Latest Updates
-
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ!
ಮದುವೆ ಮನೆ ರುಚಿಯ ಮೂಲಂಗಿ ಪಲ್ಯ..! ಎಷ್ಟೊಂದು ಸರಳವಾಗಿ ಮಾಡಬಹುದು ಗೊತ್ತಾ?
ಊಟಕ್ಕೆ ಪಲ್ಯ ಇದ್ದರೆ ಊಟದ ರುಚಿ ಹೆಚ್ಚಾಗುತ್ತೆ. ಊಟದ ಜೊತೆಗೆ ತಿಂಡಿಗಳಿಗೂ ಚಟ್ನಿ ಇಲ್ಲವೆ ಪಲ್ಯ ಮಾಡಿ ಸವಿದಿರುತ್ತೇವೆ. ವಿವಿಧ ತರಕಾರಿಯಲ್ಲಿ ನಾವು ಪಲ್ಯ ಮಾಡಿರುತ್ತೇವೆ. ಇನ್ನು ನಾವಿಂದು ಹೊಸ ರುಚಿಯಲ್ಲಿ ಅದ್ಭುತ ಪಲ್ಯ ಮಾಡುವುದನ್ನು ತಿಳಿದುಕೊಳ್ಳೋಣ. ಅದರಲ್ಲೂ ನಾವು ಮೂಲಂಗಿ ಪಲ್ಯ ಮಾಡುವುದನ್ನು ನಾವಿಂದು ತಿಳಿಯೋಣ.
ಆರೋಗ್ಯಕ್ಕೆ ಮೂಲಂಗಿ ಎಷ್ಟು ಮುಖ್ಯ ಎಂಬುದನ್ನು ನಾವು ತಿಳಿದಿದ್ದೇವೆ. ಮೂಲಂಗಿಯಲ್ಲಿ ಕಡಿಮೆ ಕ್ಯಾಲೋರಿ ಹೊಂದಿರುತ್ತದೆ. ಹಾಗೆ ವಿಟಮಿನ್ ಸಿ, ಪೊಟ್ಯಾಸಿಯಂ, ಫೈಬರ್ ಒಳಗೊಂಡಿದೆ. ಹೀಗಾಗಿ ಮೂಲಂಗಿ ಜೀರ್ಣಕ್ರಿಯೆಗೆ ಬಹಳ ಉಪಯುಕ್ತ. ಕೆಲವರಿಗೆ ಮೂಲಂಗಿ ಸಾಂಬಾರ್ ಅಂದರೆ ಪಂಚಪ್ರಾಣ.

ಹೀಗಾಗಿ ನಾವಿಂದು ಮದುವೆ ಮನೆಯಲ್ಲಿ ಮಾಡುವಂತಹ ಮೂಲಂಗಿ ಪಲ್ಯವನ್ನು ಮನೆಯಲ್ಲಿ ಮಾಡುವುದು ಹೇಗೆ ಎಂಬುದನ್ನು ಇಂದು ತಿಳಿದುಕೊಳ್ಳೋಣ. ಮೂಲಂಗಿ ಪಲ್ಯ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯುತ್ತದೆ? ಮಾಡಲು ಹೇಗೆ ತಯಾರಿ ಮಾಡಿಕೊಳ್ಳಬೇಕು ಎಂಬ ಎಲ್ಲಾ ಮಾಹಿತಿಯನ್ನು ನಾವಿಂದು ತಿಳಿದುಕೊಳ್ಳೋಣ. ಹಾಗೆ ಮನೆಯಲ್ಲಿ ಮಾಡಲು ಪ್ರಯತ್ನಿಸೋಣ.
ಮೂಲಂಗಿ ಪಲ್ಯ ಮಾಡಲು ಬೇಕಾಗುವ ಪದಾರ್ಥಗಳು
- ಮೂಲಂಗಿ - 5
- ಈರುಳ್ಳಿ - 1
- ತೆಂಗಿನ ಕಾಯಿ ತುರಿ
- ಹಸಿ ಮೆಣಸಿನಕಾಯಿ
- ಒಣ ಮೆಣಸಿಕಾಯಿ
- ಶುಂಠಿ
- ಕರಿಬೇವು
- ಕೊತ್ತಂಬರಿ ಸೊಪ್ಪು
- ಸಾಸಿವೆ
- ಕಡ್ಲೆಬೇಳೆ
- ಉದ್ದಿನ ಬೇಳೆ
- ಜೀರಿಗೆ
- ಬೆಲ್ಲ
- ಅರಿಶಿನ
- ಉಪ್ಪು
- ಎಣ್ಣೆ
ಮೂಲಂಗಿ ಪಲ್ಯ ಮಾಡುವುದು ಹೇಗೆ?
ಮೊದಲು ಮೂಲಂಗಿಯನ್ನು ಚಿಕ್ಕ ಚಿಕ್ಕದಾಗಿ ಕತ್ತರಿಸಿಕೊಂಡು ನೀರಿನಲ್ಲಿ ಹಾಕಿ ಇಡಿ. ನಂತರ ಇದನ್ನು ಕುಕ್ಕರ್‌ಗೆ ಹಾಕಿಕೊಂಡು ಉಪ್ಪು ಹಾಕಿಕೊಂಡು ಅರಶಿಣ, ಮೂಲಂಗಿ ಮುಳುಗುವಷ್ಟು ನೀರು ಹಾಕಿಕೊಂಡು ಮಿಕ್ಸ್ ಮಾಡಿ ನಂತರ ಮುಚ್ಚಳ ಮುಚ್ಚಿ 2 ಸೀಟಿ ಹೊಡೆಯಲು ಬಿಡಿ. 2 ಸೀಟಿಯ ಬಳಿಕ ತಣ್ಣಗಾಗಲು ಬಿಡಿ.
ಈಗ ಮಿಕ್ಸಿ ಜಾರ್ ತೆಗೆದುಕೊಂಡು ಹಸಿಮೆಣಸು, ಜೀರಿಗೆ, ಶುಂಠಿ, ಬೆಲ್ಲ, ಸ್ವಲ್ಪ ಸಾಸಿವೆ, ಕರಿಬೇವು, ಅರಶಿನ, ಉಪ್ಪು, ತೆಂಗಿನಕಾಯಿ ತುರಿ, ಹಾಕಿಕೊಂಡು ತರಿ ತರಿಯಾಗಿ ರುಬ್ಬಿಕೊಳ್ಳಬೇಕು. ನೀರು ಹಾಕಿಕೊಳ್ಳದೆ ರುಬ್ಬಿಕೊಳ್ಳಿ. ಈಗ ಕುಕ್ಕರ್‌ನಿಂದ ಮೂಲಂಗಿ ಹಾಗೂ ನೀರಿನಿಂದ ಬೇರ್ಪಡಿಸಿಕೊಳ್ಳಿ. ಬೇಯಿಸಿಕೊಂಡಿರುವ ಮೂಲಂಗಿಯನ್ನು ಬೌಲ್‌ಗೆ ಹಾಕಿ ಇಟ್ಟುಕೊಳ್ಳಿ.

ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಕಾದ ಬಳಿಕ ಸಾಸಿವೆ, ಕಡಲೆ ಬೇಳೆ, ಉದ್ದಿನ ಬೇಳೆ, ಒಣ ಮೆಣಸು, ಕರಿಬೇವು ಸೇರಿಸಿ ಬಿಸಿಮಾಡಿಕೊಳ್ಳಿ. ಈಗ ಇದಕ್ಕೆ ಈರುಳ್ಳಿ ಹಾಕಿ 2 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ಇಷ್ಟಾದ ಬಳಿಕ ರುಬ್ಬಿಕೊಂಡಿರುವ ಮಸಾಲೆಯನ್ನು ಇದಕ್ಕೆ ಸೇರಿಸಿ 1 ನಿಮಿಷ ಪ್ರೈ ಮಾಡಿಕೊಳ್ಳಿ.
ನಂತರದಲ್ಲಿ ಬೇಯಿಸಿಕೊಂಡಿರುವ ಮೂಲಂಗಿಯನ್ನು ಈ ಪಾತ್ರೆಗೆ ಹಾಕಿ ಮಿಕ್ಸ್ ಮಾಡುತ್ತಾ ಇರಿ. ಸುಮಾರು 5 ನಿಮಿಷ ಫ್ರೈ ಮಾಡಿದರೆ ಸಾಕು. ಮೂಲಂಗಿ ಬೇಯಿಸಿಕೊಂಡಿರುವ ಕಾರಣ ಹೆಚ್ಚು ಹೊತ್ತು ಬೇಯಿಸುವ ಅಗತ್ಯವಿಲ್ಲ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಒಲೆಯಿಂದ ಇಳಿಸಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯ ಮೂಲಂಗಿ ಪಲ್ಯ ರೆಡಿಯಾಗುತ್ತದೆ. ನೀವು ಸಹ ಮನೆಯಲ್ಲಿ ಇದನ್ನು ಒಮ್ಮೆ ಟ್ರೈ ಮಾಡಿ ನೋಡಿ. ಇದರ ರುಚಿ ಮದುವೆ ಮನೆಯಲ್ಲಿ ನೀಡುವ ಪಲ್ಯದಂತೆಯೇ ಬರಲಿದೆ.



Click it and Unblock the Notifications
