Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ತಿಂಡಿ ಯಾವುದೇ ಇರಲಿ ಈ ಹೆಸರು ಬೇಳೆ ತಡ್ಕಾ ಸಖತ್ ರುಚಿ ನೀಡುತ್ತೆ..!
ನೀವು ಊಟ, ತಿಂಡಿಗೆ ಅದರಲ್ಲೂ ಚಪಾತಿ, ದೋಸೆ, ಪೂರಿ, ಪರೋಟ ಸವಿಯಲು ಒಂದೊಳ್ಳೆ ಖಾದ್ಯ ಮಾಡಲು ಯೋಚಿಸಿದ್ದರೆ ಹಲವು ಹೆಸರುಗಳು ನಿಮಗೆ ಹೊಳೆಯಬಹುದು. ಅದರಲ್ಲೂ ಬೇಳೆ ಅಥವಾ ಕಾಳುಗಳಿಂದ ಮಾಡುವಂತಹ ಯಾವುದಾದರು ಖಾದ್ಯ ಇದ್ದರೆ ಅದರ ರುಚಿಯಿಂದ ತಿಂಡಿ ಹಾಗೂ ಊಟದ ರುಚಿಯೂ ಹೆಚ್ಚಾಗುತ್ತೆ. ಸದ್ಯ ನಾವಿಂದು ಊಟ ತಿಂಡಿ ಎಲ್ಲದಕ್ಕೂ ರುಚಿಸುವ ತಡ್ಕಾ ಮಾಡುವ ಕುರಿತು ತಿಳಿಯೋಣ.
ನೀವು ದಾಲ್ ತಡ್ಕಾ ಮಾಡಿ ಸವಿದಿರುತ್ತೀರಿ. ಅದೇ ರೀತಿ ಹೆಸರು ಕಾಳಿನ ತಡ್ಕಾ ಮಾಡಿ ಸವಿಯುವುದು ಹೇಗೆ ಅನ್ನೋದನ್ನು ನಾವು ತಿಳಿಯೋಣ. ಈ ಹೆಸರು ಬೇಳೆಯ ಆರೋಗ್ಯಕರ ಅಂಶಗಳ ಜೊತೆಗೆ ಅಡುಗೆಗೂ ರುಚಿ ತರಲಿದೆ. ನೀವು ಬ್ರೇಕ್‌ಫಾಸ್ಟ್‌ನಲ್ಲಿ ಯಾವುದೇ ತಿಂಡಿ ಮಾಡಿದರೂ ಈ ತಡ್ಕಾ ಎಲ್ಲದಕ್ಕೂ ರುಚಿ ನೀಡಲಿದೆ.

ಹೆಸರು ಕಾಳಿನ ತಡ್ಕಾ ರುಚಿಯಲ್ಲಿ ಅದ್ಭುತವಾಗಿರುತ್ತೆ. ಹೀಗಾಗಿ ಬೆಳಗ್ಗೆ ತಿಂಡಿಯ ಜೊತೆ ಸವಿಯಲು ಇದು ಬಹಳ ರುಚಿ ನೀಡಲಿದೆ. ಒಮ್ಮೆ ನೀವು ಸವಿದರೆ ಪದೇ ಪದೇ ತಿಂಡಿಯ ಜೊತೆಗೆ ಸವಿಯಲು ಇಷ್ಟಪಡುತ್ತೀರಿ, ಹಾಗೆ ಊಟದ ಜೊತೆಗೂ ಸೈಡ್ಸ್ ರೀತಿ ಇದನ್ನು ಸವಿಯಬಹುದು. ಹಾಗಾದ್ರೆ ಈ ಹೆಸರು ಬೇಳೆ ತಡ್ಕಾ ಮಾಡುವುದು ಹೇಗೆ ಅನ್ನೋದನ್ನು ನೋಡೋಣ.
ಹೆಸರು ಕಾಳು ತಡ್ಕಾ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಹೆಸರು ಕಾಳು ತಡ್ಕಾ ಮಾಡುವ ವಿಧಾನವೇನು? ಹೆಸರು ಕಾಳು ತಡ್ಕಾ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಎಂಬ ಮಾಹಿತಿ ಇಲ್ಲಿದ.
ಹೆಸರು ಕಾಳು ತಡ್ಕಾ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಹೆಸರು ಬೇಳೆ
- ಜೀರಿಗೆ
- ಬೆಳ್ಳುಳ್ಳಿ
- ಶುಂಠಿ
- ಹಸಿರು ಮೆಣಸಿನಕಾಯಿ
- ಒಣ ಮೆಣಸಿನಕಾಯಿ
- ಈರುಳ್ಳಿ
- ಟೊಮೆಟೊ
- ಅರಿಶಿನ ಪುಡಿ
- ಕೊತ್ತಂಬರಿ ಪುಡಿ
- ಜೀರಾ ಪುಡಿ
- ತುಪ್ಪ
- ಕೊತ್ತಂಬರಿ ಸೊಪ್ಪು
- ಎಣ್ಣೆ
- ಉಪ್ಪು
ಹೆಸರು ಕಾಳು ತಡ್ಕಾ ಮಾಡುವ ವಿಧಾನ ಇಲ್ಲಿದೆ
ಮೊದಲು ಈ ಹೆಸರು ಕಾಳನ್ನು ಹಿಂದಿನ ದಿನ ರಾತ್ರಿಯೇ ಚೆನ್ನಾಗಿ ತೊಳೆದು ನೆನೆಸಿಡಬೇಕು. ರಾತ್ರಿ ಪೂರ್ತಿ ಈ ಕಾಳು ನೆನೆಯಬೇಕು. ಹಾಗೆ ಬಳಗ್ಗೆ ಈ ಹೆಸರು ಕಾಳನ್ನು ಕುಕ್ಕರ್‌ಗೆ ಹಾಕಿಕೊಂಡು 2 ಸೀಟಿ ಹೊಡೆಸಿಕೊಂಡು ಇಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟುಕೊಂಡು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿಕೊಂಡು ಬಳಿಕ ಸಾಸಿವೆ, ಜೀರಿಗೆ, ಬೆಳ್ಳುಳ್ಳಿ, ಶುಂಠಿ, ಹಸಿ ಮೆಣಸು, ಒಣ ಮೆಣಸು ಈ ಎಲ್ಲಾ ವಸ್ತುಗಳನ್ನು ಸಣ್ಣದಾಗಿ ಹೆಚ್ಚಿಕೊಂಡು ಹಾಕಿಕೊಳ್ಳಿ.
ನಂತರ 1 ನಿಮಿಷ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಹೀಗೆ ಫ್ರೈ ಮಾಡಿಕೊಳ್ಳುವಾಗ ಸಣ್ಣದಾಗಿ ಹೆಚ್ಚಿಕೊಂಡಿರುವ ಎರಡು ಈರುಳ್ಳಿಯನ್ನು ಇದಕ್ಕೆ ಹಾಕಿ ಮತ್ತೆ 2 ನಿಮಿಷ ಫ್ರೈ ಮಾಡಿಕೊಳ್ಳಿ. ಈ ಖಾದ್ಯಕ್ಕೆ ಎಣ್ಣೆ ಸ್ವಲ್ಪ ಹೆಚ್ಚಾಗಿಯೇ ಬಳಸಿ. ಈಗ ಟೊಮೆಟೋ ಹಾಕಿ ಬೇಯಲು ಬಿಡಿ. ನಂತರ ಖಾರದ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ ಹಾಕಿಕೊಂಡು ಗೊಜ್ಜು ಆಗುವಂತೆ ಫ್ರೈ ಮಾಡಿಕೊಳ್ಳಿ.
ಈಗ ಇದಕ್ಕೆ ಉಪ್ಪು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಕೊನೆಯಲ್ಲಿ ಬೆಂದಿರುವ ಹೆಸರು ಕಾಳನ್ನು ಇದಕ್ಕೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ನಿಮಗೆ ನೀರ ಬೇಕಾದರೆ ಹಾಕಿಕೊಳ್ಳಿ. ನಂತರ 5 ನಿಮಿಷ ಚೆನ್ನಾಗಿ ಕುದಿಬರಲು ಬಿಡಬೇಕು. ಕೊನೆಯದಾಗಿ ಬೇಕಾದರೆ ತುಪ್ಪ ಹಾಕಿ. ಹಾಗೆ ಇಳಿಸುವ ಮುನ್ನ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಂಡು ಇಳಿಸಿಕೊಳ್ಳಿ.
ಇಷ್ಟಾದರೆ ಹೆಸರು ಕಾಳಿನ ತಡ್ಕಾ ರೆಡಿಯಾಗುತ್ತದೆ ನೀವು ಕೂಡ ಮನೆಯಲ್ಲಿ ಬ್ರೇಕ್ ಫಾಸ್ಟ್‌ಗೆ ಅಥವಾ ಊಟಕ್ಕೆ ಇದನ್ನೊಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications