Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಒಂದು ಗ್ಲಾಸ್ ಹಾಲು ಇದ್ದರೆ ಅದ್ಭುತ ರುಚಿಯ ಸಾರು ರೆಡಿ..! ಮಾಡೋದು ಹೇಗೆ?
ನೀವು ಮಧ್ಯಾಹ್ನ ಅಥವಾ ರಾತ್ರಿ ಊಟಕ್ಕೆ ಮಜ್ಜಿಗೆ ಬಹುಳಿ ಮಾಡಿರುತ್ತೀರಿ. ಮಜ್ಜಿಗೆ ಬಳಸಿ ಯಾವುದಾರು ತರಕಾರಿ ಇಲ್ಲವೆ ಒಂದು ಒಗ್ಗರಣೆ ಹಾಕಿ ಮಾಡುವಂತಹ ಸಿಂಪಲ್ ರೆಸಿಪಿ ಇದು. ಸುಲಭವಾಗಿ ಮಾಡಬಹುದಾಗಿರೋದ್ರಿಂದ ಎಲ್ಲರು ಮಾಡಿ ಸವಿಯೋಕೆ ಇಷ್ಟಪಡುತ್ತಾರೆ. ಹೆಚ್ಚು ಮಸಾಲೆ ಬಳಸದೆ ಮಾಡುವುದರಿಂದ ಈ ಸಾರು ಬಹಳ ರುಚಿಕರವಾಗಿರುತ್ತೆ. ಮನೆಯಲ್ಲಿರುವ ವಸ್ತು ಬಳಸಿ ಮಾಡಿ ಸವಿಯಬಹುದು.
ನೀವು ಮಜ್ಜಿಗೆ ಹುಳಿ ಇದ್ದರೆ ಊಟ ಚೆನ್ನಾಗಿ ಮಾಡುತ್ತಿರಿ, ಹಾಗೆ ಹಾಲಿನ ಸಾರು ಎಂದಾದರು ಮಾಡಿ ಸವಿದಿದ್ದೀರಾ? ಹೌದು ಹಾಲಿನಿಂದ ಮಾಡುವ ಸಾರು ಅದ್ಭುತ ರುಚಿ ನೀಡಲಿದೆ. ಇದನ್ನು ಊಟದ ಜೊತೆಗೆ ಸವಿಯಲು ಅಮೃತದಂತೆ ಅನಿಸೋದು ಖಚಿತ. ಹಾಗಾದ್ರೆ ಈ ಹಾಲಿನ ಸಾರು ಮಾಡೋದು ಹೇಗೆ? ನೀವು ಮಜ್ಜಿಗೆ ಸಾರು ಇಲ್ಲವೆ ಮಜ್ಜಿಗೆ ಹುಳಿ ಮಾಡಿದಂತೆಯೇ ಹಾಲಿನ ಸಾರು ಕೂಡ ಮಾಡಬಹುದು.

ಒಂದು ತರಕಾರಿ ಬಳಸಿಕೊಂಡು ಈ ಹಾಲಿನ ಸಾರು ಮಾಡಿದ್ರೆ ಮನೆ ಮಂದಿ ಎಲ್ಲಾ ಅಚ್ಚರಿ ಪಡುತ್ತಾರೆ. ಅಷ್ಟು ರುಚಿಕರವಾಗಿರುತ್ತೆ. ಮಕ್ಕಳಿಗೂ ಕೂಡ ಇದು ಆರೋಗ್ಯಕ್ಕೆ ಬಹಳ ಉತ್ತಮ ಸಾರು. ಹಾಗಾದ್ರೆ ನಾವಿಂದು ಈ ಹಾಲಿನ ಸಾರು ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಹಾಲಿನ ಸಾರು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು?, ಹಾಲಿನ ಸಾರು ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹಾಲಿನ ಸಾರು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಹಾಲು
- ಅರಶಿಣ ಪುಡಿ
- ಸಾಸಿವೆ
- ಅಲಸಂದೆ ಕಾಳು
- ಸೋರೆಕಾಯಿ
- ಕಾಳು ಮೆಣಸು
- ಕಡಲೆ ಬೀಜ
- ಬೆಳ್ಳುಳ್ಳಿ
- ತೆಂಗಿನಕಾಯಿ
- ಒಣ ಮೆಣಸು
- ಕರಿಬೇವು
- ಉಪ್ಪು
- ಎಣ್ಣೆ
ಹಾಲಿನ ಸಾರು ಮಾಡುವ ವಿಧಾನವೇನು?
ಮೊದಲು ಒಣ ಮೆಣಸನ್ನು ಒಂದು ಬಾಣಲೆಗೆ ಹಾಕಿ ಹುರಿದುಕೊಳ್ಳಿ. ಅಥವಾ ನೇರವಾಗಿ ಗ್ಯಾಸ್ನಿಂದ ಅಥವಾ ಒಲೆಯಲ್ಲಿ ಹಿಡಿದು ಸುಟ್ಟುಕೊಳ್ಳಿ. ಹಾಗೆ ಸಾರು ಮಾಡುವ ಮುನ್ನ ಸೋರೆಕಾಯಿಯನ್ನು ಕತ್ತರಿಸಿಕೊಂಡು ಬಿಳಿಯ ವಸ್ತು ತೆಗೆದು ಕತ್ತರಿಸಿಕೊಂಡು ನೀರಿಗೆ ಹಾಕಿಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಸ್ವಲ್ಪ ನೀರು ಹಾಕಿ ಹಸಿ ಅಲಸಂದೆ ಕಾಳುಗಳ ಹಾಕಿ ಬೇಯಲು ಬಿಡಿ.
ಹಾಗೆ ಇದಕ್ಕೆ ಹೆಚ್ಚಿಕೊಂಡಿರುವ ಸೋರೆಕಾಯಿ ಕೂಡ ಹಾಕಿ ಬೇಯಲು ಬಿಡಿ. ಪಾತ್ರೆಯಲ್ಲಿ ಈ ಎರಡು ಪದಾರ್ಥ ಬೇಯುತ್ತಿರುವಾಗ ಇನ್ನೊಂದು ಕಡೆ ಮಸಾಲೆ ರೆಡಿ ಮಾಡಿಕೊಳ್ಳಿ. ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಸಣ್ಣದಾಗಿ ಕತ್ತರಿಸಿಕೊಂಡ ತೆಂಗಿನಕಾಯಿ, ಕಾಳು ಮೆಣಸುಗಳು, ಕಡಲೆ ಬೀಜ, ಹುರಿದುಕೊಂಡಿರುವ ಒಣ ಮೆಣಸು, ಬೆಳ್ಳುಳ್ಳಿ ಹಾಕಿಕೊಂಡು ರುಬ್ಬಿಕೊಳ್ಳಿ.
ರುಬ್ಬುವಾಗ 2 ಸ್ಪೂನ್ ನೀರು ಹಾಕಿಕೊಳ್ಳಿ ಸಾಕಾಗುತ್ತದೆ. ಈ ಪೇಸ್ಟ್ ಗಟ್ಟಿಯಾಗಿ ತರಿತರಿಯಾಗಿ ಇರಲಿ. ಇದನ್ನು ಒಂದು ಬೌಲ್ಗೆ ಹಾಕಿಟ್ಟುಕೊಳ್ಳಿ. ಈಗ ಒಲೆ ಮೇಲಿನ ತರಕಾರಿ 15 ನಿಮಿಷ ಬೇಯಿಸಿದರೆ ಸಾಕಾಗುತ್ತದೆ. ಈಗ ಮಿಕ್ಸಿಯಲ್ಲಿ ರುಬ್ಬಿರುವ ವಸ್ತುಗಳನ್ನು ಈ ಪಾತ್ರೆಗೆ ಹಾಕಿ ಮಿಕ್ಸ್ ಮಾಡಿಕೊಂಡು ಉಪ್ಪು ಹಾಕಿಕೊಳ್ಳಿ. ಹಾಗೆ ಕುದಿಯಲು ಬಿಡಿ.
ಈಗ ಮತ್ತೊಂದು ಪಾತ್ರೆಯಲ್ಲಿ ಒಗ್ಗರಣೆ ಮಾಡಿಕೊಳ್ಳಿ. ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಕರಿಬೇವು, 1 ಒಣ ಮೆಣಸು ಹಾಕಿ ಫ್ರೈ ಮಾಡಿ ಅದನ್ನು ಒಲೆ ಮೇಲೆ ಕುದಿ ಬರುತ್ತಿರುವ ಸಾರಿಗೆ ಹಾಕಿಕೊಳ್ಳಿ. ಕೊನೆಯದಾಗಿ ಇದಕ್ಕೆ ಕುದಿಸಿ ತಣ್ಣಗೆ ಮಾಡಿರುವ ಒಂದು ಗ್ಲಾಸ್ ಹಾಲನ್ನು ಹಾಕಿಕೊಂಡು ಒಂದು ಕುದಿಬರಲು ಬಿಡಬೇಕು. ಇಷ್ಟಾದರೆ ನಿಮ್ಮ ಮುಂದೆ ಹಾಲಿನ ಸಾರು ರೆಡಿಯಾಗುತ್ತೆ.



Click it and Unblock the Notifications
