Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬಾಯಲ್ಲಿ ನೀರು ತರಿಸುವಂತೆ ಮಾಡಿ ನುಗ್ಗೆ ಸೊಪ್ಪಿನ ಫ್ರೈ..! 10 ನಿಮಿಷ ಸಾಕು
ನುಗ್ಗೆಕಾಯಿ ಆರೋಗ್ಯಕ್ಕೆ ಬಹಳ ಉತ್ತಮ ತರಕಾರಿ ಎಂಬುದನ್ನು ನಾವು ತಿಳಿದಿದ್ದೇವೆ. ವಾರದಲ್ಲಿ ಕನಿಷ್ಠ 2 ಬಾರಿ ನುಗ್ಗೆಕಾಯಿ ಸೊಪ್ಪನ್ನು ಸೇವಿಸುವುದರಿಂದ ದೇಹಕ್ಕೆ ಹಲವು ರೀತಿಯ ಉಪಯೋಗಗಳಿವೆ. ನುಗ್ಗೆ ಸೊಪ್ಪಿನಲ್ಲಿ ಅತ್ಯಧಿಕ ಕಬ್ಬಿಣಾಂಶ ಇರುವುದರಿಂದಾಗಿ ದೇಹಕ್ಕೆ ಹಲವು ರೀತಿಯ ವಿಟಮಿನ್‌ಗಳ ಬರಪೂರ ಮಿಶ್ರಣ ಸೇರಿಕೊಳ್ಳಲಿದೆ.
ನುಗ್ಗೆಕಾಯಿ ಸೊಪ್ಪಿನಲ್ಲಿ ನಾವು ಹಲವು ರೀತಿಯ ಖಾದ್ಯ ಮಾಡಬಹುದಾಗಿದೆ. ನುಗ್ಗೆ ಸೊಪ್ಪಿನ ಸಾರು, ಚಟ್ನಿ, ಪಲ್ಯ ಹೀಗೆ ಒಂದಲ್ಲಾ ಒಂದು ರುಚಿ ರುಚಿಯ ಖಾದ್ಯ ಮಾಡಿ ಸವಿಯಬಹುದು. ನುಗ್ಗೆ ಸೊಪ್ಪು ಬೇಯಿಸಿ ಒಂದು ಒಗ್ಗರಣೆ ಹಾಕಿ ಸವಿಯಲು ಕೂಡ ನೀಡಬಹುದು. ಈಗ ನುಗ್ಗೆ ಸೊಪ್ಪಿನ ಜ್ಯೂಸ್ ಕೂಡ ಸವಿಯಲು ಸಿಗುತ್ತದೆ. ಇದೇ ಸೊಪ್ಪಿನಲ್ಲಿ ಹಲವು ರೀತಿ ಕರಿದ ತಿಂಡಿಗಳನ್ನು ಕೂಡ ಟೇಸ್ಟ್ ಮಾಡಬಹುದು.

ಆದ್ರೆ ನಾವಿಂದು ಸ್ಪೆಷಲ್ ರುಚಿ ನೀಡುವಂತಹ ನುಗ್ಗೆ ಸೊಪ್ಪಿನ ಫ್ರೈ ಮಾಡುವ ಕುರಿತು ಇಂದು ತಿಳಿದುಕೊಳ್ಳೋಣ. ಈ ಸೊಪ್ಪಿನ ಫ್ರೈ ಆರೋಗ್ಯಕ್ಕೆ ಬಹಳ ಉತ್ತಮ. ನಾವು ಈ ಫ್ರೈ ಅನ್ನು ಬೆಳಗ್ಗೆಯ ತಿಂಡಿ, ಯಾವುದೇ ಹೊತ್ತಿನ ಊಟದ ಜೊತೆಗೆ ಸವಿಯಬಹುದು. ಎಲ್ಲಾ ಸಮಯದಲ್ಲೂ ಇದು ಅದ್ಭುತ ರುಚಿ ನೀಡಲಿದೆ. ನೀವು ಕೂಡ ಮಾಡಿ ಸವಿಯುವ ಕುರಿತು ನಾವಿಂದು ತಿಳಿಯೋಣ.
ನುಗ್ಗೆ ಸೊಪ್ಪಿನ ಫ್ರೈ ಮಾಡುವುದು ಹೇಗೆ? ನುಗ್ಗೆ ಸೊಪ್ಪಿನ ಫ್ರೈ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ನುಗ್ಗೆ ಸೊಪ್ಪಿನ ಫ್ರೈ ಮಾಡಲು ಬೇಕಾಗುವ ಪದಾರ್ಥಗಳು
- ನುಗ್ಗೆ ಸೊಪ್ಪು
- ತಂಗಿನಕಾಯಿ
- ಸಾಸಿವೆ
- ಉದ್ದಿನ ಬೇಳೆ
- ಒಣ ಮೆಣಸು
- ಲವಂಗ
- ಬೆಳ್ಳುಳ್ಳಿ
- ಕರಿಬೇವು
- ಈರುಳ್ಳಿ
- ಅರಶಿಣ ಪುಡಿ
- ಉಪ್ಪು
- ಎಣ್ಣೆ
ನುಗ್ಗೆ ಸೊಪ್ಪಿನ ಫ್ರೈ ಮಾಡುವುದು ಹೇಗೆ?
ಮೊದಲು ನುಗ್ಗೆ ಸೊಪ್ಪನ್ನು ಬಿಡಿಸಿಕೊಂಡು ಚೆನ್ನಾಗಿ ತೊಳೆದು ಅದರ ಸಣ್ಣ ಪುಟ್ಟ ಕಡ್ಡಿಗಳನ್ನು ಕತ್ತರಿಸಿಕೊಳ್ಳಿ. ಹಾಗೆ ಎಲೆಗಳನ್ನು ಕೂಡ ಬೇಕಾದರೆ ಕತ್ತರಿಸಿಕೊಳ್ಳಿ. ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು, ಎಣ್ಣೆ ಬಿಸಿಯಾದ ಬಳಿಕ ಇದಕ್ಕೆ ಸಾಸಿವೆ, ಉದ್ದಿನ ಬೇಳೆ, ಕರಿಬೇವು ಹಾಕಿ ಫ್ರೈ ಮಾಡಿಕೊಳ್ಳಿ.
ಹಾಗೆ ಒಣ ಮೆಣಸು ಬೆಳ್ಳುಳ್ಳಿ, ಹಸಿ ಮೆಣಸು, ಸಣ್ಣದಾಗಿ ಹೆಚ್ಚಿರುವ ಈರುಳ್ಳಿ, ಜಜ್ಜಿಕೊಂಡಿರುವ ಬೆಳ್ಳುಳ್ಳಿಯನ್ನು ಕೂಡ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಅನಂತರ ತೊಳೆದು ಹೆಚ್ಚಿಕೊಂಡಿರುವ ನುಗ್ಗೆ ಸೊಪ್ಪನ್ನು ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಅನಂತರ ತುರಿದ ತೆಂಗಿನಕಾಯಿಯನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಅದಾದ ಬಳಿಕ ಖಾರದ ಪುಡಿ, ಅರಶಿಣ, ಉಪ್ಪು ಹಾಕಿ ಮಿಕ್ಸ್ ಮಾಡುತ್ತಾ ಫ್ರೈ ಮಾಡಿಕೊಳ್ಳಿ. ಹಾಗೆ ಬೇಕಾದರೆ 3ರಿಂದ 4 ಸ್ಪೂನ್ ನೀರು ಹಾಕಿಕೊಂಡು ಮಿಕ್ಸ್ ಮಾಡುತ್ತಾ ಇರಿ. ಈ ಸೊಪ್ಪಿನಿಂದ ಹಸಿ ವಾಸನೆ ಹೋಗುವವರೆಗೂ ಮಿಕ್ಸ್ ಮಾಡಿ. 10ರಿಂದ 12 ನಿಮಿಷದೊಳಗೆ ಸಣ್ಣ ಉರಿಯಲ್ಲಿ ಫ್ರೈ ರೆಡಿಯಾಗುತ್ತದೆ. ನೀವು ಈ ರೀತಿ ಸೊಪ್ಪಿನ ಫ್ರೈ ಮಾಡಿದ್ರೆ ಊಟ ತಿಂಡಿ ಎಲ್ಲದಕ್ಕೂ ಫಸ್ಟ್ ಕ್ಲಾಸ್ ಆಗಿರುತ್ತೆ. ನೀವು ಕೂಡ ಒಮ್ಮೆ ಮನೆಯಲ್ಲಿ ಟ್ರೈ ಮಾಡಿ ನೋಡಿ. ಆರೋಗ್ಯಕ್ಕೂ ಇದು ಅತ್ಯುತ್ತಮ.



Click it and Unblock the Notifications
