Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
ಕೆಲಸ ಮಾಡಲು ದೇಹಕ್ಕೆ ಬಲಬೇಕಾದರೆ ಈ ಹೆಸರುಕಾಳಿನ ಸೂಪರ್ಫುಡ್ ತಿನ್ನಿ! ವಾರಕ್ಕೊಂದು ಉಂಡೆ ಸಾಕು!
ಆರೋಗ್ಯದ ದೃಷ್ಟಿಯಿಂದ ನೀವು ಮನೆಯಲ್ಲಿ ಹಲವು ರೀತಿಯ ಖಾದ್ಯಗಳ ಮಾಡಿ ಸವಿಯೋದು ನೋಡಿರುತ್ತೇವೆ. ಅದ್ರಲ್ಲೂ ಬೇಳೆ, ಕಾಳುಗಳಿಂದ ಮಾಡಲಾಗುವ ಹಾಗೆ ಸಿರಿಧಾನ್ಯಗಳ ತಿನಿಸುಗಳು ನಿಮ್ಮ ದೇಹಕ್ಕೆ ಬಹಳ ಉತ್ತಮ. ಇದರಿಂದ ದೇಹದ ಹಲವು ಅವಶ್ಯಕತೆಗಳು, ಅದ್ರಲ್ಲೂ ಹಲವು ರೀತಿಯ ವಿಟಮಿನ್, ಫೋಷಕಾಂಶಗಳು ಸಿಗುವುದು ನಿಮ್ಮ ಹತ್ತಾರು ಸಮಸ್ಯೆಗಳನ್ನು ಬಗೆಹರಿಸಲಿದೆ. ಹಾಗೆ ಒಂದಿಷ್ಟು ಖಾದ್ಯಗಳಿಂದ ನಿಮ್ಮ ದೇಹದ ಒಟ್ಟಾರೆ ಆರೋಗ್ಯ ಕಾಪಾಡಬಹುದು.
ಹೀಗೆ ದೇಹಕ್ಕೆ ಆರೋಗ್ಯಕರವಾದ ಹಾಗೆ ಎಲ್ಲರಿಗೂ ಸವಿಯಲು ಇಷ್ಟವಾಗುವಂತಹ ರುಚಿ ರುಚಿಯಾದ ಹೆಸರು ಕಾಳಿನ ಚಿಕ್ಕಿನುಂಡೆ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಈ ಉಂಡೆಯು ನಿಮ್ಮ ಆರೋಗ್ಯಕ್ಕೆ ಬಹಳ ಉತ್ತಮ. ನಿಮ್ಮ ತೂಕ ಇಳಿಸಲು ಹಾಗೂ ಹೆಚ್ಚಾಗಿಸಲು ಎರಡೂ ಕೆಲಸಕ್ಕೂ ಇದು ನೆರವಾಗಲಿದೆ. ಮೊಳಕೆ ಬರಿಸಿದ ಕಾಳುಗಳು ನಿಮಗೆ ತೂಕ ಹೆಚ್ಚಳವಾಗಲು ಸಹಕಾರಿ.
ಹಾಗೆ ನಿಮ್ಮ ದೇಹ ನಿಶಕ್ತಿಯಿಂದ ಕೂಡಿದ್ದರೆ ಅಥವಾ ಕೆಲಸ ಮಾಡಲು ಹೆಚ್ಚು ಸಾಮರ್ಥ್ಯ ಇಲ್ಲದೆ ಇದ್ದರೆ ಅಥವಾ ಕೆಲಸ ಮಾಡುವಾಗ ಬಹುಬೇಗ ಸುಸ್ತಾಗುವುದು, ದಣಿವು ಕಾಡುವುದು ಅಥವಾ ವಿಪರೀತ ಬೆವರು ಬರುವುದು ನಿಮಗೆ ಕಾಡುತ್ತಿದ್ದರೆ ಈ ಚುಕ್ಕಿನುಂಡೆ ಮಾಡಿ ಸವಿಯುವುದು ಉತ್ತಮ. ಇದು ನಿಮ್ಮ ಹಲವು ದೈಹಿಕ ಸಮಸ್ಯೆಗಳನ್ನು ಬಗೆಹರಿಸಲಿದೆ. ಹಾಗಾದ್ರೆ ಈ ತಿಂಡಿ ಮಾಡುವುದು ಹೇಗೆ?
ಚಿಕ್ಕಿನುಂಡೆ ಮಾಡುವ ಸುಲಭದ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ?, ಮಾಡಲು ಯಾವೆಲ್ಲಾ ವಸ್ತುಗಳು ಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಚಿಕ್ಕಿನುಂಡೆ ಮಾಡಲು ಬೇಕಾಗುವ ವಸ್ತುಗಳು
- ಹೆಸರು ಕಾಳು
- ಬೆಲ್ಲ
- ಮೈದಾ
- ಅರಶಿಣ
- ಎಣ್ಣೆ
- ಉಪ್ಪು
- ತೆಂಗಿನಕಾಯಿ ತುರಿ
ಚಿಕ್ಕಿನುಂಡೆ ಮಾಡುವ ಸುಲಭದ ವಿಧಾನವೇನು?
ಮೊದಲು ಒಂದು ಕುಕ್ಕರ್ಗೆ ಒಂದು ಕಪ್ ಹೆಸರು ಕಾಳು ತೆಗೆದುಕೊಂಡು ತೊಳೆದು ಅನಂತರ ಬೇಯಲು ಬೇಕಾದಷ್ಟು ಎರಡೂವರೆ ಕಪ್ ನೀರು ಹಾಕಿ ಮುಚ್ಚಳ ಮುಚ್ಚಿ 4 ಅಥವಾ 5 ಸೀಟಿ ಹೊಡೆಯಲು ಬಿಡಿ. ಬಳಿಕ ಕುಕ್ಕರ್ನಲ್ಲಿ ಸ್ವಲ್ಪ ಪುಡಿ ಮಾಡಿಕೊಳ್ಳಬೇಕು. ಇದು ಅಂಟು ಪೇಸ್ಟ್ ರೀತಿ ಆಗಬೇಕು. ಈಗ ಇದಕ್ಕೆ ಅರ್ಧ ಕಪ್ ಬೆಲ್ಲದ ಪುಡಿಯನ್ನು ಸೇರಿಸಿಕೊಂಡು ಮಿಕ್ಸ್ ಮಾಡಿ.
ಕಾಲು ಕಪ್ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಬೆಲ್ಲ ಅದರಲ್ಲಿ ಕರಗಬೇಕು. ಈಗ ಇದಕ್ಕೆ 2 ಕಪ್ ತೆಂಗಿನಕಾಯಿ ತುರಿ ಸೇರಿಸಿ. ತೆಂಗಿನಕಾಯಿ ತುರಿ ಕೂಡ ಚೆನ್ನಾಗಿ ಮಿಕ್ಸ್ ಆಗುವಂತೆ ಮಿಶ್ರಣ ಮಾಡಿ 1 ಸ್ಪೂನ್ ತುಪ್ಪ, ಏಲಕ್ಕಿ ಪುಡಿ ಸಹ ಸೇರಿಸಿಕೊಂಡು ಗ್ಯಾಸ್ ಆಫ್ ಮಾಡಿಕೊಳ್ಳಿ. ಇದನ್ನು ಒಂದು ಪಾತ್ರೆಗೆ ಹಾಕಿಟ್ಟುಕೊಂಡು ಸ್ವಲ್ಪ ತನ್ಣಗಾಗಲು ಬಿಡಿ. ಈ ಹೂರ್ಣ ತಣ್ಣಗಾಗುವ ಮೊದಲು ಒಂದು ಮೈದಾ ಹಿಟ್ಟನ್ನು ಕಲಸಿಕೊಳ್ಳಿ.
ಒಂದು ಬೌಲ್ಗೆ 1 ಕಪ್ ಮೈದಾ ಹಿಟ್ಟು 2 ಸ್ಪೂನ್ ಅಕ್ಕಿ ಹಿಟ್ಟು ಅರಶಿಣ ಪುಡಿ, ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಗಂಟುಗಳು ಇಲ್ಲದಂತೆ ದೋಸೆ ಹಿಟ್ಟಿನ ಹದಕ್ಕೆ ಮಿಶ್ರಣ ರೆಡಿ ಮಾಡಬೇಕು. ಗಟ್ಟಿಯಾಗಿಯೂ ಬಹಳ ತೆಳುವಾಗಿಯೂ ಇರಬಾರದು. ಇದನ್ನು ಬದಿಗಿಟ್ಟುಕೊಳ್ಳಿ.
ಈಗ ಹೂರ್ಣವನ್ನು ನಿಂಬೆ ಹಣ್ಣಿನ ಗಾತ್ರದ ಉಂಡೆಯಾಗಿ ಕಟ್ಟಿಕೊಳ್ಳಿ. ಈಗ ಈ ಉಂಟೆಗಳನ್ನು ಮೈದಾ ಹಿಟ್ಟಿನ ಒಳಗೆ ಹಾಕಿ, ಈ ಹಿಟ್ಟು ಚೆನ್ನಾಗಿ ಹಿಡಿಯಬೇಕು. ಹೀಗೆ ಅದ್ದಿಕೊಂಡ ಉಂಡೆಯನ್ನು ತೆಗೆದು ಎಣ್ಣೆ ಬಾಣಲೆಯಲ್ಲಿ ಹಾಕಿ ಕರಿದುಕೊಳ್ಳಬೇಕು. ಇಷ್ಟಾದರೆ ನಿಮ್ಮ ಮುಂದೆ ಚಿಕ್ಕಿನುಂಡೆ ಸಿದ್ದವಾಗುತ್ತೆ. ನೀವು ಸಹ ಮನೆಯಲ್ಲಿ ಈ ಉಂಡೆ ಮಾಡಿ ಸವಿದು ನೋಡಿ.



Click it and Unblock the Notifications
