Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಬಾಯಲ್ಲಿ ನೀರು ತರಿಸುವ ಮಶ್ರೂಮ್ ಮಂಚೂರಿಯನ್ ಮಾಡಿ..! ಹೋಟೆಲ್ ರುಚಿ ರೆಸಿಪಿ!
ವೆಜ್ ಪ್ರಿಯರು ಹೋಟೆಲ್, ರೆಸ್ಟೋರೆಂಟ್‌ಗೆ ಹೋದಾಗ ಅವರು ಮೆನು ಕಾರ್ಡ್‌ನಲ್ಲಿ ಹೆಚ್ಚಾಗಿ ಹುಡುಕಾಡುವುದು ಮಶ್ರೂಮ್‌ನಿಂದ ಮಾಡಲಾಗುವ ಖಾದ್ಯಗಳ ಕುರಿತು. ಹಾಗೆ ಮಶ್ರೂಮ್ ಮೂಲಕ ಮಾಡುವ ಹತ್ತು ಹಲವು ಖಾದ್ಯಗಳಲ್ಲಿ ಮಶ್ರೂಮ್ ಖಾದ್ಯಗಳನ್ನು ಇಷ್ಟಪಡುವವರನ್ನು ನೋಡಬಹುದು. ಹಲವರು ಮಶ್ರೂಮ್ ಬಿರಿಯಾನಿ, ಮಶ್ರೂಮ್ ಕರಿ, ಮಶ್ರೂಮ್ ಫ್ರೈ, ಹೀಗೆ ಹಲವು ಖಾದ್ಯಗಳನ್ನು ಸವಿಯಲು ಯಾವಾಗಲು ಇಷ್ಟಪಡುತ್ತಾರೆ.
ಹಾಗೆ ನಾವಿಂದು ಮಶ್ರೂಮ್‌ನಿಂದ ಮಾಡುವಂತಹ ರುಚಿ ರುಚಿಯ ಮಶ್ರೂಮ್ ಮಂಚೂರಿಯನ್ ಅಂದರೆ ಎಲ್ಲರಿಗೂ ಇಷ್ಟ. ಬಹಳ ರುಚಿ ನೀಡುವ ಜೊತೆಗೆ ಅದರ ಸುವಾಸನೆಯೇ ನಿಮ್ಮ ಬಾಯಲ್ಲಿ ನೀರು ತರಿಸಲಿದೆ. ಹಾಗೆ ಇದರ ರುಚಿ ಸವಿಯದೇ ಇರುವವರಿಲ್ಲ. ಎಲ್ಲಾ ವಯೋಮಾನದವರಿಗೂ ಇದು ಇಷ್ಟವಾಗುತ್ತೆ. ಹಾಗಾದ್ರೆ ನಾವಿಂದು ಮನೆಯಲ್ಲೇ ಈ ಮಶ್ರೂಮ್ ಮಂಚೂರಿಯನ್ ಮಾಡಿ ಸವಿಯುವ ಕುರಿತು ತಿಳಿದುಕೊಳ್ಳೋಣ.

ಈ ಮಶ್ರೂಮ್ ಮಂಚೂರಿಯನ್ ಮಾಡುವುದು ಬಹಳ ಸುಲಭ. ಹಾಗೆ ರೆಸ್ಟೋರೆಂಟ್‌ಗಳಲ್ಲಿ ಮಾಡಿದ ರುಚಿಯಲ್ಲೇ ಮನೆಯಲ್ಲಿ ಸಹ ಮಾಡಿ ಸವಿಯಬಹುದು. ಹಾಗಾದ್ರೆ ನಾವು ಕೂಡ ಮನೆಯಲ್ಲಿ ಮಾಡಿ ಸವಿಯುವುದನ್ನು ನೋಡೋಣ. ಮಶ್ರೂಮ್ ಮಂಚೂರಿಯನ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಶ್ರೂಮ್ ಮಂಚೂರಿಯನ್ ಮಾಡಲು ಯಾವಲ್ಲಾ ಪದಾರ್ಥಗಳು ಬೇಕು?
- ಮಶ್ರೂಮ್
- ಕ್ಯಾಪ್ಸಿಕಂ
- ಕೊತ್ತಂಬರಿ ಸೊಪ್ಪು
- ಮೈದಾ ಹಿಟ್ಟು
- ಕಾರ್ನ್ ಫ್ಲೋರ್
- ಈರುಳ್ಳಿ
- ಬೆಳ್ಳುಳ್ಳಿ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಗ್ರೀನ್ ಜಿಲ್ಲಿ ಸಾಸ್
- ರೆಡ್ ಚಿಲ್ಲಿ ಸಾಸ್
- ಸೋಯಾ ಸಾಸ್
- ಟೊಮೆಟೋ ಸಾಸ್
- ಉಪ್ಪು
- ಎಣ್ಣೆ
- ವಿನೆಗರ್
- ಕೊತ್ತಂಬರಿ ಸೊಪ್ಪು
ಮಶ್ರೂಮ್ ಮಂಚೂರಿಯನ್ ಮಾಡುವ ವಿಧಾನವೇನು?
ಮೊದಲು ಒಂದು ದೊಡ್ಡ ಪಾತ್ರೆ ತೆಗೆದುಕೊಂಡು 5 ಸ್ಪೂನ್ ಮೈದಾ ಹಿಟ್ಟು ಹಾಗೆ 10 ಸ್ಪೂನ್ ಕಾರ್ನ್ ಫ್ಲೋರ್ ಹಾಕಿ, ಹಾಗೆ ಖಾರದ ಪುಡಿ, ಕಾಳು ಮೆಣಸಿನ ಪುಡಿ, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಡ್ರೈ ಮಿಕ್ಸ್ ಮಾಡಿ. ನಂತರ ಇದಕ್ಕೆ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಗಂಟುಗಳು ಇಲ್ಲದಂತೆ ಮಿಕ್ಸ್ ಮಾಡಿಕೊಳ್ಳಿ. ಇದು ಬೋಂಡಾ ಹಿಟ್ಟಿನಿಂತೆ ಹದಕ್ಕೆ ಬರಬೇಕು.
ಈಗ ಮಶ್ರೂಮ್ ಚೆನ್ನಾಗಿ ತೊಳೆದುಕೊಂಡು ಅದನ್ನು ಕತ್ತರಿಸಿಕೊಳ್ಳಿ, ಒಂದು
ಮಶ್ರೂಮ್‌ನಲ್ಲಿ ಎರಡರಿಂದ ಮೂರು ಭಾಗ ಮಾಡಿಕೊಳ್ಳಿ, ನಂತರ ಚೆನ್ನಾಗಿ ನೀರು ಡ್ರೈ
ಆಗುವವರೆಗೂ ಇಡಬೇಕು. ನಂತರ ಈ ಮಶ್ರೂಮ್ ಅನ್ನು ಮೊದಲು ಮಾಡಿಕೊಂಡಿರುವ
ಹಿಟ್ಟಿನೊಳಗೆ ಹಾಕಿ ಚೆನ್ನಾಗಿ ಹಿಟ್ಟು ಹಿಡಿಯುವಂತೆ ಮಿಕ್ಸ್ ಮಾಡಿಕೊಳ್ಳಿ.
ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿಯಾಗಲು ಬಿಡಿ.
ನಂತರ ಈ ಮಶ್ರೂಮ್ ಅನ್ನು ಈ ಎಣ್ಣೆಯಲ್ಲಿ ಹಾಕಿ ಕರಿದುಕೊಳ್ಳಿ. ಸ್ವಲ್ಪ
ಕ್ರಿಸ್ಪಿಯಾಗಿ ಬರುವಂತೆ ಕರಿದುಕೊಳ್ಳಿ. ನಂತರ ಮಶ್ರೂಮ್ ತೆಗೆದು ಜರಡಿಯಲ್ಲಿ
ಹಾಕಿಟ್ಟುಕೊಳ್ಳಿ, ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟುಕೊಂಡು ಅದಕ್ಕೆ 2 ಸ್ಪೂನ್
ಎಣ್ಣೆ ಹಾಕಿ ಬಿಸಿಯಾಗಲು ಬಿಡಿ.
ನಂತರ ಈ ಎಣ್ಣೆಗೆ ಹಸಿ ಮೆಣಸು, ಬೆಳ್ಳುಳ್ಳಿಯನ್ನು ಸಣ್ಣದಾಗಿ ಕತ್ತರಿಸಿಕೊಂಡು ಹಾಕಿಕೊಳ್ಳಿ. ಹಾಗೆ ನಂತರ ಸಣ್ಣದಾಗಿ ಕತ್ತರಿಸಿದ ಕ್ಯಾಪ್ಸಿಕಂ ಹಾಗೆ ಈರುಳ್ಳಿ ಕೂಡ ಹಾಕಿ, ನಂತರ ಗ್ರೀನ್ ಜಿಲ್ಲಿ ಸಾಸ್, ರೆಡ್ ಚಿಲ್ಲಿ ಸಾಸ್, ಸೋಯಾ ಸಾಸ್, ಟೊಮೆಟೋ ಸಾಸ್ ಹಾಕಿಕೊಳ್ಳಿ. ವಿನೆಗರ್ ಕೂಡ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. 1 ನಿಮಿಷ ಮಿಕ್ಸ್ ಮಾಡಿದ ಬಳಿಕ ಒಂದು ಸ್ಪೂನ್ ಕಾರ್ನ್ ಫ್ಲೋರ್‌ಗೆ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಇದಕ್ಕೆ ಹಾಕಿಕೊಳ್ಳಿ.
1 ನಿಮಿಷ ಫ್ರೈ ಮಾಡಿದ ಬಳಿಕ ಇದಕ್ಕೆ ಫ್ರೈ ಮಾಡಿದ ಮಶ್ರೂಮ್ ಅನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಕೊನೆಯದಾಗಿ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ಮಶ್ರೂಮ್ ಮಂಚೂರಿಯನ್ ರೆಡಿಯಾಗಲಿದೆ.



Click it and Unblock the Notifications