Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
5 ನಿಮಿಷದಲ್ಲಿ ನಾವೇ ಕೋವಾ ಮಾಡಿಕೊಳ್ಳೋದು ಹೇಗೆ? ಇಲ್ಲಿದೆ ಸುಲಭದ ವಿಧಾನ
ನೀವು ಮನೆಯಲ್ಲಿ ಯಾವುದಾದರು ಸಿಹಿ ತಿಂಡಿ ಮಾಡುವಾಗ ಕೋವಾ ಬಳಕೆ ಮಾಡಿರಬಹುದು. ಬೇಕರಿಯಲ್ಲಿ ಇದು ದುಬಾರಿ ಬೆಲೆಗೆ ಮಾರಾಟ ಮಾಡುತ್ತಾರೆ. ಕೆಲವೊಂದು ಸ್ವೀಟ್ಗಳನ್ನು ಕೋವಾ ಬಳಸಿ ಮಾಡುತ್ತಾರೆ. ಇದು ಬಹಳ ರುಚಿಕರವಾಗಿ ಇರುತ್ತೆ. ಹಾಲಿನ ಕೋವಾದಿಂದ ಮಾಡುವಂತಹ ಸ್ವೀಟ್ ಎಲ್ಲರಿಗೂ ಇಷ್ಟವಾಗುತ್ತೆ. ಅದ್ರಲ್ಲೂ ಮಕ್ಕಳಿಗೆ ಕೋವಾ ಸ್ವಿಟ್ಗಳು ಬಹಳ ಹಿಡಿಸುತ್ತವೆ.
ಇನ್ನು ಈ ಕೋವಾವನ್ನು ನಾವು ಕೂಡ ಮನೆಯಲ್ಲಿ ಮಾಡಿಕೊಳ್ಳಬಹುದು. ಸುಲಭವಾಗಿ ಮನೆಯಲ್ಲೇ ಮಾಡಿದ ಕೋವಾ ಬಹಳ ರುಚಿಕರವಾಗಿ ಹಾಗೆ ಶುದ್ಧತೆಯಿಂದಲೂ ಕೂಡಿರುತ್ತೆ, ಮತ್ತೆ ಹಲವು ದಿನಗಳ ಕಾಲ ನೀವು ಶೇಖರಿಸಿಡಬಹುದು. ಹಾಗಾದ್ರೆ ನಾವಿಂದು ಮನೆಯಲ್ಲೇ ಈ ರುಚಿಕರ ಕೋವಾ ಮಾಡುವುದು ಹೇಗೆ ಎಂಬುದನ್ನು ತಿಳುದುಕೊಳ್ಳೋಣ.

ಕೋವಾ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕೋವಾ ಮಾಡುವುದು ಹೇಗೆ?
ಮೊದಲು ಒಲೆ ಮೇಲೆ ಪಾತ್ರೆ ಇಟ್ಟು ಅದಕ್ಕೆ ಒಂದು ಲೀಟರ್ ಹಾಲು ಹಾಕಿ ಸಣ್ಣ ಉರಿಯಲ್ಲಿ ಕುದಿಯಲು ಬಿಡಬೇಕು. ಆಹಾಗ ತಳ ಹಿಡಿಯದಂತೆ ಹಾಲನ್ನು ಕಲಸುತ್ತಾ ಇರಬೇಕು. 3 ನಿಮಿಷಕ್ಕೆ ಒಮ್ಮೆ ಸೌಟಿನ ಮೂಲಕ ಮಿಶ್ರಣ ಮಾಡುತ್ತಾ ಇರಿ. ಸುಮಾರು 30 ನಿಮಿಷ ಹಾಲು ಕುದಿಯಬೇಕು. ಹಾಲು ಗಟ್ಟಿಯಾಗುವಾಗವಾ ಚೆನ್ನಾಗಿ ತಿರುಗಿಸುತ್ತಾ ಇರಬೇಕು ಇಲ್ಲದಿದ್ದರೆ ತಳ ಹಿಡಿಯುತ್ತದೆ.
ಹಾಲು ಗಟ್ಟಿಯಾಗಲು ಆರಂಭಿಸಿದಾಗ ಉರಿ ಸಣ್ಣದಾಗಿ ಇಟ್ಟುಕೊಳ್ಳಬೇಕು. ಸುಮಾರು 1 ಗಂಟೆಗಳ ಕಾಲ ಹೀಗೆ ಮಾಡಿದಾಗ ಹಾಲು ಗಟ್ಟಿಯಾಗುತ್ತದೆ. 1 ಲೀಟರ್ ಹಾಲಿನಲ್ಲಿ 250 ಗ್ರಾಮ್ ಕೋವಾ ತೆಗೆಯಬಹುದು. ಹಾಲನ್ನು ಇಷ್ಟು ಹೊತ್ತು ಕಾಯಿಸಿದಾಗ ಕೋವಾ ರೆಡಿಯಾಗುತ್ತದೆ. ಮನೆಯ ಹಾಲಿನಲ್ಲಿ ಮಾಡಿದರೆ ಕೋವಾ ಚೆನ್ನಾಗಿರುತ್ತೆ.
ಇದು ಸಾಮಾನ್ಯವಾಗಿ ತುಂಬಾ ಸಮಯ ಹಿಡಿಯುವಂತಹ ವಿಧಾನವಾಗಿದೆ. ಆದ್ರೆ ನಾವೀಗ ಕೇವಲ 5 ನಿಮಿಷದಲ್ಲಿ ಇಂತಹ ರುಚಿಯ ಕೋವಾ ಮಾಡುವ ಮತ್ತೊಂದು ವಿಧಾನ ಕುರಿತು ತಿಳಿಯೋಣ.
ಮೊದಲು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ 2 ಕಪ್ ಹಾಲಿನ ಪುಡಿ ಹಾಕಿಕೊಳ್ಳಿ. ಹಾಗೆ ಅದಕ್ಕೆ 2 ಸ್ಪೂನ್ ತುಪ್ಪ, ಹಾಗೆ ಹಾಲಿನ ಪುಡಿ ತೆಗೆದುಕೊಂಡು ಕಪ್ನಲ್ಲಿ 1 ಕಪ್ ಕಾಯಿಸಿ ತಣ್ಣಗಾಗಿರುವ ಹಾಲನ್ನು ಇದಕ್ಕೆ ಹಾಕಿಕೊಳ್ಳಿ. ನಂತರ ಚೆನ್ನಾಗಿ ಗಂಟು ಇಲ್ಲದಂತೆ ಮಿಕ್ಸ್ ಮಾಡಿಕೊಳ್ಳಿ. ಸಣ್ಣ ಉರಿ ಇಟ್ಟುಕೊಳ್ಳಿ.
ಇದನ್ನು ಚೆನ್ನಾಗಿ ಕಲಸಿಕೊಳ್ಳುತ್ತಾ ಇರಿ ಕೇವಲ 5 ನಿಮಿಷ ಕಲಸಿಕೊಂಡರೆ ಸಾಕು ಇದು ಕೋವಾ ಆಗಿ ಬದಲಾಗುತ್ತದೆ. ಇದನ್ನು ಫ್ರಿಡ್ಜ್ನಲ್ಲಿ ಇಟ್ಟರೆ ತಿಂಗಳುಗಳ ಕಾಲ ಇರುತ್ತದೆ. ಇದರ ರುಚಿ ಕೂಡ ಬರಿ ಹಾಲಿನಲ್ಲಿ ಮಾಡಿದ ಕೋವಾದಂತೆ ಇರಲಿದೆ. ಹಾಗೆ ಇದನ್ನು ಕಡಿಮೆ ಸಮಯದಲ್ಲಿ ಮಾಡಬಹುದು. ಹಲವು ಬೇಕರಿಗಳು, ಹೋಟೆಲ್ಗಳು ಇದೇ ರೀತಿ ವಿಧಾನದಲ್ಲಿ ಕೋವಾ ಮಾಡಿಕೊಳ್ಳುತ್ತಾರೆ.



Click it and Unblock the Notifications
