Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಕಡಲೆ ಬೇಳೆಯ ಈ ಸ್ನ್ಯಾಕ್ಸ್ ಮಾಡೋಕೆ 3 ನಿಮಿಷ ಸಾಕು..!
ನೀವು ಸಂಜೆ ಸಮಯದಲ್ಲಿ ಸ್ನ್ಯಾಕ್ಸ್ ಮಾಡಿ ಸವಿಯುವ ಆಲೋಚನೆಯಲ್ಲಿದ್ದರೆ ಹಲವು ರೀತಿಯ ತಿಂಡಿ ನಿಮ್ಮ ನೆನಪಿಗೆ ಬರಬಹುದು. ಹಾಗೆ ಬೇಕರಿ ರುಚಿಯಲ್ಲಿ ಹಲವು ರೀತಿಯ ತಿಂಡಿ ಮಾಡಿ ಸವಿಯುವಂತಹ ಕರಿದ ತಿಂಡಿಗಳು ಕೂಡ ನಿಮಗೆ ನೆನಪಾಗಬಹುದು. ಹಾಗೆ ಕಡ್ಲೆ ಮಸಾಲೆಗಳು, ಪಕೋಡಾ, ಬೋಂಡಾ, ಬಜ್ಜಿ, ಪಾನಿಪೂರಿ, ವಡಾಪಾವ್, ಹೀಗೆ ಹತ್ತಾರು ತಿಂಡಿಗಳು ಸಂಜೆ ಸಮಯದಲ್ಲಿ ಬಾಯಲ್ಲಿ ನೀರು ತರಿಸುವುದು ಕಾಮನ್.
ಹಾಗೆ ಕೆಲವರು ಸಮಯ ಕಳೆಯಲು ಸಂಜೆ ಕಡ್ಲೆಗಳ ಸವಿಯುವುದು ನೋಡಬಹುದು. ಬೇಕರಿ ರುಚಿಯ ಕಡ್ಲೆಗಳು ನಿಮ್ಮಲ್ಲಿ ಬಾಯಿ ರುಚಿ ಹೆಚ್ಚಿಸುವ ಕೆಲಸ ಮಾಡಲಿವೆ. ಕಡಲೆಗಳನ್ನು ಬೇಕರಿಯಲ್ಲಿ ಖರೀದಿಸುವ ಬದಲು ಮನೆಯಲ್ಲಿಯೇ ಈ ಮಸಾಲೆ ಭರಿತ ಕಡಲೆಗಳ ಮಾಡಿ ಸವಿದು ನೋಡಿ. ಅದರಲ್ಲೂ ನಾವಿಂದು ಈ ಕಡಲೆ ಬೇಳೆಯಿಂದ ಮಾಡುವ ಅದ್ಭುತ ರುಚಿಯ ಮಸಾಲೆ ಕಡಲೆ ಮಾಡುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.

ಈ ಕಡಲೆ ಬೇಳೆ ಮಸಾಲೆಯನ್ನು ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿದಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಅದರಲ್ಲೂ ಈ ಕಡಲೆ ಬೇಳೆಯ ಫ್ರೈ ಟೈಮ್ ಪಾಸ್ ಮಾಡಲು ಅದ್ಭುತ ರುಚಿ ನೀಡಲಿದೆ. ಹಾಗೆ ಈ ಕಡಲೆಯನ್ನು ನೀವು ಅಂಗಡಿಯಿಂದ ತಂದು ಸವಿಯುವ ಬದಲಾಗಿ ನೀವೇ ಮನೆಯಲ್ಲೇ ಮಾಡಿ ನೋಡಿ.
ಕಡಲೆ ಬೇಳೆಯ ಸ್ನ್ಯಾಕ್ಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಕಡಲೆ ಬೇಳೆ - 200 ಗ್ರಾಂ
- ಚಾಟ್ ಮಸಾಲಾ ಪುಡಿ
- ಕೆಂಪು ಮೆಣಸಿನ ಪುಡಿ
- ಅಡುಗೆ ಎಣ್ಣೆ
- ರುಚಿಗೆ ಉಪ್ಪು
ಕಡಲೆ ಬೇಳೆಯ ಸ್ನ್ಯಾಕ್ಸ್ ಮಾಡುವ ವಿಧಾನವೇನು?
ಮೊದಲು ಕಡಲೆ ಬೇಳೆಯನ್ನು 2ರಿಂದ 3 ಬಾರಿ ತೊಳೆದು ನಂತರ ನೀರಿನಲ್ಲಿ ಕನಿಷ್ಠ 4 ಗಂಟೆಯಾದರು ನೆನೆಸಿಡಬೇಕು. ಮೊದಲು ಕಡಲೆ ಬೇಳೆಯನ್ನು ನೀರಿನಿಂದ ಬಸಿದು ತೆಗೆದಿಟ್ಟುಕೊಳ್ಳಿ. ನಂತರ ಕಾಟನ್ ಬಟ್ಟೆ ಮೇಲೆ ಹಾಕಿ ನೀರು ಇಲ್ಲದಂತೆ ಒಣಸಿಕೊಳ್ಳಿ. 15 ನಿಮಿಷ ಒಣಗಲು ಬಿಡಿ. ಈಗ ಒಂದು ಬಾಣಲೆಯಲ್ಲಿ ಎಣ್ಣೆ ಕಾಯಲು ಇಡಿ.
ಎಣ್ಣೆ ಕಾದ ಬಳಿಕ ಈ ಬೇಳೆಯನ್ನು ಜರಡಿಯ ಸಹಾಯದಿಂದ ಎಣ್ಣೆಯಲ್ಲಿ ಅದ್ದಬೇಕು. ಟೀ ಕಾಫಿಯನ್ನು ಸೋಸಲು ಇರುವಂತಹ ಜರಡಿಯಲ್ಲಿ ಇದನ್ನು ಹಾಕಿ ನಂತರ ಎಣ್ಣೆಯ ಬಾಣಲೆಯಲ್ಲಿ ಮುಳುಗಿಸಿ. ಅದು ನೊರೆ ಬಿಟ್ಟುಕೊಳ್ಳುತ್ತದೆ. ನೊರೆ ಕಡಿಮೆಯಾದ ಬಳಿಕ ಬಾಣಲೆಗೆ ಹಾಕಿಕೊಂಡು 5 ನಿಮಿಷ ಫ್ರೈ ಆಗಲು ಬಿಡಿ. ಕಡಲೆ ಬೇಳೆ ಗರಿಗರಿಯಾಗಿ ಮೇಲೆ ಬರಲು ಆರಂಭಿಸುತ್ತದೆ. ಆಗ ಅದನ್ನು ತೆಗೆದು ಪೇಪರ್ ಮೇಲೆ ಹಾಕಿಕೊಳ್ಳಿ.
ಇದರಲ್ಲಿನ ಎಣ್ಣೆ ಆ ಪೇಪರ್ ಹೀರಿಕೊಳ್ಳಬೇಕು, ಇದೇ ಮಾದರಿಯಲ್ಲಿ ಎಲ್ಲಾ ಬೇಳೆಯನ್ನು ಸಹ ಮಾಡಿಕೊಳ್ಳಿ. ನಂತರ ಒಂದು ಬೌಲ್ಗೆ ಈ ಬೇಳೆಗಳ ಹಾಕಿ ಉಪ್ಪು, ಖಾರದ ಪುಡಿ, ಚಾಟ್ ಮಸಾಲ ಪುಡಿ ಇದ್ದರೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಈ ಬೇಳೆ ಸ್ನ್ಯಾಕ್ಸ್ ರೆಡಿಯಾಗುತ್ತದೆ. ನೀವು ಕೂಡ ಮನೆಯಲ್ಲಿ ಈ ರೀತಿಯ ಸ್ನ್ಯಾಕ್ಸ್ ಮಾಡಿ ನೋಡಿ. ಸಂಜೆ ಸಮಯದಲ್ಲಿ ಅಥವಾ ಬಿಡುವಿದ್ದಾಗ ಇದನ್ನು ಸವಿಯಬಹುದು. ಮಾಡೋದು ಬಹಳ ಸುಲಭ ಹಾಗೆ ಕಡಿಮೆ ವಸ್ತುಗಳ ಮಾಡಿ ಸವಿಯಬಹುದು. ಅಂಗಡಿ, ಬೇಕರಿಯಲ್ಲಿ ಇದು ದುಬಾರಿಯಾಗಿದೆ. ಆದ್ರೆ ಮನೆಯಲ್ಲಿ ಸುಲಭವಾಗಿ ಮಾಡಿ ಸವಿಯಬಹುದು.



Click it and Unblock the Notifications