Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಬೆಳಗ್ಗೆಯ ತಿಂಡಿಗೆ ಸಖತ್ ರುಚಿಯ ಮೆಂತ್ಯೆ ಪಲಾವ್..! ಮಾಡುವ ವಿಧಾನವಿದು..!
ನೀವು ಬೆಳಗ್ಗೆಯ ತಿಂಡಿ ದಿನಾಲು ಒಂದೇ ರೀತಿ ಅಡುಗೆ ಮಾಡಿ ಬೇಜಾರು ಆಗಿದ್ರೆ ಬೇರೆ ಬೇರೆ ಏನಾದ್ರು ಟ್ರೈ ಮಾಡುವ ಯೋಚನೆ ಇದ್ದರೆ ಈ ಮೆಂತ್ಯ ಪಲಾವ್ ಮಾಡಿ ನೋಡಿ. ಹೌದು ಪಲಾವ್ ರೆಸಿಪಿಯಲ್ಲಿಯೇ ಹತ್ತಾರು ಬಗೆಯ ಖಾದ್ಯ ಮಾಡಬಹುದು. ಅದರಲ್ಲೂ ಬೆಳಗ್ಗೆ ಸಮಯ ಇಲ್ಲದಾಗ ಕಡಿಮೆ ಸಮಯದಲ್ಲಿ ಪಲಾವ್ ಮಾಡಬಹುದು. ಆದ್ರೆ ಒಂದೇ ರೀತಿಯ ಪಲಾವ್ ಸವಿಯುವುದು ಅಂದ್ರೆ ಬೇಜಾರು. ಅದಕ್ಕಾಗಿ ಮೆಂತ್ಯೆ ಪಲಾವ್ ಟ್ರೈ ಮಾಡಿ.
ಈ ಮೆಂತ್ಯೆ ಪಲಾವ್ನಲ್ಲಿ ಹೆಚ್ಚು ಮಸಾಲೆ ಹಾಗೂ ಮೆಂತ್ಯೆ ಫ್ಲೇವರ್ ಇರುವ ಕಾರಣ ರುಚಿ ಹೆಚ್ಚಾಗಿರುತ್ತದೆ. ಉಳಿದ ಪಲಾವ್ಗಳಿಗಿಂತ ಇದರ ರುಚಿ ನಾಲಿಗೆಗೆ ಹಿಡಿಸುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಇದು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು ಜೊತೆಗೆ ಮಸಾಲೆ ಭರಿತ ಈ ಪಲಾವ್ ಬೆಳಗೆಯ ತಿಂಡಿಯನ್ನು ರುಚಿಯಾಗಿಸುತ್ತೆ.

ಹಾಗಾದರೆ ಈ ಮೆಂತ್ಯೆ ಪಲಾವ್ ಮಾಡುವುದು ಹೇಗೆ? ಈ ಪಲಾವ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಈ ಪಲಾವ್ ಮಾಡುವ ಪಾಕವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೆಂತ್ಯೆ ಪಲಾವ್ ಮಾಡಲು ಬೇಕಾಗುವ ಪದಾರ್ಥಗಳು
- ಹಸಿ ಮೆಣಸು- 6
- ಬಾಸುಮತಿ ಅಕ್ಕಿ / ಸಾಮಾನ್ಯ ಅಕ್ಕಿ
- ಚಕ್ಕೆ
- ಲವಂಗ
- ಸೋಂಕಾಳು
- ಚಕ್ರಮೊಗ್ಗು
- ಜೀರಿಗೆ
- ಬಿರಿಯಾನಿ ಎಲೆ
- ಶುಂಠಿ
- ಬೆಳ್ಳುಳ್ಳಿ
- ಗೋಡಂಬಿ
- ಪುದಿನ ಸೊಪ್ಪು
- ಈರುಳ್ಳಿ - 1 ದೊಡ್ಡದು
- ಮೆಂತ್ಯಾ ಸೊಪ್ಪು- 1 ಕಟ್ಟು
- ಹಸಿ ಬಟಾಣಿ- ಅರ್ಧ ಕಪ್
- ಅರಶಿನ ಪುಡಿ
- ಉಪ್ಪು
ಮೆಂತ್ಯೆ ಪಲಾವ್ ಮಾಡುವ ವಿಧಾನ
ಮೊದಲು ಅಕ್ಕಿಯನ್ನು ಒಂದು ಕಪ್ನಲ್ಲಿ ಹಾಕಿಕೊಂಡು 20ರಿಂದ 30 ನಿಮಿಷ ನೆನೆಸಿಡಿ. ಈಗ ಒಲೆ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ಎಣ್ಣೆ ಹಾಕಿ, ಎಣ್ಣೆ ಕಾದ ಬಳಿಕ ಚಕ್ಕೆ, ಲವಂಗ, ಸೋಂಕಾಳು, ಬಿರಿಯಾನಿ ಎಲೆ, ಜೀರಿಗೆ, ಚಕ್ರಮೊಗ್ಗು ಎಲ್ಲವನ್ನು ಒಟ್ಟಿಗೆ ಹಾಕಿ ಫ್ರೈ ಮಾಡಿಕೊಳ್ಳಿ. ಇದಕ್ಕೆ ಶುಂಠಿ ಬೆಳ್ಳುಳ್ಳಿ ಹಾಕಿ, ಪೇಸ್ಟ್ ಇದ್ದರೆ ಅದನ್ನೇ ಬಳಸಿ, ಗೋಡಂಬಿ ಇದ್ದರೂ ಬಳಸಬಹುದು. ಇಲ್ಲದಿದ್ದರೆ ಬಿಡಿ.
ಇದಾದ ಬಳಿಕ ಹಸಿ ಮೆಣಸಿನ ಕಾಯಿ ಹಾಕಿ. ಪುದೀನ ಸೊಪ್ಪು ಹಾಗೂ ಕತ್ತರಿಸಿದ ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಈರುಳ್ಳಿ ಫ್ರೈ ಆದ ಬಳಿಕ ಚೆನ್ನಾಗಿ ತೊಳೆದಿರುವ ಮೆಂತ್ಯೆ ಸೊಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದರ ಜೊತೆಗೆ ಹಸಿ ಬಟಾಣಿ ಹಾಕಬಹುದು. ಬಟಾಣಿ ಇಲ್ಲದಿದ್ದರೂ ಸಮಸ್ಯೆಯಿಲ್ಲ. ಸೊಪ್ಪು ಹಾಕಿದ ಬಳಿಕ ಚೆನ್ನಾಗಿ ಮಿಕ್ಸ್ ಮಾಡಿ ಫ್ರೈ ಮಾಡಿಕೊಳ್ಳಿ.
1 ನಿಮಿಷದ ಬಳಿಕ ಅದಕ್ಕೆ ಅರಶಿನ ಪುಡಿ ಹಾಕಿ 3 ನಿಮಿಷ ಫ್ರೈ ಮಾಡಿ. ಚೆನ್ನಾಗಿ ಫ್ರೈ ಮಾಡಿದ ಬಳಿಕ ನೀರಿನಲ್ಲಿ ನೆನೆಸಿಟ್ಟಿರುವ ಅಕ್ಕಿಯನ್ನು ಅದಕ್ಕೆ ಹಾಕಿ ಮೊದಲು ಮಿಕ್ಸ್ ಮಾಡಿ 1 ನಿಮಿಷ ಮಿಶ್ರಣ ಮಾಡಿಕೊಳ್ಳಿ. ಆದರೆ ಈ ವೇಳೆ ನೀರು ಹಾಕುವಾಗ ಎಚ್ಚರವಿರಲಿ, ಯಾವ ಕಪ್ನಲ್ಲಿ ಅಕ್ಕಿ ತೆಗೆದುಕೊಂಡಿದ್ದೀರೋ ಅದೇ ಕಪ್ನಲ್ಲಿ ಎರಡರಷ್ಟು ನೀರನ್ನು ಹಾಕಿ ಅದಕ್ಕೆ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಈ ರೀತಿ ಮಿಶ್ರಣ ಮಾಡಿದ ತಕ್ಷಣ ಕುಕ್ಕರ್ನ ಮುಚ್ಚಳ ಹಾಕಿ ಮೂರು ಸೀಟಿ ಹಾಕುವವರೆಗೆ ಬಿಡಿ. ಮೂರು ಸೀಟಿಯ ಬಳಿಕ ಉರಿ ಆಫ್ ಮಾಡಿ ಹಾಗೆಯೇ ಬಿಡಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಮೆಂತ್ಯೆ ಪಲಾವ್ ಸವಿಯಲು ರೆಡಿಯಾಗುತ್ತದೆ. ಇದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಸವಿಯಲು ಇಡಿ.



Click it and Unblock the Notifications
