Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಎರಡು ಕ್ಯಾರೆಟ್ ಇದ್ರೆ ಈ ಮಿಲ್ಕ್ ಶೇಕ್ ಮಾಡಿ: ಬಿಸಿಲಿಗೆ ತಂಪು ನೀಡುವ ಪಾನಿಯ!
ಬೇಸಿಗೆಯ ಬಿಸಿಲಿನಲ್ಲಿ ದೇಹವನ್ನು ತಂಪಾಗಿಡಲು ನೀವು ತಂಪಾದ ಆಹಾರ ಸೇವಿಸಬೇಕಾಗುತ್ತದೆ. ಅದ್ರಲ್ಲೂ ಬಿಸಿಲಿನ ಈ ಸಮಯದಲ್ಲಿ ನೀವು ಎಷ್ಟು ನೀರು ಕುಡಿದರೆ ಕಡಿಮೆಯಾಗುತ್ತದೆ. ದೇಹವು ಸರಿಯಾಗಿ ಕೆಲಸ ಮಾಡಬೇಕಾದರೆ ಹಾಗೆ ಆರೋಗ್ಯವಾಗಿರಬೇಕಾದರೆ ಈ ಸಮಯದಲ್ಲಿ ಹೆಚ್ಚು ನೀರು ಸೇವಿಸಿ. ಹಾಗೆ ಬಿಸಿಲಿನಲ್ಲಿ ಕೆಲಸ ಮಾಡುವವರು ಹಾಗೆ ದೇಹದ ತಾಪ ಹೆಚ್ಚಾಗಿರುವ ಮಂದಿ ಜ್ಯೂಸ್ ಹೆಚ್ಚು ಸೇವಿಸಬೇಕು.
ಇನ್ನು ಮನೆಯಲ್ಲಿ ಮಕ್ಕಳು, ಹಿರಿಯ ಸದಸ್ಯರು ಇದ್ದರೆ ಅವರಿಗೆ ಮನೆಯಲ್ಲೇ ಜ್ಯೂಸ್, ಮಿಲ್ಕ್ ಶೇಕ್ ಮಾಡಿ ನೀಡುವುದು ಅವರ ಆರೋಗ್ಯದ ದೃಷ್ಟಿಯಿಂದಲೂ ಇದು ಉತ್ತಮ. ಹಲವು ಮಿಲ್ಕ್ ಶೇಕ್ಗಳು ಬಾಯಲ್ಲಿ ನೀರು ತರಿಸುತ್ತವೆ. ಹೀಗಾಗಿ ನಾವಿಂದು ಮನೆಯಲ್ಲಿ ಸುಲಭವಾಗಿ ಮಾಡುವಂತಹ ರುಚಿ ರುಚಿಯ ಕ್ಯಾರೆಟ್ ಮಿಲ್ಕ್ ಶೇಕ್ ಮಾಡುವ ಕುರಿತು ತಿಳಿಯೋಣ.
ಕ್ಯಾರೆಟ್ ಆರೋಗ್ಯಕ್ಕೂ ಬಹಳ ಉತ್ತಮ. ಹಾಗೆ ಈ ಮಿಲ್ಕ್ ಶೇಕ್ ಮಾಡಿದ್ರೆ ಎಲ್ಲರಿಗೂ ಇಷ್ಟವಾಗುತ್ತೆ ಅದ್ರಲ್ಲೂ ಬೇಸಿಗೆಯಲ್ಲಿ ಈ ಮಿಲ್ಕ್ ಶೇಕ್ ಬಹಳ ಉತ್ತಮ. ಮಾಡೋದು ಕೂಡ ಬಹಳ ಸುಲಭ. ಹಾಗಾದ್ರೆ ನಾವಿಂದು ಕ್ಯಾರೆಟ್ ಬಳಸಿಕೊಂಡು ರುಚಿ ರುಚಿಯಾದ ಮಿಲ್ಕ್ ಶೇಕ್ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ಕ್ಯಾರೆಟ್ ಮಿಲ್ಕ್ ಶೇಕ್ ಮಾಡಲು ಬೇಕಾಗುವ ವಸ್ತುಗಳು ಯಾವುದು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದಿಕೊಳ್ಳೋಣ.
ಕ್ಯಾರೆಟ್ ಮಿಲ್ಕ್ ಶೇಕ್ ಮಾಡಲು ಅಗತ್ಯ ಪದಾರ್ಥಗಳು
- ಕ್ಯಾರೆಟ್
- ಸಕ್ಕರೆ
- ಹಾಲು
- ಬಾದಾಮಿ
- ಖರ್ಜೂರ
- ಗೋಡಂಬಿ
ಕ್ಯಾರೆಟ್ ಮಿಲ್ಕ್ ಶೇಕ್ ಮಾಡಲು ಅಗತ್ಯ ಪದಾರ್ಥಗಳು
ಮೊದಲಿಗೆ ಕ್ಯಾರೆಟ್ ಅನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದು ಸಣ್ಣದಾಗಿ ಹೆಚ್ಚಿಕೊಳ್ಳಿ. ಸೌತೆಕಾಯಿ ಹೆಚ್ಚಿದಂತೆ ವೃತ್ತಾಕಾರವಾಗಿ ಹೆಚ್ಚಿದರೆ ಬೇಗ ಬೇಯಿಸಬಹುದು. ಈಗ ಕುಕ್ಕರ್ ಒಲೆ ಮೇಲೆ ಇಟ್ಟು ಅದಕ್ಕೆ 1 ಕಪ್ ನೀರು 1 ಕಪ್ ಹಾಲು ಹಾಕಿ ಹೆಚ್ಚಿಕೊಂಡಿರುವ ಎಲ್ಲಾ ಕ್ಯಾರೆಟ್ ಅನ್ನು ಅದಕ್ಕೆ ಹಾಕಿ ಮುಚ್ಚಳ ಮುಚ್ಚಿ 2 ಸೀಟಿ ಹೊಡೆಯಲು ಬಿಡಿ.
ಅನಂತರ ಕುಕ್ಕರ್ ಮುಚ್ಚಳ ತೆಗೆದು ಬೆಂದಿರುವ ಕ್ಯಾರೆಟ್ ಅನ್ನು ನೀರು ಸಮೇತ ಮಿಕ್ಸಿ ಜಾರ್ಗೆ ಹಾಕಿಕೊಳ್ಳಿ. ಹಾಗೆ ರುಚಿಗೆ ತಕ್ಕಷ್ಟು ಸಕ್ಕರೆ ಹಾಕಿ. ಅನಂತರ ಬಾದಾಮಿ, ಗೋಡಂಬಿ, ಖರ್ಜೂರ ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು. ಇದು ಸ್ವಲ್ಪ ಗಟ್ಟಿಯಾದ ಪೇಸ್ಟ್ನಂತೆ ಕಾಣಿಸಲಿದೆ. ಇದನ್ನು ಸ್ವಲ್ಪ ತೆಳು ಮಾಡಲು ಮಿಕ್ಸಿ ಜಾರ್ಗೆ ಹಾಲು ಹಾಕಿಕೊಂಡು ತೊಳೆದು ಇದಕ್ಕೆ ಹಾಕಿಕೊಳ್ಳಿ.
ಈ ಪೇಸ್ಟ್ ಅನ್ನು ಹಾಲು ಹಾಕುತ್ತಾ ಸ್ವಲ್ಪ ತೆಳು ಮಾಡಿಕೊಳ್ಳಿ. ನಿಮಗೆ ಯಾವ ಹದಕ್ಕೆ ಬೇಕೋ ಹಾಗೆ ಮಾಡಿಕೊಳ್ಳಿ. ಬೇಕಿದ್ದರೆ ಇದಕ್ಕೆ ಏಲಕ್ಕಿ ಹಾಕಿಕೊಳ್ಳಬಹುದು. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯಾದ ಕ್ಯಾರೆಟ್ ಮಿಲ್ಕ್ ಶೇಕ್ ಸಿದ್ದವಾಗುತ್ತೆ. ನೀವು ಕೂಡ ಇದನ್ನು ಮಾಡಿ ಸವಿದು ನೋಡಿ. ಬೇಸಿಗೆಯಲ್ಲಿ ಇದು ಬಹಳ ರುಚಿಕರ ಹಾಗೆ ಆರೋಗ್ಯದ ದೃಷ್ಟಿಯಲ್ಲಿ ದೇಹವನ್ನು ತಂಪಾಗಿಡುವ ಪಾನಿಯ ಆಗಿರಲಿದೆ.



Click it and Unblock the Notifications

