Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಮಿಲ್ಕ್ ಕೇಕ್ ರೆಸಿಪಿ: ಈ ಎಗ್‌ಲೆಸ್ ಕೇಕ್ ಮಾಡುವುದು ಸುಲಭ, ರುಚಿಯಲ್ಲೂ ಸೂಪರ್
Recipes
oi-Reena TK
Posted By: Reena TK
ಮಿಲ್ಕ್ ಕೇಕ್, ಈ ಎಗ್ ಲೆಸ್ ಕೇಕ್ ರುಚಿ ತುಂಬಾ ಸೂಪರ್ ಆಗಿರುತ್ತದೆ, ಮಕ್ಕಳಿಗೆ ಏನಾದರೂ ಸ್ಪೆಷಲ್ ಸಿಹಿ ತಿಂಡಿ ನೀಡಬೇಕೆನಿಸಿದಾಗ ಅಥವಾ ಸ್ನೇಹಿತರ ಮನೆಗೆ ಹೋಗುವಾಗ ಗಿಫ್ಟ್ ಗಿ ನೀಡಲು ಈ ರೆಸಿಪಿ ಟ್ರೈ ಮಾಡಬಹುದು, ಗುಲಾಬ್ ಜಾಮೂನ್‌ಗಿಂತ ಸ್ವಲ್ಪ ಭಿನ್ನ ರೆಸಿಪಿಯಿದು, ಈ ಮೃದುವಾದ ಕೇಕ್ ಬಾಯಿಗೆ ಹಾಕಿದರೆ ಐಸ್‌ಕ್ರೀಮ್ ಕರಗಿದಂತೆ ಕರಗುವುದು, ತುಂಬಾನೇ ರುಚಿ ಅನಿಸುವುದು, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ ಬನ್ನಿ.

ಬೇಕಾಗುವ ಸಾಮಗ್ರಿ
1 ಕಪ್ ಹಾಲಿನ ಪುಡಿ
11/2 ಕಪ್ ಮೈದಾ
1/4 ಚಮಚ ಏಲಕ್ಕಿ ಪುಡಿ
1/2 ಚಮಚ ಅಡುಗೆ ಸೋಡಾ
2 ಚಮಚ ಬೆಣ್ಣೆ ಅಥವಾ ತುಪ್ಪ
ಬಿಸಿ ಹಾಲು
ಎಣ್ಣೆ
ಸಕ್ಕರೆ ಪಾಕ
ಒಂದೂವರೆ ಕಪ್ 2 ಚಮಚ
2 ಏಲಕ್ಕಿ
ಒಂದೂವರೆ ಕಪ್ ಸಕ್ಕರೆ
ಮಾಡುವ ವಿಧಾನ
- ಒಂದು ದೊಡ್ಡ ಬೌಲ್‌ನಲ್ಲಿ ಒಂದು ಕಪ್ ಹಾಲಿನ ಪುಡಿ, ಒಂದೂವರೆ ಕಪ್ ಮೈದಾ, 1/2 ಚಮಚ ಅಡುಗೆ ಸೋಡಾ
- ಎಲ್ಲಾ ಸಾಮಗ್ರಿ ಒಂದು ಬೌಲ್‌ನಲ್ಲಿ ಹಾಕಿ ಮಿಶ್ರ ಮಾಡಿ. ನಂತರ 2 ಚಮಚ ಬೆಣ್ಣೆ ಅಥವಾ ತುಪ್ಪ ಹಾಕಿ ಚೆನ್ನಾಗಿ ಮಿಶ್ರ ಮಾಡಿ.
- 1/2 ಕಪ್ ಬಿಸಿ ಹಾಲು ಹಾಕಿ ಕೈಯಿಂದ ಹಿಟ್ಟು ಕಲೆಸಿ, ಚಪಾತಿಗೆ ಕಲೆಸುವ ರೀತಿಯಲ್ಲಿ, ಹಿಟ್ಟು ನೀರು ನೀರಾಗಿರಬಾರದು.
- ನಂತರ ಆ ಹಿಟ್ಟಿನಿಂದ ರೋಲ್ ಮಾಡಿ ನಂತರ ಅದನ್ನು ಆಯಾತಾಕಾರವಾಗಿ ಕತ್ತರಿಸಿ.
- ಇದೇ ಸಮಯದಲ್ಲಿ ಪ್ಯಾನ್‌ನಲ್ಲಿ ಎಣ್ಣೆ ಕುದಿಸಿ, ಈಗ ಎಣ್ಣೆಗೆ ಹಾಕಿ ಕಡಿಮೆ ಉರಿಯಲ್ಲಿ ಫ್ರೈ ಮಾಡಿ. ಅದನ್ನು ತಿರಯಗಿಸುತ್ತಾ ಇರಿ, ಗೋಲ್ಡನ್ ಬಣ್ಣಕ್ಕೆ ಬರುವಾಗ ಎಣ್ಣೆಯಿಂದ ತೆಗೆಯಿರಿ.
- ಇದೇ ಸಮಯದಲ್ಲಿ ಸಕ್ಕರೆ ಪಾಕ ರೆಡಿಯಾಗಿರಬೇಕು.
- ಸಕ್ಕರೆ ಪಾಕಗೆ ಏಲಕ್ಕಿ ಹಾಕಿ, ರುಚಿ ಸೂಪರ್ ಆಗಿರುತ್ತದೆ.
- ನಂತರ ಫ್ರೈ ಮಾಡಿದ ಕೇಕ್ ಹಾಕಿ, 2 ಗಂಟೆ ಬಳಿಕ ಸರ್ವ್ ಮಾಡಿ, ರುಚಿ ಸೂಪರ್ ಆಗಿರುತ್ತದೆ.
ಡೀಪ್ ಫ್ರೈ ಮಾಡದೆ ಕೇಕ್ ಮಾಡಬಹುದು
ನೀವು ಹಿಟ್ಟನ್ನು ಕೇಕ್ ರೀತಿಯಲ್ಲಿ ಮಾಡಿ, ಓವನ್‌ನಲ್ಲಿ ಇಟ್ಟು ಬೇಕ್ ಮಾಡಿ,
ನಂತರ ಅದನ್ನು ಕತ್ತರಿಸಿ ಸಕ್ಕರೆ ಪಾಕಕ್ಕೆ ಹಾಕಬಹುದು.
Comments
[ of 5 - Users]
Story first published: Friday, March 15, 2024, 13:56 [IST]
Other articles published on Mar 15, 2024



Click it and Unblock the Notifications
