮಾಡಿ ಸವಿಯಬಹುದು. ಹಾಗಾದ್ರೆ ಈ ಜ್ಯೂಸ್ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು ಎಂಬುದನ್ನು ಇಂದು ತಿಳಿದುಕೊಳ್ಳೋಣ.
ಕರ್ಬೂಜದ ಮಿಲ್ಕ್ ಶೇಕ್ ಮಾಡಲು ಯಾವೆಲ್ಲಾ ಪದಾರ್ಥಗಳ ಹಾಕಬೇಕು?
- ಕರ್ಬೂಜ ಹಣ್ಣು
- ಸಕ್ಕರೆ ಅಥವಾ ಬೆಲ್ಲ
- ಏಲಕ್ಕಿ ಪುಡಿ
- ಕಸ್ಟರ್ ಪೌಡರ್
- ತಂಪಿನ ಕಾಳು
- ಹಾಲು
ಕರ್ಬೂಜದ ಮಿಲ್ಕ್ ಶೇಕ್ ಮಾಡುವ ಸುಲಭದ ವಿಧಾನವೇನು?
ಮೊದಲಿಗೆ ಕರ್ಬೂಜದ ಹಣ್ಣನ್ನು ಚೆನ್ನಾಗಿ ತೊಳೆದು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ ಅಥವಾ ಚಮಚದಿಂದ ತಿರುಗಳನ್ನು ತೆಗೆದು ಒಂದು ಮಿಕಸಿ ಜಾರ್ಗೆ ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು. ಇದಕ್ಕೆ ನೀರು ಹಾಕದೆ ರುಬ್ಬಬೇಕು. ಈಗ ಒಂದು ಗ್ಲಾಸ್ಗೆ ತಂಪಿನ ಕಾಳು ಹಾಕಿ ನೀರು ಹಾಕಿ ನೆನೆಯಲು ಬಿಡಬೇಕು.
ಈಗ ಒಂದು ಬೌಲ್ಗೆ 1 ಸ್ಪೂನ್ ಕಸ್ಟಡ್ ಪೌಡರ್ ಹಾಕಿಟ್ಟುಕೊಳ್ಳಿ. ಇದಕ್ಕೆ ಸ್ವಲ್ಪ ತಣ್ಣೀರು ಹಾಕಿ ಗಂಟುಗಳು ಇಲ್ಲದಂತೆ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಇದಕ್ಕೆ ರುಬ್ಬಿಕೊಂಡಿದ್ದ ಹಣ್ಣಿನ ಜ್ಯೂಸ್ ಇದಕ್ಕೆ ಹಾಕಿ. ಈಗ ಒಂದು ಬಾಣಲೆ ತೆಗೆದುಕೊಂಡು ಅದಕ್ಕೆ ಅರ್ಧ ಕಪ್ ನೀರು ಹಾಕಿ ಬಳಿಕ 2 ಕಪ್ ಹಾಲನ್ನು ಸಹ ಹಾಕಿಕೊಳ್ಳಿ. ಇದನ್ನು ಮಿಕ್ಸ್ ಮಾಡಿಕೊಂಡ ಬಳಿಕ ಅಳತೆಗೆ ಅಥವಾ ರುಚಿಗೆ ಅನುಗುಣವಾಗಿ ಸಕ್ಕರೆ ಹಾಕಿಕೊಳ್ಳಿ. ಸಕ್ಕರೆ ಬೇಡ ಎನಿಸಿದರೆ ಬೆಲ್ಲದ ಪುಡಿಯನ್ನು ಸಹ ಹಾಕಿ ಕರಗಿಸಿಕೊಳ್ಳಿ.
ಈಗ ಇದಕ್ಕೆ ಕಸ್ಟಡ್ ಪುಡಿ ಮಿಶ್ರಣವನ್ನು ಸಹ ಹಾಕಿ ಒಲೆ ಆನ್ ಮಾಡಿಕೊಂಡು ತಿರುಗಿಸುತ್ತಾ ಇರಬೇಕು. ಸಣ್ಣದಾಗಿ ಕುದಿಬರಲು ಆರಂಭಿಸಿದಾಗ ಇದಕ್ಕೆ ರುಬ್ಬಿಕೊಂಡಿದ್ದ ಹಣ್ಣಿನ ಜ್ಯೂಸ್ ಸಹ ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡುತ್ತಾ ಇರಿ. ಹಾಗೆ ಒಂದು ಕುದಿಬರಲು ಬಿಡಬೇಕು. 2 ನಿಮಿಷ ಬಿಟ್ಟು ಒಲೆ ಮೇಲಿಂದ ಇಳಿಸಿಕೊಂಡು ತಣ್ಣಗಾಗಲು ಬಿಡಿ.
ಅನಂತರ ಗ್ಲಾಸ್ಗಳಿಗೆ ಈ ಜ್ಯೂಸ್ ಹಾಕಿಕೊಂಡು ಬಳಿಕ ನೆನೆಸಿಟ್ಟ ತಂಪಿನ ಕಾಳನ್ನು ಇದಕ್ಕೆ ಹಾಕಿಕೊಂಡು ಸವಿಯಲು ನೀಡಬಹುದು. ಇಷ್ಟಾದರೆ ಕರ್ಬೂಜ ಹಣ್ಣಿನ ಮಿಲ್ಕ್ ಶೇಕ್ ಸಿದ್ದವಾಗುತ್ತೆ. ನೀವು ಸಹ ಮನೆಯಲ್ಲಿ ಇದನ್ನು ಮಾಡಿ ಸವಿದು ನೋಡಿ.



Click it and Unblock the Notifications