Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಊಟದ ಜೊತೆಗೆ ಈ ಮೆಂತ್ಯ ಸೊಪ್ಪಿನ ಒಗ್ಗರಣೆ ಚಟ್ನಿ ಮಾಡಿ!! ಆರೋಗ್ಯಕ್ಕೂ ಇದು ಬೆಸ್ಟ್!
ಬೆಳಗ್ಗೆ ತಿಂಡಿ, ಮಧ್ಯಾಹ್ನದ ಊಟ ಹಾಗೆ ರಾತ್ರಿಯ ಊಟಕ್ಕೆ ಬಗೆ ಬಗೆಯ ಸಾಂಬಾರ್, ಸಾರು, ರಸಂ, ಪಲ್ಯ ಇದೆಲ್ಲದರ ನಡುವೆ ನೀವು ಮತ್ತೂ ನಿಮ್ಮ ನಾಲಗೆ ರುಚಿ ಹೆಚ್ಚಿಸುವ ಹಲವು ರೀತಿಯ ಖಾದ್ಯ ಸವಿಯಲು ಮುಂದಾಗುತ್ತಲೇ ಇರುತ್ತೀರಿ. ಅದರಲ್ಲೂ ಹೆಚ್ಚಾಗಿ ಹಪ್ಪಳ, ಚಟ್ನಿ, ಉಪ್ಪಿನಕಾಯಿ, ಕೋಸಂಬರಿಯಂತಹ ಖಾದ್ಯ ಸವಿಯುವುದು ನೋಡಬಹುದು.
ಚಟ್ನಿಯನ್ನು ತಿಂಡಿಯ ಜೊತೆಗೆ ಊಟದೊಂದಿಗೂ ಸವಿಯುವುದು ನೋಡಬಹುದು. ಹಾಗೆ ಈ ಚಟ್ನಿಯನ್ನು ಸ್ವಲ್ಪ ಆರೋಗ್ಯಕರ ಮಾರ್ಗವಾಗಿ ರೆಡಿ ಮಾಡಿದರೆ ಇನ್ನೂ ಅದ್ಭುತವಾಗಿರಲಿದೆ. ಹಾಗಾದ್ರೆ ರುಚಿಕರವಾಗಿ ಹಾಗೆ ಆರೋಗ್ಯಕ್ಕೂ ಉತ್ತಮವಾದ ಚಟ್ನಿ ಅಂದ ತಕ್ಷಣ ನಿಮಗೆ ಸೊಪ್ಪಿನ ಚಟ್ನಿಗಳು ನೆನಪಾಗಬಹುದು. ನಾವಿಂದು ಮೆಂತ್ಯ ಸೊಪ್ಪಿನ ಚಟ್ನಿ ಕುರಿತು ತಿಳಿಯೋಣ.

ಮೆಂತ್ಯ ಸೊಪ್ಪಿನಲ್ಲಿ ಎಷ್ಟೆಲ್ಲಾ ಆರೋಗ್ಯಗರ ಲಾಭಗಳಿವೆ ಎಂಬುದನ್ನು ನೀವು ಸಹ ಕೇಳಿರಬಹುದು. ದುರ್ಬಲ ಯಕೃತ್ತಿನ ಕ್ರಿಯೆ ಮತ್ತು ಜೀರ್ಣಕ್ರಿಯೆ ಸಮಸ್ಯೆ ಹೊಂದಿರುವವರು ಮೆಂತ್ಯ ಸೊಪ್ಪಿನ ಖಾದ್ಯಗಳ ಸವಿಯಬೇಕು. ಇದು ಗ್ಯಾಸ್ಟ್ರಿಕ್ ಸಮಸ್ಯೆ, ಅತಿಸಾರ, ದೇಹದ ಉಷ್ಣತೆ ಹೆಚ್ಚಾಗುವುದನ್ನು ಕೂಡ ತಡೆಯಲಿದೆ. ಇಷ್ಟೊಂದು ಆರೋಗ್ಯಕರ ಅಂಶಗಳ ಹೊಂದಿರುವ ಈ ಮೆಂತ್ಯ ಸೊಪ್ಪಿನಿಂದ ಅದ್ಬುತವಾದ ಚಟ್ನಿ ಮಾಡಬಹುದು.
ಹಾಗಾದ್ರೆ ಈ ಮೆಂತ್ಯ ಸೊಪ್ಪಿನ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೆಂತ್ಯ ಸೊಪ್ಪಿನ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಮೆಂತ್ಯ ಸೊಪ್ಪು
- ಶೇಂಗಾ
- ದನಿಯಾ ಕಾಳು
- ಜೀರಿಗೆ
- ಹಸಿ ಮೆಣಸು
- ಒಣ ಮೆಣಸು
- ಸಾಸಿವೆ
- ಟೊಮೆಟೋ
- ಹುಣಸೆ ಹುಳಿ
- ಅರಶಿಣ
- ಉಪ್ಪು
- ಎಣ್ಣೆ
ಮೆಂತ್ಯ ಸೊಪ್ಪಿನ ಚಟ್ನಿ ಮಾಡುವ ವಿಧಾನವೇನು?
ಒಂದು ಬಾಣಲೆ ಒಲೆ ಮೇಲೆ ಇಟ್ಟು ಎಣ್ಣೆ ಹಾಕಿಕೊಂಡು ಅದಕ್ಕೆ ಕೊತ್ತಂಬರಿ ಕಾಳು, ಜೀರಿಗೆ ಹಾಕಿ ಫ್ರೈ ಮಾಡಿ. ನಂತರ ಇದಕ್ಕೆ ಒಣ ಮೆಣಸು, ಹಸಿ ಮೆಣಸು ಹಾಕಿ ಒಂದು ಸುತ್ತು ಮಿಕ್ಸ್ ಮಾಡಿ ಈಗ ತೊಳೆದುಕೊಂಡಿರುವ ಮೆಂತ್ಯ ಸೊಪ್ಪನ್ನು ಹಾಕಿಕೊಳ್ಳಿ. 2 ಕಟ್ನಷ್ಟು ಮೆಂತ್ಯ ಸೊಪ್ಪು ಬಳಸಿ. ಈಗ ಮೊದಲೇ ಹುರಿದುಕೊಂಡು ಸಿಪ್ಪೆ ತೆಗೆದು ಇಟ್ಟುಕೊಂಡಿದ್ದ ಶೇಂಗಾ ಬೀಜ ಕೂಡ ಇದಕ್ಕೆ ಹಾಕಿಕೊಳ್ಳಿ.
ಚೆನ್ನಾಗಿ ಫ್ರೈ ಮಾಡಿಕೊಂಡು ಸೊಪ್ಪು ಮೆತ್ತಗಾಗಬೇಕು. ಈಗ ಎಲ್ಲಾ ಪದಾರ್ಥಗಳನ್ನು ತೆಗೆದು ಒಂದು ಬೌಲ್ಗೆ ಹಾಕಿಟ್ಟುಕೊಳ್ಳಿ. ಈಗ ಮತ್ತೆ ಅದೇ ಬಾಣಲೆಗೆ ಎಣ್ಣೆ ಹಾಕಿಕೊಂಡು ಅದಕ್ಕೆ 3 ಟೊಮೆಟೋ ಹೆಚ್ಚಿಕೊಂಡು ಹಾಕಿಕೊಳ್ಳಿ. ಹಾಗೆ ಸ್ವಲ್ಪ ಹುಣಸೆ ಹುಳಿ ಹಾಕಿಕೊಂಡು 3 ನಿಮಿಷ ಬೇಯಿಸಿಕೊಳ್ಳಿ. ನಂತರ ಅರಶಿಣ ಸಹ ಬೆರೆಸಿಕೊಳ್ಳಿ. ಈಗ ಒಲೆ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ.
ಇತ್ತ ಮೊದಲು ಹುರಿದುಕೊಂಡಿದ್ದ ಮಸಾಲೆಗಳು, ಮೆಂತ್ಯ ಸೊಪ್ಪನ್ನು ಒಂದು ಮಿಕ್ಸಿ ಜಾರ್ಗೆ ಹಾಕಿಕೊಂಡು ರುಬ್ಬಿಕೊಳ್ಳಬೇಕು. ರುಬ್ಬುವಾಗ ರುಚಿಗೆ ತಕ್ಕಷ್ಟು ಉಪ್ಪು, ಹಾಗೆ ಬೇಯಿಸಿದ ಟೊಮೆಟೋವನ್ನು ಸಹ ಹಾಕಿಕೊಳ್ಳಿ. ನೀರು ಹಾಕದೆಯೇ ರುಬ್ಬಿಕೊಳ್ಳಬೇಕು.
ಈಗ ರುಬ್ಬಿದ ಚಟ್ನಿಯನ್ನು ಒಂದು ಪಾತ್ರೆಗೆ ಹಾಕಿಟ್ಟು ಬಳಿಕ ಒಗ್ಗರಣೆ ನೀಡಿ. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಜೀರಿಗೆ ಹಾಕಿ ಕರಿಬೇವು, ಒಣ ಮೆಣಸು ಹಾಕಿ ಒಗ್ಗರಣೆ ಮಾಡಿಕೊಂಡು ಇದಕ್ಕೆ ಹಾಕಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಈ ಮೆಂತ್ಯ ಸೊಪ್ಪಿನ ಒಗ್ಗರಣೆ ಚಟ್ನಿ ರೆಡಿಯಾಗುತ್ತದೆ. ನೀವು ಕೂಡ ಒಮ್ಮೆ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications
