Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಊಟದ ಜೊತೆ ಮೂಲಂಗಿ ಪಲ್ಯ ಇದ್ದರೆ ಸೂಪರ್..! 5 ನಿಮಿಷ ಸಾಕು..!
ನೀವು ಊಟದ ಜೊತೆ ಅಥವಾ ತಿಂಡಿಯ ಜೊತೆಗೆ ಪಲ್ಯ ಸವಿಯುವ ಅಭ್ಯಾಸ ಇಟ್ಟುಕೊಂಡಿದ್ದರೆ ಒಂದು ದಿನವೂ ಪಲ್ಯ ಇಲ್ಲದೆ ಊಟ ತಿಂಡಿ ಸೇರುವುದಿಲ್ಲ. ಜೊತೆಗೆ ಪಲ್ಯವಿದ್ದರೆ ಮಾತ್ರ ಊಟ ಚೆನ್ನಾಗಿ ಸೇರುತ್ತದೆ. ಆದರೆ ಯಾವ ಸಾಂಬಾರ್ ಅಥವಾ ಯಾವ ತಿಂಡಿ ಜೊತೆ ಯಾವ ಪಲ್ಯ ಹೆಚ್ಚು ರುಚಿ ನೀಡುತ್ತೆ ಅನ್ನೋದೆ ಗೊಂದಲ.
ಅದರಲ್ಲೂ ಕೆಲವು ಬಾರಿ ಯಾವ ಪಲ್ಯ ಮಾಡಿ ಸವಿಯಬೇಕು ಅನ್ನೋದೆ ಸಿಕ್ಕಾಪಟ್ಟೆ ಗೊಂದಲವಾಗಿರುತ್ತೆ. ಯಾವ ಪಲ್ಯ ಮಾಡಿ ಯಾವ ರೀತಿ ಮಾಡಲಿ ಅನ್ನುವುದು ಎಲ್ಲರ ಪ್ರಶ್ನೆ. ಏಕೆಂದರೆ ನೀವು ಯಾವ ತರಕಾರಿಯಲ್ಲಿ ಬೇಕಾದರು ಪಲ್ಯ ಮಾಡಬಹುದು. ಆದರೆ ಮೂಲಂಗಿಯಲ್ಲಿ ಮಾಡಿದ ಪಲ್ಯ ತುಂಬಾನೆ ರುಚಿಕರ ಮತ್ತು ಮಾಡೋದು ತುಂಬಾನೆ ಸುಲಭ.

ಹಾಗಾದ್ರೆ ಅನ್ನ ಚಪಾತಿಗೆ ಮೂಲಂಗಿ ಪಲ್ಯ ಮಾಡೋದು ಹೇಗೆ? ಇದನ್ನು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವುದು ಹೇಗೆ? ಮಾಡಲು ಎಷ್ಟು ಸಮಯ ಬೇಕು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ನೋಡಿ.
ಮೂಲಂಗಿ ಪಲ್ಯ ಮಾಡಲು ಬೇಲಾಗುವ ಪದಾರ್ಥಗಳು
- ಮೂಲಂಗಿ - 2 ಅಥವಾ 150 ಗ್ರಾಂ
- ಈರುಳ್ಳಿ (ಕತ್ತರಿಸಿದ) - 1
- ತೆಂಗಿನಕಾಯಿ (ತುರಿದ) - 1/2 ಕಪ್
- ಬೆಳ್ಳುಳ್ಳಿ (ಪುಡಿಮಾಡಿದ) - 1
- ಸಾಸಿವೆ - 1/2 ಟೀಸ್ಪೂನ್
- ಕಡಲೆ ಬೇಳೆ - 1 tbs
- ಹಸಿರು ಮೆಣಸಿನಕಾಯಿ - 2
- ಒಣ ಕೆಂಪು ಮೆಣಸಿನಕಾಯಿ - 4
- ಕೊತ್ತಂಬರಿ ಸೊಪ್ಪು - 3 ಚಮಚ
- ಕರಿಬೇವಿನ ಎಲೆಗಳು - 2 tbs
- ಅಡುಗೆ ಎಣ್ಣೆ
- ರುಚಿಗೆ ಉಪ್ಪು
ಮೂಲಂಗಿ ಪಲ್ಯ ಮಾಡುವುದು ಹೇಗೆ?
ಪಾತ್ರೆಯಲ್ಲಿ ಎಣ್ಣೆ ಇಟ್ಟು ಅದಕ್ಕೆ ಸಾಸಿವೆ, ಕಡಲೆ ಬೇಳೆ, ಹಸಿ ಮೆಣಸಿನಕಾಯಿ, ಒಣ ಮೆಣಸು ಹಾಕಿ ಫ್ರೈ ಮಾಡಿಕೊಳ್ಳಿ. 1 ನಿಮಿಷದಲ್ಲಿ ಇದು ಫ್ರೈ ಆಗುತ್ತದೆ. ಇದಾದ ಬಳಿಕ ಬೆಳ್ಳುಳ್ಳಿ, ಹಾಗೂ ಕರಿಬೇವನ್ನು ಹಾಕಿಕೊಂಡಿ ಫ್ರೈ ಮಾಡಿ.
ಇನ್ನೊಂದು ಕಡೆ ತುರಿದುಕೊಂಡಿರುವ ಮೂಲಂಗಿಯನ್ನು ಹಾಕಿ, ಇದರ ಜೊತೆ ಈರುಳ್ಳಿಯನ್ನು ಹಾಕಿಕೊಂಡು ಫ್ರೈ ಮಾಡಿ. ಫ್ರೈ ಮಾಡುವಾಗ ಉಪ್ಪು ಹಾಕಿಕೊಳ್ಳಿ. 10 ನಿಮಿಷದ ವರೆಗೂ ಫ್ರೈ ಮಾಡಿಕೊಳ್ಳಿ. ಮೂಲಂಗಿ ಬೇಯಲು ಕೆಲವು ಸಮಯ ತೆಗೆದುಕೊಳ್ಳುತ್ತದೆ. ಕೊನೆಯದಾಗಿ ಇದಕ್ಕೆ ತೆಂಗಿನ ಕಾಯಿ ತುರಿ ಹಾಕಿಕೊಳ್ಳಿ. ಬಳಿಕ ತೆಂಗಿನ ತುರಿಯ ಬಳಿಕ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಿಮಗೆ ಖಾರ ಬೇಕಿದ್ದರೆ ಖಾರದ ಪುಡಿ ಸಹ ಹಾಕಿಕೊಳ್ಳಬಹುದು.
ಇಷ್ಟಾದರೆ ನಿಮ್ಮ ಮುಂದೆ ರುಚಿಕರ ಮೂಲಂಗಿ ಪಲ್ಯ ರೆಡಿಯಾಗಿರುತ್ತದೆ. ಇದು ಎಲ್ಲಾ ಸಾಂಬಾರ್ ಜೊತೆ ಹಾಗೂ ತಿಂಡಿಯ ಜೊತೆ ಸವಿಯಬಹುದು.
ಮೂಲಂಗಿಯ ಆರೋಗ್ಯಕರ ಲಾಭವೇನು ನಿಮಗೆ ಗೊತ್ತಾ?
ಮೂಲಂಗಿಯಲ್ಲಿರುವ ನಾರಿನ ಅಂಶವು ಮಲಬದ್ದತೆಯ ವಿರುದ್ಧ ಕೆಲಸ ಮಾಡುತ್ತದೆ. ಕರುಳುಗಳಿಂದ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತದೆ. ಅಲ್ಲದೇ ಈ ನಾರು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು, ತೂಕವನ್ನು ಇಳಿಸಲು ಹಾಗೂ ಕೊಲೆಸ್ಟ್ರಾಲ್ ಮಟ್ಟಗಳನ್ನು ಆರೋಗ್ಯಕರ ಮಟ್ಟಕ್ಕಿಳಿಸಲು ನೆರವಾಗುತ್ತದೆ. ಅಲ್ಲದೇ ಮೂಲಂಗಿಯ ರಸವನ್ನು ಕುಡಿಯುವುದರಿಂದ ಕರುಳಿನ ಹುಣ್ಣುಗಳಾಗುವುದು ಮತ್ತು ಉರಿಯೂತವಾಗುವುದನ್ನು ತಪ್ಪಿಸಬಹುದು. ಇದಿಷ್ಟೇ ಅಲ್ಲ ಮೂಲಂಗಿಯಿಂದಾಗಿ ನಿಮ್ಮ ಹೃದಯದ ಆರೋಗ್ಯಕ್ಕೂ ಉತ್ತಮವಾಗಿರುತ್ತದೆ.



Click it and Unblock the Notifications
