Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
Breakfast: ಬೊಂಬಾಟ್ ರುಚಿಯ ಮೊಸರು ವಡೆ ಮನೆಯಲ್ಲೇ ಮಾಡಿ..! ಇಲ್ಲಿದೆ ಸಿಂಪಲ್ ರೆಸಿಪಿ
ಬೆಳಗ್ಗೆ ತಿಂಡಿಗೆ ಕರಿದ ತಿಂಡಿಗಳನ್ನು ಸವಿಯಲು ಹೆಚ್ಚಿನ ಜನ ಇಷ್ಟಪಡುತ್ತಾರೆ. ಅಂದರೆ ವಡೆ, ಬೋಂಡಾ, ಬಜ್ಜಿ, ಹೀಗೆ ಹತ್ತು ಹಲವು ರೀತಿಯ ಕರಿದ ತಿಂಡಿ ಸವಿಯುತ್ತಾರೆ. ಹೋಟೆಲ್‌ನಲ್ಲಿ ಈ ಖಾದ್ಯಗಳಿಗೆ ಭಾರೀ ಬೇಡಿಕೆ ಇದ್ದೇ ಇರುತ್ತೆ. ಆದ್ರೆ ಇದರ ಜೊತೆಗೆ ವಿಭಿನ್ನ ರುಚಿಯ ವಿಶೇಷ ತಿಂಡಿ ಮೊಸರು ವಡೆಯನ್ನು ಸಹ ನಾವು ಸವಿದಿರುತ್ತೇವೆ.
ಹೋಟೆಲ್‌ನಲ್ಲಿ ಮೊಸರು ವಡೆ ಬಹಳ ಫೇಮಸ್ ಖಾದ್ಯ. ವಡೆಯನ್ನು ಮೊಸರಿನಲ್ಲಿ ಅದ್ದಿಕೊಂಡು ಸೇವಿಸುತ್ತಿದ್ದರೆ ಅದರ ರುಚಿ ಸವಿದವರಿಗೆ ಗೊತ್ತು. ಮನೆಯಲ್ಲಿಯೇ ನಾವು ಈ ಮೊಸರು ವಡೆ ಮಾಡಿ ಸವಿಯಬಹುವು.

ಹಾಗಾದ್ರೆ ಈ ಮೊಸರು ವಡೆ ಮಾಡುವುದು ಹೇಗೆ? ಮನೆಯಲ್ಲೇ ಮೊಸರು ವಡೆ ಮಾಡಿಕೊಳ್ಳಲು ಹೇಗೆ ತಯಾರಿ ನಡೆಸಬೇಕು? ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಈ ಮೊಸರು ವಡೆ ಮಾಡಲು ಎಷ್ಟು ಸಮಯ ಹಿಡಿಯುತ್ತದೆ ಎಂಬುದನ್ನು ನಾವು ನೋಡೋಣ.
ಮೊಸರು ವಡೆ ಮಾಡಲು ಬೇಕಾಗುವ ಪದಾರ್ಥಗಳು
- ಉದ್ದಿನ ಬೇಳೆ
- ಹಸಿ ಮೆಣಸು
- ಶುಂಠಿ
- ಸೋಡಾ
- ಉಪ್ಪು
- ಎಣ್ಣೆ
- ಒಣ ಮೆಣಸು
- ಸಾಸಿವೆ
- ಜೀರಿಗೆ
- ಕೊತ್ತಂಬರಿ ಸೊಪ್ಪು
- ಕ್ಯಾರೆಟ್
- ಮೊಸರು
ಮೊಸರು ವಡೆ ಮಾಡುವುದು ಹೇಗೆ?
ಮೊದಲು ವಡೆ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. 10 ನಿಮಿಷ ಉದ್ದಿನ ಬೇಳೆಯನ್ನು ಬಿಸಿ ನೀರಿನಲ್ಲಿ ನೆನೆಸಿಟ್ಟು ತೆಗೆದುಕೊಳ್ಳಿ. ಇದನ್ನು ಮಿಕ್ಸಿ ಜಾರ್‌ಗೆ ಹಾಕಿಕೊಂಡು ಅದಕ್ಕೆ ಹಸಿ ಮೆಣಸು, ಶುಂಠಿ ಹಾಕಿ ರುಬ್ಬಿಕೊಳ್ಳಬೇಕು. ಸ್ವಲ್ಪ ನೀರು ಹಾಕಿಕೊಂಡು ಗಟ್ಟಿಯಾಗಿ ನುಣ್ಣಗೆ ರುಬ್ಬಿಕೊಳ್ಳಬೇಕು.
ನಂತರ ಈ ಹಿಟ್ಟು ತೆಗೆದು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಇದಕ್ಕೆ ಒಂದು ಕಪ್ ಅಕ್ಕಿ ಹಿಟ್ಟು (3 ಸ್ಪೂನ್) ಹಾಕಿದರೆ ಸಾಕು, ಹಾಗೆ ಉಪ್ಪು, ಸೋಡಾ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಕೈಯಿಂದ ಚೆನ್ನಾಗಿ 5 ನಿಮಿಷಗಳ ಕಾಲ ಹದ ಮಾಡಿಕೊಳ್ಳಬೇಕು. ಹಿಟ್ಟು ವಡೆ ಮಾಡುವಂತೆಯೆ ಹದ ಮಾಡಿಕೊಳ್ಳಿ.
ಈಗ ಕೈಯಲ್ಲಿ ಹಿಟ್ಟು ತೆಗೆದುಕೊಂಡು ವಡೆಯನ್ನು ಅದೇ ಶೇಪ್‌ನ ಪಾತ್ರೆಯ ಹಿಂದೆ ಹಿಟ್ಟು ಅಚ್ಚು ಒತ್ತಿ ಕೈಯಿಂದ ಮಧ್ಯದಲ್ಲಿ ತೂತು ಮಾಡಿ. ಹೀಗೆ ಮಾಡುವ ಮುನ್ನ ಒಲೆ ಮೇಲೆ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿಟ್ಟು ಬಳಿಕ ಎಣ್ಣೆಗೆ ಈ ವಡೆಯನ್ನು ಬಿಡಬೇಕು. ಮಧ್ಯಮ ಉರಿಯಲ್ಲಿ ಬಡೆ ಕಾಯಿಸಿಕೊಳ್ಳಿ.
ಈಗ ಇದಕ್ಕೆ ಮೊಸರು ಮಾಡಿಕೊಳ್ಳಿ. ಒಂದು ಬೌಲ್‌ನಲ್ಲಿ ಮೊಸರು ತೆಗೆದುಕೊಂಡು ಸ್ವಲ್ಪ ನೀರು ಹಾಕಿ ಅದಕ್ಕೆ ಉಪ್ಪು, ಸಕ್ಕರೆ ಸೇರಿಸಿಕೊಳ್ಳಿ. ನಂತರ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ ಒಂದು ಪಾತ್ರೆಗೆ ಬಿಸಿ ನೀರು ತೆಗೆದುಕೊಂಡು ಇದಕ್ಕೆ ಎಲ್ಲಾ ವಡೆಗಳನ್ನು ಈ ನೀರಿಗೆ ಹಾಕಿಕೊಳ್ಳಿ. 1ಒ ಸೆಕೆಂಡ್ ಬಿಟ್ಟು ಬಳಿಕ ವಡೆಯನ್ನು ನೀರಿನಿಂದ ತೆಗೆದು ಅದನ್ನು ಹಿಂಡಿಕೊಳ್ಳಬೇಕು. ನೀರು ತೆಗೆದು ಪಂದು ಪ್ಲೇಟ್‌ಗೆ ಹಾಕಿಕೊಳ್ಳಿ.
ಈಗ ಮೊಸರಿಗೆ ಒಂದು ಒಗ್ಗರಣೆ ಹಾಕಿಕೊಳ್ಳಿ. ಹಾಗೆ ಕ್ಯಾರೆಟ್ ತುರಿ ಹಾಗೂ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಈಗ ಈ ಮೊಸರಿಗೆ ವಡೆಗಳನ್ನು ಹಾಕಿ ನೆನೆಸಿಡಿ. 10 ನಿಮಿಷಗಳ ಕಾಲ ನೆನೆದರೆ ಸಾಕಾಗುತ್ತದೆ. ಇಷ್ಟಾದರೆ ನಿಮ್ಮ ಮುಂದೆ ಮೊಸರು ವಡೆ ರೆಡಿಯಾಗುತ್ತದೆ. ನೀವು ಸಹ ಮನೆಯಲ್ಲಿ ಇದನ್ನು ಮಾಡಿ ನೋಡಿ. ಬೆಳಗ್ಗೆತಿಂಡಿಗೆ ಇದನ್ನು ಮಾಡಿ ಸವಿಯುತ್ತಿದ್ದರೆ ಆ ರುಚಿಗೆ ಮತ್ತೆ ಮತ್ತೆ ನೀವು ಮಾಡಿ ಸವಿಯಲು ಮುಂದಾಗುತ್ತೀರಿ.



Click it and Unblock the Notifications
