Latest Updates
-
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು
ನವಣೆ ಚಿತ್ರಾನ್ನ ಎಂದಾದ್ರು ಸವಿದಿದ್ದೀರಾ? ಬೆಳಗ್ಗೆ ತಿಂಡಿಗೆ ಹೇಳಿ ಮಾಡಿಸಿದ ಖಾದ್ಯ!
ಬೆಳಗ್ಗೆ ತಿಂಡಿಗೆ ನೀವು ಸುಲಭವಾಗಿ ಮಾಡುವಂತಹ ತಿಂಡಿಯನ್ನು ಆಯ್ಕೆ ಮಾಡಿಕೊಳ್ಳುವುದು ಹೆಚ್ಚು, ಏಕೆಂದರೆ ಕಡಿಮೆ ಸಮಯದಲ್ಲಿ ಅತ್ಯುತ್ತಮ ರುಚಿಯ ಖಾದ್ಯವನ್ನು ಸವಿಯಲು ನಿವು ಮುಂದಾಗುವುದೇ ಹೆಚ್ಚು. ಹಾಗೆ ಆರೋಗ್ಯಕ್ಕೂ ಉತ್ತಮ ಎನಿಸುವ ತಿಂಡಿ ಮಾಡಿ ಸವಿಯುವುದನ್ನು ನೋಡಬಹುದು. ಹೀಗೆ ಆರೋಗ್ಯಕರ ಹಾಗೆ ಸುಲಭವಾಗಿ ಮಾಡುವಂತಹ ಖಾದ್ಯಗಳ ಪೈಕಿ ನಾವಿಂದು ನವಣೆಯಿಂದ ಮಾಡುವ ಚಿತ್ರಾನ್ನದ ಕುರಿತಾಗಿ ತಿಳಿದುಕೊಳ್ಳೋಣ.
ಚಿತ್ರಾನ್ನ ಮಾಡೋದು ಕೂಡ ಎಲ್ಲರ ಮನೆಯ ಸಾಮಾನ್ಯ ತಿಂಡಿ, ಆದ್ರೆ ಹಲವು ಬಗೆಯ ಚಿತ್ರಾನ್ನಗಳ ಮಾಡಿ ಸವಿಯುವುದು ಸ್ಪೆಷಲ್. ಇಂತಹ ಸ್ಪೆಷಲ್ ಚಿತ್ರಾನ್ನಗಳ ಪೈಕಿ ನಾವಿಂದು ಈ ನವಣೆಯಿಂದ ಮಾಡುವಂತಹ ಚಿತ್ರಾನ್ನದ ಕುರಿತು ತಿಳಿದುಕೊಳ್ಳೋಣ. ಅದ್ರಲ್ಲೂ ಈ ನವಣೆ ನಿಮ್ಮ ಆರೋಗ್ಯಕ್ಕೆ ಎಷ್ಟು ಮುಖ್ಯ ಎಂಬುದು ನಿಮಗೆ ಗೊತ್ತಾ?

ನವಣೆಯಲ್ಲಿ ಪ್ರೋಟೀನ್ಗಳು, ಕಾರ್ಬೋಹೈಡ್ರೇಟ್ಗಳು, ವಿಟಮಿನ್ ಎ ಮತ್ತು ಇ ನಂತಹ ವಿಟಮಿನ್ಗಳು ಮತ್ತು ರಂಜಕ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಸೋಡಿಯಂ, ಇತ್ಯಾದಿ ಖನಿಜಗಳು ಹೇರಳವಾಗಿ ತುಂಬಿದೆ. ಹೀಗಾಗಿ ನಿಮ್ಮ ಆರೋಗ್ಯಕ್ಕೆ ಇದು ಬಹಳ ಉತ್ತಮ ಪದಾರ್ಥವಾಗಿದೆ. ಹಾಗಾದ್ರೆ ನಾವಿಂದು ಈ ನವಣೆಯಿಂದ ಮಾಡುವಂತಹ ವಿಭಿನ್ನ ರುಚಿಯ ಚಿತ್ರಾನ್ನ ಮಾಡುವ ಕುರಿತು ತಿಳಿಯೋಣ.
ನವಣೆ ಚಿತ್ರಾನ್ನ ಮಾಡುವುದು ಹೇಗೆ? ನವಣೆ ಚಿತ್ರಾನ್ನ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ನವಣೆ ಚಿತ್ರಾನ್ನ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ನವಣೆ
- ಸಾಸಿವೆ
- ಕಡಲೆ ಬೇಳೆ
- ಜೀರಿಗೆ
- ಕಡಲೆ ಬೀಜ
- ಎಣ್ಣೆ
- ಉಪ್ಪು
- ಶುಂಠಿ
- ಹಸಿ ಮೆಣಸು
- ನಿಂಬೆ ಹಣ್ಣು
- ಇಂಗು
- ಕೊತ್ತಂಬರಿ ಸೊಪ್ಪು
- ತೆಂಗಿನಕಾಯಿ ತುರಿ
ನವಣೆ ಚಿತ್ರಾನ್ನ ಮಾಡುವುದು ಹೇಗೆ?
ಮೊದಲಿಗೆ ನವಣೆಯನ್ನು ಚೆನ್ನಾಗಿ ತೊಳೆದು 1 ಕಪ್ ನವಣೆಗೆ 2 ಕಪ್ ನೀರು ಹಾಕಿಕೊಂಡು ಬೇಯಿಸಿ ಅಥವಾ ಕುಕ್ಕರ್ನಲ್ಲಿ ಸೀಟಿ ಹೊಡೆಸಿಕೊಂಡು ಅನ್ನ ಮಾಡಿಕೊಳ್ಳಿ. ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಇದಕ್ಕೆ ಶೇಂಗಾ ಬೀಜ ಹಾಕಿ ಫ್ರೈ ಮಾಡಿ ಎತ್ತಿಟ್ಟುಕೊಳ್ಳಿ. ನಂತರ ಇದೇ ಬಾಣಲೆಗೆ ಸಾಸಿವೆ, ಜೀರಿಗೆ, ಕಡಲೆ ಬೇಳೆ ಹಾಕಿಕೊಂಡು ಹುರಿದುಕೊಳ್ಳಿ.
ನಂತರ ಚಿಕ್ಕದಾಗಿ ಹೆಚ್ಚಿರುವ ಶುಂಠಿ, ಹಸಿ ಮೆಣಸು, ಕರಿಬೇವು ಸಹ ಹಾಕಿಕೊಳ್ಳಿ. ನಂತರ ಇಂಗು, ಅರಶಿಣ ಸಹ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಅನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಮತ್ತೆ ಮಿಕ್ಸ್ ಮಾಡಿಕೊಳ್ಳಿ.
ಈಗ ಬೇಯಿಸಿಕೊಂಡಿರುವ ನವಣೆಯನ್ನು ಇದಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಒಂದು ನಿಂಬೆ ರಸವನ್ನು ಹಾಕಿ ಮಿಶ್ರಣ ಮಾಡಿ. 2ರಿಂದ ಮೂರು ನಿಮಿಷಗಳ ಕಾಲ ನಿಧಾನವಾಗಿ ಮಿಕ್ಸ್ ಮಾಡಿಕೊಂಡ ಬಳಿಕ ತೆಂಗಿನಕಾಯಿ ತುರಿ ಹಾಗೆ ಕೊತ್ತಂಬರಿ ಸೊಪ್ಪನ್ನು ಕೂಡ ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಚೆನ್ನಾಗಿ ಮಿಶ್ರಣ ಮಾಡಿ ಒಲೆ ಆಫ್ ಮಾಡಿಕೊಂಡರೆ ಬೆಳಗ್ಗಿನ ತಿಂಡಿಗೆ ನಿಮ್ಮ ಮುಂದೆ ರುಚಿ ರುಚಿಯ ಈ ನವಣೆ ರೆಡಿಯಾಗುತ್ತದೆ. ನೀವು ಸಹ ಮನೆಯಲ್ಲಿ ಇದನ್ನು ಸವಿದು ನೋಡಿ. ಇದನ್ನು ಬಹಳ ಸುಲಭವಾಗಿ, ಹಾಗೆ ರುಚಿ ರುಚಿಯಾಗಿಯೂ ಮಾಡಬಹುದು. ಇನ್ನು ಈ ನವಣೆಯು ಸಕ್ಕರೆ ಕಾಯಿಲೆ ಇರುವ ಮಂದಿಗೆ ಬಹಳ ಉತ್ತಮ. ಮಾಡೋಕು ಕಡಿಮೆ ವಸ್ತುಗಳು ಸಾಕಾಗುತ್ತವೆ. ಬೆಳಗ್ಗೆ ತಿಂಡಿಗೆ ಈ ಆರೋಗ್ಯಕರ ತಿಂಡಿ ಸವಿದು ನೋಡಿ.



Click it and Unblock the Notifications