Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಥಟ್ ಅಂತ ಮಾವಿನಕಾಯಿ ಅವಲಕ್ಕಿ ಚಿತ್ರಾನ್ನ ಮಾಡಿ..! ತುಂಬಾ ಸುಲಭದ ರಸಿಪಿ
ಹಣ್ಣುಗಳ ರಾಜ ಮಾವಿನಹಣ್ಣಿನ ಸೀಸನ್ ಬಂದೇ ಬಿಟ್ಟಿದೆ. ಮಾರುಕಟ್ಟೆಯಲ್ಲಿ ಮಾವಿನ ಹಣ್ಣುಗಳು ಕಂಗೊಳಿಸುತ್ತಿದೆ. ಮಾವು ಬಳಸಿ ಜ್ಯೂಸ್, ಸಾಂಬಾರ್, ಚಟ್ನಿ, ಪಲ್ಯ ಚಿತ್ರಾನ್ನ ಸಹ ಮಾಡಬಹುದು.
ಮಾವಿನ ಹಣ್ಣು ಹೇಗೆ ರುಚಿಯೋ ಹಾಗೆಯೇ ಮಾವಿನ ಕಾಯಿ ಕೂಡ ತನ್ನದೇ ಆದ ಸೊಗಡನ್ನು ಹೊಂದಿರುತ್ತದೆ. ಮಾವಿನ ಕಾಯಿಯನ್ನು ಬಳಸಿ ಮಾಡುವ ಅಡುಗೆಗಳು ತರಹೇವಾರಿ. ಅದರಲ್ಲಿ ಒಂದು ಸರಳ ಅಡುಗೆ - ಮಾವಿನಕಾಯಿ ಅವಲಕ್ಕಿ ಚಿತ್ರಾನ್ನ. ಹೌದು ನೀವು ಮಾವಿನಕಾಯಿ ಚಿತ್ರಾನ್ನ ಸೇವಿಸಿರಬಹುದು. ಆದ್ರೆ ಎಂದಾದರು ಮಾವಿನಕಾಯಿ ಅವಲಕ್ಕಿ ಚಿತ್ರಾನ್ನ ಸವಿದಿದ್ದೀರಾ.?

ಮಾವಿನ ಕಾಯಿ ಅವಲಕ್ಕಿ ಹಾಗೂ ಬಳಸಿ ರುಚಿ ರುಚಿಯ ಚಿತ್ರಾನ್ನ ಮಾಡಬಹುದು. ಅದೆಷ್ಟು ರುಚಿ ಅಂದರೆ ಒಮ್ಮೆ ಸೇವಿಸಿದರೆ ನೀವು ಈ ಖಾದ್ಯಕ್ಕೆ ದಾಸರಾಗಿಬಿಡುತ್ತೀರಿ. ಹಾಗಾದ್ರೆ ಮಾವಿನಕಾಯಿ ಅವಲಕ್ಕಿ ಚಿತ್ರಾನ್ನ ಮಾಡುವುದು ಹೇಗೆ? ಈ ತಿಂಡಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ಪಾಕವಿಧಾನವೇನು? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಾವಿನಕಾಯಿ ಅವಲಕ್ಕಿ ಚಿತ್ರಾನ್ನ ಮಾಡಲು ಬೇಕಾಗುವ ಪದಾರ್ಥಗಳು
- ತೆಳು/ ಪೇಪರ್ ಅವಲಕ್ಕಿ- 2 ಕಪ್
- ಸಾಸಿವೆ - 1/4 ಟೀಸ್ಪೂನ್
- ಜೀರಿಗೆ - 1/4 ಟೀಸ್ಪೂನ್
- ಕಡಲೆ ಬೀಜ- 1/4 ಕಪ್
- ಕಡಲೆ ಬೇಳೆ - 1 tbs
- ಉದ್ದಿನಬೇಳೆ - 1 tbs
- ಈರುಳ್ಳಿ (ಕತ್ತರಿಸಿದ) - 2
- ಹಸಿರು ಮೆಣಸಿನಕಾಯಿ - 5
- ಒಣ ಮೆಣಸಿನಕಾಯಿ - 3
- ಅರಿಶಿನ ಪುಡಿ - 1/2 ಟೀಸ್ಪೂನ್
- ತೋತಾಪುರಿ ಮಾವು (ತುರಿದ) - 1 ಕಪ್
- ಕೊತ್ತಂಬರಿ ಸೊಪ್ಪು - 2 ಚಮಚ
- ಕರಿಬೇವಿನ ಎಲೆಗಳು - 2 tbs
- ರುಚಿಗೆ ಉಪ್ಪು
- ಅಡುಗೆ ಎಣ್ಣೆ
ಮಾವಿನಕಾಯಿ ಅವಲಕ್ಕಿ ಚಿತ್ರಾನ್ನ ಮಾಡೋದು ಹೇಗೆ?
ಮೊದಲು ತೆಳು ಅವಲಕ್ಕಿಯನ್ನು ತೆಗೆದುಕೊಂಡು ಒಂದು ಬೌಲ್‌ಗೆ ಹಾಕಿ ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಬೇಕು. ತೊಳೆದು ಬೇರೆ ಪಾತ್ರೆಗೆ ಹಾಕಿಟ್ಟುಕೊಳ್ಳಿ. ಇನ್ನೊಂದು ಕಡೆ ಒಲೆ ಮೇಲೆ ಪಾತ್ರೆ ಇಟ್ಟುಕೊಂಡು ಅದಕ್ಕೆ ಎಣ್ಣೆ ಹಾಕಿ ಎಣ್ಣೆ ಕಾದ ಬಳಿಕ ಜೀರಿಗೆ, ಸಾವಿಗೆ ಹಾಕಿ ಬಳಿಕ ಕಡಲೆ ಬೀಜ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ.
ಇದಾದ ಬಳಿಕ ಕಡಲೆ ಬೇಳೆ ಹಾಗೂ ಉದ್ದಿನ ಬೇಳೆ ಹಾಕಿಕೊಂಡು ಮಿಕ್ಸ್ ಮಾಡುತ್ತಾ ಇರಿ. ಇದಕ್ಕೆ ಹಸಿ ಮೆಣಸಿನ ಕಾಯಿ, ಈರುಳ್ಳಿ, ಮೂರು ಒಣ ಮೆಣಸು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. 1 ನಿಮಿಷದ ಬಳಿಕ ಉಪ್ಪು, ಕರಿಬೇವು, ಅರಶಿನ ಒಂದೊಂದಾಗಿ ಹಾಕಿಕೊಳ್ಳುತ್ತಾ ಫ್ರೈ ಮಾಡಿಕೊಳ್ಳಿ. 3 ನಿಮಿಷ ಫ್ರೈ ಮಾಡಿದ ಬಳಿಕ ತುರಿದುಕೊಂಡಿರುವ ಅರ್ಧ ಮಾವಿನ ಕಾಯಿ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಇದು ಗೊಜ್ಜಿನ ರೀತಿ ಬಂದ ಬಳಿಕ ಅದಕ್ಕೆ ಮೊದಲು ತೊಳೆದಿಟ್ಟುಕೊಂಡಿರುವ ಅವಲಕ್ಕಿಯನ್ನು ಹಾಕಿಕೊಳ್ಳಿ. ಈ ವೇಳೆ ಉರಿಯನ್ನು ಸಣ್ಣಗೆ ಇಟ್ಟುಕೊಳ್ಳಿ. ಅವಲಕ್ಕಿ ಹಾಕಿದ ಬಳಿಕ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ತೆಂಗಿನಕಾಯಿ ತುರಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. 3ರಿಂದ 4 ನಿಮಿಷ ಫ್ರೈ ಮಾಡಿಕೊಳ್ಳಿ. ಅಂತಿಮವಾಗಿ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಒಲೆ ಆಫ್ ಮಾಡಿ ಇಳಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಮಾವಿನಕಾಯಿ ಅವಲಕ್ಕಿ ಚಿತ್ರಾನ್ನ ಸವಿಯಲು ಸಿದ್ದವಾಗುತ್ತದೆ.
ಇನ್ನು ಈ ಅವಲಕ್ಕಿ ಹಾಕುವ ಜಾಗದಲ್ಲಿ ಅನ್ನ ಹಾಕಿದರೆ ಮಾವಿನಕಾಯಿ ಚಿತ್ರಾನ್ನವಾಗುತ್ತದೆ. ಅವಲಕ್ಕಿ ಚಿತ್ರಾನ್ನಕ್ಕೆ ಹುಳಿ ಹಿಂಡಬೇಕು ಎನ್ನುವ ನಿಮಯವಿಲ್ಲ ಹಾಗೆ ಸೇವಿಸಲು ರುವಿಕರವಾಗಿರುತ್ತದೆ.



Click it and Unblock the Notifications
