Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಅದ್ಭುತವಾಗಿ ಮಾಡಿ ಮಶ್ರೂಮ್ 65..! ಎಷ್ಟೊಂದು ಸುಲಭ ಗೊತ್ತಾ?
ಮಶ್ರೂಮ್ ಬಳಸಿ ನೀವು ಎಷ್ಟೊಂದು ಖಾದ್ಯ ಮಾಡಿರುತ್ತೀರಿ, ಅದ್ರಲ್ಲೂ ಮಶ್ರೂಮ್ ಬಿರಿಯಾನಿ, ಮಶ್ರೂಮ್ ಗ್ರೇವಿಯಂತು ನಿಮ್ಮ ಬಾಯಲ್ಲಿ ನೀರು ತರಿಸುತ್ತದೆ. ಮಶ್ರೂಮ್ ನಮ್ಮ ದೇಹಕ್ಕೂ ಬಹಳ ಉತ್ತಮ. ನಮ್ಮ ದೇಹಕ್ಕೆ ಅಗತ್ಯ ಫೈಬರ್ ಹಾಗೂ ವಿಟಮಿನ್ಗಳು ಮಶ್ರೂಮ್ನಿಂದ ಸಿಗುತ್ತದೆ. ಚಳಿಗಾಲದಲ್ಲಿ ಅಣಬೆ ತಿನ್ನುವುದು ತುಂಬಾ ಒಳ್ಳೆಯದು. ಇದರಲ್ಲಿ ಪೊಟ್ಯಾಸಿಯಮ್, ತಾಮ್ರ, ವಿಟಮಿನ್ಗಳು, ಕಬ್ಬಿಣ, ಸೆಲೆನಿಯಮ್ ಸೇರಿ ಹಲವು ಅಂಶ ನಿಮ್ಮ ದೇಹಕ್ಕೆ ಸಿಗಲಿದೆ.
ಹಾಗೆ ಮಶ್ರೂಮ್ನಲ್ಲಿ ಹಲವು ಬಗೆಯ ಖಾದ್ಯ ಮಾಡಿ ಸವಿಯಬಹುದಾಗಿದೆ. ಹೀಗಾಗಿ ಮಶ್ರೂಮ್ ಅಂದಗ್ರೆ ಮಕ್ಕಳಿಂದ ಹಿಡಿದು ಹಿರಿಯರವೆಗೂ ಇಷ್ಟವಾಗುತ್ತೆ. ಆಧ್ರೆ ನೀವು ಎಂದಿಗೂ ಮಾಡಿದರ ಮಶ್ರೂಮ್ 65 ಖಾದ್ಯವನ್ನು ಮಾಡುವ ಕುರಿತು ನಾವು ತಿಳಿದುಕೊಳ್ಳೋಣ. ಚಿಕನ್ 65 ರುಚಿ ನೋಡಿರುವವರು ಈ ಮಶ್ರೂಮ್ 65 ಅದ್ಭುತ ರುಚಿ ನೀಡಲಿದೆ.

ಹಾಗಾದ್ರೆ ಈ ಮಶ್ರೂಮ್ 65 ಮಾಡೋದಾದ್ರು ಹೇಗೆ? ನೀವು ಊಟದ ಜೊತೆಗೆ ಯಾವುದಾದರು ಸೈಡ ಡಿಶ್ ಮಾಡುವ ಕುರಿತು ಆಲೋಚಿಸಿದ್ದರೆ ಈ ಮಶ್ರೂಮ್ 65 ಬೊಂಬಾಟ್ ರುಚಿ ನೀಡಲಿದೆ. ಹಾಗಾದ್ರೆ ಮಶ್ರೂಮ್ 65 ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಈ ಮಶ್ರೂಮ್ 65 ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಶ್ರೂಮ್ 65 ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಮಶ್ರೂಮ್ - 250 ಗ್ರಾಂ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಕರಿಬೇವು
- ನಿಂಬೆ
- ಅಕ್ಕಿ ಹಿಟ್ಟು
- ಮೈದಾ ಹಿಟ್ಟು
- ಕಾರ್ನ್ ಹಿಟ್ಟು
- ಕಲರ್ ಪುಡಿ (ಕೆಂಪು)
- ಖಾರದ ಪುಡಿ
- ಗರಂ ಮಸಾಲಾ ಪುಡಿ
- ಎಣ್ಣೆ
- ರುಚಿಗೆ ಉಪ್ಪು
ಮಶ್ರೂಮ್ 65 ಮಾಡುವುದು ಹೇಗೆ?
ಮೊದಲು ಮಶ್ರೂಮ್ ಅನ್ನು ಕ್ಲೀನ್ ಮಾಡಿಕೊಂಡು ನೀರಿನಲ್ಲಿ ಹಾಕಿ ತೊಳೆದು ರೆಡಿ ಮಾಡಿಟ್ಟುಕೊಳ್ಳಿ. ಈಗ ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಮೈದಾ ಹಿಟ್ಟು, ಅಕ್ಕಿ ಹಿಟ್ಟು, 1 ಸ್ಪೂನ್ ಕಾರ್ನ್ ಫ್ಲೋರ್, ಕೆಂಪು ಕಲರ್ ಪುಡಿ, ಉಪ್ಪು, ಗರಂ ಮಸಾಲೆ, ಖಾರದ ಪುಡಿ ಹಾಕಿಕೊಂಡು ಮೊದಲು ಡ್ರೈ ಮಿಕ್ಸ್ ಮಾಡಿಕೊಳ್ಳಿ.
ನಂತರ ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಮಿಕ್ಸ್ ಮಾಡಿ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಇದಕ್ಕೆ ಅರ್ಧ ನಿಂಬೆ ಹುಳಿ ಹಿಂಡಿಕೊಳ್ಳಿ. ಈ ಹಿಟ್ಟು ಸ್ವಲ್ಪ ಗಟ್ಟಿಯಾಗಿರಬೇಕು. ಮಶ್ರೂಮ್ಗೆ ಅಂಟಿಕೊಳ್ಳಬೇಕು. ಹಿಟ್ಟು ಗಟ್ಟಿಯಾಗಿ ಮಿಕ್ಸ್ ಮಾಡಿಕೊಂಡ ಬಳಿಕ ನೀರಿನಿಂದ ತೊಳೆದು ಹೆಚ್ಚಿರುವ ಮಶ್ರೂಮ್ ಅನ್ನು ಈ ಹಿಟ್ಟಿಗೆ ಹಾಕಿಕೊಳ್ಳಿ.
ಅನಂತರ ಮಶ್ರಮ್ಗೆ ಈ ಹಿಟ್ಟು ಹಿಡಿಯುವಂತೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಎಲ್ಲಾ ಮಶ್ರೂಮ್ಗೂ ಹಿಟ್ಟು ಹಿಡಿಯುವಂತೆ ಮಾಡಿ. ಹಾಗೆ ಇದನ್ನು 10 ನಿಮಿಷ ಹಾಗೆ ಬಿಡಬೇಕು. ಈಗ ಒಲೆ ಮೇಲೆ ಇಂದು ಬಾಣಲೆ ಇಟ್ಟು ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ಎಣ್ಣೆ ಬಿಸಿಯಾದ ಬಳಿಕ ಸ್ವಲ್ಪ ಸ್ವಲ್ಪವೇ ಮಶ್ರೂಮ್ ಅನ್ನು ಎಣ್ಣೆಗೆ ಬಿಡಿ. 2 ನಿಮಿಷ ತಿರುಗಿಸಿಕೊಳ್ಳಲು ಹೋಗಬೇಡಿ. ಒಟ್ಟು 5ರಿಂದ 6 ನಿಮಿಷ ಇದು ಎಣ್ಣೆಯಲ್ಲಿ ಕರಿಯಬೇಕು.
5 ನಿಮಿಷದ ಬಳಿಕ ಎಣ್ಣೆಯಿಂದ ತೆಗೆದು ಬೌಲ್ಗೆ ಹಾಕಿಟ್ಟು ಸಂಜೆ ಸ್ನ್ಯಾಕ್ಸ್ಗೆ ಅಥವಾ ಊಟದ ಜೊತೆಗೆ ಸವಿಯಲು ನೀಡಬಹುದು. ಒಮ್ಮೆ ನೀವು ರುಚಿ ನೋಡಿದ್ರೆ ಮತ್ತೆ ಮತ್ತೆ ಸವಿಯಲು ಮುಂದಾಗುತ್ತೀರಿ.



Click it and Unblock the Notifications
