Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಒಂದು ಸೌತೆಕಾಯಿ ಹಾಕಿ ಮಾಡಿ ಮೊಸರು ಹುಳಿ..! ಸಿಕ್ಕಾಪಟ್ಟೆ ರುಚಿ ರೆಸಿಪಿ
ಮಧ್ಯಾಹ್ನ ಊಟ ಇಲ್ಲವೆ ರಾತ್ರಿಯ ಊಟಕ್ಕೆ ಸಾಂಬಾರ್ನ ಜೊತೆಗೆ ಊಟ ಸವಿಯಲು ಬೇರೆ ಏನಾದರೂ ಇದ್ದರೆ ಬಹಳ ರುಚಿಯಾಗಿರುತ್ತದೆ. ಮನೆ ಊಟದಲ್ಲಿ ನಿಮಗೆ ಸಾಂಬಾರ್ ಇಲ್ಲವೆ ರಸಂನ ಜೊತೆಗೆ ಬೇರೆಯೊಂದು ರೆಸಿಪಿ ಇದ್ದರೆ ಅಂದು ಊಟ ಸ್ವಲ್ಪ ಜಾಸ್ತಿ ಮಾಡಬಹುದು. ಸದ್ಯಕ್ಕೆ ಊಟದ ಜೊತೆ ನಾವು ಕೊನೆಯಲ್ಲಿ ಮಜ್ಜಿಗೆ ಹಾಕಿಕೊಂಡು ಸವಿಯುತ್ತೇವೆ. ಮಜ್ಜಿಗೆ ಇದ್ದರೆ ಮಾತ್ರವೇ ಕೆಲವರ ಊಟ ಮುಗಿದಂತೆ ಸರಿ.
ಆದ್ರೆ ಇದೇ ಮಜ್ಜಿಗೆಗೆ ಕೆಲವರು ಮಸಾಲೆಗಳ ಸೇರಿಸಿ ಮಸಾಲ ಮಜ್ಜಿಗೆ ಮಾಡಿಕೊಳ್ಳುತ್ತಾರೆ. ಆದ್ರೆ ನಾವಿಂದು ಒಂದು ಸೌತೆಕಾಯಿ ಹಾಗೂ ಒಂದು ಕಪ್ ಮೊಸರು ಇದ್ದರೆ ರುಚಿ ರುಚಿಯ ಸೌತೆಕಾಯಿ ಮಜ್ಜಿಗೆ ಸಾರು ಮಾಡಿ ಸವಿಯಬಹುದು. ಸೌತೆಕಾಯಿಯ ಜೊತೆ ಒಂದಿಷ್ಟು ಮೊಸರು ಹಾಗೂ ಅದಕ್ಕೆ ಸೌತೆಕಾಯಿ ಹಾಕಿ ಮಾಡುವ ಹುಳಿ ಸಕತ್ ಟೇಸ್ಟ್ ನೀಡಲಿದೆ.

ಹಾಗಾದ್ರೆ ಇಂದು ಸೌತೆಕಾಯಿ ಮೊಸರು ಹುಳಿ ಮಾಡುವುದು ಹೇಗೆ, ಈ ಹುಳಿ ಮಾಡಲು ಬೇಕಾಗುವ ಪದಾರ್ಥವೇನು? ಮಜ್ಜಿಗೆ ಹುಳಿ ಪಾಕವಿಧಾನವೇನು ಎಂಬುದನ್ನು ನಾವಿಂದು ನೋಡೋಣ.
ಸೌತೆಕಾಯಿ ಮೊಸರು ಹುಳಿ ಮಾಡಲು ಬೇಕಾಗುವ ಪದಾರ್ಥಗಳು
- ತೆಂಗಿನ ಕಾಯಿ
- ಒಂದು ಸೌತೆಕಾಯಿ (ಸಣ್ಣ ಗಾತ್ರದ್ದು)
- ಜೀರಿಗೆ
- ಹಸಿ ಮೆಣಸಿನ ಕಾಯಿ
- ಬೆಳ್ಳುಳ್ಳಿ - 2
- ಕೊತ್ತಂಬರಿ ಸೊಪ್ಪು
- ಈರುಳ್ಳಿ
- ಮೊಸರು
- ಸಾಸಿವೆ
- ಎಣ್ಣೆ
- ಒಣ ಮೆಣಸು
- ಕರಿಬೇವಿನ ಸೊಪ್ಪು
- ಅರಶಿನ ಪುಡಿ
- ಉಪ್ಪು
ಸೌತೆಕಾಯಿ ಮೊಸರು ಹುಳಿ ಮಾಡೋದು ಹೇಗೆ?
ಮೊದಲು ಒಂದು ಮಿಕ್ಸಿ ಜಾರ್ಗೆ ಕಾಲು ಕಪ್ ತೆಂಗಿನ ಕಾಯಿ, ಜೀರಿಗೆ, 3 ಹ ಸಿಮೆಣಸು, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು ಹಾಕಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಬೇಕು. ಸ್ವಲ್ಪ ನೀರು ಹಾಕಿಕೊಂಡು ತೆಳುವಾಗಿಯೇ ರುಬ್ಬಿಕೊಳ್ಳಿ. ಇನ್ನೊಂದು ಕಡೆ ಪಾತ್ರೆಗೆ ಸ್ವಲ್ಪ ಮೊಸರು ಹಾಕಿ ಅದಕ್ಕೆ ನೀರು ಹಾಕಿಕೊಂಡು ತೆಳು ಮಾಡಿಕೊಳ್ಳಿ.
ಈಗ ಒಂದು ಪಾತ್ರೆಗೆ ಎಣ್ಣೆ ಹಾಕಿ ಒಲೆ ಮೇಲಿಡಿ. ಎಣ್ಣೆ ಚೆನ್ನಾಗಿ ಕಾದ ಬಳಿಕ ಅದಕ್ಕೆ ಸಾಸಿವೆ, ಜೀರಿಗೆ, ಒಣಮೆಣಸು, ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಇದಕ್ಕೆ ಕರಿಬೇವಿನ ಸೊಪ್ಪು ಹಾಗೂ ಅರಶಿನ, ಉಪ್ಪು ಹಾಕಿಕೊಂಡು ಫ್ರೈ ಮಾಡಿ. ಒಂದು 4 ನಿಮಿಷ ಫ್ರೈ ಮಾಡಿಕೊಂಡ ಬಳಿಕ ಸಣ್ಣಗೆ ಹೆಚ್ಚಿರುವ ಸೌತೆಕಾಯಿಯನ್ನು ಹಾಕಿಕೊಳ್ಳಿ. 1 ನಿಮಿಷ ಫ್ರೈ ಮಾಡಿಕೊಳ್ಳಿ. ಬಳಿಕ ಇದಕ್ಕೆ ರುಬ್ಬಿಕೊಂಡಿರುವ ಮಸಾಲೆ ಹಾಕಿಕೊಳ್ಳಿ.
ಈ ಮಸಾಲೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದ ಬಳಿಕ 30 ಸೆಕೆಂಡ್ವರೆಗೂ ಫ್ರೈ ಮಾಡಿಕೊಳ್ಳಿ. ಕೊನೆಯದಾಗಿ ಒಲೆ ಆಫ್ ಮಾಡಿಕೊಂಡು ಮೊಸರು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಎಷ್ಟು ಬೇಕೋ ಅಷ್ಟು ನೀರು ಹಾಕಿಕೊಳ್ಳಿ. ಅಲ್ಲದೆ ಕೊನೆಯದಾಗಿ ಉಪ್ಪು ಎಷ್ಟು ಬೇಕು ಎಂದು ನೋಡಿಕೊಂಡು ಹಾಕಿಕೊಳ್ಳಿ. ಇಷ್ಟಾದರೆ ಊಟಕ್ಕೆ ಸೌತೆಕಾಯಿ ಮೊಸರು ಹುಳಿ ರೆಡಿ.
ಗಮನಿಸಿ: ಕೊಸಂಬರಿ ಮಾಡಲು ಬಳಸುವ ಸೌತೆಕಾಯಿ ಬಳಸಿ ಈ ಹುಳಿಯನ್ನು ಮಾಡಿ. ಸಾಂಬಾರ್ಗೆ ಬಳಸುವ ಸೌತೆಕಾಯಿಯನ್ನು ಬಳಸಬೇಡಿ. ಇನ್ನು ಮೊಸರನ್ನು ಸಹ ಹಳೆಯ ಮೊಸರು ಬಳಸುವುದಕ್ಕಿಂತ ಆಗ ತಾನೆ ತಂದಿರುವ ಪ್ಯಾಕೆಟ್ ಮೊಸರು ಬಳಸಿದರೆ ಈ ಹುಳಿ ಹೆಚ್ಚು ಸಮಯ ಹಾಳಾಗದಂತೆ ಇಡಬಹುದು. ಕೆಲವರು ಮೊಸರು ಹುಳಿಗೆ ಈರುಳ್ಳಿ ಹಾಕಿದರೆ ಇಷ್ಟಪಡುವುದಿಲ್ಲ. ಹೀಗಾಗಿ ಈರುಳ್ಳಿ ಬಳಸದೆ ಕೂಡ ಈ ಹುಳಿಯನ್ನು ಮಾಡಬಹುದು.



Click it and Unblock the Notifications
