Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಮೆಂತ್ಯ ಸೊಪ್ಪಿನ ಪರೋಟ: 5 ನಿಮಿಷದಲ್ಲಿ ಮಾಡಬಹುದು!
ನೀವು ತಿಂಡಿಗೆ ವಿವಿಧ ಬಗೆಯ ರುಚಿ ರುಚಿಯ ಖಾದ್ಯ ಮಾಡಿ ಸವಿದಿರುತ್ತೀರಿ. ಅದ್ರಲ್ಲೂ ದೋಸೆ, ಇಡ್ಲಿ, ಪರೋಟಾದಂತಹ ವಿಶೇಷ ರೀತಿಯ ಖಾದ್ಯವಂತು ಎಲ್ಲರಿಗೂ ಇಷ್ಟವಾಗುತ್ತೆ. ಪರೋಟಾವನ್ನು ಹಲವು ರೀತಿಯಲ್ಲಿ ಮಾಡಬಹುದು ಎಂಬುದನ್ನು ನೀವು ತಿಳಿದಿರಬಹುದು. ಹಾಗೆ ಬಹಳ ಸಮಯದ ಬಳಿಕ ಈ ಪರೋಟಾವನ್ನು ಸವಿಯುತ್ತಿದ್ರೆ ಈ ರೀತಿಯ ರುಚಿಕರ ಪರೋಟ ಮಾಡಿ ನೋಡಿ.
ಅದ್ರಲ್ಲೂ ಆಲೂ ಪರೋಟ ರುಚಿ ನೋಡಿದವರು ಮತ್ತೆ ಮತ್ತೆ ಸವಿಯಲು ಇಷ್ಟಪಡುತ್ತಾರೆ. ಇನ್ನು ಮೆಂತ್ಯ ಸೊಪ್ಪಿನ ಪರೋಟ ಒಮ್ಮೆ ಸವಿದರೆ ಮತ್ತೆ ಮತ್ತೆ ಮಾಡಿ ಸವಿಯಲು ಮುಂದಾಗುತ್ತೀರಿ. ಹಾಗೆ ಈ ರುಚಿಯಲ್ಲಿ ತಿಂಡಿ ಸವಿದರೆ ಬಾಯಲ್ಲಿ ನೀರು ಬರುವುದು ಖಚಿತ. ಹಾಗಾದ್ರೆ ಬೆಳಗ್ಗೆ ತಿಂಡಿಯ ಸಮಯದಲ್ಲಿ ಈ ಮೆಂತ್ಯ ಸೊಪ್ಪಿನ ಪರೋಟ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳಿ.

ಮೆಂತ್ಯ ಸೊಪ್ಪು ಬಳಸಿ ಮಾಡುವ ಈ ಪರೋಟ ಬಹಳ ರುಚಿಯಾಗಿಯೂ ಹಾಗೆ ಆರೋಗ್ಯಕರ ಪದಾರ್ಥಗಳ ಸೇರಿಸಿ ಇದನ್ನು ಮಾಡಬಹುದು. ಹಾಗಾದ್ರೆ ನಾವಿಂದು ಬೆಳಗ್ಗೆ ತಿಂಡಿಗೆ ಪರೋಟ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ಮೆಂತ್ಯ ಸೊಪ್ಪಿನ ಪರೋಟ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಗೋಧಿ ಹಿಟ್ಟು
- ಮೆಂತ್ಯ ಸೊಪ್ಪು
- ಶುಂಠಿ
- ಗರಂ ಮಸಾಲ
- ನೀರು
- ಬೆಳುಳ್ಳಿ
- ಖಾರದ ಪುಡಿ
- ಎಣ್ಣೆ ಅಥವಾ ತುಪ್ಪ
- ಉಪ್ಪು
- ಅರಶಿಣ
ಮೆಂತ್ಯ ಸೊಪ್ಪಿನ ಪರೋಟ ಮಾಡುವುದು ಹೇಗೆ?
ಮೊದಲು ಮೆಂತ್ಯ ಸೊಪ್ಪನ್ನು ಕ್ಲೀನ್ ಮಾಡಿ ಬಳಿಕ ಸಣ್ಣದಾಗಿ ಹೆಚ್ಚಿಕೊಂಡು ಒಂದು ಬೌಲ್ಗೆ ಹಾಕಿಟ್ಟುಕೊಳ್ಳಿ. ಈಗ ಅದೇ ಬೌಲ್ಗೆ ಒಂದು ಕಪ್ ಗೋಧಿ ಹಿಟ್ಟು ಹಾಕಿಕೊಳ್ಳಿ. ಹಾಗೆ ಶುಂಠಿ, ಬೆಳ್ಳುಳ್ಳಿ, ಖಾರದ ಪುಡಿ, ಗರಂ ಮಸಾಲ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಅರಶಿಣ ಹಾಕಿಕೊಂಡು ಡ್ರೈ ಮಿಕ್ಸ್ ಮಾಡಿಕೊಳ್ಳಿ.
ನಂತರ ಸ್ವಲ್ಪ ಸ್ವಲ್ಪ ನೀರು ಹಾಕಿಕೊಂಡು ಹಿಟ್ಟು ಕಲಸಿಕೊಳ್ಳಿ. ಅರ್ಧ ಕಪ್ ನೀರು ಸಾಕಾಗುತ್ತದೆ. ಹಿಟ್ಟು ತೆಳುವಾದರೆ ಗೋಧಿ ಹಿಟ್ಟು ಹಾಕಿಕೊಳ್ಳುತ್ತಾ ಕಲಸಿಕೊಳ್ಳಿ. ಇನ್ನು ಕೊನೆಯಲ್ಲಿ 2 ಸ್ಪೂನ್ ಎಣ್ಣೆ ಹಾಕಿಕೊಂಡು ಹಿಟ್ಟನ್ನು ಹದ ಮಾಡಿಟ್ಟುಕೊಳ್ಳಿ. ಇದು ವಡೆ ರೀತಿ ದಪ್ಪವಾದ ಹಿಟ್ಟು ಆಗಿರಬೇಕು.
ನಂತರ ಒಂದು ಉಂಡೆ ಹಿಟ್ಟನ್ನು ತೆಗೆದುಕೊಂಡು ಚಪಾತಿಯಂತೆ ಲಟ್ಟಿಸಿಕೊಳ್ಳಿ. ಲಟ್ಟಿಸಿಕೊಂಡ ಬಳಿಕ ತವದಲ್ಲಿ ಹಾಕಿ ಕಾಯಿಸಿಕೊಳ್ಳಿ. ಚಪಾತಿಯಂತೆಯೆ ಕಾಯಿಸಿಕೊಳ್ಳಿ. ಇದಕ್ಕೆ ಎಣ್ಣೆ ಅಥವಾ ತುಪ್ಪ ಹಾಕಿ ಕಾಯಿಸಿಕೊಳ್ಳಬಹುದು. ನೀವು ಕೂಡ ಬೆಳಗ್ಗೆ ತಿಂಡಿಗೆ ಈ ರೀತಿಯಾಗಿ ಮೆಂತ್ಯ ಸೊಪ್ಪಿನ ಪರೋಟ ಮಾಡಿ ನೋಡಿ. ಇಷ್ಟು ರುಚಿಯ ಪರೋಟ ನೀವು ಸವಿದರೆ ಮತ್ತೆ ಮತ್ತೆ ಸವಿಯಬೇಕು ಎನಿಸೋದು ಖಚಿತ.
ಇದರ ಮೇಲೆ ಸ್ವಲ್ಪ ಅಕ್ಕಿ ಹಿಟ್ಟು ಹಾಕಿ ನೀವು ಕರಿದುಕೊಂಡರೆ ಸ್ವಲ್ಪ ಕ್ರಿಸ್ಪಿಯಾಗಿ ಬರಲಿದೆ. ನೀವು ಕೂಡ ಮನೆಯಲ್ಲಿ ಅದರಲ್ಲೂ ಬೆಳಗ್ಗೆ ತಿಂಡಿಯ ಸಮಯದಲ್ಲಿ ಮಾಡಿ ನೋಡಿ. ಮನೆಯವರಿಗೆಲ್ಲ ಇದು ಇಷ್ಟವಾಗುತ್ತೆ. ಹಾಗೆ ಮೆಂತ್ಯ ಸೊಪ್ಪಿನಲ್ಲಿನ ಆರೋಗ್ಯಕರ ಅಂಶವು ನಿಮಗೆ ಬಹಳ ಉತ್ತಮವಾಗಿರಲಿದೆ. ಮಕ್ಕಳಿಗೂ ಇದು ಬಹಳ ಉತ್ತಮ, ಮೆಂತ್ಯ ಸೊಪ್ಪಿನಲ್ಲಿರುವ ಕಬ್ಬಿಣಾಂಶ ಹಾಗೆ ವಿಟಮಿನ್ಗಳು ದೇಹಕ್ಕೆ ಬಹಳ ಉತ್ತಮವಾಗಿರಲಿದೆ.



Click it and Unblock the Notifications
