Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಮಶ್ರೂಮ್ ಗ್ರೇವಿ ಈ ರೀತಿ ಮಾಡಿ ಚಪಾತಿ ಜೊತೆ ಸವಿದರೆ ಅದರ ರುಚಿಗೆ ನೀವಾಗುವಿರಿ ಕ್ಲೀನ್ ಬೋಲ್ಡ್
Recipes
oi-Reena TK
Posted By: Reena TK
ರೆಸ್ಟೋರೆಂಟ್ಗಳಿಗೆ ಹೋದಾಗ ನೀವು ಬಿಳಿ ಬಣ್ಣದಲ್ಲಿ ಅಣಬೆ ಗ್ರೇವಿ ಅಥವಾ ಮಶ್ರೂಮ್ ಗ್ರೇವಿ ಟೇಸ್ಟ್ ಮಾಡಿದಾಗ ಇದರ ಹಿಂದೆ ಇರುವ ಸೀಕ್ರೆಟ್ ಏನಿರಬಹುದು? ನಮಗೆ ಇಷ್ಟೊಂದು ರುಚಿಯಾಗಿ ಮಾಡಲು ಸಾಧ್ಯನಾ ಎಂದು ಅಂದುಕೊಂಡಿದ್ದರೆ ನೀವು ಕೂಡ ಅಷ್ಟೇ ರುಚಿಕರವಾದ ಮಶ್ರೂಮ್ ಗ್ರೇವಿ ತುಂಬಾ ಸುಲಭದಲ್ಲಿ ಮಾಡಬಹುದು. ಬನ್ನಿ ಮಶ್ರೂಮ್ ಕಾಯಿ ಗ್ರೇವಿ ಮಾಡುವುದು ಹೇಗೆ ಎಂದು ನೋಡೋಣ:
ಬೇಕಾಗುವ ಸಾಮಗ್ರಿ
1 ಪ್ಯಾಕೆಟ್ ಅಣಬೆ
ಸ್ವಲ್ಪ ಕೊತ್ತಂಬರಿ ಸೊಪ್ಪು
ಪಲಾವ್ ಎಲೆ
ಸ್ವಲ್ಪ ಕರಿಬೇವು
1-2 ಈರುಳ್ಳಿ
ಒಂದು ಕಪ್ ತೆಂಗಿನ ತುರಿ
ಚಕ್ಕೆ, ಲವಂಗ
2-3 ಹಸಿ ಮೆಣಸು(ಖಾರ ಹೆಚ್ಚು ಬೇಕೆಂದರೆ ಇನ್ನೂ ಒಂದೆರಡು ಹಸಿ ಮೆಣಸು
ಸೇರಿಸಬಹುದು)
ಬೆಳ್ಳುಳ್ಳಿ ಎಸಳು 3-4 ಎಸಳು
2 ಚಮಚ ಹುರಿಗಡಲೆ
ಒಂದು ತುಂಡು ಹಸಿ ಶುಂಠಿ
ಒಂದು ನಿಂಬೆಹಣ್ಣು
ರುಚಿಗೆ ತಕ್ಕ ಉಪ್ಪು
2 ಚಮಚ ಎಣ್ಣೆ
ಮಾಡುವ ವಿಧಾನ
- ತೆಂಗಿನ ತುರಿ ಹಸಿ ಮೆಣಸು, ತೆಂಗಿನ ತುರಿ, ಹುರಿಗಡಲೆ, ಈರುಳ್ಳಿ, ಜೀರಿಗೆ, ಶುಂಠಿ ಹಾಕಿ ನುಣ್ಣನೆ ರುಬ್ಬಿ
- ಈಗ ಪ್ಯಾನ್ಗೆ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಚಕ್ಕೆ, ಲವಂಗ ಹಾಕಿ, ಪಲಾವ್ ಎಲೆ ಹಾಕಿ
- ಒಂದು ಏಲಕ್ಕಿ ಸೇರಿಸಿ, ಕರಿಬೇವು ಸೇರಿಸಿ
- ಈರುಳ್ಳಿ ಹಾಕಿ, ಈರುಳ್ಳಿ ಮೆತ್ತಗಾಗುವವರೆಗೆ ಫ್ರೈ ಮಾಡಿ
- ಈಗ ಅಣಬೆ ಹಾಕಿ ಫ್ರೈ ಮಾಡಿ
- ರುಚಿಗೆ ತಕ್ಕ ಉಪ್ಪು ಸೇರಿಸಿ
- ಈಗ ರುಬ್ಬಿದ ತೆಂಗಿನಕಾಯಿ ಪೇಸ್ಟ್ ಹಾಕಿ, ನಂತರ ನಿಮಗೆ ಬೇಕಾದ ಗ್ರೇವಿ ಹದಕ್ಕೆ ನೀರು ಸೇರಿಸಿ. ಗ್ರೇವಿ ಸ್ವಲ್ಪ ಗಟ್ಟಿಯಾಗಿರುತ್ತದೆ, ತುಂಬಾ ನೀರು ನೀರಾಗಿ ಇದ್ದರೆ ಚೆನ್ನಾಗಿರಲ್ಲ.
- ಮಿಶ್ರಣ ಚೆನ್ನಾಗಿ ಕುದಿ ಬರಲಿ
- ನಂತರ ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ
- ನಂತರ ಮತ್ತೆ 2 ನಿಮಿಷ ಕುದಿಸಿ
- ಬಳಿಕ ಸ್ಟೌವ್ ಆಫ್ ಮಾಡಿ ಅರ್ಧ ನಿಂಬೆರಸ ಹಿಂಡಿದರೆ ಮಶ್ರೂಮ್ ಕಾಯಿ ಗ್ರೇವಿ ರೆಡಿ
ಇದನ್ನು ನೀವು ಚಪಾತಿ ಅಥವಾ ಪರೋಟ ಜೊತೆ ಸವಿದು ನೋಡಿ ಸೂಪರ್ ಆಗಿರುತ್ತದೆ.
ಇತರ ಸಲಹೆ
- ಈ ಗ್ರೇವಿ ಮಾಡುವಾಗ ನೀವು ಸ್ವಲ್ಪ ಗೋಡಂಬಿ ಕೂಡ ಪೇಸ್ಟ್ ಮಾಡಿ ಬಳಸಬಹುದು
- ಟೊಮೆಟೊ, ಕ್ಯಾಪ್ಸಿಕಂ ತರಕಾರಿ ಕೂಡ ಸೇರಿಸಬಹುದು
- ಮಶ್ರೂಮ್ ಅಥವಾ ಅಣಬೆ ಯಾವುದಾದರೂ ಆಗುತ್ತೆ, ಬೆಳೆಸಿದ ಅಣಬೆಯಾದರೂ ಸರಿ ಇಲ್ಲ ಅಪರೂಪಕ್ಕೆ ಸಿಗುವ ನೈಸರ್ಗಿಕವಗಿ ಸಿಗುವ ಅಣಬೆಯಾದರೂ ಸರಿ ತುಂಬಾ ಚೆನ್ನಾಗಿರುತ್ತದೆ
- ಇನ್ನು ಅಣಬೆಯನ್ನು ತುಂಬಾ ಚಿಕ್ಕ ಪೀಸ್ ಮಾಡಬೇಡಿ, ಸ್ವಲ್ಪ ದೊಡ್ಡ ಪೀಸ್ ಇದ್ದರೆ ಇನ್ನೂ ಚೆನ್ನಾಗಿರುತ್ತದೆ
- ಅಣಬೆಯನ್ನು ಪ್ರತ್ಯೇಕವಾಗಿ ಫ್ರೈ ಮಾಡಿಟ್ಟು ನಂತರ ಗ್ರೇವಿ ಕುದಿಯುವಾಗ ಬೇಕಾದರೂ ಸೇರಿಸಬಹುದು.
- ಈ ಗ್ರೇವಿ ಒಮ್ಮೆ ಟ್ರೈ ಮಾಡಿದರೆ ನೆಕ್ಸ್ಟ್ ಚಪಾತಿ ಮಾಡುವಾಗ ಇದೇ ರೀತಿ ಮಾಡಿ ಕೊಡಿ ಎಂದು ಡಿಮ್ಯಾಂಡ್ ಬರುವುದಂತೂ ಗ್ಯಾರಂಟಿ.
Comments
[ of 5 - Users]



Click it and Unblock the Notifications

