Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಬ್ರೇಕ್‌ಫಾಸ್ಟ್‌ಗೆ ಮೆಂತ್ಯ ಸೊಪ್ಪಿನ ರೈಸ್ ಬಾತ್ ಮಾಡಿ..! ಇಲ್ಲಿದೆ ಸುಲಭದ ರೆಸಿಪಿ
ನೀವು ಬೆಳಗ್ಗೆ ತಿಂಡಿಗೆ ಹತ್ತಾರು ಬಗೆಯ ಖಾದ್ಯ ಮಾಡಿ ಸವಿಯುತ್ತೀರಿ. ಅದರಲ್ಲೂ ಯಾವಾಗಲು ಒಂದೇ ರೀತಿಯ ಖಾದ್ಯ ಅಂದ್ರೆ ನಿಮಗೂ ಬೇಸರ ತರಲಿದೆ. ಎಲ್ಲರು ವಿಶೇಷವಾಗಿ ಏನಾದರು ಸವಿಯಲು ಮುಂದಾಗುವುದೇ ಹೆಚ್ಚು. ಅದರಲ್ಲೂ ಬೆಳಗ್ಗೆ ತಿಂಡಿಗೆ ವಿಶೇಷವಾಗಿ ರೈಸ್‌ನಿಂದ ಮಾಡುವಂತಹ ಖಾದ್ಯ ಸವಿಯಲು ನೀವು ಕೂಡ ಮುಂದಾಗುತ್ತೀರಿ. ರುಚಿ ರುಚಿಯಾದ ರೈಸ್ ಬಾತ್ ಎಲ್ಲರ ಮನೆಯ ಖಾದ್ಯ ಎನ್ನಬಹುದು. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ರೈಸ್ ಬಾತ್ ಸವಿಯಲು ಇಷ್ಟಪಡುತ್ತಾರೆ.
ಹಾಗೆ ರೈಸ್ ಬಾತ್ ಅಂದರೆ ನೀವು ಒಂದೇ ರೀತಿಯ ಟೇಸ್ಟ್‌ನಲ್ಲಿ ಮಾಡಿರುತ್ತೀರಿ. ಆದ್ರೆ ಒಂದೇ ರುಚಿಯಲ್ಲಿ ಮಾತ್ರವಲ್ಲ ಹಲವು ರೀತಿಯಲ್ಲಿ ಈ ರೈಸ್ ಬಾತ್ ಮಾಡಬಹುದು. ಅದರಲ್ಲಿ ನಾವಿಂದು ವಿಶೇಷವಾಗಿ ಮೆಂತ್ಯ ಸೊಪ್ಪಿನ ರೈಸ್ ಬಾತ್ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಮೆಂತ್ಯ ಸೊಪ್ಪಿನಿಂದ ಹಲವಾರು ಬಗೆಯ ಖಾದ್ಯ ಮಾಡಬಹುದು. ನೀವು ಸಹ ಒಂದಿಷ್ಟು ಖಾದ್ಯ ಮಾಡಿ ಸವಿದಿರುತ್ತೀರಿ. ಆದ್ರೆ ನಾವಿಂದು ಈ ಸೊಪ್ಪಿನ ರುಚಿ ರುಚಿಯ ರೈಸ್ ಬಾತ್ ಮಾಡಿ ಸವಿಯುವ ಕುರಿತಾಗಿ ತಿಳಿದುಕೊಳ್ಳೋಣ.

ಮೆಂತ್ಯ ಸೊಪ್ಪಿನ ರೈಸ್ ಬಾತ್ ಬೆಳಗ್ಗೆ ತಿಂಡಿಗೆ ಸವಿಯಲು ಅದ್ಭುತವಾಗಿರಲಿದೆ. ಹಾಗಾದ್ರೆ ಈ ಮೆಂತ್ಯ ಸೊಪ್ಪಿನ ರೈಸ್ ಬಾತ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೆಂತ್ಯ ಸೊಪ್ಪಿನ ರೈಸ್ ಬಾತ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಮೆಂತ್ಯ ಸೊಪ್ಪು
- ಅವರೇಕಾಳು - ಅರ್ಧ ಕಪ್
- ಜೀರಾ ರೈಸ್ 2 ಕಪ್
- ಈರುಳ್ಳಿ
- ಹಸಿ ಮೆಣಸಿನಕಾಯಿ
- ಶುಂಠಿ-ಬೆಳ್ಳುಳ್ಳಿ ಪೇಸ್ಟ್
- ಅರಿಶಿನ ಪುಡಿ
- ನಿಂಬೆ ಹಣ್ಣಿನ ರಸ
- ಪಲಾವ್ ಎಲೆ
- ಚಕ್ಕೆ
- ಲವಂಗ
- ಏಲಕ್ಕಿ
- ಚಕ್ರಮೊಗ್ಗು
- ಸೋಂಪು ಕಾಳು
- ಉಪ್ಪು
- ಎಣ್ಣೆ
ಮೆಂತ್ಯ ಸೊಪ್ಪಿನ ರೈಸ್ ಬಾತ್ ಮಾಡುವುದು ಹೇಗೆ?
ಮೊದಲು ಒಂದು ಕುಕ್ಕರ್ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಅದಕ್ಕೆ ಏಲಕ್ಕಿ, ಲವಂಗ, ಚಕ್ಕೆ, ಸೋಂಪು ಕಾಳು. ಪಲಾವ್ ಎಲೆ ಹಾಕಿಕೊಳ್ಳಿ. ನಂತರ ಇದಕ್ಕೆ ಹಸಿ ಮೆಣಸು, ಈರುಳ್ಳಿ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಈಗ ಒಂದು ಕಟ್ ಮೆಂತ್ಯ ಸೊಪ್ಪನ್ನು ತೊಳೆದು ಕತ್ತರಿಸಿ ಹಾಗೆಯೆ ಕುಕ್ಕರ್‌ಗೆ ಹಾಕಿಕೊಳ್ಳಿ. ನಂತರ 5ರಿಂದ 6 ನಿಮಿಷ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
ಈಗ ಒಂದು ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಶಿಣ ಪುಡಿ ಹಾಕಿ ಅರ್ಧ ನಿಮಿಷ ಬಿಡಿ. ಅನಂತರ ಇದಕ್ಕೆ 2 ಕಪ್ ಅಳತೆಯ ಜೀರಾ ರೈಸ್ ಬಳಸುವುದರಿಂದ 3 ಕಪ್ ನೀರು ಹಾಕಿಕೊಂಡು ಮಿಕ್ಸ್ ಮಾಡಿ. ನಾರ್ಮಲ್ ಅಕ್ಕಿ ಬಳಸಿದರೆ 10 ನಿಮಿಷ ನೀರಿನಲ್ಲಿ ನೆನೆಸಿಡಬೇಕು. ಈಗ ಕುಕ್ಕರ್‌ಗೆ ಉಪ್ಪು, ನಿಂಬೆ ರಸ ಹಾಕಿಕೊಂಡು ಮಿಕ್ಸ್ ಮಾಡಬೇಕು. ನಂತರ ಅಕ್ಕಿ ಇದಕ್ಕೆ ಹಾಕಿ ಅರ್ಧ ಕಪ್ ಅವರೆಕಾಳು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಅನಂತರ ಕುಕ್ಕರ್ ಮುಚ್ಚಳ ಮುಚ್ಚಿ 2 ಸೀಟಿ ಹೊಡೆಯಲು ಬಿಡಿ. ಸೀಟಿ ಹೊಡೆಸಿಕೊಂಡ ಬಳಿಕ ಮುಚ್ಚಳ ತೆಗೆದು ಒಮ್ಮೆ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಮೆಂತ್ಯ ಸೊಪ್ಪಿನ ರೈಸ್ ಬಾತ್ ರೆಡಿಯಾಗುತ್ತೆ. ನೀವು ಕೂಡ ಇದನ್ನೊಮ್ಮೆ ಟ್ರೈ ಮಾಡಿ ನೋಡಿ. ಬ್ರೇಕ್‌ಫಾಸ್ಟ್‌ಗೆ ಇದು ಹೇಳಿ ಮಾಡಿಸಿದ ಖಾದ್ಯ.



Click it and Unblock the Notifications
