Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಸಿರಿಧಾನ್ಯದಿಂದ ರೋಸ್ಟೆಡ್ ದೋಸೆ ಮಾಡಿದ್ರೆ ಬಾಯಲ್ಲಿ ನೀರು ಬರುತ್ತೆ..!
ಬ್ರೇಕ್ಫಾಸ್ಟ್ಗೆ ನೀವು ದೋಸೆ ಮಾಡಿ ಸವಿಯುವುದು ಕಾಮನ್. ಅದರಲ್ಲೂ ದಕ್ಷಿಣ ಭಾರತದಲ್ಲಿ ದೋಸೆ ಅತ್ಯಂತ ಜನಪ್ರಿಯ ಖಾದ್ಯ. ದೋಸೆಯಲ್ಲಿ ಹತ್ತಾರು ಬಗೆ ಇದೆ. ಎಲ್ಲಾ ಬಗೆಯು ಒಂದೊಂದು ರೀತಿಯ ರುಚಿ ನೀಡಲಿದೆ. ಹೀಗಾಗಿ ವಿಭಿನ್ನ ರುಚಿಯ ದೋಸೆಗಳ ಮಾಡುವಂತಹ ಕ್ಯಾಂಟೀನ್ಗಳಿ, ಹೋಟೆಲ್ಗಳನ್ನು ನಾವು ನೋಡಬಹುದು.
ದೋಸೆಯ ಬಗೆಯಲ್ಲಿ ಜನರು ಹೆಚ್ಚಾಗಿ ಬೆಣ್ಣೆ ದೋಸೆ, ಮಸಾಲ ದೋಸೆ, ಈರುಳ್ಳಿ ದೋಸೆ, ಖಾಲಿ ದೋಸೆ, ರವೆ ದೋಸೆಯನ್ನು ಇಷ್ಟಪಡುತ್ತಾರೆ. ಖುದ್ದು ಅವರೇ ಮನೆಯಲ್ಲಿ ಮಾಡಿ ಸವಿಯುವುದು ಕೂಡ ಉಂಟು. ಈಗಂತು ದೋಸೆಗಳಲ್ಲಿ ಹೊಸ ಹೊಸ ವಿಧಾನಗಳು, ಹೊಸ ಶೈಲಿಯಲ್ಲಿ ಮಾಡುವಂತಹ ದೋಸೆಗಳ ನಾವು ಸವಿದಿರುತ್ತೇವೆ.

ಇಂದು ನಾವು ವಿಶೇಷವಾಗಿ ಹೊಸ ರೀತಿಯಲ್ಲಿ ಸಿರಿಧಾನ್ಯಗಳಿಂದ ಮಾಡುವಂತಹ ಅತ್ಯಂತ ರುಚಿಕರ ಹಾಗೂ ಆರೋಗ್ಯಕ್ಕೂ ಉತ್ತಮವಾದ ದೋಸೆ ಮಾಡುವ ಕುರಿತು ತಿಳಿದುಕೊಳ್ಳೋಣ. ಈ ಸಿರಿಧಾನ್ಯದ ದೋಸೆ ಸವಿಯಲು ಬಹಳ ರುಚಿಯಾಗಿರುತ್ತೆ. ರೋಸ್ಟ್ ಮಾಡಿದ ಈ ಸಿರಿಧಾನ್ಯದ ದೋಸೆ ಸಖತ್ ರುಚಿ ನೀಡಲಿದೆ. ನಾವಿಂದು ಈ ದೋಸೆ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
ಸಿರಿಧಾನ್ಯದ ದೋಸೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ? ಹಿಟ್ಟು ಹೇಗೆ ರೆಡಿ ಮಾಡಿಕೊಳ್ಳಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸಿರಿಧಾನ್ಯದ ದೋಸೆ ಮಾಡಲು ಬೇಕಾಗುವ ವಸ್ತುಗಳು
- ಸಿರಿಧಾನ್ಯ- 1 ಕಪ್ (ನವಣೆ)
- ಉದ್ದಿನಬೇಳೆ - ಕಾಲು ಕಪ್
- ಅವಲಕ್ಕಿ- ಕಾಲು ಕಪ್
- ಕಡ್ಲೆಬೇಳೆ- 2 ಟೇಬಲ್ ಸ್ಪೂನ್
- ಸಬ್ಬಕ್ಕಿ- 2 ಟೇಬಲ್ ಸ್ಪೂನ್
- ಮೆಂತ್ಯ
- ಎಣ್ಣೆ
- ಉಪ್ಪು
ಸಿರಿಧಾನ್ಯದ ದೋಸೆ ಮಾಡುವ ವಿಧಾನವೇನು?
ಮೊದಲು ಒಂದು ಬೌಲ್ಗೆ ನವಣೆ, ಉದ್ದಿನ ಬೇಳೆ, ಗಟ್ಟಿ ಅವಲಕ್ಕಿ, ಕಡಲೆ ಬೇಳೆ, ಸಬ್ಬಕ್ಕಿ, ಮೆಂತ್ಯ ಕಾಳು ಹಾಕಿಕೊಂಡು ಚೆನ್ನಾಗಿ ತೊಳೆದುಕೊಳ್ಳಿ. ಎರಡು ಬಾರಿ ನೀರು ಹಾಕಿ ತೊಳೆಯಿರಿ. ನಂತರ ಈ ಎಲ್ಲಾ ವಸ್ತು ಮುಳುಗುವಂತೆ ನೀರು ಹಾಕಿ ನೆನೆಸಿಡಬೇಕು. 7ರಿಂದ 8 ಗಂಟೆ ಇದು ನೆನೆಯಬೇಕು.
ನಂತರ ಇದರಿಂದ ನೀರು ತೆಗೆದು ಮಿಕ್ಸಿ ಜಾರ್ಗೆ ಸ್ವಲ್ಪ ಸ್ವಲ್ಪವೆ ಹಾಕಿಕೊಂಡು ರುಬ್ಬಿಕೊಳ್ಳಬೇಕು. ಗಟ್ಟಿಯಾಗದಂತೆ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ದೊಡ್ಡ ಪಾತ್ರೆಗೆ ಈ ಹಿಟ್ಟನ್ನು ಹಾಕಿಕೊಳ್ಳಿ. ಈಗ ಹಿಟ್ಟಿಗೆ ಉಪ್ಪು ಸೇರಿಸಿ ಚೆನ್ನಾಗಿ ಕೈಯಿಂದ ಮಿಕ್ಸ್ ಮಾಡಿಕೊಳ್ಳಿ. ನಂತರ ಮುಚ್ಚಳ ಮುಚ್ಚಿ ರಾತ್ರಿ ಇಡಬೇಕು. ಮಾರನೆ ದಿನ ಬೆಳಗ್ಗೆ ಮತ್ತೆ ಹಿಟ್ಟನ್ನು ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ಹಿಟ್ಟು ರೆಡಿಯಾಗುತ್ತದೆ.
ಈಗ ಒಲೆ ಮೇಲೆ ಕಾವಲಿ ಇಟ್ಟು ಬಿಸಿ ಮಾಡಿ ಸ್ವಲ್ಪ ನೀರು ಚಿಮುಕಿಸಿ ಕಾಟನ್ ಬಟ್ಟೆಯಿಂದ ಒರೆಸಿಕೊಳ್ಳಬೇಕು. ನಂತರ ಹಿಟ್ಟನ್ನು ಹಾಕಬೇಕು. ಈ ದೋಸೆ ತಿರುಗಿಸಿಕೊಳ್ಳುವ ಮುನ್ನ ಮೇಲ್ಭಾಗದಲ್ಲಿ ಸ್ವಲ್ಪ ಎಣ್ಣೆ ಸವರಿಕೊಂಡು ಮಡಚಿ ಹಾಕಿ. ಇಲ್ಲದಿದ್ದರೆ ತಳ ಹಿಡಿಯುತ್ತದೆ. ಇಷ್ಟಾದರೆ ನಿಮ್ಮ ಮುಂದೆ ಸಿರಿಧಾನ್ಯದ ದೋಸೆ ರೆಡಿಯಾಗುತ್ತದೆ. ನೀವು ಕೂಡ ಮನೆಯಲ್ಲಿ ಈ ರೀತಿಯ ದೋಸೆಯನ್ನು ಒಮ್ಮೆ ಟ್ರೈ ಮಾಡಿ ನೋಡಿ. ಸುಲಭವಾಗಿ ಅತ್ಯಂತ ರುಚಿಯ ದೋಸೆ ಮಾಡಿ ಸವಿಯಬಹುದು.



Click it and Unblock the Notifications
