Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ತೂಕ ಇಳಿಸುವ ಈ ಹೆಸರುಕಾಳಿನ ಪಲ್ಯ ಮಾಡಿದ್ದೀರಾ? ಬಹಳ ಸುಲಭದ ರೆಸಿಪಿ!
ನೀವು ಊಟಕ್ಕೆ ಎಷ್ಟೊಂದು ಬಗೆಯ ಪಲ್ಯ ಮಾಡಿರುತ್ತೀರಿ. ಅದರಲ್ಲೂ ಹೆಚ್ಚಾಗಿ ಕಾಳುಗಳಿಂದ ಮಾಡಿದ ಪಲ್ಯವಂತೂ ರುಚಿಯಲ್ಲೂ ಕೂಡ ಎಲ್ಲರಿಗೂ ಇಷ್ಟವಾಗುವಂತಹ ಖಾದ್ಯ, ಹಾಗೆ ಕಾಳುಗಳು ಹೆಚ್ಚಾಗಿ ನಮ್ಮ ಆರೋಗ್ಯಕ್ಕೆ ಬಹಳ ಉತ್ತಮವಾದ ಅಂಶವಾಗಿರುತ್ತೆ. ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗುವ ಪ್ರೋಟಿನ್ಗಳು, ಪೋಷಕಾಂಶ, ಫೈಬರ್ ನೀಡುವಲ್ಲಿ ಕಾಳುಗಳ ಪಾತ್ರ ಮುಖ್ಯ.
ಹಾಗೆ ನಾವಿಂದು ಈ ಬೇಳೆ ಕಾಳುಗಳ ಮೂಲಕ ಮಾಡುವಂತಹ ರುಚಿಕರ ಪಲ್ಯದ ಕುರಿತು ತಿಳಿದುಕೊಳ್ಳೋಣ. ಅದರಲ್ಲೂ ಹೆಸರು ಬೇಳೆಯ ಪಲ್ಯ ಕುರಿತು ಹಾಗೆ ಈ ಪಲ್ಯ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಹೆಸರು ಕಾಳಿನಲ್ಲಿ ಅತೀ ಹೆಚ್ಚಿನ ಫೈಬರ್ ಅಂಶ ನಾವು ನೋಡಬಹುದು. ಹೀಗಾಗಿ ತೂಕ ಇಳಿಸಲು ಇಚ್ಛಿಸುವವರು ಈ ಹೆಸರು ಕಾಳಿನ ಖಾದ್ಯಗಳ ಹೆಚ್ಚು ಸೇವಿಸಬೇಕಂತೆ.

ಹಾಗೆ ಈ ಹೆಸರುಕಾಳು ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು ತುಂಬಾ ಸಹಕಾರಿಯಾಗಿದೆ. ಇದು ಮಲಬದ್ಧತೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಹಲವು ರೀತಿಯ ಸಮಸ್ಯೆಗಳ ದೂರ ಮಾಡಲು ಸಹಕಾರಿಯಾಗಿದೆ. ಹಾಗೆ ಈ ಹೆಸರು ಕಾಳು ನಿಮ್ಮ ಚರ್ಮದ ಆರೋಗ್ಯಕ್ಕೂ ಕೂಡ ಉತ್ತಮವಾಗಿದೆ. ಇಷ್ಟೆಲ್ಲಾ ಲಾಭಗಳಿರುವ ಈ ಹೆಸರು ಕಾಳಿನ ಪಲ್ಯ ಮಾಡುವುದು ಹೇಗೆ ನೋಡೋಣ.
ಈ ಹೆಸರು ಕಾಳಿನ ಪಲ್ಯ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಹಾಗೆ ಈ ಪಲ್ಯ ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹೆಸರು ಕಾಳಿನ ಪಲ್ಯ ಮಾಡಲು ಬೇಕಾಗುವ ಪದಾರ್ಥವೇನು?
- ಹೆಸರು ಕಾಳು 2 ಕಪ್ (ಮೊಳಕೆ ಬಂದಿದ್ದರೆ ಇನ್ನೂ ಉತ್ತಮ)
- ಈರುಳ್ಳಿ -1
- ಟೊಮೊಟೋ
- ಸಾಸಿವೆ
- ಇಂಗು
- ಕರಿಬೇವಿನ ಸೊಪ್ಪು
- ಕೊತ್ತಂಬರಿ ಸೊಪ್ಪು
- ಹಸಿ ಮೆಣಸಿನಕಾಯಿ
- ಅರಿಶಿಣದ ಪುಡಿ
- ಉಪ್ಪು
- ಎಣ್ಣೆ
ಹೆಸರು ಕಾಳಿನ ಪಲ್ಯ ಮಾಡುವುದು ಹೇಗೆ?
ಹೆಸರು ಕಾಳನ್ನು ಹಿಂದಿನ ದಿನ ರಾತ್ರಿಯೇ ತೊಳೆದು ನೆನೆಸಿಡಬೇಕು. ನಿಮಗೆ ಎಷ್ಟು ಬೇಕೋ ಅಷ್ಟು ನೆನೆಸಿಟ್ಟುಕೊಳ್ಳಿ. ಇಲ್ಲವೆ ಮೊಳಕೆ ಬರಿಸಿದ್ದರೂ ಬಹಳ ಉತ್ತಮ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಎಣ್ಣೆ ಬಿಸಿಯಾದ ಬಳಿಕ ಸಾಸಿವೆ, ಇಂಗು, ಹಸಿ ಮೆಣಸು, ಕರಿಬೇವು ಹಾಕಿಕೊಂಡು ಬಿಸಿ ಮಾಡಿಕೊಳ್ಳಿ.
ಅನಂತರ ಈರುಳ್ಳಿ ಹಾಕಿಕೊಂಡು 3 ನಿಮಿಷ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಈಗ ಚಿಕ್ಕದಾಗಿ ಕತ್ತರಿಸಿದ ಟೊಮೆಟೋ, ಅರಶಿಣ, ಉಪ್ಪು ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಮತ್ತೆ 3 ನಿಮಿಷ ಫ್ರೈ ಮಾಡಿಕೊಳ್ಳಿ. ಈಗ ಹೆಸರು ಕಾಳನ್ನು ನೀರಿನಿಂದ ತೆಗೆದು ಚೆನ್ನಾಗಿ ಹಿಂಡಿಕೊಂಡು ಈ ಬಾಣಲೆಗೆ ಹಾಕಿಕೊಳ್ಳಿ. ಹಾಗೆ ಅರ್ಧ ಗ್ಲಾಸ್ ನೀರನ್ನು ಕೂಡ ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಈಗ ಮುಚ್ಚಳ ಮುಚ್ಚಿ 5 ನಿಮಿಷಗಳ ಕಾಲ ಬೇಯಿಸಿಕೊಳ್ಳಬೇಕು. 5 ನಿಮಿಷದ ಬಳಿಕ ಮುಚ್ಚಳ ತೆಗೆದು ಮಿಕ್ಸ್ ಮಾಡಿಕೊಂಡು ಮತ್ತೆ 3 ನಿಮಿಷ ಮುಚ್ಚಳ ಮುಚ್ಚಿ ಬೇಯಿಸಿಕೊಳ್ಳಿ. ಅನಂತರ ಮೇಲೆ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಂಡರೆ ಕಾಳಿನ ಪಲ್ಯ ರೆಡಿಯಾಗುತ್ತದೆ. ನೀವು ಇದಕ್ಕೆ ತೆಂಗಿನ ತುರಿ ಹಾಕಿಕೊಂಡು ಕೂಡ ಮಾಡಿಕೊಳ್ಳಬಹುದು. ಆದ್ರೆ ತೂಕ ಇಳಿಸುವ ಕಾರಣಕ್ಕೆ ನೀವು ಮಾಡುವುದಾದರೆ ತೆಂಗಿನಕಾಯಿ ಬಳಸಬೇಡಿ, ಹಾಗೆಯೇ ಮಾಡಿ ಸವಿಯಿರಿ. ಈ ರೀತಿ ಮಾಡಿದರೆ ಊಟ ತಿಂಡಿ ಎಲ್ಲದಕ್ಕೂ ಪಲ್ಯ ಬಳಸಬಹುದು.



Click it and Unblock the Notifications