Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಬೇಸಿಗೆಯಲ್ಲಿ ನಿಶಕ್ತಿ ದೂರಾಗಿಸಲಿದೆ ಈ ಮಿಲ್ಕ್ ಶೇಕ್: ಮಾಡೋದು ತುಂಬಾನೆ ಸುಲಭ!
ಬೇಸಿಗೆಯ ಆರಂಭದಲ್ಲಿಯೇ ಬಿಸಿಲು ಹೆಚ್ಚು ಕಾಡತೊಡಗಿದೆ. ಉರಿ ಬಿಸಿಲಿನ ತಾಪಕ್ಕೆ ಬೇಸಿಗೆಯ ಆರಂಭದಲ್ಲೇ ಮನೆಯಿಂದ ಹೊರಬರುವುದು ಕಷ್ಟವಾಗುತ್ತಿದೆ. ಅದ್ರಲ್ಲೂ ಈ ಬಾರಿ ಬೇಸಿಗೆಯ ತಾಪ ತುಸು ಹೆಚ್ಚಾಗಿ ಕಾಡಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಬೇಸಿಗೆಯ ಸಮಯದಲ್ಲಿ ನಿಮ್ಮ ದೇಹದ ಉಷ್ಣಾಂಶವನ್ನು ಕಾಪಾಡಿಕೊಳ್ಳುವುದು ಉತ್ತಮ. ದೇಹ ತಂಪಾಗಿದ್ದಷ್ಟು ಆರೋಗ್ಯ ಚೆನ್ನಾಗಿರಲಿದೆ. ಅಧಿಕ ಉಷ್ಣದ ಕಾರಣದಿಂದ ಹಲವು ರೀತಿಯ ಸಮಸ್ಯೆಗಳ ಎದುರಿಸಬಹುದು. ಆದ್ರೆ ನಾವಿಂದು ದೇಹಕ್ಕೆ ಉತ್ತಮವಾಗುವ ಜ್ಯೂಸ್ ಕುರಿತು ತಿಳಿದುಕೊಳ್ಳೋಣ.
ಅದ್ರಲ್ಲೂ ಬೇಸಿಗೆಯಲ್ಲಿ ನಿಮಗೆ ಹೆಚ್ಚಾಗಿ ಕಾಡುವ ನಿಶಕ್ತಿಯು ಕೆಲಸ ಕಾರ್ಯಕ್ಕೆ ಅಡ್ಡಿ ಮಾಡುತ್ತದೆ. ಹೆಚ್ಚು ಸಮಯ ಕೆಲಸ ಮಾಡಲಾಗದೆ ನಿಶಕ್ತಿ ಸಮಸ್ಯೆಯಿಂದ ಮನೆಯಲ್ಲಿ ಉಳಿಯಬೇಕಾಗುತ್ತದೆ, ಹಾಗೆ ವಿಶ್ರಾಂತಿಗೆ ಮೊರೆಹೋಗುತ್ತೀರಿ. ಈ ಬೇಸಿಗೆಯಲ್ಲಿ ನಿಶಕ್ತಿ ಕಾಡದೆ ಇರಲು ನೀವು ಈ ಸುಲಭದ ಜ್ಯೂಸ್ ಅನ್ನು ಮನೆಯಲ್ಲೇ ಮಾಡಿ ಸವಿದು ನೋಡಿ.

ಹೌದು ಈ ಕರ್ಜೂಜ ಹಣ್ಣಿನ ಮಿಲ್ಕ್ ಶೇಕ್ ಮಾಡಿ ಸವಿದರೆ ಈ ಎಲ್ಲಾ ಸಮಸ್ಯೆಗಳಿಂದ ನಿಮಗೆ ಮುಕ್ತಿ ಸಿಗಲಿದೆ. ಅದ್ರಲ್ಲೂ ನಿಶಕ್ತಿಯಿಂದ ನಿಮಗೆ ಸಮಸ್ಯೆಗಳು ಎದುರಾಗುತ್ತಿದ್ದರೆ ಈ ಜ್ಯೂಸ್ ಮಾಡಿ ಸವಿದು ಜೋಡಿ. ಅದ್ರಲ್ಲೂ ಮಿಲ್ಕ್ ಶೇಕ್ ಮಾಡಿದ್ರೆ ದೇಹಕ್ಕೆ ಉತ್ತಮ ಶಕ್ತಿ ಸಿಗಲಿದೆ, ದಿನವಿಡಿ ನೀವು ಚಟುವಟಿಕೆಯಿಂದ ಕೆಲಸಗಳಲ್ಲಿ ಭಾಗಿಯಾಗಬಹುದು.
ಹಾಗಾದ್ರೆ ಈ ಕರ್ಬೂಜ ಮಿಲ್ಕ್ ಶೇಕ್ ಮಾಡುವುದು ಹೇಗೆ? ಮಾಡು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ಸುಲಭದ ವಿಧಾನವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಕರ್ಬೂಜ ಮಿಲ್ಕ್ ಶೇಕ್ ಮಾಡಲು ಬೇಕಾಗುವ ವಸ್ತುಗಳು
- ಕರ್ಬೂಜ ಹಣ್ಣು
- ಸಬ್ಸಿಗೆ ಕಾಳು
- ಸಾಬುದಾನಿ
- ಸಕ್ಕರೆ ಅಥವಾ ಬೆಲ್ಲ
- ಉಪ್ಪು
- ಕಾರ್ನ್ ಫ್ಲೋರ್
- ಹಾಲು
ಕರ್ಬೂಜ ಮಿಲ್ಕ್ ಶೇಕ್ ಮಾಡುವ ವಿಧಾನವೇನು?
ಮೊದಲಿಗೆ ಕರ್ಬೂಜ ಹಣ್ಣನ್ನು ಸಿಪ್ಪೆ ತೆಗೆದು ಕತ್ತರಿಸಿಕೊಂಡು ಒಳಗಿನ ಬೀಜ ತೆಗೆದು ಹೆಚ್ಚಿ ಇಟ್ಟುಕೊಳ್ಳಿ. ಈಗ ಕತ್ತರಿಸಿದ ಈ ಹಣ್ಣನ್ನು ಮಿಕ್ಸಿ ಜಾರ್‌ಗೆ ಹಾಕಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಬೇಕು. ಇದಕ್ಕೆ ನೀರು, ಸಕ್ಕರೆ ಏನನ್ನು ಹಾಕದೆಯೇ ರುಬ್ಬಿಕೊಂಡು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಬೌಲ್‌ಗೆ ತಂಪಿನ ಕಾಳು ಅಥವಾ ಸಬ್ಸಿಗೆ ಕಾಳು ಹಾಕಿ ಅದಕ್ಕೆ ನೀರು ಹಾಕಿ ಇಟ್ಟುಕೊಳ್ಳಿ. ಇದು 10ರಿಂದ 15 ನಿಮಿಷ ನೆನೆಯಬೇಕು.
ಈಗ ಒಲೆ ಮೇಲೆ ಪಾತ್ರೆ ಇಟ್ಟು ಅದಕ್ಕೆ ನೀರು ಹಾಕಿ ಹಾಕಿ ಕುದಿಬರಲು ಬಿಡಿ. ಈ ನೀರು ಕುದಿಬರುವಾಗ ಇದಕ್ಕೆ ಸಾಬುದಾನಿ ಹಾಕಿಕೊಳ್ಳಿ. ಸಣ್ಣ ಪುಡಿಯಾದ ಸಾಬುದಾನಿ ಅಥವಾ ಸಾಮಾನ್ಯ ಗಾತ್ರದ ಸಾಬುದಾನಿಯನ್ನು ಸಹ ಬಳಸಬಹುದು. ಇದನ್ನು ಹಾಕಿ 2ರಿಂದ 3 ನಿಮಿಷ ಬೇಯಿಸಿಕೊಂಡರೆ ಸಾಕು. ನಂತರ ತೆಗೆದು ಬದಿಗಿಟ್ಟುಕೊಳ್ಳಿ.
ಈಗ ಮತ್ತೆ ಅರ್ಧ ಲೀಟರ್ ಹಾಲನ್ನು ಒಂದು ಪಾತ್ರೆಗೆ ಹಾಕಿ ಒಲೆ ಮೇಲೆ ಇಟ್ಟು ಬಿಸಿಯಾಗಲು ಬಿಡಿ. ಹಾಲು ಬಿಸಿಯಾಗಲು ಆರಂಭಿಸಿದಾಗ 1 ಸ್ಪೂನ್ ಕಸ್ಟಡ್ ಪುಡಿ ಅಥವಾ ಕಾರ್ನ್ ಫ್ಲೋರ್ ಅನ್ನು ಒಂದು ಬೌಲ್‌ಗೆ ಹಾಕಿ ನೀರು ಹಾಕಿ ಕರಡಿಕೊಂಡು ಈ ಪಾತ್ರೆಯಲ್ಲಿನ ಹಾಲಿಗೆ ಹಾಕಿಕೊಳ್ಳಬೇಕು. ನಂತರ ಇದಕ್ಕೆ ಸಕ್ಕರೆ ಅಥವಾ ರುಚಿಗೆ ತಕ್ಕಷ್ಟು ಬೆಲ್ಲ ಸಹ ಹಾಕಿಕೊಂಡು ತಿರುಗಿಸಿಕೊಳ್ಳುತ್ತಾ ಇರಿ.
ಒಲೆ ಆಫ್ ಮಾಡಿ ತಣ್ಣಗಾಗಲು ಬಿಡಿ. ಈಗ ಈ ಹಾಲನ್ನು ಕರ್ಬೂಜ ಜ್ಯೂಸ್‌ಗೆ ಸೇರಿಸಿಕೊಂಡು ಕುದಿಸಿಕೊಂಡಿದ್ದ ಸಾಬುದಾನಿಯನ್ನು ಸಹ ಸೇರಿಸಿ, ನೆನೆಸಿಟ್ಟ ತಂಪಿನ ಕಾಳನ್ನು ಸಹ ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿ. ಇದಕ್ಕೆ ಸಣ್ಣಗೆ ಕತ್ತರಿಸಿಕೊಂಡ ಯಾವುದಾದರು ಡ್ರೈ ಫ್ರೂಟ್ಸ್ ಅನ್ನು ಸಹ ಹಾಕಿಕೊಳ್ಳಬಹುದು. ನಂತರ ಇದನ್ನು ತಣ್ಣಗಾಗಲು ಫ್ರಿಡ್ಜ್‌ನಲ್ಲಿ ಇಟ್ಟುಕೊಂಡರೆ ನಿಮ್ಮ ಮುಂದೆ ರುಚಿ ರುಚಿಯಾದ ಈ ಕರ್ಬೂಜ ಮಿಲ್ಕ್ ಶೇಕ್ ಸಿದ್ದವಾಗುತ್ತೆ.



Click it and Unblock the Notifications
