Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ನಿಮ್ಮ ದೇಹ ಸಮತೋಲನದಲ್ಲಿಡುವ ಮೂಲಂಗಿ ಸಾಂಬಾರ್; ಈ ರೀತಿ ಮಾಡಿ ನೋಡಿ!
ನೀವು ಊಟದೊಂದಿಗೆ ತರಕಾರಿ ಸಾಂಬಾರ್ ಮಾಡಿಯೇ ಮಾಡುತ್ತೀರಿ. ತರಕಾರಿಗಳಲ್ಲಿ ಅತ್ಯಂತ ರುಚಿಕರವಾದ ಸಾಂಬಾರ್ ಮಾಡಬಹುದು. ಹಸಿರು ತರಕಾರಿಗಳು ನಮ್ಮ ಆರೋಗ್ಯಕ್ಕೆ ಬಹಳ ಉತ್ತಮ. ಅದ್ರಲ್ಲೂ ಈ ತರಕಾರಿಗಳಲ್ಲಿನ ನಾರಿನ ಅಂಶ ಸೇರಿದಂತೆ ಹಲವು ರೀತಿಯ ಪೋಷಕಾಂಶಗಳು ನಮ್ಮ ದೇಹಕ್ಕೆ ಮುಖ್ಯವಾಗುತ್ತವೆ.
ಇನ್ನು ಈ ಸಾಂಬಾರ್ನಲ್ಲಿ ಮೂಲಂಗಿ ಸಾಂಬಾರ್ ನಮ್ಮ ದೇಹಕ್ಕೆ ಮುಖ್ಯ ಅಂಶಗಳ ನೀಡಲಿದೆ. ಮೂಲಂಗಿ ಸಾಂಬಾರ್ ಅಂದ್ರೆ ಬಹುತೇಕರಿಗೆ ಇಷ್ಟವಾಗುತ್ತೆ. ಮೂಲಂಗಿಯಲ್ಲಿ ಹಲವು ರೀತಿ ಖಾದ್ಯ ಮಾಡಬಹುದಾದರೂ ಈ ಸಾಂಬಾರ್ ಮಾಡಿ ಸವಿಯೋಕೆ ಎಲ್ಲರಿಗೂ ಇಷ್ಟವಾಗುತ್ತೆ. ಮೂಲಂಗಿಯೂ ಉತ್ಕರ್ಷಣ ನಿರೋಧಕ ಗುಣಗಳನ್ನು ತನ್ನಲ್ಲಿಟ್ಟುಕೊಂಡಿದೆ.

ಮೂಲಂಗಿಯಲ್ಲಿನ ವಿಟಮಿನ್ ಸಿ, ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಫೈಬರ್ ನಿಮ್ಮ ದೇಹಕ್ಕೆ ಬಹಳ ಮುಖ್ಯ ಅಂಶಗಳಾಗಿವೆ. ಇದು ಅಧಿಕ ರಕ್ತದೊತ್ತಡ ನಿವಾರಿಸಲಿದೆ. ಹಾಗೆ ಮೂಲಂಗಿಯು ಮೂಲವ್ಯಾಧಿ ಸಮಸ್ಯೆಗೆ ಬಹಳ ಉಪಯುಕ್ತ ಅಂಶವಾಗಿದೆ. ಹಾಗೆ ಫೈಬರ್ನಿಂದ ತುಂಬಿರುವ ಈ ಮೂಲಂಗಿಯು ಜೀರ್ಣಕ್ರಿಯೆಗೆ ಬಹಳ ಸಹಕಾರಿಯಾಗಲಿದೆ.
ಇನ್ನು ಮೂಲಂಗಿಯ ಸಾಂಬಾರ್ ಅಂದ್ರೆ ಊಟದ ರುಚಿ ದುಪ್ಪಟ್ಟಾಗುತ್ತೆ. ನಾವಿಂದು ಸುಲಭವಾಗಿ ಮೂಲಂಗಿ ಸಾಂಬಾರ್ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಮೂಲಂಗಿ ಸಾಂಬಾರ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬ ಕುರಿತಾದ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ.
ಮೂಲಂಗಿ ಸಾಂಬಾರ್ ಮಾಡಲು ಬೇಕಾಗುವ ವಸ್ತುಗಳು
- ಮೂಲಂಗಿ
- ಟೊಮೆಟೋ
- ಬೇಳೆ
- ಇಂಗು
- ಬೆಳ್ಳುಳ್ಳಿ
- ಈರುಳ್ಳಿ
- ಕರಿಬೇವು
- ಅರಶಿಣ
- ಸಾಂಬಾರ್ ಪುಡಿ
- ಖಾರದ ಪುಡಿ
- ಸಾಸಿವೆ
- ಜೀರಿಗೆ
- ಹುಣಸೆ ಹುಳಿ
- ಎಣ್ಣೆ
- ಕೊತ್ತಂಬರಿ ಸೊಪ್ಪು
- ಉಪ್ಪು
ಮೂಲಂಗಿ ಸಾಂಬಾರ್ ಮಾಡುವ ವಿಧಾನವೇನು?
ಮೊದಲು 1 ಕಪ್ ಬೇಳೆಯನ್ನು ತೊಳೆದು ಕುಕ್ಕರ್ಗೆ ಹಾಕಿ ಎರಡರಷ್ಟು ನೀಡು ಹಾಕಿ, ಟೊಮೆಟೋ ಹಾಕಿ, 1 ಸ್ಪೂನ್ ಎಣ್ಣೆ ಹಾಕಿಕೊಂಡು, ಹುಣಸೆ ಹುಳಿ, ಕರಿಬೇವು, ಅರಶಿಣ ಹಾಕಿ ಮುಚ್ಚಳ ಮುಚ್ಚಿ 2 ಸೀಟಿ ಹೊಡೆಯಲು ಬಿಡಿ. ಇನ್ನೊಂದು ಕಡೆ ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಅದಕ್ಕೆ ಸಾಸಿವೆ, ಜೀರಿಗೆ, ಇಂಗು, ಈರುಳ್ಳಿ, ಕರಿಬೇವು ಹಾಕಿ ಫ್ರೈ ಮಾಡಿಕೊಳ್ಳಿ.
2 ರಿಂದ 3 ನಿಮಿಷ ಫ್ರೈ ಮಾಡಿದ ಬಳಿಕ ಸಿಪ್ಪೆ ತೆಗೆದು ಕತ್ತರಿಸಿಕೊಂಡಿರುವ ಮೂಲಂಗಿಯನ್ನು ಹಾಕಿ ಉಪ್ಪು ಸಹ ಹಾಕಿಕೊಂಡು ಮತ್ತೆ 5 ನಿಮಿಷ ಫ್ರೈ ಮಾಡಿ. ಅನಂತರ ಸಾಂಬಾರ್ ಪುಡಿ ಹಾಕಿಕೊಂಡು ಮಿಕ್ಸ್ ಮಾಡಿ ಮೂಲಂಗಿ ಮುಳುಗುವಷ್ಟು ನೀರು ಹಾಕಿ ಒಟ್ಟು 5 ನಿಮಿಷ ಬೇಯಲು ಬಿಡಿ.
ಈಗ ಕುಕ್ಕರ್ ಮುಚ್ಚಳ ತೆಗೆದು ಸ್ವಲ್ಪ ಬೇಳೆಯನ್ನು ಹಾಗೆ ಪುಡಿ ಮಾಡಿಕೊಳ್ಳಿ. ಈಗ ಕುಕ್ಕರ್ನಲ್ಲಿರುವ ಬೇಳೆಯನ್ನು ಪಕ್ಕದ ಬಾಣಲೆಯಲ್ಲಿ ಕುದಿಯುತ್ತಿರುವ ಮೂಲಂಗಿಯೊಂದಿಗೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಹಾಗೆ ಕುದಿಬರಲು ಬಿಟ್ಟು ಉಪ್ಪು ಮತ್ತು ಹುಳಿ ಬೇಕಿದ್ದರೆ ಹಾಕಿಕೊಳ್ಳಿ. ಮುಚ್ಚಳ ಮುಚ್ಚಿ 3 ನಿಮಿಷ ಬೇಯಲು ಬಿಡಿ. ಕೊನೆಯಲ್ಲಿ ಇದಕ್ಕೆ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಮೂಲಂಗಿ ಸಾಂಬಾರ್ ಸಿದ್ದವಾಗುತ್ತೆ. ಈ ರುಚಿಯ ಸಾಂಬಾರ್ ಒಮ್ಮೆ ನೀವು ಸವಿದರೆ ಪದೇ ಪದೇ ಊಟಕ್ಕೆ ಇದನ್ನೇ ಮಾಡಿ ಸವಿಯಲು ಮುಂದಾಗುತ್ತೀರಿ. ನೀವು ಕೂಡ ಮನೆಯಲ್ಲಿ ಇದನ್ನೊಮ್ಮೆ ಮಾಡಿ ನೋಡಿ. ಇದು ನಿಮ್ಮ ಆರೋಗ್ಯಕ್ಕೂ ಕೂಡ ಬಹಳ ಉತ್ತಮ.



Click it and Unblock the Notifications
