Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಹತ್ತಾರು ರೋಗ ತಡೆಯುವ ಅದ್ಭುತ ಚಟ್ನಿ! ಸುಲಭವಾಗಿ ತಯಾರಿಸಿ!
ಊಟದೊಂದಿಗೆ, ತಿಂಡಿಯೊಂದಿಗೆ ಯಾವುದಾದರೊಂದು ಚಟ್ನಿ ಇದ್ದರೆ ಎಲ್ಲರಿಗೂ ಇಷ್ಟವಾಗುತ್ತೆ. ಕೆಲವು ಚಟ್ನಿ ಹೆಸರು ಕೇಳಿದ್ರೆ ನಿಮ್ಮ ಬಾಯಲ್ಲೂ ನೀರು ಬರುವುದು ಸಹಜ. ಹಾಗೆ ಹಲವು ಬಗೆಯ ಚಟ್ನಿಗಳನ್ನು ಮಾಡಿ ಸವಿಯೋದು ಬಹುತೇಕರಿಗೆ ಇಷ್ಟವಾಗುತ್ತೆ. ಅನ್ನದೊಂದಿಗೆ ಸವಿಯುವ ಯಾವುದೇ ಚಟ್ನಿ ಅಂದರೂ ಬಾಯಲ್ಲಿ ನೀರು ತರಿಸುವುದು ಸಹಜ.
ಇನ್ನು ಊಟಕ್ಕೆ ರುಚಿ ತರುವ ಹಲವು ಚಟ್ನಿ ಆರೋಗ್ಯದ ದೃಷ್ಟಿಯಿಂದಲೂ ಉತ್ತಮ. ಚಟ್ನಿ ಪ್ರಿಯರ ಬಾಯಲ್ಲಿ ನೀರು ಬರುವಂತಹ ರುಚಿ ಇದ್ದರೆ ಅದು ಈರುಳ್ಳಿ ಮೆಣಸಿನಕಾಯಿ ಚಟ್ನಿ. ಈ ಚಟ್ನಿಯನ್ನು ನೀವು ಅನ್ನದ ಜೊತೆಗೆ ಬಿಸಿ ಬಿಸಿಯಾಗಿ ಸವಿದರೆ ನೂರಾರು ವರ್ಷದ ಖಾಯಿಲೆಗಳಿದ್ರೂ ವಾಸಿ ಮಾಡುವ ಶಕ್ತಿ ಇದೆ.

ಇದೊಂದು ಸೂಪರ್‌ಫುಡ್ ಎನ್ನಬಹುದು. ಇದರಲ್ಲಿನ ಮಸಾಲೆಗಳು ನಿಮ್ಮ ಆರೋಗ್ಯ ವೃದ್ಧಿಗೆ ಸಹಾಯ ಮಾಡುತ್ತವೆ. ಈ ಚಟ್ನಿಯನ್ನು ಒಮ್ಮೆ ಮಾಡಿ ಸವಿದರೆ ಅದರ ರುಚಿಗೆ ನೀವು ಸಹ ಮತ್ತೆ ಮತ್ತೆ ಮಾಡೋದು ಖಚಿತ. ಪ್ರಾಚೀನ ಕಾಲದಲ್ಲಿ ಆರೋಗ್ಯ ವೃದ್ಧಿಗಾಗಿ ಬಳಸುತ್ತಿದ್ದ ಪ್ರತಿಯೊಂದು ವಸ್ತುಗಳನ್ನು ಬಳಸಿ ಈ ಚಟ್ನಿ ಮಾಡಲಾಗುತ್ತೆ. ಹೀಗಾಗಿ ನಿಮ್ಮ ದೇಹದ ಯಾವುದೇ ಅನಾರೋಗ್ಯಕ್ಕೆ ಈ ಚಟ್ನಿ ಮದ್ದು ಎನ್ನಬಹುದು.
ಹಾಗಾದ್ರೆ ಆರೋಗ್ಯ ವೃದ್ಧಿಸುವ ಈ ಈರುಳ್ಳಿ, ಮೆಣಸಿನ ಚಟ್ನಿ ಮಾಡಲು ಯಾವೆಲ್ಲಾ ವಸ್ತುಗಳ ಬಳಸಬೇಕು? ಈ ಚಟ್ನಿ ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಅನ್ನೋದನ್ನು ತಿಳಿದುಕೊಳ್ಳೋಣ.
ಈರುಳ್ಳಿ, ನುಗ್ಗೆ ಸೊಪ್ಪು, ಮೆಣಸಿನ ಚಟ್ನಿ ಮಾಡಲು ಬೇಕಾಗುವ ವಸ್ತುಗಳು
- ನುಗ್ಗೆ ಸೊಪ್ಪು
- ಹುಣಸೆ ಹುಳಿ
- ಕೆಂಪು ಮೆಣಸಿನಕಾಯಿ
- ಕಡಲೆಕಾಯಿ
- ಎಣ್ಣೆ
- ಉಪ್ಪು
- ಧಾನ್ಯಗಳು
- ಕೊತ್ತಂಬರಿ
- ಬೆಳ್ಳುಳ್ಳಿ
- ಈರುಳ್ಳಿ
ಈರುಳ್ಳಿ, ನುಗ್ಗೆ ಸೊಪ್ಪು, ಮೆಣಸಿನ ಚಟ್ನಿ ಮಾಡುವುದು ಹೇಗೆ?
- ಮೊದಲಿಗೆ 2 ಕಪ್ ಆಗುವಷ್ಟು ನುಗ್ಗೆ ಸೊಪ್ಪನ್ನು ತೊಳೆದು ಒಣಸಿ ಇಟ್ಟುಕೊಳ್ಳಬೇಕು. ನೀರಿನ ಪಸೆ ಇಲ್ಲದಂತೆ ಫ್ಯಾನ್ ಕೆಳಗೆ ಒಣಗಿಸಿ ಇಟ್ಟುಕೊಳ್ಳಿ.
- ನಂತರ ನಿಂಬೆ ಗಾತ್ರದ ಹುಣಸೆಯನ್ನು ತೊಳೆದು, ನೀರು ಸೇರಿಸಿ ಸ್ವಲ್ಪ ಹೊತ್ತು ನೆನೆಸಿಡಿ.
- ಈಗ ಒಲೆಯ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ 2 ಚಮಚ ಎಣ್ಣೆ ಹಾಕಿ ಅದು ಬಿಸಿಯಾದ ನಂತರ, ಒಂದು ಹಿಡಿ ಕಡಲೆ ಬೀಜವನ್ನು ಸೇರಿಸಿ ಕಡಿಮೆ ಉರಿಯಲ್ಲಿ ಹುರಿಯಿರಿ.
- ಅರ್ಧ ಕಡಲೆಬೀಜ ಹುರಿದ ನಂತರ ಅದಕ್ಕೆ 10 ತುಂಡು ಒಣ ಮೆಣಸಿನಕಾಯಿ, 2 ಚಮಚ ಕೊತ್ತಂಬರಿ ಕಾಳು ಮತ್ತು 1/2 ಚಮಚ ಜೀರಿಗೆ ಸೇರಿಸಿ ಕಡಿಮೆ ಉರಿಯಲ್ಲಿ ಹುರಿಯಿರಿ. ನಂತರ ಈ ಎಲ್ಲಾ ಪದಾರ್ಥಗಳ ತೆಗೆದು ಒಂದು ತಟ್ಟೆಯಲ್ಲಿ ಹಾಕಿ ಪಕ್ಕಕ್ಕೆ ಇಡಿ.
- ಈಗ ಒಲೆಯ ಮೇಲಿರುವ ಬಾಣಲೆಗೆ ಮತ್ತೆ 2 ಚಮಚ ಎಣ್ಣೆ ಹಾಕಿ ಅದಕ್ಕೆ ಮೊದಲು ಸ್ವಚ್ಛ ಮಾಡಿರುವ 2 ಕಪ್ ನುಗ್ಗೆ ಸೊಪ್ಪು ಹಾಕಿ 10 ನಿಮಿಷಗಳ ಕಾಲ ಹುರಿದುಕೊಳ್ಳಿ. ನುಗ್ಗೆ ಸೊಪ್ಪಿನ ಪ್ರಮಾಣ ಹೆಚ್ಚಾದಷ್ಟು ಉತ್ತಮ. ನಂತರ ಈ ನುಗ್ಗೆ ಸೊಪ್ಪನ್ನು ಸಹ ತೆಗೆದು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ.
- ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಮೊದಲು ಹುರಿದು ಇಟ್ಟ ಮೆಣಸು ಸೇರಿ ಎಲ್ಲಾ ಪದಾರ್ಥಗಳನ್ನು ಹಾಕಿ ಉಪ್ಪು ಸಹ ಸೇರಿಸಿ ಹುಣಸೆ ಹುಳಿ ಸಹ ಹಾಕಿಕೊಂಡು ಪುಡಿ ಪುಡಿಯಾಗಿ ರುಬ್ಬಬೇಕು. ಈಗ ಇದಕ್ಕೆ ನುಗ್ಗೆ ಸೊಪ್ಪು ಹಾಗೆ ನೆನೆಸಿಟ್ಟ ಹುಣಸೆ ಹುಳಿ, ಬೆಳ್ಳುಳ್ಳಿ ಸೇರಿಸಿಕೊಂಡು ಮತ್ತೆ ರುಬ್ಬಿಕೊಳ್ಳಬೇಕು. ನುಣ್ಣಗೆ ರುಬ್ಬಿ ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ.
- ಈಗ ದೊಡ್ಡ ಈರುಳ್ಳಿಯನ್ನು ಕತ್ತರಿಸಿಕೊಂಡು ಈ ಚಟ್ನಿಗೆಹಾಕಿ ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯಾದ ಹಾಗೆ ಆರೋಗ್ಯ ಕಾಪಾಡುವಂತಹ ಟೇಸ್ಟಿ ಚಟ್ನಿ ಸಿದ್ದವಾಗುತ್ತೆ. ನೀವು ಕೂಡ ಮನೆಯಲ್ಲಿ ಈ ಚಟ್ನಿ ಟ್ರೈ ಮಾಡಿ ನೋಡಿ.



Click it and Unblock the Notifications
