Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
1 ನಿಮಿಷದಲ್ಲಿ ಹಾಲಿನ ಪುಡಿಯ ಲಡ್ಡು ಸವಿದು ನೋಡಿ!
ಮನೆಯಲ್ಲಿ ನೀವು ಬಹಳ ಇಷ್ಟಪಟ್ಟು ಹಲವು ಬಗೆಯ ಸ್ವೀಟ್‌ಗಳ ಮಾಡಿ ಸವಿದಿರುತ್ತೀರಿ. ಅದ್ರಲ್ಲೂ ಸುಲಭವಾಗಿ ಮಾಡಿ ಸವಿಯುವ ಸ್ವೀಟ್‌ಗಳು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಲಿನಿಂದ ಮಾಡುವ ಹಲವು ಖಾದ್ಯ ನಿಮಗೆ ಬಹಳ ಇಷ್ಟವಾಗುತ್ತೆ. ನಾವಿಂದು ಸುಲಭವಾಗಿ ಮಾಡುವಂತಹ ಸ್ವೀಟ್ ಕುರಿತಾಗಿ ತಿಳಿದುಕೊಳ್ಳೋಣ. ಅದ್ರಲ್ಲೂ ಸುಲಭದ ಲಡ್ಡು ಕುರಿತು ತಿಳಿಯೋಣ.
ನೀವು ಹಲವು ಬಗೆ ಲಡ್ಡುಗಳನ್ನ ಮನೆಯಲ್ಲಿ ಇಲ್ಲವೆ ಬೇಕರಿಗಳಲ್ಲಿ ಖರೀದಿಸಿ ತಂದು ಸವಿದಿರುತ್ತೀರಿ. ಹಾಗೆ ಈ ಲಡ್ಡುಗಳ ರುಚಿಗೆ ಮನೆಯಲ್ಲಿ ಎಲ್ಲರಿಗೂ ಇಷ್ಟವಾಗಿರುತ್ತೆ. ಇನ್ನು ನಾವು ಸಹ ವಿವಿಧ ಬಗೆಯ ಲಡ್ಡು ಸವಿದಿರುತ್ತೇವೆ. ಆದ್ರೆ ನಾವಿಂದು ಮನೆಯಲ್ಲೇ ಮಾಡುವಂತಹ ಸುಲಭದ ಲಡ್ಡು ಕುರಿತಾಗಿ ಹೇಳಲಿದ್ದೇವೆ.

ಅದ್ರಲ್ಲೂ ಹಾಲಿನ ಪುಡಿ ಹಾಗೆ ತೆಂಗಿನಕಾಯಿ ತುರಿಯನ್ನು ಬಳಸಿ ಅತ್ಯಂತ ರುಚಿ ರುಚಿಯ ಲಡ್ಡು ಮಾಡಬಹುದು. ಇದರ ರುಚಿಗೆ ನೀವು ಮರುಳಾಗುತ್ತೀರಿ. ಹಾಗಾದ್ರೆ ಈ ಹಾಲಿನ ಪುಡಿಯಿಂದ ನಿಮಿಷದೊಳಗೆ ರುಚಿ ರುಚಿಯ ಲಡ್ಡು ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳಿ. ಹಾಲಿನ ಪುಡಿಯ ಲಡ್ಡು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹಾಲಿನ ಪುಡಿಯ ಲಡ್ಡು ಮಾಡಲು ಯಾವೆಲ್ಲಾ ಪದಾರ್ಥಗಳು
ಬೇಕು?
- ಹಾಲಿನ ಪುಡಿ
- ಹಾಲು
- ಸಕ್ಕರೆ
- ಕೊಬ್ಬರಿ ತುರಿ ಪುಡಿ
- ಜೀರಿಗೆ ಪುಡಿ
- ಗೋಡಂಬಿ
ಹಾಲಿನ ಪುಡಿಯ ಲಡ್ಡು ಮಾಡುವುದು ಹೇಗೆ?
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ತುಪ್ಪ ಹಾಕಿಕೊಳ್ಳಿ. ಬಳಿಕ ಅದಕ್ಕೆ ಅರ್ಧ ಕಪ್ ಹಾಲು ಹಾಗೆ ಸಕ್ಕರೆ ಸಹ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಸಕ್ಕರೆ ಕರಗಿ ನೀರಾಗುವಂತೆ ಮಾಡಿಕೊಳ್ಳಿ. ಹೀಗಾಗಲು ಕನಿಷ್ಟ 1 ನಿಮಿಷ ಬೇಕಾಗಬಹುದು. ಹಾಗೆ ನಂತರ ಇದಕ್ಕೆ 1 ಕಪ್ ಹಾಲಿನ ಪುಡಿಯನ್ನು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಹಾಲಿನ ಪುಡಿ ಹಾಕಿ 2 ನಿಮಿಷಗಳ ಕಾಲ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಇದು ಪೇಸ್ಟ್ ರೀತಿಯಾಗಿ ಬದಲಾಗುತ್ತದೆ. ಹೀಗೆ ಬದಲಾದಾಗ 1 ಕಪ್ ಕೊಬ್ಬರಿ ಪುಡಿಯನ್ನು ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳುತ್ತಾ ಇದು ಗಟ್ಟಿಯಾಗಲು ಆರಂಭಿಸುತ್ತದೆ. ಈ ಸಮಯದಲ್ಲಿ ಗೋಡಂಬಿ ಪೀಸ್‌ಗಳು ಹಾಗೆ ಜೀರಿಗೆ ಪುಡಿಯನ್ನು ಕೂಡ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
1 ನಿಮಿಷ ಮಿಕ್ಸ್ ಮಾಡಿದ ಬಳಿಕ ಒಲೆ ಆಫ್ ಮಾಡಿಕೊಳ್ಳಿ. ಅನಂತರ ಮಿಶ್ರಣ ಬಿಸಿ ಬಿಸಿ ಇದ್ದಾಗಲೇ ಉಂಟೆ ಕಟ್ಟಿಕೊಂಡು ಆ ಉಂಡೆಯನ್ನು ಕೊಬ್ಬರಿ ತುರಿಯ ಪಾತ್ರೆಯಲ್ಲಿ ಹಾಕಿ ಉರುಳಿಸಿಕೊಂಡು ಇಟ್ಟುಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಈ ರುಚಿ ರುಚಿಯ ಹಾಲಿನ ಪುಡಿಯ ಲಡ್ಡು ರೆಡಿಯಾಗುತ್ತದೆ. ಇದನ್ನು ಮನೆಯಲ್ಲಿ ಎಲ್ಲರು ಬಹಳ ಇಷ್ಟಪಟ್ಟು ಸವಿಯುತ್ತಾರೆ. ಮಕ್ಕಳಿಗೆ ಇದು ಬಹಳ ಇಷ್ಟವಾಗುತ್ತೆ. ನೀವು ಕೂಡ ಮನೆಯಲ್ಲಿ ಇದನ್ನೊಮ್ಮೆ ಟ್ರೈ ಮಾಡಿ ನೋಡಿ.
1 ನಿಮಿಷದಲ್ಲಿ ಬೆಣ್ಣ ಬಿಸ್ಕೇಟ್ ಮಾಡೋದು ಹೇಗೆ?
ಒಂದು ಬೌಲ್‌ಗೆ 1 ಕಪ್ ಮೈದಾ ಹಿಟ್ಟು ಹಾಕಿ ಮುಕ್ಕಾಲು ಕಪ್ ಸಕ್ಕೆರೆ ಪುಡಿ, 1 ಸ್ಪೂನ್ ತುಪ್ಪ, ಹಾಕಿ ಕೈಯಿಂದ ಚೆನ್ನಾಗಿ ಮಿಕ್ಸ್ ಮಾಡಿ. ಉಂಡೆ ಕಟ್ಟುವಂತಹ ಹದಕ್ಕೆ ಈ ಹಿಟ್ಟನ್ನು ರೆಡಿ ಮಾಡಿಕೊಳ್ಳಿ. ಈಗ ಕುಕ್ಕರ್ ಅನ್ನು ಒಲೆ ಮೇಲೆ ಇಟ್ಟು ಅದರ ತಳದಲ್ಲಿ ಉಪ್ಪನ್ನು ಹರಡಬೇಕು. ಇಲ್ಲವೆ ಮರಳನ್ನು ಕೂಡ ಹರಡುತ್ತಾರೆ.
ಬಳಿಕ ಮಧ್ಯದಿಂದ ಹಬೆ ಬರುವಂತಹ ಪ್ಲೇಟ್ ಇಟ್ಟು ನಂತರ ಅದರ ಮೇಲೆ ಈ ಉಂಡೆ ಕಟ್ಟಿರುವ ಹಿಟ್ಟನ್ನು ಇಟ್ಟು ಕುಕ್ಕರ್ ಒಳಗೆ ಇಡಿ. ನಂತರ ಸೀಟಿ ಬಳಸದೆ ಮುಚ್ಚಳ ಮುಚ್ಚಿ 12 ನಿಮಿಷ ಆದರು ಬೇಯಿಸಿಕೊಳ್ಳಿ. ಇಷ್ಟಾದರೆ ಬಿಸ್ಕೇಟ್ ರೆಡಿಯಾಗುತ್ತೆ.



Click it and Unblock the Notifications
