Latest Updates
-
ಡೇಟಿಂಗ್ ಆಪ್ ಬಳಸುವಾಗ ಎಚ್ಚರ: ಸೈಬರ್ ವಂಚನೆ ಮತ್ತು ಸೆಕ್ಸ್ಟಾರ್ಷನ್ನಿಂದ ಪಾರಾಗುವುದು ಹೇಗೆ? -
ಈರುಳ್ಳಿ ಬೆಲೆ ಇಳಿಕೆ: ಗೃಹಿಣಿಯರಿಗೆ ನಿರಾಳ, ಬಜೆಟ್ ಸ್ನೇಹಿ ಅಡುಗೆಗೆ ಈಗ ಸುಲಭ! -
ಕಿಚ್ಚ ಸುದೀಪ್-ಪ್ರೇಮ್ ಟೀಸರ್ ರಿಲೀಸ್: ಸಂಭ್ರಮಿಸಲು ಸಿದ್ಧರಾಗಿ, ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ದೆಹಲಿ ವಿಷಕಾರಿ ಗಾಳಿ: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 15 ನಿಮಿಷದ ವರ್ಕೌಟ್ -
ಮದುವೆ ಭರವಸೆ ವಂಚನೆ: ಹಣ ಕೊಟ್ಟು ರಾಜಿ ಮಾಡಿಕೊಳ್ಳುವವರಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ -
ಚಳಿಗಾಲದ ಸ್ಪೆಷಲ್: 30 ನಿಮಿಷದಲ್ಲಿ ತಯಾರಾಗುವ 5 ಹೈ-ಪ್ರೋಟೀನ್, ಡಯಾಬಿಟಿಸ್-ಸ್ಮಾರ್ಟ್ ಸೂಪ್ಗಳು! -
ಸಂವಿಧಾನ ದಿನ: ಬೆಳಿಗ್ಗೆ 11 ಗಂಟೆಗೆ ಪ್ರಸ್ತಾವನೆ ಓದಿ, ನಿಮ್ಮ ಡಿಜಿಟಲ್ ಪ್ರಮಾಣಪತ್ರ ಪಡೆಯುವುದು ಹೇಗೆ? -
ಮಳೆಗಾಲದ ಬೆಳಿಗ್ಗೆ ಆಲಸ್ಯವೇ? ಬೆಂಗಳೂರಿನಲ್ಲಿ ಫಿಟ್ ಆಗಿರಲು 20 ನಿಮಿಷಗಳ ಸರಳ ವರ್ಕೌಟ್ ಇಲ್ಲಿದೆ! -
16 ದಿನಗಳ ಸುರಕ್ಷತಾ ಅಭಿಯಾನ: ನಿಮ್ಮ ರಕ್ಷಣೆಗಾಗಿ ಈ ತುರ್ತು ಸಂಖ್ಯೆಗಳು ಮತ್ತು ಸಲಹೆಗಳು ಇಂದೇ ತಿಳಿಯಿರಿ -
ಸಪ್ಲಿಮೆಂಟ್ ಖರೀದಿಸುವ ಮುನ್ನ ಎಚ್ಚರ! ಮಹಾರಾಷ್ಟ್ರ FDA ಕಠಿಣ ನಿಯಮ: ಸುಳ್ಳು ಜಾಹೀರಾತುಗಳಿಗೆ ಬ್ರೇಕ್
ಗಣೇಶನಿಗೆ ಪ್ರಿಯವಾದ ಮೋದಕ ಮಾಡೋದು ಹೇಗೆ? ಇಲ್ಲಿದೆ ಸುಲಭ ರೆಸಿಪಿ..!
ಗಣೇಶನ ಹಬ್ಬ ಸಮೀಪಿಸುತ್ತಿದೆ. ಗಣೇಶನ ಹಬ್ಬದಲ್ಲಿ ಒಂದು ಸಿಹಿ ತಿಂಡಿ ಎಲ್ಲರ ಮನೆಯಲ್ಲೂ ಮಾಡಿಯೇ ಮಾಡುತ್ತಾರೆ. ಅದ್ರಲ್ಲೂ ಗಣೇಶನಿಗೆ ಪ್ರಿಯವಾದ ಮೋದಕ ಮಾಡಿರುತ್ತಾರೆ. ಮೋದಕವನ್ನು ಹಲವು ರೀತಿಯಲ್ಲಿ ಮಾಡಬಹುದು. ಅದ್ರಲ್ಲಿ ರವೆಯಿಂದ ಮಾಡುವ ಮೋದಕ ಬಹಳ ರುಚಿಯಾಗಿರುತ್ತೆ.
ಗಣೇಶ ಚತುರ್ಥಿಯಂದು ಗಣೇಶನಿಗೆ ನೈವೇದ್ಯ ಮಾಡಲು ಮೋದಕ ಮಾಡಿಯೇ ಮಾಡುತ್ತಾರೆ. ಗಣಪತಿಯ ಆರಾಧನೆಗೆ ಮುಖ್ಯವಾಗಿ ಲಂಬೋದರನಿಗೆ ಮೋದಕ ಬೇಕೇ ಬೇಕು. ಮೋದಕ ನೈವೇದ್ಯದಿಂದ ಗಣೇಶ ಪ್ರಸನ್ನನಾಗುತ್ತಾನೆ ಎಂಬ ನಂಬಿಕೆಯೂ ಇದೆ. ಈ ಮೋದಕದ ರುಚಿಗೆ ಮನಸೋಲದವರೇ ಇಲ್ಲ. ಮೋದಕ ಮಾಡಿ ಗಣೇಶನಿಗೆ ಅರ್ಪಿಸಿ ಬಳಿಕ ಎಲ್ಲರು ಸವಿಯುತ್ತಾರೆ.

ಗಣೇಶನ ಹಬ್ಬದಂದು ಸಿಹಿ ಕಡಬು ಹಾಗೂ ಮೋದಕ ಮಾಡುವುದು ಸಂಪ್ರದಾಯವಾಗಿದೆ. ಹೀಗಾಗಿ ಮೋದಕ ಮಾಡಲು ಗೃಹಿಣಿಯರು ಮುಂದಾಗುವುದು ನೋಡಬಹುದು. ಹಾಗಾದ್ರೆ ಗಣೇಶನಿಗೆ ಪ್ರಿಯವಾದ ಮೋದಕ ಮಾಡುವುದು ಹೇಗೆ? ಮೋದಕ ಮಾಡಲು ಬೇಕಾಗುವ ಪದಾರ್ಥಗಳೇನು? ಮಾಡುವ ವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೋದಕ ಮಾಡಲು ಬೇಕಾಗುವ ಪದಾರ್ಥಗಳು
ಮೈದಾಹಿಟ್ಟು - 250 ಗ್ರಾಮ್
ಚಿರೋಟಿ ರವೆ - 2 ಸ್ಪೂನ್
ಬೆಲ್ಲ - 200 ಗ್ರಾಮ್
ಕೊಬ್ಬರಿ ತುರಿ - 100 ಗ್ರಾಮ್
ಹುರಿಕಡಲೆ - 100 ಗ್ರಾಮ್
ಏಲಕ್ಕಿ - 5
ಎಣ್ಣೆ
ಮೋದಕ ಮಾಡುವುದು ಹೇಗೆ?
ಮೊದಲು ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಮೈದಾ ಹಿಟ್ಟು, ಚಿರೋಟಿ ರವೆ, ಎಣ್ಣೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಸ್ವಲ್ಪ ಸ್ವಲ್ಪ ನೀರು ಹಾಕಿಕೊಂಡು ಹಿಟ್ಟು ಮಾಡಿಕೊಳ್ಳಿ. ಚಪಾತಿ ಹಿಟ್ಟಿನ ಹದವಾಗಿ ಈ ಹಿಟ್ಟು ರೆಡಿ ಮಾಡಿಕೊಂಡು ಬದಿಗೆ ಇಟ್ಟುಕೊಳ್ಳಿ. ಈಗ ಮೋದಕ ಮಾಡಲು ಹೂರ್ಣ ಮಾಡಿಕೊಳ್ಳಿ.
ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಹುರಿಗಡಲೆ ಹಾಕಿ, ಏಲಕ್ಕಿ ಹಾಕಿ ಚೆನ್ನಾಗಿ ಪೌಡರ್ ಮಾಡಿಕೊಳ್ಳಿ. ನುಣ್ಣಗೆ ಪೌಡರ್ ಆಗುವಂತೆ ರುಬ್ಬಿದ ಬಳಿಕ ಇದಕ್ಕೆ ಬೆಲ್ಲ, ಒಣ ಕೊಬ್ಬರಿ ಹಾಕಿ ಒಂದು ಸುತ್ತು ರುಬ್ಬಿಕೊಳ್ಳಿ. ತರಿತರಿಯಾಗಿದ್ದರೆ ಸಾಕಾಗುತ್ತದೆ. ಇಷ್ಟಾದರೆ ಹೂರ್ಣ ರೆಡಿಯಾಗುತ್ತದೆ.
ಈಗ ಮೋದಕ ಮಾಡಲು ಮುಂದಾಗಿ, ಒಂದು ನಿಂಬೆ ಗಾತ್ರದಲ್ಲಿ ಕಲಸಿಟ್ಟ ಹಿಟ್ಟು ತೆಗೆದುಕೊಂಡು ಲಟ್ಟಿಣಿಗೆಯಲ್ಲಿ ಸ್ವಲ್ಪ ಲಟ್ಟಿಸಿಕೊಳ್ಳಿ. ನಂತರ ಮಧ್ಯದಲ್ಲಿ ಹೂರ್ಣವನ್ನು ಇಟ್ಟು ಪ್ಯಾಕ್ ಮಾಡಿಕೊಳ್ಳಿ. ಇದಕ್ಕೆ ತುದಿಯಲ್ಲಿ ನೀರು ಚಿಮುಕಿಸಿದರೆ ಹಿಟ್ಟು ಒಡೆಯುವುದಿಲ್ಲ ಗಟ್ಟಿಯಾಗಿ ಅಂಟಿಕೊಳ್ಳುತ್ತದೆ. ಇಲ್ಲದಿದ್ದರೆ ಕರಿಯುವಾಗ ಹೂರ್ಣ ಹೊರಗೆ ಬರಬಹುದು.
ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಕಾಯಲು ಬಿಡಿ. ಎಣ್ಣೆ ಕಾದ ಬಳಿಕ ಒಂದೊಂದೇ ಮೋದಕವನ್ನು ಎಣ್ಣೆಯೊಳಗೆ ಬಿಟ್ಟುಕೊಳ್ಳಿ. ಮಧ್ಯಮ ಉರಿಯಲ್ಲಿ ಮೋದಕ ಕರಿಯಬೇಕು. ಒಳಗಿರುವ ಹೂರ್ಣ ಸಹ ಎಣ್ಣೆಯಲ್ಲಿ ಚೆನ್ನಾಗಿ ಬೇಯಬೇಕಾಗುತ್ತದೆ. ಆಗಾಗ ಮೋದಕವನ್ನು ತಿರುಗಿಸುತ್ತಾ ಇರಿ. ಮೋದಕ ಗೋಲ್ಡನ್ ಕಲರ್ಗೆ ಬರುವವರೆಗೂ ಕರಿದುಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಮೋದಕ ರೆಡಿಯಾಗುತ್ತದೆ. ಈ ಮೋದಕವನ್ನು ಪೂಜೆ ವೇಳೆ ಗಣೇಶನ ಮುಂದೆ ಇಟ್ಟು ನೈವೇದ್ಯ ಮಾಡಬಹುದು. ಜೊತೆಗೆ ಊಟದ ಜೊತೆ ಸವಿಯಲು ನೀಡಬಹುದು. ಇದನ್ನು ಸ್ಟೀಲ್ ಡಬ್ಬದಲ್ಲಿ ಹಾಕಿ ಇಟ್ಟರೆ 20ಕ್ಕೂ ಹೆಚ್ಚು ದಿನ ಇಟ್ಟು ಸವಿಯಬಹುದು.
ಆದ್ರೆ ಈಗ ಮೋದಕ ಅಂಗಡಿ, ಬೇಕರಿಗಳಲ್ಲೂ ಸಿಗುತ್ತದೆ. ದರವೂ ತುಸು ಹೆಚ್ಚಾಗಿರುತ್ತೆ, ಆದ್ರೆ ಮನೆಯಲ್ಲೇ ಮಾಡಿದ ಮೋದಕ ನೈವೇದ್ಯಕ್ಕೆ ಸೂಕ್ತ ಹಾಗೆ ಸವಿಯಲು ಹೆಚ್ಚು ರುಚಿ ನೀಡಲಿದೆ.



Click it and Unblock the Notifications
