Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಸಂಜೆ ವೇಳೆ ಸವಿಯಲು ಮಶ್ರೂಮ್ ಪಕೋಡ ಮಾಡಿ! 5 ನಿಮಿಷವೂ ಬೇಕಾಗಿಲ್ಲ!
ನೀವು ಸಂಜೆ ಸಮಯದಲ್ಲಿ ಸ್ನ್ಯಾಕ್ಸ್ ಸವಿಯುವಂತಹ ಅಭ್ಯಾಸ ಇಟ್ಟುಕೊಂಡಿದ್ದರೆ ಹಲವು ರೀತಿಯ ತಿಂಡಿಗಳ ಸವಿಯಲು ಇಷ್ಟಪಡುತ್ತೀರಿ. ಅದ್ರಲ್ಲೂ ಬಹಳ ರುಚಿ ನೀಡುವಂತಹ ಪಾನಿಪೂರಿ, ಗೋಬಿ ಮಂಚೂರಿಯನ್, ಬಜ್ಜಿ, ವಡಾಪಾವ್, ನೂಡಲ್ಸ್ ಹೀಗೆ ಹತ್ತಾರು ತಿಂಡಿಗಳನ್ನ ಸವಿಯುವ ಬಯಕೆ ಹೊಂದಿರುತ್ತೀರಿ. ಆದ್ರೆ ಹೊರಗೆ ಅಂಗಡಿಗಳಲ್ಲಿ ಸಿಗುವ ಈ ತಿಂಡಿಗಳಿಗಿಂತ ಸ್ವಲ್ಪ ಭಿನ್ನವಾಗಿ ಮನೆಯಲ್ಲಿ ಮಾಡಿ ಸವಿಯುವ ಆಲೋಚನೆ ನಿಮ್ಮದಾಗಿದ್ದರೆ ನಾವಿಂದು ಸುಲಭದ ಸ್ನ್ಯಾಕ್ಸ್ ಕುರಿತು ಹೇಳಲಿದ್ದೇವೆ.
ಹಾಗೆ ಮನೆಯಲ್ಲಿಯೇ ಮಾಡುವ ಹಲವು ಖಾದ್ಯಗಳ ಪೈಕಿ ನಾವಿಂದು ಮಶ್ರೂಮ್ನಿಂದ ಮಾಡುವ ಪಕೋಡ ಕುರಿತಾಗಿ ತಿಳಿಯೋಣ. ಬಜ್ಜಿ, ಬೋಂಡಾ, ಪಕೋಡ ಅಂದ್ರೆ ಹಲವರಿಗೆ ಬಾಯಲ್ಲಿ ನೀರು ಬರುವುದು ಸಹಜ. ರಸ್ತೆ ಬದಿಯ ಅಂಗಡಿಯಲ್ಲಿ ಪಕೋಡ ಹಾಗೂ ಚಟ್ನಿ ಸವಿಯಲು ಬಹುತೇಕರು ಇಷ್ಟಪಡುತ್ತಾರೆ. ಈ ಸ್ನ್ಯಾಕ್ಸ್ ಅನ್ನು ಮನೆಯಲ್ಲಿ ಮಾಡುವುದು ಇನ್ನು ಸುಲಭ.

ಮಶ್ರೂಮ್ನಿಂದ ಮಾಡುವ ಹಲವು ಖಾದ್ಯಗಳಲ್ಲಿ ಈ ಪಕೋಡ ಸಹ ಒಂದು. ಮಶ್ರೂಮ್ ಪಕೋಡ ಸವಿಯಲು ಗರಿ ಗರಿಯಾಗಿ ರುಚಿಯಾದ ತಿಂಡಿ ಆಗಿರಲಿದೆ. ಮನೆಯಲ್ಲಿ ಎಲ್ಲರಿಗೂ ಇದು ಇಷ್ಟವಾಗುತ್ತೆ. ಹಾಗೆ ಮನೆಯಲ್ಲಿ ಸುಲಭವಾಗಿ ಕಡಿಮೆ ವಸ್ತುಗಳ ಬಳಸಿ ಕಡಿಮೆ ಸಮಯದಲ್ಲಿ ಇದನ್ನು ಮಾಡಿ ಮುಗಿಸಬಹುದು. ಹಾಗಾದ್ರೆ ಈ ಮಶ್ರೂಮ್ ಪಕೋಡ ಮಾಡುವುದು ಹೇಗೆ? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಮಶ್ರೂಮ್ ಪಕೋಡ ಮಾಡಲು ಬೇಕಾಗುವ ವಸ್ತುಗಳು
- ಮಶ್ರೂಮ್
- ಕಡಲೆ ಹಿಟ್ಟು
- ಅಕ್ಕಿ ಹಿಟ್ಟು - 2 ಟೀಸ್ಪೂನ್
- ಖಾರದ ಪುಡಿ - 1 ಟೀಸ್ಪೂನ್
- ಅರಿಶಿನ ಪುಡಿ
- ಗರಂ ಮಸಾಲ - 1/2 ಟೀಸ್ಪೂನ್
- ರುಚಿಗೆ ತಕ್ಕಷ್ಟು ಉಪ್ಪು
- ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಟೀಸ್ಪೂನ್
- ಸೋಡಾ ಪುಡಿ
- ಎಣ್ಣೆ
- ಉಪ್ಪು
ಮಶ್ರೂಮ್ ಪಕೋಡ ಮಾಡುವ ವಿಧಾನವೇನು?
ಮೊದಲು ಒಂದು ಬೌಲ್ಗೆ 2ರಿಂದ 3 ಕಪ್ ಕಡಲೆ ಹಿಟ್ಟು ಹಾಕಿಕೊಂಡು ಇದಕ್ಕೆ ಸ್ವಲ್ಪವೆ ಸ್ವಲ್ಪ ಅಕ್ಕಿ ಇಟ್ಟು ಹಾಕಿ, ಹಾಗೆ ಇದಕ್ಕೆ ಜೀರಿಗೆ, ಗರಂ ಮಸಾಲ, ಖಾರದ ಪುಡಿ, ಉಪ್ಪು, ಅರಶಿಣ, ಮೆಣಸಿನ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಇಂಗು ಹಾಕಿಕೊಂಡು ಡ್ರೈ ಮಿಕ್ಸ್ ಮಾಡಿಕೊಳ್ಳಿ. ಅನಂತರ ಸ್ವಲ್ಪ ಸ್ವಲ್ಪ ನೀರು ಹಾಕುತ್ತಾ ಮಿಶ್ರಣ ಮಾಡಿ.
ಈ ಹಿಟ್ಟು ಗಟ್ಟಿಯಾಗಿರಬೇಕು. ಬಜ್ಜಿ ಬೋಂಡಾಗೆ ಮಾಡುವ ಹಿಟ್ಟಿನಂತೆ ಹದಕ್ಕೆ ಇದು ಬರಬೇಕು. ಗಟ್ಟಿಯಾಗಿರುವಂತೆ ನೀರು ಹಾಕಿಕೊಳ್ಳಿ. ಈಗ ಮಶ್ರೂಮ್ ಅನ್ನು ಅದರ ಸಿಪ್ಪೆಯನ್ನು ಬಿಡಿಸಿ, ತೊಳೆದು ಚಿಕ್ಕದಾಗಿ ಕತ್ತರಿಸಿ ಇಟ್ಟುಕೊಳ್ಳಿ. ದೊಡ್ಡ ಗಾತ್ರದ ಮಶ್ರೂಮ್ ಆಗಿದ್ದರೆ ಮಾತ್ರ ಕತ್ತರಿಸಿಕೊಳ್ಳಿ. ಚಿಕ್ಕದಾಗಿದ್ದರೆ ಅವಶ್ಯಕತೆ ಇಲ್ಲ.
ಈಗ ಕತ್ತರಿಸಿದ ಮಶ್ರೂಮ್ ಅನ್ನು ಈ ಹಿಟ್ಟಿನಲ್ಲಿ ಹಾಕಿ ಮಿಕ್ಸ್ ಮಾಡಿ. ಹಿಟ್ಟು ಚೆನ್ನಾಗಿ ಹಿಡಿಯುವಂತೆ ಮಿಶ್ರಣ ಮಾಡಿಕೊಳ್ಳಬೇಕು. ಹಾಗೆ ನಿಧಾನವಾಗಿ ಮಿಕ್ಸ್ ಮಾಡಿ ಮಶ್ರೂಮ್ ಒಡೆಯಬಾರದು. ಹಾಗೆ ಮಿಕ್ಸ್ ಮಾಡಿದ ನಂತರ 2 ನಿಮಿಷ ಬಿಡಿ. ಈ ಸಮಯದಲ್ಲಿ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಲು ಬಿಡಿ.
ಈಗ ಬಜ್ಜಿ ಕರಿಯುವಂತೆ ಮಶ್ರೂಮ್ವನ್ನು ಎಣ್ಣೆ ಬಾಣಲೆಯಲ್ಲಿ ಹಾಕಿ ನಿಧಾನವಾಗಿ ಕರಿದುಕೊಳ್ಳಬೇಕು. ಇಷ್ಟಾದರೆ ನಿಮ್ಮ ಮುಂದೆ ಸವಿಯಲು ರುಚಿ ರುಚಿಯಾದ ಈ ಮಶ್ರೂಮ್ ಪಕೋಡ ಸಿದ್ದವಾಗುತ್ತೆ. ನೀವು ಸಹ ಮನೆಯಲ್ಲಿ ಇದನ್ನೊಮ್ಮೆ ಮಾಡಿ ನೋಡಿ. ಬಹಳ ರುಚಿಯಾಗಿ ಹಾಗೆ ಗರಿ ಗರಿಯಾಗಿ ಇರಲಿದೆ.



Click it and Unblock the Notifications
