Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮೊಸರು ಮೆಣಸಿನ ತೊಕ್ಕು: ಇದನ್ನು ನೀವು ಉಪ್ಪಿನಕಾಯಿಯಂತೆ ತಿಂಗಳವರೆಗೆ ಇಟ್ಟು ಬಳಸಬಹುದು
Recipes
oi-Reena TK
Posted By: Reena TK
ಈ ತೊಕ್ಕು ಹಲವು ರುಚಿಯಲ್ಲಿ ತಯಾರಿಸಬಹುದು, ನಾವಿಲ್ಲಿ ಮೊಸರು-ಮೆಣಸಿನ ತೊಕ್ಕು ರೆಸಿಪಿ ನೀಡಿದ್ದೇವೆ, ಇದೊಂದು ಸುಲಭ ರೆಸಿಪಿಯಾಗಿದ್ದು ಇದನ್ನು ಮಾಡಿಟ್ಟರೆ ನೀವು ಇದನ್ನು ಉಪ್ಪಿನಕಾಯಿ ರೀತಿ ಬಳಸಬಹುದು. ಈ ತೊಕ್ಕು ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:
ಬೇಕಾಗುವ ಸಾಮಗ್ರಿ
ಬ್ಯಾಡಗಿ ಮೆಣಸು 4-5
ಗುಂಟೂರು ಮೆಣಸು 3-4
ಹುಳಿ ಮೊಸರು ಅರ್ಧ ಕಪ್
1/2 ಚಮಚ ಕೊತ್ತಂಬರಿ ಬೀಜ
1/ 2 ಚಮಚ ಜೀರಿಗೆ
5-6 ಎಸಳು ಬೆಳ್ಳುಳ್ಳಿ
ಸ್ವಲ್ಪ ಕರಿಬೇವು
1 ಚಮಚ ಎಣ್ಣೆ(ತೆಂಗಿನೆಣ್ಣೆ, ಕಡ್ಲೆಣ್ಣೆ)
ರುಚಿಗೆ ತಕ್ಕ ಉಪ್ಪು
ಒಗ್ಗರಣೆಗೆ
1 ಚಮಚ ಎಣ್ಣೆ
1-2 ಒಣ ಮೆಣಸು
ಸ್ವಲ್ಪ ಜೀರಿಗೆ
ಸ್ವಲ್ಪ ಉದ್ದು
ಸ್ವಲ್ಪ ಸಾಸಿವೆ
ಸ್ವಲ್ಪ ಕರಿಬೇವು
ಸ್ವಲ್ಪ ಇಂಗು
ಮಾಡುವ ವಿಧಾನ
- ನೀವು ಒಣ ಮೆಣಸು (ಬ್ಯಾಡಗಿ ಹಾಗೂ ಗುಂಟೂರು ಅಥವಾ ಯಾವುದೇ ಖಾರ ಒಣಮೆಣಸು) ತೆಗೆದು ಅದನ್ನು ಸ್ವಲ್ಪ ರೋಸ್ಟ್ ಮಾಡಿ ಅದರ ಬೀಜಗಳನ್ನು ತೆಗೆಯಿರಿ
- ಕೊತ್ತಂಬರಿ ಬೀಜ,ಜೀರಿಗೆಯನ್ನು ರೋಸ್ಟ್ ಮಾಡಿ
- ಈಗ ನೀವು ಇವುಗಳನ್ನು ಮಿಕ್ಸಿ ಜಾರ್‌ಗೆ ಹಾಕಿ, ಒಣ ಮೆಣಸು ಚಿಕ್ಕದಾಗಿ ಕತ್ತರಿಸಿ ಹಾಕಿದರೆ ಒಳ್ಳೆಯದು
- ನಂತರ ನೀವು ಹುಳಿ ಒಸರು ಸೇರಿಸಿ, ಬೆಳ್ಳುಳ್ಳಿ, ಕರಿಬೇವು, ಎಣ್ಣೆ, ರುಚಿಗೆ ತಕ್ಕ ಉಪ್ಪು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ
ನಂತರ ಒಗ್ಗರಣೆ ಹಾಕಿ
- ನೀವು ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ, ನಂತರ ಸಾಸಿವೆ, ಜೀರಿಗೆ ಹಾಕಿ, ಸಾಸಿವೆ-ಜೀರಿಗೆ ಚಟ್‌ಪಟ್ ಶಬ್ದ ಮಾಡುವಾಗ ಒಣ ಮೆಣಸು ಮುರಿದು ಹಾಕಿ, ಕರಿಬೇವು, ಉದ್ದು, ಇಂಗು ಸೇರಿಸಿ, ನಂತರ ರುಬ್ಬಿದ ಚಟ್ನಿ ಸೇರಿಸಿ, ಅದೇ ಜಾರ್‌ಗೆ ಸ್ವಲ್ಪ ನೀರು ಸೇರಿಸಿ, ಅಲುಗಾಡಿಸಿ ಆ ನೀರನ್ನು ಸೇರಿಸಿ, ನಂತರ ಮಿಶ್ರಣ ಕುದಿಸಿ, ಇಷ್ಟು ಮಾಡಿದರೆ ಮೊಸರು-ಮೆಣಸಿನ ತೊಕ್ಕು ರೆಡಿ.
ಇದನ್ನು ದೋಸೆ, ಇಡ್ಲಿ, ಅನ್ನದ ಜೊತೆ ಕೂಡ ಸವಿಯಬಹುದು.
ಈ ತೊಕ್ಕು ವಾರದವರೆಗೆಇಟ್ಟು ಕೂಡ ಬಳಸಬಹುದು.
ಇನ್ನು ಜ್ವರ ಬಂದಾಗ ಈ ತೊಕ್ಕು ಮಾಡಿದರೆ ಆಹಾರ ಬಾಯಿಗೆ ರುಚಿಸುತ್ತೆ.
- ಇತರ ಸಲಹೆ: ನೀವು ಈ ಮೊಸರು ತೊಕ್ಕು ಮಾಡಿದರೆ ರೂಮ್‌ನ ಉಷ್ಣಾಂಶದಲ್ಲಿಟ್ಟರೆ ಒಂದು ವಾರದವರೆಗೆ ಇಡಬಹುದು, ಫ್ರಿಡ್ಜ್‌ನಲ್ಲಿಟ್ಟರೆ 10-15 ದಿನ ಇಟ್ಟು ಉಪಪಿನಕಾಯಿಯಂತೆ ಬಳಸಬಹುದು.
- ನೀವು ಖಾರ ಹೆಚ್ಚು ಬೇಕೆಂದರೆ ಒಂದೆರಡು ಮೆಣಸು ಹೆಚ್ಚು ಹಾಕಿ, ಕಡಿಮೆ ಬೇಕೆಂದರೆ ಒಣ ಮೆಣಸು ಕಡಿಮೆ ಸೇರಿಸಿ.
- ನೀವು ಇದಕ್ಕೆ ಪುಡಿ ಉಪ್ಪು ಬದಲಿಗೆ ಕಲ್ಲುಪ್ಪು ಬಳಸಬಹುದು.
Comments
[ of 5 - Users]
Story first published: Monday, December 9, 2024, 14:12 [IST]
Other articles published on Dec 9, 2024



Click it and Unblock the Notifications

