Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಬ್ರೇಕ್ಫಾಸ್ಟ್ಗೆ ಸುಲಭದ ನುಗ್ಗೆ ಸೊಪ್ಪಿನ ಚಟ್ನಿ..! ಮಾಡುವ ವಿಧಾನ ಇಲ್ಲಿದೆ
ತಿಂಡಿಯ ಜೊತೆಗೆ ನೀವು ಯಾವುದಾದರು ಚಟ್ನಿಯನ್ನು ಆನಂದಿಸಲು ಇಷ್ಟಪಡುತ್ತೀರಿ. ಅದರಲ್ಲೂ ಊಟದ ಜೊತೆಗೂ ಕೂಡ ಆ ಚಟ್ನಿ ಅದ್ಭುತ ರುಚಿ ನೀಡುವಂತಿದ್ದರೆ ಬೆಳಗ್ಗೆ ತಿಂಡಿಗೆ ಮಾಡುವಾಗಲೇ ಹೆಚ್ಚಿನ ಪ್ರಮಾಣದಲ್ಲಿ ಮಾಡಿರುತ್ತೀರಿ. ಸಾಮಾನ್ಯವಾಗಿ ನೀವು ತಿಂಡಿಯ ಜೊತೆಗೆ ತೆಂಗಿನಕಾಯಿ ಚಟ್ನಿ, ಹುರಿಗಡಲೆ ಚಟ್ನಿ, ಕಡ್ಲೆಗಳಿಂದ ಮಾಡುವ ಚಟ್ನಿ, ಹಾಗೆ ತರಕಾರಿಗಳಿಂದ ಮಾಡುವಂತಹ ಚಟ್ನಿಯನ್ನು ಮಾಡಿರುತ್ತೀರಿ.
ಕೆಲವೊಮ್ಮೆ ಸುಲಭವಾಗಿ 2 ನಿಮಿಷದಲ್ಲಿ ಮಾಡಿ ಮುಗಿಸುವಂತಹ ಚಟ್ನಿಯನ್ನು ಮಾಡಿ ತಿಂಡಿಯ ಜೊತೆಗೆ ಸವಿಯಲು ಮುಂದಾಗುವುದು ಹೆಚ್ಚು, ಆದ್ರೆ ಎಂದಾದರು ವಿಶೇಷ ರುಚಿಯ ವಿಭಿನ್ನ ಚಟ್ನಿ ಮಾಡಲು ನೀವು ಆಲೋಚಿಸಿದ್ದರೆ ಈ ನುಗ್ಗೆ ಸೊಪ್ಪಿನ ಚಟ್ನಿಯನ್ನ ನೀವೊಮ್ಮೆ ಸವಿಯಲೇ ಬೇಕು. ನುಗ್ಗೆ ಸೊಪ್ಪಿನ ಖಾದ್ಯಗಳು ಎಷ್ಟು ರುಚಿಕರ ಎಂಬುದನ್ನು ನೀವು ತಿಳಿದಿರಬಹುದು. ಹಾಗೆ ಅದರ ಆರೋಗ್ಯಕರ ಅಂಶಗಳು ಕೂಡ ಬಹಳ ಬಹಳಷ್ಟಿದೆ.

ಈ ನುಗ್ಗೆ ಸೊಪ್ಪಿನಲ್ಲಿ ವಿಟಮಿನ್ ಸಿ, ವಿಟಮಿನ್ ಬಿ, ವಿಟಮಿನ್ ಎ, ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್ ಮತ್ತು ಅಮೈನೋ ಆಮ್ಲಗಳು ತುಂಬಿವೆ. ಇಷ್ಟೆಲ್ಲಾ ಆರೋಗ್ಯಕರ ಅಂಶಗಳ ಹೊಂದಿರುವ ಈ ನುಗ್ಗೆ ಸೊಪ್ಪಿನ ಚಟ್ನಿ ಮಾಡುವುದು ಹೇಗೆ ಅನ್ನೋದನ್ನು ತಿಳಿದಿದ್ದೀರಾ? ಹೌದು ಈ ನುಗ್ಗೆ ಸೊಪ್ಪಿನ ಚಟ್ನಿ ಅದ್ಬುತ ರುಚಿ ನೀಡಲಿದೆ.
ಊಟದ ಜೊತೆಗೆ ತಿಂಡಿಗೂ ಕೂಡ ಈ ನುಗ್ಗೆ ಚಟ್ನಿ ಸವಿಯಬಹುದು. ಹಾಗಾದರೆ ನುಗ್ಗೆ ಸೊಪ್ಪಿನ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ನುಗ್ಗೆ ಸೊಪ್ಪಿನ ಚಟ್ನಿ ಮಾಡಲು ಬೇಕಾಗುವ ವಸ್ತುಗಳು
- ನುಗ್ಗೆ ಸೊಪ್ಪು
- ಕರಿಬೇವು
- ಕಡಲೆ ಬೇಳೆ
- ಉದ್ದಿನ ಬೇಳೆ
- ಕಡಲೆ ಬೀಜ
- ಕೊತ್ತಂಬರಿ ಕಾಳು
- ಹುಣಸೆ ಹುಳಿ
- ಜೀರಿಗೆ
- ಒಣ ಮೆಣಸು
- ಬೆಳ್ಳುಳ್ಳಿ
- ಇಂಗು
- ಅಡುಗೆ ಎಣ್ಣೆ
- ಉಪ್ಪು
ನುಗ್ಗೆ ಸೊಪ್ಪಿನ ಚಟ್ನಿ ಮಾಡುವ ವಿಧಾನವೇನು?
ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಕಡಲೆ ಬೇಳೆ, ಉದ್ದಿನ ಬೇಳೆ, ಕಡಲೆ ಬೀಜ ಹಾಕಿಕೊಂಡು ಸುಮಾರು 3 ನಿಮಿಷ ಫ್ರೈ ಮಾಡಿಕೊಳ್ಳಿ. ಬಳಿಕ ಇದಕ್ಕೆ ಕಾಲು ಕಪ್ ಧನಿಯಾ ಕಾಳುಗಳನ್ನು ಹಾಕಿಕೊಂಡು ಮತ್ತೆ ಫ್ರೈ ಮಾಡಿ. ಹಾಗೆ ಜೀರಿಗೆ, ಹುಣಸೆ ಹುಳಿ ಹಾಕಿ 1 ನಿಮಿಷ ಫ್ರೈ ಮಾಡಿ.
ನಂತರ ಇದಕ್ಕೆ ಒಣ ಮೆಣಸುಗಳು, ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿಕೊಂಡು ಪಾತ್ರೆಯಿಂದ ತೆಗೆದು ಮತ್ತೊಂದು ಪಾತ್ರೆಗೆ ಹಾಕಿ ತಣ್ಣಗಾಗಲು ಬಿಡಿ. ಈಗ ಅದೇ ಬಾಣಲೆಗೆ ತೊಳೆದುಕೊಂಡಿರುವ ನುಗ್ಗೆ ಸೊಪ್ಪನ್ನು ಹಾಕಿಕೊಳ್ಳಿ. ನುಗ್ಗೆ ಸೊಪ್ಪು ಒಂದು ಕಟ್ಟು ಪೂರ್ತಿ ಹಾಕಿಕೊಳ್ಳಿ. ಹಾಗೆ ಮುಷ್ಠಿ ಕರಿಬೇವು ಸಹ ಇದಕ್ಕೆ ಹಾಕಿಕೊಳ್ಳಿ. ನಂತರ ಚೆನ್ನಾಗಿ ಮಿಕ್ಸ್ ಮಾಡುತ್ತಾ ಇರಿ.
4 ನಿಮಿಷ ಫ್ರೈ ಮಾಡಿದ ಬಳಿಕ ಈಗ ಒಲೆ ಆಫ್ ಮಾಡಿ ತಣ್ಣಗಾಗಲು ಬಿಡಿ. ಈಗ ಮಿಕ್ಸಿ ಜಾರ್ ತೆಗೆದುಕೊಂಡು ಮೊದಲು ಫ್ರೈ ಮಾಡಿದ್ದ ಬೇಳೆ ಕಾಳುಗಳನ್ನು ಹಾಕಿಕೊಂಡು ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ಪುಡಿ ಮಾಡುವಾಗ ಇದಕ್ಕೆ ಇಂಗು, ಉಪ್ಪು ಸಹ ಹಾಕಿಕೊಂಡು ರುಬ್ಬಿಕೊಳ್ಳಿ, ಇದು ತರಿತರಿಯಾಗಿ ಇರಲಿ. ತರಿ ತರಿಯಾದ ಬಳಿಕ ಇದಕ್ಕೆ ಫ್ರೈ ಮಾಡಿದ ಸೊಪ್ಪುಗಳನ್ನು ಸಹ ಹಾಕಿಕೊಂಡು ಮತ್ತೆ ರುಬ್ಬಿಕೊಳ್ಳಿ.
ನೀರು ಹಾಕಿಕೊಳ್ಳದೆ ರುಬ್ಬಿಕೊಳ್ಳಬೇಕು. ಹಾಗೆ ಮಿಕ್ಸಿಯಿಂದ ತೆಗೆದು ಒಂದು ತಟ್ಟೆಗೆ ಹಾಕಿಟ್ಟುಕೊಳ್ಳಿ. ಇದರಿಂದ ತಣ್ಣಗಾದ ಬಳಿಕ ನೀವು ಬಾಕ್ಸ್ಗೆ ಹಾಕಿಟ್ಟುಕೊಳ್ಳಬಹುದು, ಇದನ್ನು 2 ತಿಂಗಳ ಕಾಲ ಇಟ್ಟು ಸವಿಯಬಹುದು. ಇಷ್ಟಾದರೆ ಊಟಕ್ಕೆ ರುಚಿ ರುಚಿಯ ಈ ಚಟ್ನಿ ರೆಡಿಯಾಗುತ್ತದೆ. ನೀವು ಸಹ ಒಮ್ಮೆ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications
