Latest Updates
-
ವಾಟ್ಸಾಪ್ನಲ್ಲಿ ದೀಪಾವಳಿ ಬೋನಸ್ ಲಿಂಕ್ ಬಂದಿದೆಯೇ? ಮೋಸ ಹೋಗುವ ಮುನ್ನ ಈ 30 ಸೆಕೆಂಡ್ ಕೆಲಸ ಮಾಡಿ! -
ದೆಹಲಿ ಮಾಲಿನ್ಯದ ಭೀತಿ: ₹150 ಬಜೆಟ್ನಲ್ಲಿ ನಿಮ್ಮ ಆರೋಗ್ಯ ರಕ್ಷಿಸುವ ಆಂಟಿ-ಸ್ಮಾಗ್ ಡಯಟ್ ಪ್ಲಾನ್ ಇಲ್ಲಿದೆ! -
ದೀಪಾವಳಿ 2026: ಬೆಂಗಳೂರು, ದೆಹಲಿ, ಮುಂಬೈನಲ್ಲಿ ಪಟಾಕಿ ಸಿಡಿಸಲು ಹೊಸ ನಿಯಮಗಳು, ಸಮಯದ ಮಿತಿ! -
ದಕ್ಷಿಣ ಭಾರತದಲ್ಲಿ ಮಳೆ ಅಲರ್ಟ್: ಮನೆಯಲ್ಲೇ ಫಿಟ್ ಆಗಿರಲು ಈ 10 ನಿಮಿಷದ ವರ್ಕೌಟ್ ಟ್ರೈ ಮಾಡಿ! -
ದೀಪಾವಳಿ ಹಬ್ಬದ ಡ್ರಾಮಾ ತಪ್ಪಿಸಿ: ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಪ್ಲಾನ್ ಮತ್ತು ಮೆಸೇಜ್ ಟಿಪ್ಸ್ -
ದೀಪಾವಳಿ ಪಾರ್ಟಿ ಜೋರಾಗಿದೆಯಾ? ₹30ರೊಳಗೆ ಸಿಗುವ 12 ಆರೋಗ್ಯಕರ ಹೈ-ಪ್ರೋಟೀನ್ ಸ್ನ್ಯಾಕ್ಸ್ ಇಲ್ಲಿದೆ! -
ಧನ್ತೇರಸ್ ಮುನ್ನವೇ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ: ಇಂದೇ ಖರೀದಿಸಬೇಕಾ ಅಥವಾ ನಾಳೆ ಕಾಯಬೇಕಾ? -
IND vs NZ 2nd ODI: ಪಂದ್ಯದ ದಿನ ಬೆಳಿಗ್ಗೆ ಫ್ರೆಶ್ ಆಗಿರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಎನ್ಆರ್ಐಗಳೇ ಎಚ್ಚರ! ವಿದೇಶಿ ವಿಚ್ಛೇದನ ಭಾರತದಲ್ಲಿ ಸಿಂಧುವಲ್ಲ: ದ್ವಿವಿವಾಹದ ಅಪಾಯ ತಪ್ಪಿಸಿಕೊಳ್ಳುವುದು ಹೇಗೆ? -
ದೀಪಾವಳಿ ಸಿಹಿ ಕೊಳ್ಳುವ ಮುನ್ನ ಎಚ್ಚರ! ಕಲಬರಕೆ ಪತ್ತೆ ಹಚ್ಚುವುದು ಹೇಗೆ?
ಬ್ರೇಕ್ಫಾಸ್ಟ್ಗೆ ಮಾಡಿ ಮೆಂತ್ಯ ಸೊಪ್ಪಿನ ಬಾತ್..! ಸಖತ್ ಟೇಸ್ಟಿ ರೆಸಿಪಿ
ನೀವು ಬೆಳಗ್ಗಿನ ತಿಂಡಿಗೆ ಏನಾದ್ರು ಆರೋಗ್ಯಕರ ಅಡುಗೆ ಮಾಡಲು ಯತ್ನಿಸಿದ್ದರೆ ನೀವು ಈ ಮೆಂತ್ಯ ಸೊಪ್ಪಿನ ಬಾತ್ ಮಾಡಿ ನೋಡಿ. ಬೆಳಗ್ಗೆ ತಿಂಡಿ ಸವಿಯಲು ನಿಮಗೆ ಹೊರ ಹೊಗಬೇಕು ಎನಿಸೋದೆ ಇಲ್ಲ. ಮೆಂತ್ಯಯಲ್ಲಿರುವ ಆರೋಗ್ಯಕರ ಅಂಶ ಈ ಬಾತ್ಗೆ ಮತ್ತಷ್ಟು ರುಚಿ ನೀಡಲಿದೆ.
ಮೆಂತ್ಯ ಸೊಪ್ಪಿನಲ್ಲಿಅಧಿಕ ಪ್ರಮಾಣದಲ್ಲಿ ಕಬ್ಬಿಣಾಂಶ ಇರುವುದರಿಂದ ರಕ್ತ ಹೀನತೆಗೆ ಪ್ರಮುಖ ಔಷಧಿಯನ್ನಾಗಿ ಉಪಯೋಗಿಸುತ್ತಾರೆ. ರಕ್ತ ಹೀನತೆ ಇರುವವರು ಮೆಂತೆಯ ಆಹಾರ ಮತ್ತು ಇತರ ತರಕಾರಿಗಳ ಜೊತೆ ಸಲಾಡ್ ರೂಪದಲ್ಲಿ ಹಸಿ ಮೆಂತೆಯ ಸೊಪ್ಪನ್ನು ಸೇವಿಸಿದರೆ ಹಿಮೋಗ್ಲೋಬಿನ್ ಪ್ರಮಾಣ ಏರಿಕೆ ಆಗಲು ನೆರವಾಗುತ್ತದೆ.

ಈ ಮೆಂತ್ಯ ಬಾಂತ್ ಮಾಡಲು ಕಡಿಮೆ ಸಮಯ ಕಡಿಮೆ ವಸ್ತುಗಳು ಸಾಕಾಗುತ್ತದೆ. ಹಾಗಾದ್ರೆ ನಾವಿಂದು ಮೆಂತ್ಯೆ ಬಾತ್ ಮಾಡುವುದು ಹೇಗೆ ಮೆಂತ್ಯ ಬಾತ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ಪಾಕವಿಧಾನವೇನು ಎಂಬುದನ್ನು ನೋಡೋಣ.
ಮೆಂತ್ಯ ಸೊಪ್ಪಿನ ಬಾತ್ ಮಾಡಲು ಯಾವೆಲ್ಲಾ ವಸ್ತು ಬೇಕು?
- ಮೆಂತ್ಯ ಸೊಪ್ಪು - 1 ಕಟ್
- ಅನ್ನ - 1 ಬೌಲ್
- ಜೀರಿಗೆ
- ಸಾಸಿವೆ
- ಇಂಗು
- ಆಲೂಗಡ್ಡೆ - 1
- ಹಸಿ ಬಟಾಣಿ
- ಅರಶಿಣ
- ಹಸಿ ಮೆಣಸು
- ತೆಂಗಿನ ತುರಿ
- ಕೊತ್ತಂಬರಿ ಸೊಪ್ಪು
- ಉಪ್ಪು
- ಎಣ್ಣೆ
ಮೆಂತ್ಯ ಸೊಪ್ಪಿನ ಬಾತ್ ಮಾಡುವುದು ಹೇಗೆ?
ಮೊದಲು ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಕಾದ ಬಳಿಕ ಅದಕ್ಕೆ ಸಾಸಿವೆ, ಜಿರಿಗೆ ಹಾಕಿ, ಬಳಿಕ ಇಂಗು ಹಾಕಿಕೊಳ್ಳಿ. ಇದಾದ ಬಳಿಕ ಒಂದು ದೊಡ್ಡ ಗಾತ್ರ ಆಲುಗಡ್ಡೆ ಕತ್ತರಿಸಿ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ.
ಇದಾದ ಬಳಿಕ ಹಸಿ ಬಟಾಣಿ ಹಾಕಿ 3ರಿಂದ 4 ನಿಮಿಷ ಬೇಯಿಸಿಕೊಳ್ಳಿ. ಇದಾದ ಬಳಿಕ ಮೆಂತ್ಯ ಸೊಪ್ಪನ್ನು ಹಾಕಿಕೊಳ್ಳಿ. ಈ ವೇಳೆ ನೀರು ಹಾಕಬೇಡಿ, ಸೊಪ್ಪು ಚೆನ್ನಾಗಿ 3 ನಿಮಿಷ ಬೇಯಲಿ. ಬಳಿಕ ಅರಶಿಣ ಪುಡಿ ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಇನ್ನೊಂದು ಕಡೆ ಸ್ವಲ್ಪ ತೆಂಗಿನ ತುರಿ ತೆಗೆದುಕೊಂಡು ಮಿಕ್ಸಿ ಜಾರ್ಗೆ ಹಾಕಿಕೊಳ್ಳಿ. ಜೊತೆಗೆ ಹಸಿಮೆಣಸು, ಕೊತ್ತಂಬರಿ ಸೊಪ್ಪು, ಜೀರಿಗೆ ಹಾಕಿಕೊಂಡು ರುಬ್ಬಿಕೊಳ್ಳಿ. ನೀರು ಹಾಕದೆಯೇ ರುಬ್ಬಿಕೊಳ್ಳಬೇಕು. ತರಿತರಿಯಾಗಿ ರುಬ್ಬಿಕೊಂಡು ಅದನ್ನು ಒಲೆ ಮೇಲೆ ಇಟ್ಟಿರುವ ಪಾತ್ರೆಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಈಗ ಮೆಂತ್ಯ ಬಾತ್ ಅನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದು ಪಲ್ಯದಂತೆ ಮಿಕ್ಸ್ ಆಗುತ್ತದೆ. ಬಳಿಕ ಇದಕ್ಕೆ ಉಪ್ಪು ಹಾಕಿಕೊಂಡು ಚೆನ್ನಾಗಿ ಕಲಸಿ ಬೇಯಲು ಬಿಡಿ. 2 ನಿಮಿಷದ ಬಳಿಕ ಇದಕ್ಕೆ ಅನ್ನವನ್ನು ಸೇರಿಸಿಕೊಳ್ಳಿ. ಈ ವೇಳೆ ಉರಿಯನ್ನು ಸಣ್ಣದಾಗಿ ಮಾಡಿಕೊಳ್ಳಿ, ಅನ್ನ ಹಾಕಿದ ಬಳಿಕ ಒಲೆ ಆಫ್ ಮಾಡಿದರೆ ನಿಮ್ಮ ಮುಂದೆ ಮೆಂತ್ಯ ಬಾತ್ ರೆಡಿಯಾಗುತ್ತದೆ.
ಈ ಮೆಂತ್ಯ ಬಾತ್ಗೆ ಕೆಲವರು ನವಿಲು ಕೋಸು ಸೇರಿಸುತ್ತಾರೆ. ಮೆಂತ್ಯ ಸೊಪ್ಪು ಹಾಗೂ ನವಿಲು ಕೋಸು ಒಳ್ಳೆಯ ಕಾಂಬಿನೇಷನ್ ಆಗಲಿದೆ. ಇದನ್ನು ಹಾಕದೆಯೂ ಮಾಡಬಹುದು. ಈ ತಿಂಡಿ ಬೆಳಗ್ಗೆ ನಾಷ್ಟಕ್ಕೆ ಒಳ್ಳೆಯ ಖಾದ್ಯ ಜೊತೆಗೆ ಬಾಕ್ಸ್ಗೆ ಹಾಕಿ ಮಧ್ಯಾಹ್ನವೂ ಸವಿಯಬಹುದು.
ಆರೋಗ್ಯಕ್ಕೆ ಮೆಂತ್ಯ ಸೊಪ್ಪು ಉತ್ತಮ . ಹೀಗಾಗಿ ಮೆಂತ್ಯ ಸೊಪ್ಪಿನ ಬಾತ್, ಮೆಂತ್ಯ ಪಲಾವ್, ಮೆಂತ್ಯ ಕರಿ, ಚಟ್ನಿ ಹೀಗೆ ಹತ್ತಾರು ಖಾದ್ಯಗಳು ಇದರಲ್ಲಿ ಮಾಡಬಹುದಾಗಿದೆ.



Click it and Unblock the Notifications
